ಪುತ್ತೂರು

ಮುಖ್ಯಮಂತ್ರಿ ಸಿದ್ದರಾಮಯ್ಯರ ಬಜೇಟ್ ಅಲ್ಪಸಂಖ್ಯಾತ ಓಲೈಕೆ ಬಜೆಟ್: ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ಕಳೆದ ಬಾರಿ ಸಿದ್ದರಾಮಯ್ಯರ ಆಡಳಿತದಲ್ಲಿ ಇದ್ದಂತೆ ಈ ಬಾರಿಯೂ ಸಿದ್ದರಾಮಯ್ಯ ಬಜೇಟ್ ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಬಜೇಟ್ ನಂತಾಗಿದೆ ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಮೆಟ್ರಿಕ್ ನಂತರದ  ವಿದ್ಯಾರ್ಥಿಗಳಿಗೆ   ವಿದ್ಯಾರ್ಥಿವೇತನಕ್ಕಾಗಿಯೇ 60 ಕೋಟಿ ರೂ. ಅನುದಾನ, ಹೊಸದಾಗಿ 10 ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭಿಸುವುದು ಮತ್ತು ನೂರಾರು ಕೋಟಿ ಅನುದಾನ,  ಮೌಲನ ಅಜಾದ್ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯ,  ಸಿ.ಇ.ಟಿ ಮೂಲಕ ಪ್ರವೇಶ ಪಡೆದ ಇಂಜಿನಿಯರಿಂಗ್‌, ವೈದ್ಯಕೀಯ […]

ಮುಖ್ಯಮಂತ್ರಿ ಸಿದ್ದರಾಮಯ್ಯರ ಬಜೇಟ್ ಅಲ್ಪಸಂಖ್ಯಾತ ಓಲೈಕೆ ಬಜೆಟ್: ಅರುಣ್ ಕುಮಾರ್ ಪುತ್ತಿಲ Read More »

ನರೇಂದ್ರ ಮೋದಿಯವರ 9 ವರ್ಷ ಸಾಧನೆಯನ್ನು ಜನರಿಗೆ ತಲುಪಿಸಿ : ಮಾಜಿ ಶಾಸಕ ಸಂಜೀವ ಮಠಂದೂರು | ಪುಣಚ ಮಹಾಶಕ್ತಿ ಕೇಂದ್ರದ ಸಭೆ

ವಿಟ್ಲ : ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ 9ವರ್ಷ ಪೂರೈಸಿದ ಸಾಧನೆಯ ಸಂಭ್ರಮವನ್ನು ಜನರಿಗೆ ತಲುಪಿಸಲು ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ಶನಿವಾರ ವಿಟ್ಲ ಪುಣಚ ಮಹಾಶಕ್ತಿ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವ ಮಾತನಾಡಿ, ಪ್ರತಿ ಬೂತಿನಲ್ಲಿ ಪಕ್ಷವನ್ನು ಬಲಪಡಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಂಘಟಿತ ಪ್ರಯತ್ನ ಮಾಡಬೇಕು ಎಂದು ಹೇಳಿದರು. ಕೆಲವು ದಿನಗಳಿಂದ

ನರೇಂದ್ರ ಮೋದಿಯವರ 9 ವರ್ಷ ಸಾಧನೆಯನ್ನು ಜನರಿಗೆ ತಲುಪಿಸಿ : ಮಾಜಿ ಶಾಸಕ ಸಂಜೀವ ಮಠಂದೂರು | ಪುಣಚ ಮಹಾಶಕ್ತಿ ಕೇಂದ್ರದ ಸಭೆ Read More »

