ಪುತ್ತೂರು

ಅಂತರ್ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ | ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರ ತಂಡ ಭಾಗಿ

ಪುತ್ತೂರು: ಕಲ್ಮಡ್ಕದ ಕಲಾಗ್ರಾಮ ಆಯೋಜಿಸಿದ ಅಂತರ್ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ “ಭಜನಾ ಸಮರ್ಥ- 2023″ರಲ್ಲಿ ವಿವೇಕಾನಂದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರ ತಂಡ ಪಾಲ್ಗೊಂಡಿದೆ. ವೆಂಕಟೇಶ್ ಪ್ರಸಾದ್, ಶರ್ಮಿಳಾ, ಶೋಭಾ ಜೆ. ರೈ, ಜ್ಯೋತಿ ದಿವಾಕರ್, ವೀಣಾ ಕುಮಾರಿ, ರೇಷ್ಮಾ, ಕವಿತಾ ಸತೀಶ್, ಜ್ಯೋತಿಲಕ್ಷ್ಮಿ, ಯಶಸ್ವಿನಿ ಟಿ. ಅವರನ್ನು ಒಳಗೊಂಡ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರು ತಂಡದಲ್ಲಿದ್ದರು.

ಅಂತರ್ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ | ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರ ತಂಡ ಭಾಗಿ Read More »

ಭಾರತೀಯರ ಸಂಶೋಧನೆ ಜಗತ್ತಿನ ಹಿತಕ್ಕಾಗಿ : ವಿಶ್ವ ಫಾರ್ಮಸಿಸ್ಟ್ ದಿನ ಕಾರ್ಯಕ್ರಮದಲ್ಲಿ ಡಾ.ಪ್ರಭಾಕರ್ ಭಟ್ ಕಲ್ಲಡ್ಕ

ಪುತ್ತೂರು: ಔಷಧೀಯ ಕ್ಷೇತ್ರದಲ್ಲಿ ಸಂಶೋಧನೆಗೆ ಬಹಳ ಮಹತ್ವವಿದೆ. ಕುತೂಹಲ ಯಾವಾಗ ಮೂಡುತ್ತದೆಯೋ ಅಲ್ಲಿ ಸಂಶೋಧನೆಗೆ ಮುಂದಾಗುತ್ತಾರೆ. ನಮ್ಮಲ್ಲಿ ಕುತೂಹಲ, ಆಸಕ್ತಿ, ಹಂಬಲ ಇದ್ದಾಗ ನಾವು ಎತ್ತರಕ್ಕೆ ಬೆಳೆಯಲು ಸಾಧ್ಯ. ಇದರಿಂದ ವಿದ್ಯಾರ್ಥಿಗಳು ಬೆಳೆಯುತ್ತಾ ಸಮಾಜವನ್ನು ಬೆಳೆಸಿ ಅದರೊಂದಿಗೆ ದೇಶವು ಬೆಳೆಯುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಯೋಚಿಸಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು. ಪುತ್ತೂರು ವಿವೇಕಾನಂದ ಇನ್ ಸ್ಟಿಟ್ಯೂಟ್ ಆಪ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ನಲ್ಲಿ ನಡೆದ ಮಾಹಿತಿಕಾರ್ಯಾಗಾರ ಮತ್ತು ವಿಶ್ವ ಫಾರ್ಮಸಿಸ್ಟ್

ಭಾರತೀಯರ ಸಂಶೋಧನೆ ಜಗತ್ತಿನ ಹಿತಕ್ಕಾಗಿ : ವಿಶ್ವ ಫಾರ್ಮಸಿಸ್ಟ್ ದಿನ ಕಾರ್ಯಕ್ರಮದಲ್ಲಿ ಡಾ.ಪ್ರಭಾಕರ್ ಭಟ್ ಕಲ್ಲಡ್ಕ Read More »

