ಪುತ್ತೂರು

ಕೊಂಬೆಟ್ಟು ನಿವಾಸಿ, ಎನ್.ಐ.ಟಿ.ಕೆ. ನಿವೃತ್ತ ರಿಜಿಸ್ಟ್ರಾರ್ ಬಿ.ಆರ್. ಕಡಂಬಳಿತ್ತಾಯ ನಿಧನ

ಮಂಗಳೂರು: ಕೊಂಬೆಟ್ಟು ವಿಷ್ಣು ನಿಲಯದ ನಿವಾಸಿ ಸುರತ್ಕಲ್ ಎನ್‍ಐಟಿಕೆಯ ನಿವೃತ್ತ ಆಡಳಿತಾಧಿಕಾರಿ, ರಿಜಿಸ್ಟಾರ್ ಬಿ.ರಾಧಾಕೃಷ್ಣ ಕಡಂಬಳಿತ್ತಾಯ (94 ವ.) ಗುರುವಾರ ಮಂಗಳೂರಿನ ಸ್ವಗೃಹದಲ್ಲಿ ನಿಧನರಾದರು. ಬಿ.ರಾಧಾಕೃಷ್ಣ ಕಡಂಬಳಿತ್ತಾಯ ಅವರು ಕೊಂಬೆಟ್ಟು ಸರಕಾರಿ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು. ಕಳೆದ ವರ್ಷ ಹಿರಿಯ ವಿದ್ಯಾರ್ಥಿಗಳಿಂದ ಜೀರ್ಣೋದ್ಧಾರವಾಗುವ ಸಂದರ್ಭದಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕರೊಂದಿಗೆ ಪಾಲ್ಗೊಂಡಿದ್ದರು. ಮೃತರು ಪುತ್ರರಾದ ಬಿ.ಹರೇಕೃಷ್ಣ, ಬಿ.ರಾಜೇಶ್ವರ, ಬಿ.ಪುಂಡರೀಕಾಕ್ಷ, ಬಿ.ವೆಂಕಟಕೃಷ್ಣ, ಮಗಳು ಕಮಲಾಕ್ಷಿ ಹಾಗೂ ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.

ಕೊಂಬೆಟ್ಟು ನಿವಾಸಿ, ಎನ್.ಐ.ಟಿ.ಕೆ. ನಿವೃತ್ತ ರಿಜಿಸ್ಟ್ರಾರ್ ಬಿ.ಆರ್. ಕಡಂಬಳಿತ್ತಾಯ ನಿಧನ Read More »

ಶ್ರೀಲತಾ ಉಡುಪಿ ಜಿಲ್ಲೆಗೆ ವರ್ಗಾವಣೆ

ಪುತ್ತೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಅಧಿಕಾರಿಗಳ ವರ್ಗಾವಣೆ ಪರ್ವ ಶುರುವಾಗಿದೆ. ಪುತ್ತೂರು ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಅಧಿಕಾರಿ ಶ್ರೀಲತಾ ಅವರಿಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ವರ್ಗಾವಣೆಯಾಗಿದ್ದು, ಸರಕಾರದಿಂದ ಆದೇಶವೂ ಬಂದಿದೆ. ಆದರೆ ಪುತ್ತೂರು ಸಿಡಿಪಿಓ ಹುದ್ದೆಗೆ ಯಾರು ಬರಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರಕಾರದ ಅಧೀನ

ಶ್ರೀಲತಾ ಉಡುಪಿ ಜಿಲ್ಲೆಗೆ ವರ್ಗಾವಣೆ Read More »

