ಪುತ್ತೂರು

ಅ. 22: ವಿಜಯ ಸಾಮ್ರಾಟ್ ವತಿಯಿಂದ ಪಿಲಿಗೊಬ್ಬು-2023, ಫುಡ್ ಫೆಸ್ಟ್  | ಪುತ್ತೂರು ದೇವಳದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

 ಪುತ್ತೂರು: ಅ.22 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಪುತ್ತೂರು ವಿಜಯ ಸಾಮ್ರಾಟ್ ವತಿಯಿಂದ ನಡೆಯಲಿರುವ “ಪುತ್ತೂರುದ ಪಿಲಿಗೊಬ್ಬು-2023” ರ ಆಮಂತ್ರಣ ಪತ್ರಿಕೆ ಬಿಡುಗಡೆ ಗುರುವಾರ ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಡಾ.ನರಸಿಂಹ ಕಾನಾವು ಜಂಟಿಯಾಗಿ ಆಮಂತ್ರಣ ಪತ್ರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಈ ಹುಲಿವೇಷ ಕುಣಿತ, ಹಾಗೆಯೇ ಫುಡ್ […]

ಅ. 22: ವಿಜಯ ಸಾಮ್ರಾಟ್ ವತಿಯಿಂದ ಪಿಲಿಗೊಬ್ಬು-2023, ಫುಡ್ ಫೆಸ್ಟ್  | ಪುತ್ತೂರು ದೇವಳದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಕಡಬದಲ್ಲಿ ಆನೆ ದಾಳಿ: ಗಾಯಾಳು ಚೋಮ ಆಸ್ಪತ್ರೆಗೆ

ಕಡಬ: ಕಡಬ ತಾಲೂಕಿನ ಮರ್ಧಾಳ ಸಮೀಪದ ನೆಲ್ಯಡ್ಕ ಎಂಬಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ನಡೆದಿದೆ. ಚೋಮ ಎಂಬವರು ಕಾಡಾನೆ ದಾಳಿಯಿಂದ ಗಾಯಗೊಂಡವರು. ಗಾಯಗೊಂಡ ಚೋಮ ಅವರು ಕಡಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಪರಿಸರದಲ್ಲಿ ಮತ್ತೆ ಜನರಲ್ಲಿ ಆತಂಕ ಶುರುವಾಗಿದೆ.

ಕಡಬದಲ್ಲಿ ಆನೆ ದಾಳಿ: ಗಾಯಾಳು ಚೋಮ ಆಸ್ಪತ್ರೆಗೆ Read More »

ತಾಲೂಕಿನಾದ್ಯಂತ ಸಂಭ್ರಮದ ಈದ್ ಮಿಲಾದ್ ಆಚರಣೆ | ಮಸ್ಲಿಂ ಯುವಜನ ಪರಿಷತ್ ವತಿಯಿಂದ ಬೃಹತ್ ವಾಹನ ರ್ಯಾಲಿ, ಸಮಾವೇಶ

ಪುತ್ತೂರು: ಪುತ್ತೂರು ತಾಲೂಕಿನಾದ್ಯಂತ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಗುರುವಾರ ಮುಸ್ಲಿಂ ಬಾಂಧವರು ಆಚರಿಸಿದರು. ಬೆಳಿಗ್ಗೆ ಮುಸ್ಲಿಂ ಬಾಂಧವರು ಪ್ರಾರ್ಥನಾ ಮಂದಿರಗಳಿಗೆ ತೆರಳಿ ಪರಸ್ಪರ ಶುಭಾಶಯ ಕೋರಿದರು. ಈದ್ ಮಿಲಾದ್ ಅಂಗವಾಗಿ ತಾ ದ.ಕ. ಜಿಲ್ಲಾ ಯುವಜನ ಪರಿಷತ್ ಪುತ್ತೂರು ತಾಲೂಕು ಹಾಗೂ ಈದ್ ಮಿಲಾದ್ ಸಮಿತಿ ವತಿಯಿಂದ 31ನೇ ವರ್ಷದ ಬೃಹತ್ ಮಿಲಾದ್ ಸಮಾವೇಶ ಹಾಗೂ ಬುರ್ಧಾ ಮಜ್ಲಿಸ್ ಗುರುವಾರ ನಗರದ ಕಿಲ್ಲೆ ಮೈದಾನದಲ್ಲಿ ಹಮ್ಮಿಕೊಂಡಿತು. ಸಂಜೆ ಕಬಕ ವೃತ್ತದಲ್ಲಿ ರ್ಯಾಲಿಗೆ ಕಬಕ ಟೈಲರ್ ಇಸ್ಮಾಯಿಲ್

