ಪುತ್ತೂರು

ಪಿಎಂಶ್ರೀ ಶಾಲೆಗಳ ರಾಷ್ಟ್ರಮಟ್ಟದ ಕಾರ್ಯಾಗಾರ: ತಾರಾನಾಥ ಸವಣೂರು ಆಯ್ಕೆ

ಪುತ್ತೂರು: ಎನ್.ಸಿ.ಇ.ಆರ್.ಟಿ. ನವದೆಹಲಿ ವತಿಯಿಂದ ಶಿಕ್ಷಣ ಮಂತ್ರಾಲಯದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಪಿಎಂಶ್ರೀ ಶಾಲೆಗಳ ಶೈಕ್ಷಣಿಕ ಕಾರ್ಯಾಗಾರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ತಾರಾನಾಥ ಸವಣೂರು ಆಯ್ಕೆಯಾಗಿದ್ದಾರೆ. ಅಕ್ಟೋಬ‌ರ್ 26 ರಿಂದ 28ರ ತನಕ ಮೂರು ದಿನಗಳ ಕಾಲ ಕಾರ್ಯಾಗಾರ ನಡೆಯಲಿದೆ. ತಾರಾನಾಥ ಸವಣೂರು ಅವರು ವೀರಮಂಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು.

ಪಿಎಂಶ್ರೀ ಶಾಲೆಗಳ ರಾಷ್ಟ್ರಮಟ್ಟದ ಕಾರ್ಯಾಗಾರ: ತಾರಾನಾಥ ಸವಣೂರು ಆಯ್ಕೆ Read More »

ಹುಟ್ಟೂರ ದೇವರಿಗೆ ವಜ್ರದ ಸರ ಅರ್ಪಿಸಿದ ಶಾಸಕ ಅಶೋಕ್ ರೈ

ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ನವರಾತ್ರಿ ಪ್ರಯುಕ್ತ ಕೋಡಿಂಬಾಡಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಚಂಡಿಕಾ ಹೋಮ ಮತ್ತು ತುಲಾಭಾರ ಸೇವೆ ಸಲ್ಲಿಸಿದರು. ಇದೇ ಸಂರ್ಭ ಸೇವಾ ರೂಪದಲ್ಲಿ ತನ್ನ ಹುಟ್ಟೂರ ಆರಾಧ್ಯ ದೇವರಾದ ಮಹಿಷ‌ಮರ್ಧಿನಿಗೆ ವಜ್ರದ ಸರವನ್ನು ಸೇವಾರೂಪದಲ್ಲಿ ಸಮರ್ಪಿಸಿದರು. ಬೆಳಿಗ್ಗೆ ದೇವಳದಲ್ಲಿ ಚಂಡಿಕಾಹೋಮ, ವಿಶೇಷ ಪೂಜೆ ಮತ್ತು ತುಲಾಭಾರ ಸೇವೆಯನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮದ ಭಕ್ತಾದಿಗಳು ಶಾಸಕರ ಕುಟುಂಬಸ್ಥರು ಭಾಗವಹಿಸಿದ್ದರು. ಪೂಜೆಯ ಬಳಿಕ ಅನ್ನದಾನ ನಡೆಯಿತು.

ಹುಟ್ಟೂರ ದೇವರಿಗೆ ವಜ್ರದ ಸರ ಅರ್ಪಿಸಿದ ಶಾಸಕ ಅಶೋಕ್ ರೈ Read More »

ಪಿಲಿಗೊಬ್ಬು 2023ಕ್ಕೆ ರಾಜ್ ಬಿ. ಶೆಟ್ಟಿ, ದಿಗಂತ್ ಸೇರಿದಂತೆ ತಾರಾ ಮೆರುಗು | ಪಿಲಿಗೊಬ್ಬು, ಫುಡ್ ಫೆಸ್ಟ್ ವೈಭವವನ್ನು ಬಣ್ಣಿಸಿದ ಸಹಜ್ ರೈ, ಪುತ್ತೂರು ಉಮೇಶ್ ನಾಯಕ್

