ಪುತ್ತೂರು

ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್‍ಯಕ್ರಮ

ಪುತ್ತೂರು: ಸಮಾಜವನ್ನು ಪರಿವರ್ತನೆ ಮಾಡಲು ಯುವ ಜನತೆ ಮಹತ್ವಾಕಾಂಕ್ಷೆ, ಗುರಿ ಇಟ್ಟುಕೊಂಡು ಮುನ್ನಡೆಯಬೇಕು. ಪ್ರತಿಯೊಬ್ಬ ಪ್ರಜೆಗೂ ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ಅಗತ್ಯತೆ ಪ್ರಸ್ತುತ ಸಂದರ್ಭದಲ್ಲಿ ಅವಶ್ಯವಿದೆ, ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅಳವಡಿಸಲಾಗಿದೆ, ಎಲ್ಲ ಕಾನೂನುಗಳನ್ನು ತಿಳಿದುಕೊಳ್ಳಲು ಸಾಧ್ಯವಾಗದೇ ಇರಬಹುದು, ಆದರೂ ನಮ್ಮ ದೈನಂದಿನ ಜೀವನ ಯಾವುದೇ ಅಡೆತಡೆಯಿಲ್ಲದೇ ನೆಮ್ಮದಿಯಿಂದ ಸಾಗಲು ಅಲ್ಪ ಪ್ರಮಾಣದಲ್ಲಾದರೂ ಕಾನೂನು ಜಾಗೃತಿ ಪಡೆಯಬೇಕು ಎಂದು ಪುತ್ತೂರು ಆರಕ್ಷಕ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶ್ರೀಕಾಂತ ರಾಥೋಡ್ ಹೇಳಿದರು. […]

ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್‍ಯಕ್ರಮ Read More »

ಡಿ.ಕೆ.ಶಿವಕುಮಾರ್ ಆಪ್ತ ಪಾಂಬಾರು ಪ್ರದೀಪ್ ರೈ ಮೇಲೆ ಹಲ್ಲೆ | ಉಂಗುರ, ನಗದು ದೋಚಿದ ದುಷ್ಕರ್ಮಿಗಳು

ಪುತ್ತೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪ್ತ ಪಾಂಬಾರು ಪ್ರದೀಪ್ ರೈ ಮೇಲೆ ಇಬ್ಬರು ಮಾರಣಾಂತಿಕ ಹಲ್ಲೆಗೈದ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರದೀಪ್ ರೈ ಅವರು ಬೊಳುವಾರಿನಲ್ಲಿ ಆಸ್ಪತ್ರೆಯೊಂದ ಬಳಿ ಕಾರು ಪಾರ್ಕ್ ಮಾಡುತ್ತಿದ್ದ ವೇಳೆ ಡಸ್ಟರ್ ಕಾರಿನಲ್ಲಿ ಬಂದ ತಂಡವೊಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ಕೈಯಲ್ಲಿದ್ದ ಉಂಗುರ ಹಾಗೂ 9 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಪ್ರದೀಪ್ ರೈ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ

ಡಿ.ಕೆ.ಶಿವಕುಮಾರ್ ಆಪ್ತ ಪಾಂಬಾರು ಪ್ರದೀಪ್ ರೈ ಮೇಲೆ ಹಲ್ಲೆ | ಉಂಗುರ, ನಗದು ದೋಚಿದ ದುಷ್ಕರ್ಮಿಗಳು Read More »

ನಿಡ್ಪಳ್ಳಿ ಗ್ರಾಪಂ ಉಪ ಚುನಾವಣೆ | ಬಿಜೆಪಿ ಅಭ್ಯರ್ಥಿ ಪರ ಮತ ಯಾಚನೆ

ಪುತ್ತೂರು: ನಿಡ್ಪಳ್ಳಿ ಗ್ರಾಪಂ ಉಪಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ  ಚಂದ್ರಶೇಖರ ಪ್ರಭು ಅವರ ಪರವಾಗಿ ಮತ ಯಾಚನೆ ನಡೆಯಿತು. ಗ್ರಾಮ ಪಂಚಾಯತಿನ ಒಂದು ಸ್ಥಾನಕ್ಕೆ ನಡೆಯುವ ಉಪಚುನಾವಣೆಯ ಚುನಾವಣಾ ಪ್ರಚಾರ ಕಾರ್ಯ ಮನೆ ಮನೆಯ ಭೇಟಿ ಮೂಲಕ ನಡೆಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ಪುರುಷೋತ್ತಮ ಮುಂಗ್ಲಿಮನೆ, ಸಾಜ ರಾಧಾಕೃಷ್ಣ ಆಳ್ವ, ನಿತೇಶ್ ಕುಮಾರ್ ಶಾಂತಿವನ, ರಾಜೇಶ್‍ ಪರ್ಪುಂಜ, ಆರ್.ಸಿ.ನಾರಾಯಣ ರೆಂಜ, ಉಷಾಚಂದ್ರ ಮುಳಿಯ, ಗೌರಿ ಬನ್ನೂರು,