ನಗರದ ಲಾಡ್ಜ್ ನಲ್ಲಿ ಕುಳಿತ ಸ್ಥಿತಿಯಲ್ಲೇ ಮೃತದೇಹ ಪತ್ತೆ

ಪುತ್ತೂರು: ನಗರದ ಮುಖ್ಯರಸ್ತೆಯಲ್ಲಿರುವ ಲಾಡ್ಜ್ ನ ರೂಂ ಒಂದರಲ್ಲಿ ಕುಳಿತಲ್ಲೇ ಮೃತಪಟ್ಟ ಮೃತದೇಹ ಶನಿವಾರ ಸಂಜೆ ಪತ್ತೆಯಾಗಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ತಂಪು ಪಾನೀಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಪ್ರಸಾದ್ (40) ಎಂದು ಗುರತಿಸಲಾಗಿದೆ. ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದ್ದು, ಕಳೆದ ಹಲವಾರು ವರ್ಷಗಳಿಂದ ತಂಪು ಪಾನೀಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಪ್ರಸಾದ್ ಕೆಲವೊಮ್ಮೆ ಇದೇ ಲಾಡ್ಜ್ ನಲ್ಲಿ ರೂಮ್ ಪಡೆದು ತಂಗುತ್ತಿದ್ದರು ಎನ್ನಲಾಗಿದೆ. ನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ

ನಗರದ ಲಾಡ್ಜ್ ನಲ್ಲಿ ಕುಳಿತ ಸ್ಥಿತಿಯಲ್ಲೇ ಮೃತದೇಹ ಪತ್ತೆ Read More »

ಭಾರತೀಯ ಕಿಸಾನ್ ಸಂಘದಿಂದ ಬಿದಿರು ಬೆಳೆ ಕುರಿತು ಮಾಹಿತಿ ಕಾರ್ಯಾಗಾರ

ಪುತ್ತೂರು : ಬಿದಿರು ಕೃಷಿಯು ಅಡಿಕೆಗೆ ಪರ್ಯಾಯ ಕೃಷಿಯಲ್ಲ. ಕೃಷಿ ಪದ್ದತಿಗೆ ಪೂರಕವಾಗಿ ಬಿದಿರು ಬೆಳೆಯಬಹುದು. ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಮಳೆ, ತಾಪಮಾನ ಉತ್ತಮವಾಗಿದ್ದು ಇಲ್ಲಿ ಹಲವು ತಳಿಯ ಬಿದಿರು ಬೆಳೆಯಲು ಅನುಕೂಲವಿದೆ. ಇಲ್ಲಿ ನೈಸರ್ಗಿಕವಾಗಿ ಬಿದಿರನ್ನು ಬೆಳೆಯಬಹುದು. ಬಿದಿರಿನ ಬೇಸಾಯಕ್ಕೆ ತಂತ್ರಜ್ಞಾನದ ಆವಶ್ಯಕತೆಯಿಲ್ಲ ಎಂದು ಪೊನ್ನಂಪೇಟೆ ಅರಣ್ಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ರಾಮಕೃಷ್ಣ ಹೆಗಡೆ ಹೇಳಿದರು. ಭಾರತೀಯ ಕಿಸಾನ್ ಸಂಘದ ವತಿಯಿಂದ ಶನಿವಾರ ಪಂಚವಟಿ ಸಭಾ ಭವನದಲ್ಲಿ ನಡೆದ ಬಿದಿರು ತಳಿಗಳು, ಅವುಗಳನ್ನು ಬೆಳೆಸುವ ವಿಧಾನ

ಭಾರತೀಯ ಕಿಸಾನ್ ಸಂಘದಿಂದ ಬಿದಿರು ಬೆಳೆ ಕುರಿತು ಮಾಹಿತಿ ಕಾರ್ಯಾಗಾರ Read More »