ಪುತ್ತೂರು: ವಿಜಯ ಸಾಮ್ರಾಟ್ ನೇತೃತ್ವದಲ್ಲಿ ಪುತ್ತೂರುದ ಪಿಲಿಗೊಬ್ಬು 2023 ಹಾಗೂ ಫುಡ್ ಫೆಸ್ಟ್ ಅಕ್ಟೋಬರ್ 22ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಆಯೋಜಿಸಲಾಗಿದೆ ಎಂದು ಪುತ್ತೂರು ಪಿಲಿಗೊಬ್ಬು ಗೌರವಾಧ್ಯಕ್ಷ ಸಹಜ್ ರೈ ಬಳಜ್ಜ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳು ನಾಡಿನ ಧಾರ್ಮಿಕ ಹಿನ್ನೆಲೆ ಇರುವ ಜಾನಪದ ಕಲೆ. ಈ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪುತ್ತೂರುದ ಪಿಲಿಗೊಬ್ಬು ಹಾಗೂ ಫುಡ್ ಫೆಸ್ಟ್  ಅಥವಾ ಹುಲಿ ವೇಷ ಕುಣಿತ ಸ್ಪರ್ಧೆ ಹಾಗೂ ಅಹಾರ ಮೇಳ,

ಪಿಲಿಗೊಬ್ಬು 2023ಕ್ಕೆ ರಾಜ್ ಬಿ. ಶೆಟ್ಟಿ, ದಿಗಂತ್ ಸೇರಿದಂತೆ ತಾರಾ ಮೆರುಗು | ಪಿಲಿಗೊಬ್ಬು, ಫುಡ್ ಫೆಸ್ಟ್ ವೈಭವವನ್ನು ಬಣ್ಣಿಸಿದ ಸಹಜ್ ರೈ, ಪುತ್ತೂರು ಉಮೇಶ್ ನಾಯಕ್ Read More »

ಅ. 22ರಂದು ಪುತ್ತೂರ್ದ ಪಿಲಿರಂಗ್ ಸೀಸನ್ 2 | ತುಳು ಧ್ವಜಾರೋಹಣ, ಬಹುಮಾನ, ಕಾರ್ಯಕ್ರಮದ ರೂಪುರೇಷೆ ವಿವರಿಸಿದ ಮಾಜಿ ಶಾಸಕಿ

ಪುತ್ತೂರು: ಸಾಂಸ್ಕೃತಿಕ ಕಲೆ ನಮ್ಮ ಊರಿಗೂ ಬರಲಿ ಎಂಬ ಉದ್ದೇಶದಿಂದ ಆರಂಭಗೊಂಡಿರುವ ಪುತ್ತೂರ್ದ ಪಿಲಿರಂಗ್ ಸೀಸನ್ 2 ಅಕ್ಟೋಬರ್ 22ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರಿಗೆ ಹೆಸರು ಬರಬೇಕು ಎಂಬ ನಿಟ್ಟಿನಲ್ಲಿ ಪಿಲಿರಂಗ್ ಆರಂಭ ಮಾಡಿದ್ದೇವೆ. ಈ ವರ್ಷ ಬೆಳಿಗ್ಗೆ 11ಕ್ಕೆ ಗಣಹೋಮ ನಡೆಯಲಿದೆ. ಬಳಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು ತುಳು

ಅ. 22ರಂದು ಪುತ್ತೂರ್ದ ಪಿಲಿರಂಗ್ ಸೀಸನ್ 2 | ತುಳು ಧ್ವಜಾರೋಹಣ, ಬಹುಮಾನ, ಕಾರ್ಯಕ್ರಮದ ರೂಪುರೇಷೆ ವಿವರಿಸಿದ ಮಾಜಿ ಶಾಸಕಿ Read More »