ನಿಡ್ಪಳ್ಳಿ ಗ್ರಾಪಂ ಉಪ ಚುನಾವಣೆ | ಬಿಜೆಪಿ ಅಭ್ಯರ್ಥಿ ಪರ ಮತ ಯಾಚನೆ Read More »

ಜು.23 : ಯುವ ಬಂಟರ ಸಂಘದ ವತಿಯಿಂದ “ತುಳುನಾಡ ಬಂಟೆರೆ ಪರ್ಬ-2023” ಸಾಂಸ್ಕೃತಿಕ ಕಾರ್ಯಕ್ರಮ

ಪುತ್ತೂರು: ಪುತ್ತೂರು ಯುವ ಬಂಟರ ಸಂಘದ ಆಶ್ರಯದಲ್ಲಿ ಬಂಟ ದಿನಾಚರಣೆ ಪ್ರಯುಕ್ತ “ತುಳುನಾಡ ಬಂಟೆರೆ ಪರ್ಬ-2023” ಸಾಂಸ್ಕೃತಿಕ ಕಾರ್ಯಕ್ರಮ ಜು.23 ಭಾನುವಾರ ಬಂಟರ ಭವನದಲ್ಲಿ ನಡೆಯಲಿದೆ ಎಂದು ಯುವ ಬಂಟರ ಸಂಘದ ಅಧ್ಯಕ್ಷ ಮುಂಡಾಳಗುತ್ತು ಶಶಿರಾಜ್ ರೈ ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾರ್ಯಕ್ರಮದಲ್ಲಿ ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಆಯ್ದ 8 ತಂಡಗಳಿಗೆ ಪಾಲ್ಗೊಳ್ಳಲು ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು. ಸಾಂಸ್ಕೃತಿಕ ಕಾರ್ಯಕ್ರದ ಅಂಗವಾಗಿ ಮಹಿಳಾ ಮತ್ತು ಮಕ್ಕಳ

ಜು.23 : ಯುವ ಬಂಟರ ಸಂಘದ ವತಿಯಿಂದ “ತುಳುನಾಡ ಬಂಟೆರೆ ಪರ್ಬ-2023” ಸಾಂಸ್ಕೃತಿಕ ಕಾರ್ಯಕ್ರಮ Read More »

ಕೊಳ್ತಿಗೆ: ಮದುರ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶ್ರಮದಾನ

ಪುತ್ತೂರು: ಕೊಳ್ತಿಗೆ ಗ್ರಾಮದ ಡಬ್ಬಡ್ಕ ಮದುರ ಹಳೆ ವಿದ್ಯಾರ್ಥಿ ಸಂಘ ಹಾಗೂ ದುಗ್ಗಳ ಮದುರ  ಫ್ರೆಂಡ್ಸ್ ಸಂಘದ ಜಂಟಿ ಆಶ್ರಯದಲ್ಲಿ ಶ್ರಮದಾನ ನಡೆಯಿತು. ಶ್ರಮದಾನ ಅಂಗವಾಗಿ ದುಗ್ಗಳದಿಂದ ದೊಡ್ಡಡ್ಕ ತನಕ ವಿದ್ಯುತ್ ತಂತಿಗೆ ತಗಲುವ ಮರದ ಗೆಲ್ಲುಗಳು ಹಾಗೂ ರಸ್ತೆ ಬದಿಯ ಗಿಡಗಂಟಿಗಳ ತೆರವು ಕಾರ್ಯಗಳನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಂಜುನಾಥ್ ದುಗ್ಗಳ, ಕಾರ್ಯದರ್ಶಿ ಯಶವಂತ ದುಗ್ಗಳ ಮತ್ತಿತರರು ಪಾಲ್ಗೊಂಡಿದ್ದರು.