ತಾಲೂಕಿನಾದ್ಯಂತ ಸಂಭ್ರಮದ ಈದ್ ಮಿಲಾದ್ ಆಚರಣೆ | ಮಸ್ಲಿಂ ಯುವಜನ ಪರಿಷತ್ ವತಿಯಿಂದ ಬೃಹತ್ ವಾಹನ ರ್ಯಾಲಿ, ಸಮಾವೇಶ Read More »

ಪ್ರಸಿದ್ಧ ವರ್ಣಚಿತ್ರ ಕಲಾವಿದ ಕೆ. ಚಂದ್ರನಾಥ ಆಚಾರ್ಯ ಅವರಿಗೆ ಈ ಬಾರಿಯ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿ | ಮುಖ್ಯಮಂತ್ರಿಯಿಂದಲೂ ಪ್ರಶಸ್ತಿ ಪಡೆದಿದ್ದ ಮೂಲತಃ ಪುತ್ತೂರಿನ ಕಲಾವಿದ

ಪುತ್ತೂರು: ಇಲ್ಲಿನ ಪರ್ಲಡ್ಲದಲ್ಲಿರುವ ಡಾ. ಶಿವರಾಮ ಕಾರಂತ ಬಾಲವನದಲ್ಲಿ ಅ. 10ರಂದು ನಡೆಯಲಿರುವ ಡಾ. ಶಿವರಾಮ ಕಾರಂತರ ಜನ್ಮದಿನೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಈ ಬಾರಿ ಬೆಂಗಳೂರಿನ ಪ್ರಸಿದ್ಧ ವರ್ಣ ಚಿತ್ರಕಲಾವಿದ ಕೆ. ಚಂದ್ರನಾಥ ಆಚಾರ್ಯ ಅವರನ್ನು ಡಾ.ಶಿವರಾಮ ಕಾರಂತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಡಾ. ಕೋಟ ಶಿವರಾಮ ಕಾರಂತರ ಬಾಲವನ ಸಮಿತಿ ಮತ್ತು ಪುತ್ತೂರು ಸಹಾಯಕ ಆಯುಕ್ತರ ಕಾರ್ಯಾಲಯ, ಪುತ್ತೂರು ಉಪವಿಭಾಗ ಮತ್ತೂರು

ಪ್ರಸಿದ್ಧ ವರ್ಣಚಿತ್ರ ಕಲಾವಿದ ಕೆ. ಚಂದ್ರನಾಥ ಆಚಾರ್ಯ ಅವರಿಗೆ ಈ ಬಾರಿಯ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿ | ಮುಖ್ಯಮಂತ್ರಿಯಿಂದಲೂ ಪ್ರಶಸ್ತಿ ಪಡೆದಿದ್ದ ಮೂಲತಃ ಪುತ್ತೂರಿನ ಕಲಾವಿದ Read More »

ಪರ – ವಿರೋಧಕ್ಕೆ ಬೀದಿದೀಪ ಬಲಿ!! | ಬೀದಿ ದೀಪಕ್ಕಾಗಿ ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು ಒತ್ತಾಯ

ಪುತ್ತೂರು: ನಗರಸಭೆಯ 31 ವಾರ್ಡ್ ಸಂಖ್ಯೆ ಬಲ್ನಾಡು ಗ್ರಾಮದ ಉಜ್ರುಪಾದೆ ಎಂಬಲ್ಲಿ ಹೈಮಾಸ್ಟ್ ದೀಪ ಅಳವಡಿಸುವಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಪರ ವಿರೋಧಗಳು ಮುಂದುವರಿದಿದ್ದು, ಇದೀಗ ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು ಹೈಮಾಸ್ಟ್ ದೀಪವನ್ನು ಅಗತ್ಯತೆ ಇರುವಲ್ಲಿ ಅಳವಡಿಸುವಂತೆ ನಗರಸಭೆಗೆ ಮನವಿ ಮಾಡಿದ್ದಾರೆ. ಪ್ರಸ್ತುತ ಉಜ್ರುಪಾದೆ ಜಂಕ್ಷನ್‌ನಲ್ಲಿ ಹೈ ಮಾಸ್ಟ್ ದೀಪ ಅಳವಡಿಸುವ ಕೆಲಸ ನಡೆಯುತ್ತಿದೆ. ಆದರೆ ಅಗತ್ಯತೆ ಇರುವಲ್ಲಿ ಅಳವಡಿಸದೇ ಇರುವುದರಿಂದ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಆಗಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ, ನಗರಸಭೆ ಮಾಜಿ

