ಪುತ್ತೂರು

ಜೈನ ಮುನಿ ಹತ್ಯೆ ಖಂಡಿಸಿ ಮತ್ತು ವಕ್ಫ್ ಬೋರ್ಡ್ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ

ಪುತ್ತೂರು: ಪುತ್ತೂರು: ಜೈನ ಮುನಿ ಹತ್ಯೆ ಖಂಡಿಸಿ ಮತ್ತು ವಕ್ಫ್ ಬೋರ್ಡ್ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ ಮಂಗಳವಾರ ಪುತ್ತೂರು ತಾಲೂಕು ಆಡಳಿತ ಸೌಧದ ಬಳಿಯ ಅಮರ್ ಜವಾನ್ ಸ್ಮಾರಕ ಜ್ಯೋತಿ ಬಳಿ ನಡೆಯಿತು. ಆಂದೋಲನವನ್ನುದ್ದೇಶಿಸಿ ಮಿತ್ರಸೇನ ಅಳದಂಗಡಿ ಮಾತನಾಡಿ, ಪ್ರಸ್ತುತ ವರ್ತಮಾನ ಕಾಲದಲ್ಲಿ ಕಣ್ಣಿಗೆ ಕಾಣುವ ದೇವರು ಆಚಾರ್ಯರು, ಉಪಾಧ್ಯಾಯರು, ಸರ್ವಸಾಧುಗಳು. ಇದರಲ್ಲಿ ಉಪಾಧ್ಯಾಯರಾದಂತಹ ಕಾಮಕುಮಾರ ನಂದಿ ಮಹಾರಾಜ್ ಅವರನ್ನು ಹಂತಕರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆದರೆ ಮುನಿಗಳು ಯಾರಿಗೂ ತೊಂದರೆ […]

ಜೈನ ಮುನಿ ಹತ್ಯೆ ಖಂಡಿಸಿ ಮತ್ತು ವಕ್ಫ್ ಬೋರ್ಡ್ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ Read More »

ಕೇಂದ್ರ ಸರಕಾರ ಪುರಸ್ಕೃತ ರೈತ ಉತ್ಪಾದಕ ಸಂಸ್ಥೆ | ಜನನಿ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್

ಪುತ್ತೂರು: ಕೇಂದ್ರ ಸರಕಾರದ 10000 ರೈತ  ಉತ್ಪಾದಕ ಸಂಸ್ಥೆಗಳ ರಚನೆ ಮತ್ತು ಉತ್ತೇಜನ ಯೋಜನೆ ಅಡಿಯಲ್ಲಿ ನಬಾರ್ಡ್ ಪ್ರಾಯೋಜಕತ್ವದಲ್ಲಿ ಸ್ಥಾಪನೆಗೊಂಡ ಜನನಿ ರೈತ ಉತ್ಪಾದಕ ಕಂಪನಿ ನಿಯಮಿತ ಪುತ್ತೂರು ಪ್ರಸ್ತುತ ನೆಯ್ತಾಡಿ ಕಮ್ಮಿಂಜೆಯಲ್ಲಿ ಕೇಂದ್ರ ಕಛೇರಿಯನ್ನು ಹೊಂದಿ ವ್ಯವಹಾರ ಪ್ರಕ್ರಿಯೆ ನಡೆಸಿಕೊಂಡು ಬಂದಿದೆ. ಕಂಪನಿಯು ಪುತ್ತೂರು ತಾಲೂಕಿನ 9 ಗ್ರಾಮಗಳನ್ನು ಕೇಂದ್ರವಾಗಿರಿಸಿ ಪ್ರತಿ ಗ್ರಾಮಗಳಿಂದ ನಿರ್ದೇಶಕರನ್ನೊಳಗೊಂಡು, ಸುಮಾರು 500 ರೈತ ಸದಸ್ಯತ್ವ ಹೊಂದಿ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯಲ್ಲಿ ರೈತರಿಗೆ ರಾಸಾಯನಿಕ ರಸಗೊಬ್ಬರಗಳು, ಸಾವಯವ ಗೊಬ್ಬರಗಳು, ಸೋಲಾರ್