ಕೊಳ್ತಿಗೆ: ಮದುರ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶ್ರಮದಾನ Read More »

ಕೃತಕ ಗರ್ಭಧಾರಣಾ ಕಾರ್ಯಕರ್ತ ಪ್ರಶಸ್ತಿಗೆ ಸತ್ಯನಾರಾಯಣ ಅಡಿಗ ಆಯ್ಕೆ

ಪುತ್ತೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನೀಡುವ 2022-23ನೇ ಸಾಲಿನ ಪುತ್ತೂರು ತಾಲೂಕಿನ ಉತ್ತಮ ಕೃತಕ ಗರ್ಭಧಾರಣಾ ಕಾರ್ಯಕರ್ತ ಪ್ರಶಸ್ತಿಗೆ ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ ಅಡಿಗ ಆಯ್ಕೆಯಾಗಿದ್ದಾರೆ. ಸತ್ಯನಾರಾಯಣ ಅಡಿಗರು ಕಳೆದ 30 ವರ್ಷಗಳಿಂದ ಕೃತಕ ಗರ್ಭಧಾರಣಾ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕುಲಶೇಖರ ಹಾಲು ಒಕ್ಕೂಟದ ಸಮಾಲೋಚನಾ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದ.ಕ.ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ನಿರ್ದೇಶಕರಾದ ನಾರಾಯಣ ನೆಲ್ಲಿತ್ತಿಮಾರ್, ಜಯರಾಮ

ಕೃತಕ ಗರ್ಭಧಾರಣಾ ಕಾರ್ಯಕರ್ತ ಪ್ರಶಸ್ತಿಗೆ ಸತ್ಯನಾರಾಯಣ ಅಡಿಗ ಆಯ್ಕೆ Read More »

ಔಷಧೀಯ ಸಸ್ಯಗಳ ಪರಿಚಯ, ಸಂರಕ್ಷಣೆ | ವಿವೇಕ ಸಂಜೀವಿನಿ ಕಾರ್ಯಕ್ರಮಕ್ಕೆ ಚಾಲನೆ

ಪುತ್ತೂರು: ಗ್ರಾಮ ವಿಕಾಸ ಕಾರ್ಯಕ್ರಮ ಒಂದು ಉತ್ತಮ ಯೋಜನೆಯಾಗಿದ್ದು ಗ್ರಾಮೀಣ ಭಾಗಗಳ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳ ಅಭಿವೃದ್ದಿಗೆ ತುಂಬಾ ಸಹಕಾರಿಯಾಗಿದೆ ಎಂದು ಕುಳ ಗ್ರಾಮದ ಓಜಾಲ ಸರ್ಕಾರಿ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಿದಾನಂದ .ಪಿ ಹೇಳಿದರು ಅವರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ಮತ್ತು ಎಂಸಿಎ ವಿಭಾಗದ ಆಶ್ರಯದಲ್ಲಿ ಓಜಾಲ ಪ್ರಾಥಮಿಕ ಶಾಲೆಯಲ್ಲಿ ನಡೆದ ಔಷಧೀಯ ಸಸ್ಯಗಳ ಪರಿಚಯ ಮತ್ತು ಸಂರಕ್ಷಣೆಯ ವಿಶೇಷ ಕಾರ್ಯಕ್ರಮ ವಿವೇಕ ಸಂಜೀವಿನಿಗೆ ಚಾಲನೆ ನೀಡಿ

ಔಷಧೀಯ ಸಸ್ಯಗಳ ಪರಿಚಯ, ಸಂರಕ್ಷಣೆ | ವಿವೇಕ ಸಂಜೀವಿನಿ ಕಾರ್ಯಕ್ರಮಕ್ಕೆ ಚಾಲನೆ Read More »

ಅಪ್ರಾಪ್ತ ಯುವತಿಯರಿಗೆ ಕಿರುಕುಳ | ನಗರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು

ಪುತ್ತೂರು : ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣೆಯಲ್ಲಿ ವ್ಯಕ್ತಿಯೋರ್ವರ ಮೇಲೆ ಫೋಕ್ಲೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮಂಗಳವಾರ ಬೆಳಿಗ್ಗೆ ಅಪ್ರಾಪ್ತ ಪ್ರಾಯದ ಇಬ್ಬರು ಬಾಲಕಿಯರು ಮನೆಯಿಂದ ಪುತ್ತೂರಿನ ಕಾಲೇಜಿಗೆ ಬರುತ್ತಿರುವಾಗ ದಾರಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವ ಸದರಿ ಬಾಲಕಿಯರೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದು, ಬಾಲಕಿಯರು ಆತನಿಂದ ತಪ್ಪಿಸಿಕೊಂಡು ಕಾಲೇಜಿಗೆ ಬಂದಿದ್ದಾರೆ. ಬಳಿಕ ಕಾಲೇಜಿನ ಉಪನ್ಯಾಸಕಿಗೆ ತಿಳಿಸಿದ್ದಾರೆ. ಉಪನ್ಯಾಸಕಿಯವರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್

