ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು : ಸಾಹಿತಿ ವಿ.ಬಿ.ಅರ್ತಿಕಜೆ | ಸಾಹಿತ್ಯ ಸಂಪದ, ಉಪನ್ಯಾಸ, ಗೌರವಾರ್ಪಣೆ, ಭಾವಗಾನ ಮತ್ತು ಕವಿಗೋಷ್ಟಿ ಕಾರ್ಯಕ್ರಮ
ಮುಕ್ಕೂರು : ಬೌದ್ಧಿಕ ಪ್ರಬುದ್ದತೆಗೆ ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ವಿ.ಬಿ.ಅರ್ತಿಕಜೆ ಹೇಳಿದರು. ಸುಳ್ಯ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಮತ್ತು ನಲಂದ ಪ್ರಕಾಶನ ಆಶ್ರಯದಲ್ಲಿ ಕಾನಾವಿನ ಕೋಡಿಬೈಲು ನಲಂದದಲ್ಲಿ ಸಾಹಿತ್ಯ ಸಂಪದ, ಉಪನ್ಯಾಸ, ಗೌರವಾರ್ಪಣೆ, ಭಾವಗಾನ ಮತ್ತು ಕವಿಗೋಷ್ಟಿ ಕಾರ್ಯಕ್ರಮವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಓದುವ ಹವ್ಯಾಸ ಬೆಳೆಸಿಕೊಂಡಾಗ ಬರವಣಿಗೆಯಲ್ಲಿಯು ಗಟ್ಟಿತನ ಮೂಡುತ್ತದೆ ಎಂದರು. ಕೆಲವು ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲದವರು ಬರುವುದುಂಟು. ಸಂಬಂಧ, ಪರಿಚಯ ಎನ್ನುವ ಕಾರಣಕ್ಕೆ […]