ಸರಸ್ವತಿ ಮುಂದೆ ಹಾರ ಬದಲಿಸಿಕೊಂಡ ನವದಂಪತಿಗಳು

ಪುತ್ತೂರು: ಗುರು ಹಿರಿಯರ ಆಶೀರ್ವಾದ ಪಡೆಯುವ ವಧೂ-ವರರಿಗೆ  ಸಂಸ್ಕಾರವನ್ನು ಕೊಡುವ ಒಂದು ವಿಧಿಯೇ ಮದುವೆ. ಪ್ರಕೃತಿಯ ಶಿಶುವಾದ ಮಾನವನು ಸಂಸ್ಕೃತಿಯಿಂದ ವಿಕಸಿತನಾಗಿ, ವಿಕೃತಿಯೆಡೆಗೆ ಜಾರದಂತೆ ಧರ್ಮಾಚರಣೆಯಲ್ಲಿ ತೊಡಗಿ ಸಮೃದ್ಧಿ, ಸಂಸ್ಕೃತಿ ಎರಡರಲ್ಲೂ ಸಮತೋಲನ ಕಾಪಾಡಿಕೊಳ್ಳಬೇಕು. ಮಾತೃಧರ್ಮ ಪಾಲನೆಯೊಂದಿಗೆ  ಮಕ್ಕಳನ್ನು ಸಂಸ್ಕಾರಯುತರನ್ನಾಗಿ ಮಾಡುತ್ತಾ, ಅವರನ್ನು ಕುಟುಂಬದ, ತನ್ಮೂಲಕ ದೇಶದ ಆಸ್ತಿಯನ್ನಾಗಿ ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಹೇಳಿದರು. ಅವರು ಇಲ್ಲಿಯ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ನವದಂಪತಿ ಸಮಾವೇಶದಲ್ಲಿ ಮಾತನಾಡಿದರು.

ಸರಸ್ವತಿ ಮುಂದೆ ಹಾರ ಬದಲಿಸಿಕೊಂಡ ನವದಂಪತಿಗಳು Read More »

ಮೈಮೇಲೆ ಹರಿದ ಕಾರು: ಯುವಕ ಸ್ಥಳದಲ್ಲೇ ಮೃತ್ಯು!

ಮಂಗಳೂರು: ದ್ವಿಚಕ್ರ ವಾಹನ ಸವಾರರೊಬ್ಬರ ಮೇಲೆ ಕಾರು ಹರಿದು ಮೃತಪಟ್ಟ ಘಟನೆ ಕುಂಟಿಕಾನದಲ್ಲಿ ನಡೆದಿದೆ. ಕಾವೂರು ನಿವಾಸಿ ಕೌಶಿಕ್ (21) ಮೃತಪಟ್ಟ ದುರ್ದೈವಿ. ನಗರದ ಕುಂಟಿಕಾನದ ಎ.ಜೆ. ಆಸ್ಪತ್ರೆಯಿಂದ ಹೊರಬರುತ್ತಿದ್ದ ದ್ವಿಚಕ್ರ ವಾಹನ ರಿಕ್ಷಾವೊಂದಕ್ಕೆ ತಗುಲಿ ಅಡ್ಡಬಿದ್ದಿದೆ. ಈ ವೇಳೆ ಸವಾರ ನೆಲಕ್ಕೆ ಬಿದ್ದಾಗ ಅವರ ಮೇಲೆ ಏಕಾಏಕಿ ಕಾರು ಹರಿದಿದೆ. ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ಮೈಮೇಲೆ ಹರಿದ ಕಾರು: ಯುವಕ ಸ್ಥಳದಲ್ಲೇ ಮೃತ್ಯು! Read More »

ಬಲ್ನಾಡು ಶೌರ್ಯ ತಂಡದಿಂದ ಸ್ವಚ್ಛತಾ ಕಾರ್ಯ

ಪುತ್ತೂರು: ಬಲ್ನಾಡು ವಲಯದ ಶೌರ್ಯ ತಂಡದ ಸದಸ್ಯರಿಂದ ಕೊಡಿಪ್ಪಾಡಿ ಅರ್ಕಶ್ರೀ ಮಹಾದೇವಿ ಭಜನಾ ಮಂದಿರದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಭಜನಾ ಮಂದಿರದ ಫಾಸಲೆಯಲ್ಲಿರುವ ಗಿಡಗಂಟಿಗಳನ್ನು ತೆರವುಗೊಳಿಸಿ, ಪ್ಲಾಸ್ಟಿಕ್, ಕಸಕಡ್ಡಿಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ತಂಡ ಸಂಯೋಜಕಿ ಆಶಾಲತಾ, ಕಬಕ ಸೇವಾಪ್ರತಿನಿಧಿ ನಳಿನಿ, ಕಬಕ ಕೊಡಿಪ್ಪಾಡಿ ಸೇವಾ ಪ್ರತಿನಿಧಿ ಚಿತ್ರಾ, ಕೊಡಿಪ್ಪಾಡಿ ಒಕ್ಕೂಟದ ಉಪಾಧ್ಯಕ್ಷ ಎನ್.ರಾಧಾಕೃಷ್ಣ ಗೌಡ, ಸಂಘದ ಸದಸ್ಯರಾದ ಜ್ಯೋತಿ, ಚಂದ್ರಾವತಿ, ತಂಡದ ಸದಸ್ಯರು ಭಾಗವಹಿಸಿದ್ದರು.