ಅಪ್ರಾಪ್ತ ಯುವತಿಯರಿಗೆ ಕಿರುಕುಳ | ನಗರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು Read More »

ಜೈನ ಮುನಿ ಹತ್ಯೆ ಖಂಡಿಸಿ ಮತ್ತು ವಕ್ಫ್ ಬೋರ್ಡ್ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ

ಪುತ್ತೂರು: ಪುತ್ತೂರು: ಜೈನ ಮುನಿ ಹತ್ಯೆ ಖಂಡಿಸಿ ಮತ್ತು ವಕ್ಫ್ ಬೋರ್ಡ್ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ ಮಂಗಳವಾರ ಪುತ್ತೂರು ತಾಲೂಕು ಆಡಳಿತ ಸೌಧದ ಬಳಿಯ ಅಮರ್ ಜವಾನ್ ಸ್ಮಾರಕ ಜ್ಯೋತಿ ಬಳಿ ನಡೆಯಿತು. ಆಂದೋಲನವನ್ನುದ್ದೇಶಿಸಿ ಮಿತ್ರಸೇನ ಅಳದಂಗಡಿ ಮಾತನಾಡಿ, ಪ್ರಸ್ತುತ ವರ್ತಮಾನ ಕಾಲದಲ್ಲಿ ಕಣ್ಣಿಗೆ ಕಾಣುವ ದೇವರು ಆಚಾರ್ಯರು, ಉಪಾಧ್ಯಾಯರು, ಸರ್ವಸಾಧುಗಳು. ಇದರಲ್ಲಿ ಉಪಾಧ್ಯಾಯರಾದಂತಹ ಕಾಮಕುಮಾರ ನಂದಿ ಮಹಾರಾಜ್ ಅವರನ್ನು ಹಂತಕರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆದರೆ ಮುನಿಗಳು ಯಾರಿಗೂ ತೊಂದರೆ

ಜೈನ ಮುನಿ ಹತ್ಯೆ ಖಂಡಿಸಿ ಮತ್ತು ವಕ್ಫ್ ಬೋರ್ಡ್ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ Read More »

ಕೇಂದ್ರ ಸರಕಾರ ಪುರಸ್ಕೃತ ರೈತ ಉತ್ಪಾದಕ ಸಂಸ್ಥೆ | ಜನನಿ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್

ಪುತ್ತೂರು: ಕೇಂದ್ರ ಸರಕಾರದ 10000 ರೈತ  ಉತ್ಪಾದಕ ಸಂಸ್ಥೆಗಳ ರಚನೆ ಮತ್ತು ಉತ್ತೇಜನ ಯೋಜನೆ ಅಡಿಯಲ್ಲಿ ನಬಾರ್ಡ್ ಪ್ರಾಯೋಜಕತ್ವದಲ್ಲಿ ಸ್ಥಾಪನೆಗೊಂಡ ಜನನಿ ರೈತ ಉತ್ಪಾದಕ ಕಂಪನಿ ನಿಯಮಿತ ಪುತ್ತೂರು ಪ್ರಸ್ತುತ ನೆಯ್ತಾಡಿ ಕಮ್ಮಿಂಜೆಯಲ್ಲಿ ಕೇಂದ್ರ ಕಛೇರಿಯನ್ನು ಹೊಂದಿ ವ್ಯವಹಾರ ಪ್ರಕ್ರಿಯೆ ನಡೆಸಿಕೊಂಡು ಬಂದಿದೆ. ಕಂಪನಿಯು ಪುತ್ತೂರು ತಾಲೂಕಿನ 9 ಗ್ರಾಮಗಳನ್ನು ಕೇಂದ್ರವಾಗಿರಿಸಿ ಪ್ರತಿ ಗ್ರಾಮಗಳಿಂದ ನಿರ್ದೇಶಕರನ್ನೊಳಗೊಂಡು, ಸುಮಾರು 500 ರೈತ ಸದಸ್ಯತ್ವ ಹೊಂದಿ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯಲ್ಲಿ ರೈತರಿಗೆ ರಾಸಾಯನಿಕ ರಸಗೊಬ್ಬರಗಳು, ಸಾವಯವ ಗೊಬ್ಬರಗಳು, ಸೋಲಾರ್

ಕೇಂದ್ರ ಸರಕಾರ ಪುರಸ್ಕೃತ ರೈತ ಉತ್ಪಾದಕ ಸಂಸ್ಥೆ | ಜನನಿ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ Read More »

error: Content is protected !!
Scroll to Top