ಕೆರೆಗೆ ಬಿದ್ದು ಮಹಿಳೆ ಮೃತ್ಯು

ಪುತ್ತೂರು: ಮಹಿಳೆಯೋರ್ವರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಎಡಮಂಗಲ ಗ್ರಾಮದ ಕೇರ್ಪಡ ಎಂಬಲ್ಲಿ ಬುಧವಾರ ನಡೆದಿದೆ. ಕೇರ್ಪಡ ದಿ.ಹುಕ್ರ ಎಂಬವರ ಪತ್ನಿ ಗಿರಿಜಾ (50) ಮೃತಪಟ್ಟವರು. ಮೃತ ಗಿರಿಜಾ ಅವರ ಮನೆಯವರು ಅಡಿಕೆ ಹೆಕ್ಕಲು ಹೋದಾಗ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಗಿರಿಜಾ ಅವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮೃತರು ಪುತ್ರ ಲೋಕೇಶ್ ಅವರನ್ನು ಅಗಲಿದ್ದಾರೆ.

ಕೆರೆಗೆ ಬಿದ್ದು ಮಹಿಳೆ ಮೃತ್ಯು Read More »

ತಾಲೂಕಿನ ಏಕೈಕ ಬೀಕೊನ್ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿದ ಶಾಸಕ ಅಶೋಕ್ ರೈ | ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸಿದ ಗ್ರಾಪಂ

ಪುತ್ತೂರು: ಕಾನೂನಿನ ಹಿಂದೆ ನಾವು ಹೋಗುವುದಲ್ಲ. ಕಾನೂನು ತೊಡಕು ಪರಿಹರಿಸಿಕೊಂಡು ಜನರ ಕೆಲಸ ಮಾಡಿಕೊಡಬೇಕು. ಸರಿಯಾದ ಮತ್ತು ಪ್ರಾಮಾಣಿಕ ಸೇವೆ ನೀಡುವುದು ಜನಪ್ರತಿನಿಧಿಗಳು ಮತ್ತು ಪಂಚಾಯಿತಿ ಸಿಬ್ಬಂದಿಗಳ ಕರ್ತವ್ಯ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಆರ್ಯಾಪು ಗ್ರಾ.ಪಂ. ಅಮೃತ ಉದ್ಯಾನವನ ಹಾಗೂ ತಾಲೂಕಿನ ಏಕೈಕ ಬೀಕೊನ್ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ ಹಳ್ಳಿಯ ಜನರೂ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಮತ್ತು ವಿದ್ಯುತ್‌ನಿಂದ ವಂಚಿತರಾಗಬಾರದು. ಇದಕ್ಕಾಗಿ ನಾನು ಹೋರಾಟ ಮಾಡಲೂ ಸಿದ್ಧನಿದ್ದೇನೆ.

ತಾಲೂಕಿನ ಏಕೈಕ ಬೀಕೊನ್ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿದ ಶಾಸಕ ಅಶೋಕ್ ರೈ | ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸಿದ ಗ್ರಾಪಂ Read More »

ಕೊಳ್ತಿಗೆ ಗ್ರಾಮದ ದುಗ್ಗಳದ 2 ಮನೆಗಳಿಗೆ ಇನ್ನೂ ರಸ್ತೆ ಭಾಗ್ಯವಿಲ್ಲ!! | ಅನಾರೋಗ್ಯಕ್ಕೆ ಒಳಗಾದ ವೃದ್ಧರೋರ್ವರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ, ಹೊತ್ತು ಸಾಗಿದ್ದರು