ಪರ – ವಿರೋಧಕ್ಕೆ ಬೀದಿದೀಪ ಬಲಿ!! | ಬೀದಿ ದೀಪಕ್ಕಾಗಿ ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು ಒತ್ತಾಯ Read More »

ಪುತ್ತೂರಿನಲ್ಲಿ ನಡೆಯಲಿದೆ ಅದ್ದೂರಿಯ ‘ಪುತ್ತೂರು ಶಾರದೋತ್ಸವ’ | ಶಾರದೆ ವಿಗ್ರಹ ರಚನೆಗೆ ನೆರವೇರಿತು ಮುಹೂರ್ತ

ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಭಕ್ತರ ಸಹಕಾರದೊಂದಿಗೆ ಈ ಬಾರಿ ನಡೆಯಲಿರುವ “ಪುತ್ತೂರು ಶಾರದೋತ್ಸವದ” ಶಾರದೆ ವಿಗ್ರಹ ರಚನೆಗೆ ಮುಹೂರ್ತ ಗುರುವಾರ ಪ್ರಭು ಸ್ಟುಡಿಯೋ ಮಾಲಕ ಶ್ರೀನಿವಾಸ ಪ್ರಭುರವರ ನಿವಾಸದ ಬಳಿ ನಡೆಯಿತು. ಈ ಬಾರಿ ಶ್ರೀ ಶಾರದೆ ಪ್ರತಿಷ್ಠೆ, ಶೋಭಾಯಾತ್ರೆಯೊಂದಿಗೆ ಅದ್ದೂರಿಯಾಗಿ ನಡೆಯಲಿದ್ದು, ಸಮಿತಿ ಪದಾಧಿಕಾರಿಗಳು ಮಹಾಲಿಂಗೇಶ್ವರ ದೇವರ ಸನ್ನಿಧಿ ಹಾಗೂ ಶಾರದಾ ಭಜನಾ ಮಂದಿರದಲ್ಲಿ ಪ್ರಾರ್ಥಿಸಿ ಬಳಿಕ ಉಳ್ಳಾಲ್ತಿ ಕಟ್ಟೆ ಬಳಿ ಇರುವ ಶ್ರೀನಿವಾಸ ಪ್ರಭು ಅವರ ನಿವಾಸದಲ್ಲಿ ವಿಗ್ರಹ ಮುಹೂರ್ತ

ಪುತ್ತೂರಿನಲ್ಲಿ ನಡೆಯಲಿದೆ ಅದ್ದೂರಿಯ ‘ಪುತ್ತೂರು ಶಾರದೋತ್ಸವ’ | ಶಾರದೆ ವಿಗ್ರಹ ರಚನೆಗೆ ನೆರವೇರಿತು ಮುಹೂರ್ತ Read More »

ಕಸಾಪ ಪುತ್ತೂರು ಘಟಕದಿಂದ ಸ್ವಚ್ಛತಾ ಸೈನಿಕರಿಗೆ ಗೌರವ

ಪುತ್ತೂರು: ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ನಗರದ ಗಾಂಧಿ ಕಟ್ಟೆಯಿಂದ ನಡೆದ ಕಾಲ್ನಡಿಗೆ ಜಾಥಾದಲ್ಲಿ ನಗರದ ಸುಮಾರು 60 ಸ್ವಚ್ಛತಾ ಸೈನಿಕರನ್ನು ಗೌರವಿಸಲಾಯಿತು. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಶಾಲು ಹಾಗೂ ಕನ್ನಡ ಪುಸ್ತಕವನ್ನು ನೀಡಿ ಪುಷ್ಪ ಸಿಂಚನ ಮಾಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್, ಕಸಾಪ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ನಗರಸಭೆ ಸಿಬ್ಬಂದಿಗಳು, ಪೌರ ಕಾರ್ಮಿಕರು ಉಪಸ್ಥಿತರಿದ್ದರು.

ಕಸಾಪ ಪುತ್ತೂರು ಘಟಕದಿಂದ ಸ್ವಚ್ಛತಾ ಸೈನಿಕರಿಗೆ ಗೌರವ Read More »

ಪೌರ ಕಾರ್ಮಿಕ ದಿನ ಆಚರಣೆಯಿಂದ ಮನೋಬಲ ಹೆಚ್ಚಿಸುವ ಕಾರ್ಯ | ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಸಹಾಯಕ ಆಯುಕ್ತ ಗಿರೀಶ್ ನಂದನ್