ಪೇಜಾವರ ಶ್ರೀ ಜೊತೆ ಮೈಸೂರಿನ ಬಿಬಿ ಕೇರಿಯಲ್ಲಿ ಮನೆ ಮನೆ ಭೇಟಿ ಮಾಡಿದ ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ಅಯೋಧ್ಯೆಯ ರಾಮಜನ್ಮ ಭೂಮಿ ಟ್ರಸ್ಟ್ ಸಮಿತಿಯ ಸದಸ್ಯ ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜೀಯವರ 36ನೇ ಚಾತುರ್ಮಾಸ್ಯ ಮೈಸೂರಿನ ಸರಸ್ವತಿಪುರಂನಲ್ಲಿರುವ ಶ್ರೀಕೃಷ್ಣಧಾಮದಲ್ಲಿ ಜರಗುತಿದ್ದು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಸ್ವಾಮೀಜಿಯವರು ಮೈಸೂರಿನ ಬಿ ಬಿ ಕೇರಿಗೆ ಸೌಹಾರ್ದ ಭೇಟಿ ನೀಡಿದರು. ಸ್ವಾಮೀಜಿ ಜೊತೆ ಅರುಣ್ ಪುತ್ತಿಲ ಅವರು ಜೊತೆಗಿದ್ದರು.ಕಾಲೊನಿಯಲ್ಲಿ ಸ್ವಾಮೀಜಿ ಪಾದಯಾತ್ರೆ ನಡೆಸಿ, ಅಲ್ಲಿನ ನಿವಾಸಿಗಳ ಮನೆಗಳಿಗೂ ಭೇಟಿ ನೀಡಿದರು.

ಪೇಜಾವರ ಶ್ರೀ ಜೊತೆ ಮೈಸೂರಿನ ಬಿಬಿ ಕೇರಿಯಲ್ಲಿ ಮನೆ ಮನೆ ಭೇಟಿ ಮಾಡಿದ ಅರುಣ್ ಕುಮಾರ್ ಪುತ್ತಿಲ Read More »

ಮನೆಯವರನ್ನು ಕೂಡಿ ಹಾಕಿ ದರೋಡೆ ಪ್ರಕರಣ | ಕೇರಳದಲ್ಲಿ ಮಹತ್ವದ ಸಾಧನೆ ಮೆರೆದ ಕರ್ನಾಟಕ ಪೊಲೀಸರು!!

ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಕುದ್ಕಾಡಿ ತೋಟದಮೂಲೆಯನ್ನು ಇತ್ತೀಚೆಗೆ ತಾಯಿ-ಮಗನನ್ನು ಕಟ್ಟಿ ಹಾಕಿ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ಸಮೀಪದ ಬಾಡೂರು ನಿವಾಸಿಯೋರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದರೋಡೆಗೈದು ಕೇರಳದಲ್ಲಿ ಅವಿತಿರುವ ಕುರಿತು ಮಾಹಿತಿ ಕಲೆ ಹಾಕಿದ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಬಾಡೂರು ಬಳಿ ಸಂಸ್ಥೆಯೊಂದರಲ್ಲಿ ಅವಿತು ಕುಳಿತಿದ್ದ ವೇಳೆ ಕರ್ನಾಟಕ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಕೇರಳ ಮಾಧ್ಯಮಗಳಲ್ಲಿ ವರದಿ ಪ್ರಕವಾಗಿತ್ತು ಎನ್ನಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ತಡ ರಾತ್ರಿ

ಮನೆಯವರನ್ನು ಕೂಡಿ ಹಾಕಿ ದರೋಡೆ ಪ್ರಕರಣ | ಕೇರಳದಲ್ಲಿ ಮಹತ್ವದ ಸಾಧನೆ ಮೆರೆದ ಕರ್ನಾಟಕ ಪೊಲೀಸರು!! Read More »

ಸಣ್ಣ ಪುಟ್ಟ ಅವಕಾಶಗಳನ್ನೂ ಸದ್ಬಳಕೆ ಮಾಡಿಕೊಳ್ಳಬೇಕು: ಅಂಬಿಕಾ ವಿದ್ಯಾಲಯದಲ್ಲಿ ಅನುಪಮ ವೇದಿಕೆ ಕಾರ್ಯಕ್ರಮದಲ್ಲಿ ವಿದ್ವಾನ್ ತೇಜಶಂಕರ ಸೋಮಯಾಜಿ