ಪೆರ್ಲಂಪಾಡಿ: ಆಧುನಿಕತೆ ಎಲ್ಲೆಡೆ ವ್ಯಾಪಿಸುತ್ತಿದ್ದಂತೆ, ಪುಟ್ಟ ಪುಟ್ಟ ಹಳ್ಳಿಗಳೂ ಪಟ್ಟಣಗಳಾಗುತ್ತಿವೆ. ಗುಡ್ಡ ಎಂದು ಮೂದಲಿಸುತ್ತಿದ್ದವರೂ ಮೂಗಿನ ಮೇಲೆ ಬೆರಳಿಡುವಷ್ಟು ಬದಲಾವಣೆಗೆ ಒಳಪಡುತ್ತಿವೆ. ಇಂತಹ ದಿನದಲ್ಲಿ, ಇನ್ನೂ ರಸ್ತೆಯಿರದ ಮನೆಗಳಿವೆ ಎಂದರೆ ನೀವು ಆಶ್ಚರ್ಯ ಪಡುತ್ತೀರಿ! ಕೊಳ್ತಿಗೆ ಗ್ರಾಮದ ದುಗ್ಗಳದ 2 ಮನೆಗಳಿಗೆ ಇನ್ನೂ ರಸ್ತೆ ಭಾಗ್ಯ ಒದಗಿ ಬಂದಿಲ್ಲ. ಇತ್ತೀಚೆಗೆ ಹಿರಿಯ ನಾಗರಿಕರೋರ್ವರು ಅಸ್ವಸ್ಥಗೊಂಡಾಗ ಕುರ್ಚಿಯಲ್ಲಿ ಕುಳ್ಳಿರಿಸಿ ಎತ್ತಿಕೊಂಡು ಹೋದ ನಿದರ್ಶನ ಕಣ್ಣ ಮುಂದಿದೆ. ಶಾಲಾ ವಿದ್ಯಾರ್ಥಿಗಳು ಇದೇ ಕಾಲುದಾರಿಯಿಂದ ಹೋಗಬೇಕಾದ ದುಸ್ಥಿತಿಯಿದೆ. ಕೃಷಿ ಕಾರ್ಯಗಳನ್ನು ನಡೆಸಬೇಕಾದರೆ,

ಕೊಳ್ತಿಗೆ ಗ್ರಾಮದ ದುಗ್ಗಳದ 2 ಮನೆಗಳಿಗೆ ಇನ್ನೂ ರಸ್ತೆ ಭಾಗ್ಯವಿಲ್ಲ!! | ಅನಾರೋಗ್ಯಕ್ಕೆ ಒಳಗಾದ ವೃದ್ಧರೋರ್ವರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ, ಹೊತ್ತು ಸಾಗಿದ್ದರು Read More »

ಪಾಟ್ರಕೋಡಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಅಶೋಕ್ ರೈ | ಶಾಸಕರಿಗೆ ಇಷ್ಟು ಗಟ್ಸ್ ಇದೆ ಎಂದು ಗೊತ್ತೇ ಇರಲಿಲ್ಲ: ಹೇಮನಾಥ ಶೆಟ್ಟಿ

ಪುತ್ತೂರು: ಮುಂದಿನ ದಿನಗಳಲ್ಲಿ ಪುತ್ತೂರಿನಲ್ಲಿ 2ರಿಂದ 3 ಸಾವಿರ ಉದ್ಯೋಗ ಸೃಷ್ಟಿ ಮಾಡುವ ಗುರಿಯನ್ನು ಹೊಂದಿದ್ದು, ಇದಕ್ಕಾಗಿ ಹಲವು ಯೋಜನೆಗಳನ್ನು ಇಲ್ಲಿ ಜಾರಿ ಮಾಡುವ ಆಲೋಚನೆಯಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು ಪಾಟ್ರಕೋಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು. ಬಹುಗ್ರಾಮ ಕುಡಿಯುವ ನೀರಿನ ಯೋಜನಯಡಿ ಕೆದಿಲ ಗ್ರಾಮದಲ್ಲಿ 3 ಕೋಟಿ ಲೀಟರ್ ಸಾಮರ್ಥ್ಯದ ಬೃಹತ್ ನೀರಿನ ಟ್ಯಾಂಕ್ ನಿರ್ಮಾಣವಾಗಲಿದೆ. ಈ ಯೋಜನೆಯಡಿ ಸುಮಾರು 500ಕ್ಕೂ ಮಿಕ್ಕಿ