ಪುತ್ತೂರು: ನಗರಸಭೆ ಪೌರ ಕಾರ್ಮಿಕರ ದಿನ ಆಚರಣೆ ಮಾಡುವ ಮೂಲಕ ಪೌರಕಾರ್ಮಿಕರ ಮನೋಬಲವನ್ನು ಹೆಚ್ಚಿಸುವ ಕಾರ್ಯ ಮಾಡಿದೆ ಎಂದು ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಹೇಳಿದರು.  ಗುರುವಾರ ನಗರಸಭೆ ವತಿಯಿಂದ ಪುರಭವನದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ, ವಿಶೇಷ ಭತ್ತೆ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಗರಸಭಾ ವ್ಯಾಪ್ತಿಯ ಪ್ರತಿ ಮನೆಗಳ ಪರಿಸರ ಸ್ವಚ್ಛತೆಯಲ್ಲಿ ಪೌರ ಕಾರ್ಮಿಕರ ಕೊಡುಗೆ ಅಪಾರ ಎಂದ ಅವರು, ವಿಶೇಷವಾಗಿ ನಗರಸಭೆ ವ್ಯಾಪ್ತಿಯ ಪ್ರತೀ ವಾರ್ಡಿನ ಮಣ್ಣು

ಪೌರ ಕಾರ್ಮಿಕ ದಿನ ಆಚರಣೆಯಿಂದ ಮನೋಬಲ ಹೆಚ್ಚಿಸುವ ಕಾರ್ಯ | ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಸಹಾಯಕ ಆಯುಕ್ತ ಗಿರೀಶ್ ನಂದನ್ Read More »

ಅ. 6-7: ಪುತ್ತೂರು ಶೈಕ್ಷಣಿಕ ವಲಯದ ಪ್ರಾಥಮಿಕ, ಪ್ರೌಢಶಾಲಾ ಕ್ರೀಡಾಕೂಟ ‘ಕ್ರೀಡೋತ್ಸವ-2023’

ಉಪ್ಪಿನಂಗಡಿ: ಪುತ್ತೂರು ಶೈಕ್ಷಣಿಕ ವಲಯದ 2023-24ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕರ ಹಾಗೂ ಬಾಲಕಿಯರ ಕ್ರೀಡಾಕೂಟ ‘ಕ್ರೀಡೋತ್ಸವ-2023’ ಅ. 6ರಂದು ಸರ್ವೋದಯ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಉಪ್ಪಿನಂಗಡಿ ಪೆರಿಯಡ್ಕ ಸರ್ವೋದಯ ಪ್ರೌಢಶಾಲೆ ಆಶ್ರಯದಲ್ಲಿ ಕ್ರೀಡೋತ್ಸವ ಹಮ್ಮಿಕೊಳ್ಳಲಾಗಿದೆ. ಅ. 6ರಂದು ಬೆಳಿಗ್ಗೆ 9ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಅ. 7ರಂದು ಶನಿವಾರ ಅಪರಾಹ್ನ 3ರಿಂದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಅ. 6-7: ಪುತ್ತೂರು ಶೈಕ್ಷಣಿಕ ವಲಯದ ಪ್ರಾಥಮಿಕ, ಪ್ರೌಢಶಾಲಾ ಕ್ರೀಡಾಕೂಟ ‘ಕ್ರೀಡೋತ್ಸವ-2023’ Read More »

ಜನನಿ ರೈತ ಉತ್ಪಾದಕರ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ

ಪುತ್ತೂರು: ಕೇಂದ್ರ ಸರಕಾರದ ನಬಾರ್ಡ್ ಪ್ರಾಯೋಜಕತ್ವ ದಲ್ಲಿ ಕೆಮ್ಮಿಂಜೆ ಗ್ರಾಮದ ನೈತಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪುತ್ತೂರು ಜನನಿ ರೈತ ಉತ್ಪಾದಕರ ಕಂಪೆನಿ ನಿಯಮಿತದ ವಾರ್ಷಿಕ ಸಾಮಾನ್ಯ ಸಭೆ ಸೆ. 30ರಂದು ನಡೆಯಲಿದ್ದು, ಈ ಕುರಿತು ಪೂರ್ವಭಾವಿ ಸಭೆ ಕಚೇರಿಯಲ್ಲಿ ನಡೆಯಿತು. ಸಭೆ ಬೆಳಿಗ್ಗೆ 10.30ಕ್ಕೆ ಕಂಪನಿ ಕಚೇರಿಯ ವಠಾರದಲ್ಲಿ ನಡೆಯಲಿದ್ದು, ಸಭೆ ಯಶಸ್ವಿಗಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಕಂಪೆನಿಯ ಆಡಳಿತ ನಿರ್ದೇಶಕ ಅರುಣ್ ಕುಮಾರ್ ಪುತ್ತಿಲ, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜನನಿ ರೈತ ಉತ್ಪಾದಕರ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ Read More »

error: Content is protected !!
Scroll to Top