ಕೇಂದ್ರ ಸರಕಾರ ಪುರಸ್ಕೃತ ರೈತ ಉತ್ಪಾದಕ ಸಂಸ್ಥೆ | ಜನನಿ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ Read More »

ಹಲವು ತೊಡಕುಗಳನ್ನು ಸರಿಪಡಿಸಿ ಮುಂದಿನ ಕಾಮಗಾರಿ ಆರಂಭ | ರೈಲ್ವೇ ಅಂಡರ್ ಪಾಸ್ ಪ್ರದೇಶಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ

ಪುತ್ತೂರು: ಎಪಿಎಂಸಿ ಅಂಡರ್ ಪಾಸ್ ರಸ್ತೆ ಒಂದು ಹಂತದಲ್ಲಿ ಕಾಲಮಿತಿಯೊಳಗೆ ಮುಗಿದಿದ್ದು, ಮುಂದಿನ ಕಾಮಗಾರಿಗಳಿಗೆ ಕೆಲವೊಂದು ತೊಡಕುಗಳಿದ್ದು, ಅದನ್ನು ಸರಿಪಡಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಅವರು ಮಂಗಳವಾರ ಎಪಿಎಂಸಿ ರೈಲ್ವೇ ಅಂಡರ್ ಪಾಸ್ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದರು. ರೈಲ್ವೇ ಅಂಡರ್ ಪಾಸ್ ಪುತ್ತೂರಿನ ಬಹುಬೇಡಿಕೆಯಾಗಿದ್ದು, ಕಾಮಗಾರಿ ಮುಗಿದು ಸಂಚಾರಕ್ಕೆ ಈಗಾಗಲೇ ತೆರೆದುಕೊಂಡಿದೆ. ಹಾಗೆಯೇ ಜಿಲ್ಲೆಯ ಹಲವು ಕಡೆಗಳಲ್ಲಿ ಅಂಡರ್ ಪಾಸ್ ಅಥವಾ ಓವರ್ ಬ್ರಿಡ್ಜ್ ನ ಬೇಡಿಕೆಯಿದೆ. ಈ

ಹಲವು ತೊಡಕುಗಳನ್ನು ಸರಿಪಡಿಸಿ ಮುಂದಿನ ಕಾಮಗಾರಿ ಆರಂಭ | ರೈಲ್ವೇ ಅಂಡರ್ ಪಾಸ್ ಪ್ರದೇಶಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ Read More »

ಭಕ್ತಕೋಡಿ ಅಂಗನವಾಡಿಗೆ ಕೊಳೆತ ಮೊಟ್ಟೆ ಪೂರೈಕೆ

ಪುತ್ತೂರು: ಅಂಗನವಾಡಿಗಳಿಗೆ ಪೂರೈಕೆಯಾಗಿರುವ ಮೊಟ್ಟೆಗಳ ಪೈಕಿ ಇದೀಗ ಪುತ್ತೂರು ತಾಲೂಕಿನ ಭಕ್ತಕೋಡಿ ಅಂಗನವಾಡಿ ಕೇಂದ್ರಕ್ಕೆ ಕೊಳೆತ ಮೊಟ್ಟೆ ಪೂರೈಕೆಯಾಗಿದೆ ಎಂದು ತಿಳಿದು ಬಂದಿದೆ. ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಮೊಟ್ಟೆಗಳು ಪೂರೈಕೆಯಾಗುತ್ತಿರುವ ಕುರಿತು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧೀ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈಗಾಗಲೇ ತನಿಕೆಗೆ ಆದೇಶಿಸಿದ್ದಾರೆ. ತನಿಖಾ ವರದಿ ಸಲ್ಲಿಕೆಯಾದ ಬಳಿಕ ಕ್ರಮ ಜರಗಿಸಲಾಗುವುದು ಎಂದು ಅವರು ಈಗಾಗಲೇ ತಿಳಿಸಿದ್ದಾರೆ. ಭಕ್ತಕೋಡಿ ಅಂಗನವಾಡಿಗ ಕೊಳೆತ ಮೊಟ್ಟೆ ಪೂರೈಕೆಯಾಗಿರುವ ಕುರಿತು ಸಿಡಿಪಿಒ ಪ್ರತಿಕ್ರಿಯೆ ನೀಡಿದ್ದು,