ಪಾಟ್ರಕೋಡಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಅಶೋಕ್ ರೈ | ಶಾಸಕರಿಗೆ ಇಷ್ಟು ಗಟ್ಸ್ ಇದೆ ಎಂದು ಗೊತ್ತೇ ಇರಲಿಲ್ಲ: ಹೇಮನಾಥ ಶೆಟ್ಟಿ Read More »

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯವಿಲ್ಲ: ಶಾಸಕ ಅಶೋಕ್ ರೈ

ಉಪ್ಪಿನಂಗಡಿ: ಓರ್ವ ಶಾಸಕನಾಗಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸುವ ಜವಾಬ್ದಾರಿ ನನ್ನದಾಗಿದ್ದು, ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುವವ ನಾನಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಹಿರೇಬಂಡಾಡಿಯ ಸರಕಾರಿ ಪ್ರೌಢಶಾಲೆಯಲ್ಲಿ ಅ. 26 ಮತ್ತು 27ರಂದು 2023-24ನೇ ಸಾಲಿನ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕಿಯರ ಹಾಗೂ ಬಾಲಕಿಯರ ಕ್ರೀಡಾಕೂಟ `ಕ್ರೀಡಾಮೃತ’ದ ಪೂರ್ವಭಾವಿ ಸಭೆಯಲ್ಲಿ, ಆಮಂತ್ರಣ ಬಿಡುಗಡೆಗೊಳಿಸಿ ಮಾತನಾಡಿದರು. ಅನುದಾನಗಳನ್ನು ತಡೆಯುವುದು, ಗ್ರಾಮಗಳ ಅಭಿವೃದ್ಧಿಯನ್ನು ಕಡೆಗಣಿಸುವಂತಹ ದ್ವೇಷ ಪೂರಿತ ರಾಜಕೀಯವನ್ನು ನಾನು ಯಾವತ್ತೂ

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯವಿಲ್ಲ: ಶಾಸಕ ಅಶೋಕ್ ರೈ Read More »

ಕಳವಾದ ದೇವಸ್ಥಾನದ ಆಭರಣದೊಂದಿಗೆ ಶರಣಾದ ಮಾಜಿ ಅಧ್ಯಕ್ಷ!

ಉಪ್ಪಿನಂಗಡಿ: ಡಿಸೆಂಬರ್ ತಿಂಗಳಲ್ಲಿ ನಡೆದ ಬ್ರಹ್ಮಕಲಶೋತ್ಸವ ವೇಳೆ ಪೆರ್ನೆಯ ಕಳೆಂಜ- ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಮರ್ಪಿಸಲಾದ ಆಭರಣ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಆರೋಪಿ ಆಭರಣದೊಂದಿಗೆ ಪೊಲೀಸರಿಗೆ ಶರಣಾಗಿರುವ ಘಟನೆ ನಡೆದಿದೆ. ದೇವಳದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ರೋಹಿತಾಕ್ಷ ಬಾಣಬೆಟ್ಟು ನಾಪತ್ತೆಯಾದ ಚಿನ್ನಾಭರಣದೊಂದಿಗೆ ಪೊಲೀಸರಿಗೆ ಶರಣಾದ ವ್ಯಕ್ತಿ. ಕಳೆದ ಡಿಸೆಂಬರ್’ನಲ್ಲಿ ದೇವಾಲಯದ ಬ್ರಹ್ಮಕಲಶಾಭಿಷೇಕ ನಡೆದಿದ್ದು, ಈ ಸಂದರ್ಭ ಭಕ್ತರೋರ್ವರು ಸುಮಾರು ಮೂರು ಮುಕ್ಕಾಲು ಪವನಿನ ಐದು ಎಳೆಗಳಿಂದ ಕೂಡಿದ ಚಿನ್ನದ ಜೋ

ಕಳವಾದ ದೇವಸ್ಥಾನದ ಆಭರಣದೊಂದಿಗೆ ಶರಣಾದ ಮಾಜಿ ಅಧ್ಯಕ್ಷ! Read More »

error: Content is protected !!
Scroll to Top