ಪುತ್ತಿಲ ಪರಿವಾರದೊಂದಿಗೆ ರಹಸ್ಯ ಸಭೆ ನಡೆಸಿದ ಬಿ.ಎಲ್.ಸಂತೋಷ್ | ಸಂಧಾನಕ್ಕೆ ಯತ್ನ

ಪುತ್ತೂರು : ದ.ಕ.ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ಭದ್ರಕೋಟೆಯನ್ನು ಅಲುಗಾಡಿಸಿರುವ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅರುಣ್ ಕುಮಾರ್ ಪುತ್ತಿಲರ ಬಿಜೆಪಿ ಜತೆಗಿನ ಸಂಧಾನ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದ್ದು ಇದೀಗ ಬಹಿರಂಗಗೊಂಡಿದೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪುತ್ತಿಲರನ್ನು ದೆಹಲಿಗೆ ಕರೆಸಿ ರಹಸ್ಯ ಸಭೆ ನಡೆಸಿದ್ದಾರೆ. ಸಭೆಯಲ್ಲಿ  ಚುನಾವಣೆ ಪೂರ್ವ ಹಾಗೂ ನಂತರ ವಿಷಯಗಳ ಕುರಿತು ವಿಸ್ತೃತವಾಗಿ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದ್ದು, ಈ ಸಭೆ ಜೂನ್‍ನಲ್ಲೇ ನಡೆದಿದೆ ಎಂಬುದು ಇದೀಗ ಬಹಿರಂಗವಾಗಿದೆ. ಈ ಬಾರಿಯ ವಿಧಾನಸಭೆ ಚುನಾವಣೆ

ಪುತ್ತಿಲ ಪರಿವಾರದೊಂದಿಗೆ ರಹಸ್ಯ ಸಭೆ ನಡೆಸಿದ ಬಿ.ಎಲ್.ಸಂತೋಷ್ | ಸಂಧಾನಕ್ಕೆ ಯತ್ನ Read More »

ವೈವಿಧ್ಯ ಇಂಟೀರಿಯರ್ಸ್ ಎರಡನೇ ವರ್ಷಕ್ಕೆ ಪಾದಾರ್ಪಣೆ

ಪುತ್ತೂರು : ನಗರದ ಅರುಣಾ ಥಿಯೇಟರ್ ಎದುರಿನ ಪ್ರಭು ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ವೈವಿಧ್ಯ ಇಂಟೀರಿಯರ್ಸ್ ಶನಿವಾರ ಎರಡನೇ ವರ್ಷಕ್ಕೆ ಪಾದಾರ್ಪಣೆಗೊಂಡಿತು. ಕಳೆದ ಒಂದು ವರ್ಷದಿಂದ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದ್ದು, ಪಾದಾರ್ಪಣೆ ಪ್ರಯುಕ್ತ ಬೆಳಿಗ್ಗೆ ಸಂಸ್ಥೆಯಲ್ಲಿ ಗಣಪತಿ ಹೋಮ ನಡೆಯಿತು. ಸಂಸ್ಥೆಯು ಮನೆ ಮತ್ತು ವಾಣಿಜ್ಯ ಮಳಿಗೆಗಳ ಒಳಾಂಗಣ ವಿನ್ಯಾಸದಲ್ಲಿ ವೈವಿಧ್ಯತೆಗೆ ಹೆಸರುವಾಸಿಯಾಗಿರುವುದಲ್ಲದೆ, ಇಸ್ಕಾ ಮಾರ್ಬಲ್ ಶೀಟ್, ಡಬ್ಲ್ಯೂಪಿಸಿ ರಾಫ್ಟರ್ ಲೂವರ್ಸ್, ಪೋಮ್ ಶೀಟ್, ಪಿವಿಸಿ ಡೆಕೋರೇಟಿವ್, ವಾಲ್ ಮತ್ತು ಸೀಲಿಂಗ್ ಪ್ಯಾನಲ್ಸ್, ಎಚ್ ವಿಎಲ್‍ ಎಸ್

ವೈವಿಧ್ಯ ಇಂಟೀರಿಯರ್ಸ್ ಎರಡನೇ ವರ್ಷಕ್ಕೆ ಪಾದಾರ್ಪಣೆ Read More »

ವಿಪತ್ತು ನಿರ್ವಹಣೆ, ಸಾಮಾಜಿಕ ಕಾರ್ಯ | ಇರ್ದೆ-ಬೆಟ್ಟಂಪಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಪುತ್ತೂರು ತಾಲೂಕಿನಲ್ಲಿ ದ್ವಿತೀಯ ಸ್ಥಾನ