ಪುತ್ತೂರು: ಯಾರಿಗೂ ಒಂದೇ ಸಲಕ್ಕೆ ಅತ್ಯುತ್ತಮ ವೇದಿಕೆಗಳು ಲಭ್ಯವಾಗುವುದಿಲ್ಲ. ಹಂತಹಂತವಾಗಿ ಬೆಳೆಯುವುದರ ಮೂಲಕ ಉನ್ನತ ವೇದಿಕೆಗಳವರೆಗೆ ತಲುಪುವುದಕ್ಕೆ ಸಾಧ್ಯವಿದೆ. ಹಾಗಾಗಿ ಕಾಲೇಜುಗಳಲ್ಲಿ ದೊರಕುವ ಸಣ್ಣ ಪುಟ್ಟ ಅವಕಾಶಗಳನ್ನೂ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅಂಬಿಕಾ ಮಹಾವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಹೇಳಿದರು. ಅವರು ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಅಂತಿಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿಗಳು ನಡೆಸುತ್ತಿರುವ ಅನುಪಮ ಪ್ರತಿಭಾ ವೇದಿಕೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಒಬ್ಬರೊಂದಿಗೆ ಸಾಮಾನ್ಯವಾಗಿ ಮಾತನಾಡುವುದಕ್ಕೂ,

ಸಣ್ಣ ಪುಟ್ಟ ಅವಕಾಶಗಳನ್ನೂ ಸದ್ಬಳಕೆ ಮಾಡಿಕೊಳ್ಳಬೇಕು: ಅಂಬಿಕಾ ವಿದ್ಯಾಲಯದಲ್ಲಿ ಅನುಪಮ ವೇದಿಕೆ ಕಾರ್ಯಕ್ರಮದಲ್ಲಿ ವಿದ್ವಾನ್ ತೇಜಶಂಕರ ಸೋಮಯಾಜಿ Read More »

ಶ್ರೀ ಮಹಾಲಿಂಗೇಶ್ವರ ದೇವಳದ ಶತರುದ್ರ ಯಾಗದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಭಾಗಿ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಶತರುದ್ರ ಯಾಗದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಕುಟುಂಬ ಸಮೇತರಾಗಿ ಪಾಲ್ಗೊಂಡರು. ಭಾನುವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕೋಟಿ ಜಪ ಕಾರ್ಯಕ್ರಮದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್. ಭಟ್ ಅವರು ಶತರುದ್ರಯಾಗ ನೆರವೇರಿಸಿದರು. ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಉಪಸ್ಥಿತರಿದ್ದರು.

ಶ್ರೀ ಮಹಾಲಿಂಗೇಶ್ವರ ದೇವಳದ ಶತರುದ್ರ ಯಾಗದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಭಾಗಿ Read More »

ಸದ್ಯವೇ ಪುತ್ತೂರಿನಲ್ಲಿ ಬೃಹತ್ ಮಹಿಳಾ ಸಮಾವೇಶ | ಕೆಯ್ಯೂರು ಮಹಿಳಾ ಕಾಂಗ್ರೆಸ್ ಘಟಕ ಉದ್ಘಾಟಿಸಿ ಶಾಸಕ ಅಶೋಕ್ ರೈ

ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಆಗಿದ್ದು, ಮುಂದಿನ ದಿನಗಳಲ್ಲಿ ಮಹಿಳೆಯರೆ ಕಾಂಗ್ರೆಸ್ ಗೆ ಶಕ್ತಿ ತುಂಬಲಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಕಾಂಗ್ರೆಸ್ ಮುಖಂಡ ಸಂತೋಷ್ ರೈ ಇಳಂತಾಜೆ ನಿವಾಸದಲ್ಲಿ ಕೆಯ್ಯೂರು ವಲಯ ಮಹಿಳಾ ಕಾಂಗ್ರೆಸ್ ಘಟಕ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಐದು ಗ್ಯಾರಂಟಿಗಳನ್ನು ಸರಕಾರ ಜಾರಿಗೆ ತಂದಿದೆ. ಈ ಐದು ಗ್ಯಾರಂಟಿಗಳಲ್ಲಿ ಬಹುತೇಕ ಮಹಿಳೆಯರನ್ನೇ ಮುಂದಿಟ್ಟುಕೊಂಡು ಮಾಡಲಾಗಿದೆ. ಶಕ್ತಿ ಯೋಜನೆ, ಅನ್ನ

ಸದ್ಯವೇ ಪುತ್ತೂರಿನಲ್ಲಿ ಬೃಹತ್ ಮಹಿಳಾ ಸಮಾವೇಶ | ಕೆಯ್ಯೂರು ಮಹಿಳಾ ಕಾಂಗ್ರೆಸ್ ಘಟಕ ಉದ್ಘಾಟಿಸಿ ಶಾಸಕ ಅಶೋಕ್ ರೈ Read More »

ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿಯವರಿಗೆ ಪ್ರತಿಷ್ಠಿತ “ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿ-2023” ಪ್ರದಾನ

ಸುಳ್ಯ: ಸುಳ್ಯದ ವ್ಯಕ್ತಿತ್ವ ವಿಕಸನ ತರಬೇತುದಾರರಾದ, ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿಯವರಿಗೆ ಬೆಳಗಾವಿ ಗೋಕಾಕ ನಾಡಿನ ಸಮಾಚಾರ ಸೇವಾ ಸಂಘ ಶಿಕ್ಷಕರ ದಿನಾಚರಣೆ ನಿಮಿತ್ಯ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಶಿಕ್ಷಕರಿಗೆ ಪ್ರತೀ ವರ್ಷ ಕೊಡ ಮಾಡುವ ಪ್ರತಿಷ್ಠಿತ “ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟೀಯ ಪ್ರಶಸ್ತಿ-2023” ನ್ನು ಪ್ರದಾನ ಮಾಡಲಾಯಿತು. ಶಿಕ್ಷಣ, ಸಾಹಿತ್ಯ, ಸಮಾಜ ಸೇವೆ, ಸಂಘಟನಾ ಕ್ಷೇತ್ರದ ಕಾರ್ಯಗಳನ್ನು ಗಮನಿಸಿ ಕೊಡಮಾಡಿದ ಈ ಪ್ರಶಸ್ತಿಯನ್ನು ಸೆ.24 ಭಾನುವಾರ ಬೆಳಗಾವಿಯ ಕುಮಾರ ಗಂಧರ್ವ ಕಲಾಮಂದಿರದಲ್ಲಿ ನಡೆದ

ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿಯವರಿಗೆ ಪ್ರತಿಷ್ಠಿತ “ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿ-2023” ಪ್ರದಾನ Read More »

ಶ್ರೀ ಶಾರದಾ ಭಜನಾ ಮಂದಿರದಲ್ಲಿ 89ನೇ ವರ್ಷದ ವೈಭವದ ‘ಪುತ್ತೂರು ಶಾರದೋತ್ಸವ’ | ಪಯ್ಯನ್ನೂರಿನ ಜ್ಯೋತಿಷ್ಯರ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ನಡೆಯಲಿದೆ ಈ ಬಾರಿಯ ಶಾರದೋತ್ಸವ | ಸ್ತಬ್ಧಚಿತ್ರ ಸಹಿತ ವೈಭವದ ಶೋಭಾಯಾತ್ರೆ