ಭಕ್ತಕೋಡಿ ಅಂಗನವಾಡಿಗೆ ಕೊಳೆತ ಮೊಟ್ಟೆ ಪೂರೈಕೆ Read More »

ಇನ್ನು ಮುಂದೆ ದೇವಾಲಯಗಳಲ್ಲಿ ಫೋಟೊ ಕ್ಲಿಕ್ಕಿಸುವುದಕ್ಕೆ ನಿಷೇಧ | ಸರಕಾರದಿಂದ ಆದೇಶ

ಪುತ್ತೂರು: ದೇವಾಲಯಗಳಿಗೆ ತೆರಳಿ ಪೋಟೋ ಕ್ಲಿಕ್ಕಿಸಲೆಂದೇ ತೆರಳುವವರಿಗೆ ರಾಜ್ಯ ಸರ್ಕಾರ ಶಾಕಿಂಗ್​ ನ್ಯೂಸ್​ ನೀಡಿದೆ. ಕರ್ನಾಟಕದ ದೇಗುಲಗಳಲ್ಲಿ ಮೊಬೈಲ್​ ಬಳಕೆಗೆ ನಿಷೇಧ ಹೇರಿ ನೂತನ ಆದೇಶ ಹೊರಡಿಸಿದೆ. ಇಂದು ಹಿಂದೂ ಧಾರ್ಮಿಕ ಹಾಗೂ ಧರ್ಮದಾಯ ದತ್ತಿಗಳ ಇಲಾಖೆ ಈ ಆದೇಶವನ್ನು ಹೊರಡಿಸಿದ್ದು ದತ್ತಿ ಇಲಾಖೆಗಳ ಅಡಿಯಲ್ಲಿ ಬರುವ ಯಾವುದೇ ದೇಗುಲಗಳಲ್ಲಿ ಇನ್ಮೇಲೆ ಮೊಬೈಲ್​ ಬಳಕೆ ಮಾಡುವಂತಿಲ್ಲ ಎಂದು ತನ್ನ ಆದೇಶದಲ್ಲಿ ತಿಳಿಸಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ರಾಜ್ಯ ಸರ್ಕಾರ 30 ಸಾವಿರಕ್ಕೂ ಅಧಿಕ ದೇವಾಲಯಗಳು ಇರುತ್ತದೆ.

ಇನ್ನು ಮುಂದೆ ದೇವಾಲಯಗಳಲ್ಲಿ ಫೋಟೊ ಕ್ಲಿಕ್ಕಿಸುವುದಕ್ಕೆ ನಿಷೇಧ | ಸರಕಾರದಿಂದ ಆದೇಶ Read More »

ನಾಳೆ (ಜು.18) : ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ

ಪುತ್ತೂರು: ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಜೈನ ಮುನಿಯವರ ಹತ್ಯೆಯನ್ನು ಖಂಡಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಾಳೆ (ಜು.18) ಬೆಳಿಗ್ಗೆ 11.30 ಕ್ಕೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಹಿಂದುಗಳ  ಭೂಮಿಯನ್ನ ಕಬಳಿಸುವ ವಕ್ಫ್ ಬೋರ್ಡ್ ಕಾಯಿದೆಯನ್ನು ರದ್ದುಗೊಳಿಸಬೇಕು ಎಂಬ ಆಗ್ರಹದೊಂದಿಗೆ ಆಂದೋಲನ ನಡೆಯಲಿದೆ. ಪುತ್ತೂರಿನ ಮಿನಿ ವಿಧಾನಸೌಧ ಮುಂಭಾಗದ ಅಮರ್ ಜವಾನ್ ವೃತ್ತದ ಬಳಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ನಾಳೆ (ಜು.18) : ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ Read More »