ನಿಡ್ನಳ್ಳಿ: ಇರ್ದೆ-ಬೆಟ್ಟಂಪಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಪುತ್ತೂರು ತಾಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದು ಕೊಂಡಿದೆ. ಪುತ್ತೂರು ಪುರಭವನದಲ್ಲಿ ಜು.7ರಂದು ನಡೆದ ನವಜೀವನ ಸದಸ್ಯರ ಸಮಾವೇಶ ಮತ್ತು ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಅತಿಥಿಗಳು ಪ್ರಶಸ್ತಿ ನೀಡಿ ತಂಡವನ್ನು ಗೌರವಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಘಟಕ ವಿಪತ್ತು ನಿರ್ವಹಣೆ ಮತ್ತು ಹಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿ ಉತ್ತಮ ಕೆಲಸ ಕಾರ್ಯ ಮಾಡಿ ಜನಮನ್ನಣೆ ಗಳಿಸಿತ್ತು. ಘಟಕದ ಅಧ್ಯಕ್ಷ ಆನಂದ,

ವಿಪತ್ತು ನಿರ್ವಹಣೆ, ಸಾಮಾಜಿಕ ಕಾರ್ಯ | ಇರ್ದೆ-ಬೆಟ್ಟಂಪಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಪುತ್ತೂರು ತಾಲೂಕಿನಲ್ಲಿ ದ್ವಿತೀಯ ಸ್ಥಾನ Read More »

ವಿಟ್ಲ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ

ವಿಟ್ಲ : ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳು ಕನಸು ಕಾಣಬೇಕು, ನಾನು ಮುಂದೆ ಏನಾಗಬೇಕು ಎಂಬುದರ ಬಗ್ಗೆ ದೊಡ್ಡ ಕನಸು ಕಾಣಬೇಕು. ಗುರಿಯಿಲ್ಲದ ಜೀವನದಿಂದ ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು ವಿಟ್ಲ ಪ್ರಥಮದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ದುಡ್ಡಿದ್ದವ ಮಾತ್ರ ಯಶಸ್ಸು ಕಾಣುತ್ತಾನೆ ಎಂಬ ಮನೋಭಾವ ಬಿಟ್ಟು ಬಿಡಬೇಕು. ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ. ಇಂಗ್ಲೀಷ್ ಮತ್ತು ಹಿಂದಿ ಭಾಷಾ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಮೂಲಕ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬೇಕು

ವಿಟ್ಲ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ Read More »

ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

ಧರ್ಮಸ್ಥಳ : ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ರಾತ್ರಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದರು. ಬಳಿಕ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು

ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ Read More »

ಕನ್ನಡ ಸಾಹಿತ್ಯ ಪರಿಷತ್ ಕಚೇರಿಗೆ  ಮೋಹನ್ ಆಳ್ವ ಭೇಟಿ

ಪುತ್ತೂರು: ಸರಳತೆಯ ಸಾಕಾರ ಮೂರ್ತಿ ಸಾಹಿತ್ಯ ಮತ್ತು ಕಲಾಪೋಷಕರಾದ ಮೋಹನ್ ಆಳ್ವ ಅವರು  ಪುತ್ತೂರು  ಕನ್ನಡ ಸಾಹಿತ್ಯ ಪರಿಷತ್ ಕಚೇರಿಗೆ ಭೇಟಿ ನೀಡಿದರು. ರೋಟರಿ ಕ್ಲಬ್ ಪುತ್ತೂರು ಪದಗ್ರಹಣ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಅವರು ವಿನಂತಿಯ ಮೇರೆಗೆ ತಡರಾತ್ರಿ 10:30 ಆದರೂ ಕನ್ನಡ ಹಾಗೂ ಸಾಹಿತ್ಯ ಪರಿಷತ್ ಮೇಲಿನ ಅಭಿಮಾನದಿಂದ ಕಚೇರಿಗೆ ಆಗಮಿಸಿ ಪುತ್ತೂರು ತಾಲೂಕು  ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಕುರಿತು ಪ್ರಶಂಶಿಸಿದರು  ಜೊತೆಗೆ ಕನ್ನಡ ಶಾಲೆಗಳ ಅಭಿವೃದ್ಧಿಯ  ಕುರಿತು ಒಂದಿಷ್ಟು ಯೋಚನೆಗಳನ್ನು ನೀಡಿದರು.  ಮುಂದಿನ

ಕನ್ನಡ ಸಾಹಿತ್ಯ ಪರಿಷತ್ ಕಚೇರಿಗೆ  ಮೋಹನ್ ಆಳ್ವ ಭೇಟಿ Read More »

error: Content is protected !!
Scroll to Top