ಬಲ್ನಾಡು ಶೌರ್ಯ ತಂಡದಿಂದ ಸ್ವಚ್ಛತಾ ಕಾರ್ಯ Read More »

ಪುತ್ತೂರು ಶಾರದೋತ್ಸವದ ಆಮಂತ್ರಣ ವಿತರಣೆ

ಪುತ್ತೂರು: ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅ. 15ರಿಂದ 24ರತನಕ ನಡೆಯಲಿರುವ 89ನೇ ವರ್ಷದ ಪುತ್ತೂರು ಶಾರದೋತ್ಸವದ ಆಮಂತ್ರಣ ವಿತರಣೆಗೆ ದರ್ಬೆ ವೃತ್ತದ ಬಳಿ ಗುರುವಾರ ಚಾಲನೆ ನೀಡಲಾಯಿತು. ಬಳಿಕ ಚೆಂಡೆ, ಕಲ್ಲಡ್ಕ ಬೊಂಬೆಯೊಂದಿಗೆ ಬೊಳುವಾರು ತನಕ ಸಾಗಿ ಆಮಂತ್ರಣ ಪತ್ರಿಕೆಯನ್ನು ಪೇಟೆಯ ವರ್ತಕರಿಗೆ ವಿತರಿಸಲಾಯಿತು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು ಆಮಂತ್ರಣ ಪತ್ರಿಕೆ ವಿತರಣೆಗೆ ಚಾಲನೆ ನೀಡಿ ಮಾತನಾಡಿ, ಪುತ್ತೂರು ಶಾರದೋತ್ಸವ ಈ

ಪುತ್ತೂರು ಶಾರದೋತ್ಸವದ ಆಮಂತ್ರಣ ವಿತರಣೆ Read More »

ಕೆಡೆನ್ಸ್ ಡಿಸೈನ್ ಸಿಸ್ಟಮ್ಸ್ ಸಂಸ್ಥೆಗೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಧನ್ಯ ಪಿ. ಆಯ್ಕೆ

ಪುತ್ತೂರು: ಇಲ್ಲಿಯ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಅಂತಿಮ ವರ್ಷದ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿನಿ ಧನ್ಯ.ಪಿ ಕೆಡೆನ್ಸ್ ಡಿಸೈನ್ ಸಿಸ್ಟಮ್ಸ್ ಸಂಸ್ಥೆಗೆ ಆಯ್ಕೆಯಾಗಿದ್ದಾರೆ. 2024ನೇ ಸಾಲಿನ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯನ್ವಯ ನಡೆದ ನೇಮಕಾತಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿ ಆಯ್ಕೆಯಾಗಿದ್ದಾರೆ. ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ಕ್ಷೇತ್ರದ ದಿಗ್ಗಜ ಕೆಡೆನ್ಸ್ ಡಿಸೈನ್ ಸಿಸ್ಟಮ್ಸ್ ಸಂಸ್ಥೆಯು ಕಾಲೇಜಿಗೆ ಭೇಟಿ ನೀಡಿತ್ತು. ಈ ನೇಮಕಾತಿ ಪ್ರಕ್ರಿಯೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ

ಕೆಡೆನ್ಸ್ ಡಿಸೈನ್ ಸಿಸ್ಟಮ್ಸ್ ಸಂಸ್ಥೆಗೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಧನ್ಯ ಪಿ. ಆಯ್ಕೆ Read More »

6 ಗಂಟೆ ಎನ್ಐಎ ತಂಡವನ್ನು ಸತಾಯಿಸಿದ ಆರೋಪಿ!!