ಬ್ಯಾಟ್ ಹಿಡಿದು ಫೀಲ್ಡ್ ಗಿಳಿದ ಪುತ್ತಿಲ ಪರಿವಾರ | ಮುಂದುವರೆದ ಮನೆ ಮನೆ ಭೇಟಿ

ಪುತ್ತೂರು: ಉಪಚುನಾವಣೆ ಎದುರಿಸುತ್ತಿರುವ ನಿಡ್ಪಳ್ಳಿಯ ಒಂದು ಕ್ಷೇತ್ರದಲ್ಲಿ ಪುತ್ತಿಲ ಪರಿವಾರ ಸಭೆ ಹಾಗೂ ಮನೆ ಮನೆ ಭೇಟಿ ನಡೆಯಿತು. ಇಲ್ಲಿಯೂ ಬ್ಯಾಟ್ ಚಿಹ್ನೆಯೇ ಸಿಕ್ಕಿರುವುದರಿಂದ  ಪುತ್ತಿಲ ಪರಿವಾರ ಪ್ರಚಾರ ಸಂದರ್ಭ ಬ್ಯಾಟ್ ಹಿಡಿದೇ ಫೀಲ್ಡ್ ಗೆ ಹೋಗುತ್ತಿದ್ದಾರೆ. ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಅಧ್ಯಕ್ಷ ಪ್ರಸನ್ನ ಮಾರ್ತಾರ  ಅಧ್ಯಕ್ಷತೆಯಲ್ಲಿ ಪುತ್ತಿಲ ಪರಿವಾರದ ಸಭೆ ನಿಡ್ಪಳ್ಳಿಯಲ್ಲಿ ಜರಗಿತು.  ಹಿಂದೂ ಮುಖಂಡ ಅರುಣ್ ಪುತ್ತಿಲ, ನಿಡ್ಪಳ್ಳಿಯ ಪುತ್ತಿಲ ಪರಿವಾರದ ಅಭ್ಯರ್ಥಿ ಜಗನ್ನಾಥ ರೈ ಕೊಳಂಬೆತ್ತಿಮಾರು,  ನಿಡ್ಪಳ್ಳಿ  ಶಾಂತಾದುರ್ಗಾ ದೇವಸ್ಥಾನದ ವ್ಯವಸ್ಥಾಪನ ನಾರಾಯಣ

ಬ್ಯಾಟ್ ಹಿಡಿದು ಫೀಲ್ಡ್ ಗಿಳಿದ ಪುತ್ತಿಲ ಪರಿವಾರ | ಮುಂದುವರೆದ ಮನೆ ಮನೆ ಭೇಟಿ Read More »

ವರದಿಗಾರ ನಿಶಾಂತ್ ಬಿಲ್ಲಂಪದವು ಮೇಲೆ ದೌರ್ಜನ್ಯ | ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಠಾಣಾಧಿಕಾರಿಗಳಿಗೆ ಮನವಿ

ಪುತ್ತೂರು: ಬಪ್ಪಳಿಗೆಯ ಗುರುಂಪುನಾರು ಎಂಬಲ್ಲಿ ವಿಜಯವಾಣಿ ಪತ್ರಿಕೆ ವರದಿಗಾರ ನಿಶಾಂತ್ ಬಿಲ್ಲಂಪದವು ಅವರ ಮೊಬೈಲ್ ಹುಡಿ ಮಾಡಿ ದೌರ್ಜನ್ಯಗೈದ ಘಟನೆಗೆ ಸಂಬಂಧಿಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ ವತಿಯಿಂದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮನವಿ ಸಲ್ಲಿಸಲಾಯಿತು. ಘಟನೆ ಬಪ್ಪಳಿಗೆಯ ಗುಂಪಕಲ್ಲು ಎಂಬಲ್ಲಿ ನಡೆದಿದ್ದು, ನಿಶಾಂತ್ ಅವರು ಅಪಾಯಕಾರಿ ಮರಗಳನ್ನು ಮಾನದಂಡದ ಪ್ರಕಾರ ಅಗತ್ಯ ಸುರಕ್ಷತಾ ಸಾಧನಗಳನ್ನು ಬಳಸಿರಲಿಲ್ಲ. ಅಪಾಯಕ್ಕೆ ಆಹ್ವಾನಿಸುವ ರೀತಿಯಲ್ಲಿ