ಪುತ್ತೂರು: ಇತಿಹಾಸ ಹೊಂದಿರುವ ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಈ ಬಾರಿ 89ನೇ ವರ್ಷದ ಶಾರದೋತ್ಸವ ನಡೆಯಲಿದ್ದು, ಸಾಂಸ್ಕೃತಿಕ, ಸಭಾ ಕಾರ್ಯಕ್ರಮಗಳೊಂದಿಗೆ ಅತ್ಯಂತ ವೈಭವದಿಂದ ‘ಪುತ್ತೂರು ಶಾರದೋತ್ಸವ” ನಡೆಯಲಿದೆ ಎಂದು ಶಾರದೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಶ್ರೀ ಶಾರದಾ ಭಜನಾ ಮಂದಿರ ಹಾಗೂ ಬಲ್ನಾಡು ಶ್ರೀ ಉಳ್ಳಾಲ್ತಿ ದೈವಸ್ಥಾನ ಅವಿನಾಭಾವ ಸಂಬಂಧ ಹೊಂದಿದ್ದು, ಹಿಂದೊಮ್ಮೆ ಯಾವುದೋ ಮಹಾರೋಗ ಪುತ್ತೂರನ್ನು ಬಾಧಿಸಿದ ಸಂದರ್ಭ

ಶ್ರೀ ಶಾರದಾ ಭಜನಾ ಮಂದಿರದಲ್ಲಿ 89ನೇ ವರ್ಷದ ವೈಭವದ ‘ಪುತ್ತೂರು ಶಾರದೋತ್ಸವ’ | ಪಯ್ಯನ್ನೂರಿನ ಜ್ಯೋತಿಷ್ಯರ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ನಡೆಯಲಿದೆ ಈ ಬಾರಿಯ ಶಾರದೋತ್ಸವ | ಸ್ತಬ್ಧಚಿತ್ರ ಸಹಿತ ವೈಭವದ ಶೋಭಾಯಾತ್ರೆ Read More »

ರಸ್ತೆ ಡಿವೈಡರ್‌ನಲ್ಲಿ ಕ್ರಾಟನ್ ಗಿಡ ನಾಟಿ: ಶಾಸಕರಿಂದ ಉದ್ಘಾಟನೆ

ಪುತ್ತೂರು: ಲೋಕೋಪಯೋಗಿ ಇಲಾಖೆ ವತಿಯಿಂದ ಪುತ್ತೂರು ಉಪ್ಪಿನಂಗಡಿ-ರಸ್ತೆ ಮಧ್ಯೆ ಡಿವೈಡರ್‌ಗಳಲ್ಲಿ ಕ್ರಾಟನ್ ಗಿಡಗಳನ್ನು ನೆಡುವ ಕಾರ್ಯಕ್ಕೆ ಶಾಸಕ ಅಶೋಕ್ ರೈ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ಪುತ್ತೂರಿನಿಂದ ಉಪ್ಪಿನಂಗಡಿ ತನಕ ರಸ್ತೆ ಮಧ್ಯೆ ಡಿವೈಡರ್ ಇರುವಲ್ಲಿ ಉಜ್ಜೈನಿ ಕ್ರಾಟನ್ ಗಿಡಗಳನ್ನು ನೆಡಲಾಗುವುದು. ರಸ್ತೆ ಮಧ್ಯೆ ಈ ಗಿಡಗಳು ಸೊಂಪಾಗಿ ಬೆಳೆದಲ್ಲಿ ರಸ್ತೆ ಸೌಂದರ್ಯ ವೃದ್ದಿಯಗುತ್ತದೆ ಮತ್ತು ಸ್ವಚ್ಚತೆಗೆ ಕಾರಣವಾಗುತ್ತದೆ ಎಂದು ಹೇಳಿದರು. ರಸ್ತೆಗೆ ಹೊಸ ಮೆರುಗು : ರಸ್ತೆ ಬದಿಗಳಲ್ಲಿ ಕಾಟು ಮಾವಿನ ಗಿಡಗಳನ್ನು

ರಸ್ತೆ ಡಿವೈಡರ್‌ನಲ್ಲಿ ಕ್ರಾಟನ್ ಗಿಡ ನಾಟಿ: ಶಾಸಕರಿಂದ ಉದ್ಘಾಟನೆ Read More »

error: Content is protected !!
Scroll to Top