ಮುಂಬಯಿ: ಪಿಎಫ್ಐ ಸಂಬಂಧಿತ ಪ್ರಕರಣದಲ್ಲಿ ದಾಳಿ ನಡೆಸುತ್ತಿರುವ ಎನ್ಐಎ ತಂಡ 7/11 ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಖುಲಾಸೆಗೊಳಿಸುವ ಮೊದಲು ಬುಧವಾರ ಉಪನಗರ ವಿಕ್ರೋಲಿಯ ಆತನ ನಿವಾಸಕ್ಕೆ ತೆರಳಿದ್ದು, ಈ ವೇಳೆ ಮನೆಯ ಬಾಗಿಲು ತೆರೆಯದ ಕಾರಣ ಆರು ಗಂಟೆಗಳಿಗೂ ಹೆಚ್ಚು ಕಾಲ ಮನೆಯ ಹೊರಗೆ ಕಾಯಬೇಕಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಬಿಹಾರ ಪ್ರವಾಸದ ವೇಳೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ ಪಿಎಫ್ಐ ವಿರುದ್ಧ ದೇಶದ ಆರು ರಾಜ್ಯಗಳ ಹಲವು

6 ಗಂಟೆ ಎನ್ಐಎ ತಂಡವನ್ನು ಸತಾಯಿಸಿದ ಆರೋಪಿ!! Read More »

ಅ.15 : ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಸ್ವಂತ ಕಚೇರಿ ಹಾಗೂ ವಾಣಿಜ್ಯ ಮಳಿಗೆಗಳ ಸಂಕೀರ್ಣದ ಶಂಕು ಸ್ಥಾಪನೆ

ಸವಣೂರು: ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಸ್ವಂತ ಕಚೇರಿ ಹಾಗೂ ವಾಣಿಜ್ಯ ಮಳಿಗೆಗಳ ಸಂಕೀರ್ಣದ ಶಂಕು ಸ್ಥಾಪನಾ ಸಮಾರಂಭ ಅ.15 ಭಾನುವಾರ ಸವಣೂರು-ಸುಬ್ರಹ್ಮಣ್ಯ ರಸ್ತೆಯ ಸವಣೂರಿನಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಶಂಕುಸ್ಥಾಪನೆ ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಎನ್., ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್

ಅ.15 : ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಸ್ವಂತ ಕಚೇರಿ ಹಾಗೂ ವಾಣಿಜ್ಯ ಮಳಿಗೆಗಳ ಸಂಕೀರ್ಣದ ಶಂಕು ಸ್ಥಾಪನೆ Read More »

ಜಿ.ಪಂ. ಸಿಇಓ ನೇತೃತ್ವದಲ್ಲಿ ನಡೆಯಿತು ಆರ್ಯಾಪು ಗ್ರಾ.ಪಂ. ಜಮಾಬಂದಿ ಸಭೆ | ಆಸ್ತಿ ಪರಿಷ್ಕರಣೆ, ಜೆಜೆಎಂ ಯೋಜನೆ ಬಗ್ಗೆ ಮಹತ್ವದ ಚರ್ಚೆ!

ಸಂಪ್ಯ: ಆರ್ಯಾಪು ಗ್ರಾಮ ಪಂಚಾಯತ್ 2022-23ನೇ ಸಾಲಿನ ಜಮಾಬಂದಿ ಸಭೆ ಬುಧವಾರ ಗ್ರಾ.ಪಂ.ನ ನೇತಾಜಿ ಸುಭಾಸ್ ಚಂದ್ರ ಬೋಸ್ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ. ಅವರ ನೇತೃತ್ವದಲ್ಲಿ ಜಮಾಬಂದಿ ನಡೆಯಿತು. ಈ ಸಂದರ್ಭ ಮಾತನಾಡಿದ ಅವರು, ಗ್ರಾಮ ಪಂಚಾಯತ್’ನ ಸ್ವಂತ ಆದಾಯದ ಮೂಲವಾದ ಆಸ್ತಿ ತೆರಿಗೆಗಳನ್ನು ಕಡ್ಡಾಯವಾಗಿ 2 ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಬೇಕು. ಇದರಿಂದ ಸಂಪನ್ಮೂಲ ವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಪ್ರತಿ 2 ವರ್ಷಕ್ಕೊಮ್ಮೆ ಆಸ್ತಿ

ಜಿ.ಪಂ. ಸಿಇಓ ನೇತೃತ್ವದಲ್ಲಿ ನಡೆಯಿತು ಆರ್ಯಾಪು ಗ್ರಾ.ಪಂ. ಜಮಾಬಂದಿ ಸಭೆ | ಆಸ್ತಿ ಪರಿಷ್ಕರಣೆ, ಜೆಜೆಎಂ ಯೋಜನೆ ಬಗ್ಗೆ ಮಹತ್ವದ ಚರ್ಚೆ! Read More »

error: Content is protected !!
Scroll to Top