ವರದಿಗಾರ ನಿಶಾಂತ್ ಬಿಲ್ಲಂಪದವು ಮೇಲೆ ದೌರ್ಜನ್ಯ | ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಠಾಣಾಧಿಕಾರಿಗಳಿಗೆ ಮನವಿ Read More »

ಲೆಫ್ಟಿನೆಂಟ್ ಭಾಮಿ ಅತುಲ್ ಶೆಣೈಗೆ ಮುಖ್ಯಮಂತ್ರಿ ಪ್ರಶಂಸನಾ ಪತ್ರ

ಪುತ್ತೂರು: ಇಲ್ಲಿಯ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ (ಸ್ವಾಯತ್ತ) ರಾಷ್ಟೀಯ ಸೇನಾ ಯೋಜನೆಯ (ಎನ್‌ಸಿಸಿ) ಅಧಿಕಾರಿ ಲೆಫ್ಟಿನೆಂಟ್ ಭಾಮಿ ಅತುಲ್ ಶೆಣೈ ಅವರಿಗೆ ಎನ್‌ಸಿಸಿಯಲ್ಲಿ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರಕಾರದ ಮುಖ್ಯಮಂತ್ರಿಯಿಂದ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಲಾಯಿತು. ಮಡಿಕೇರಿ ಬೆಟಾಲಿಯನ್ ನ ಕಮಾಂಡಿಂಗ್ ಆಫೀಸರ್ ಕರ್ನಲ್  ಝೆಡ್.ಜಿ.ಅರ್ಹನ ಹಾಗೂ ಆಡಳಿತಾಧಿಕಾರಿ ಕರ್ನಲ್ ವಿ ಡಿ ಚಾಕೋ ಅವರು ಈ ಗೌರವ ಪತ್ರವನ್ನು ಮಡಿಕೇರಿ ಬೆಟಾಲಿಯನ್ ನಲ್ಲಿ ನೀಡಿ ಗೌರವಿಸಿದರು. ಭಾಮಿ ಅತುಲ್ ಶೆಣೈ

ಲೆಫ್ಟಿನೆಂಟ್ ಭಾಮಿ ಅತುಲ್ ಶೆಣೈಗೆ ಮುಖ್ಯಮಂತ್ರಿ ಪ್ರಶಂಸನಾ ಪತ್ರ Read More »

ರಾಮಚಂದ್ರ ಪುರುಷ ನಿಧನ

ಪುತ್ತೂರು: ನರಿಮೊಗರು ಗ್ರಾಮದ ಪುರುಷರಕಟ್ಟೆ ಸುರುಳಿಮಜಲು ನಿವಾಸಿ ರಾಮಚಂದ್ರ ಪುರುಷ ಎಂ. (65) ಸ್ವಗೃಹದಲ್ಲಿ ಭಾನುವಾರ ನಿಧನರಾದರು. ಪ್ರಗತಿಪರ ಕೃಷಿಕರಾಗಿದ್ದ ಮೃತರು ಮುಗೇರಡ್ಕ ಕುಟುಂಬದವರಾಗಿದ್ದರು. ಅಲ್ಲದೆ ಪ್ರತಿಷ್ಠಿತ ಸನಾತನ ನಾಥಿಯ ಪಂಥದವರಾಗಿರುವ ಅವರು ಕದ್ರಿ ಜೋಗಿ ಮಠಕ್ಕೆ ಸೇರಿದವರಾಗಿರುತ್ತಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ರಾಮಚಂದ್ರ ಪುರುಷ ನಿಧನ Read More »

error: Content is protected !!
Scroll to Top