ಪುತ್ತೂರು

ಪುತ್ತೂರು: (ಜು.24) ಜರ್ನಲಿಸ್ಟ್ ಯೂನಿಯನ್‌ನಿಂದ ಪತ್ರಿಕಾ ದಿನಾಚರಣೆ-ಹಿರಿಯ ಪತ್ರಕರ್ತ ಡಾ. ನರೇಂದ್ರ ರೈ ದೇರ್ಲರವರಿಗೆ ಗೌರವ-ಸನ್ಮಾನ

ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಹಿರಿಯ ಪತ್ರಕರ್ತ ಡಾ. ನರೇಂದ್ರ ರೈ ದೇರ್ಲರವರಿಗೆ ಗೌರವ ಸನ್ಮಾನ ಕಾರ್ಯಕ್ರಮ ಜು.24ರಂದು ನಡೆಯಲಿದೆ. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಅಧ್ಯಕ್ಷ ರಾಮದಾಸ್ ಶೆಟ್ಟಿ ವಿಟ್ಲ ಅವರ ಅಧ್ಯಕ್ಷತೆಯಲ್ಲಿ ಸಂಜೆ 4 ಗಂಟೆಗೆ ಕೆಯ್ಯೂರು ದೇರ್ಲದಲ್ಲಿರುವ ಡಾ. ನರೇಂದ್ರ ರೈ ದೇರ್ಲ ಅವರ ಮನೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಪುತ್ತೂರಿನ ರೋಯಲ್ ಸೌಹಾರ್ದ ಸಹಕಾರಿ ಸಂಘದ ಸಂಸ್ಥಾಪಕಾಧ್ಯಕ್ಷರಾದ ಸಹಕಾರ ರತ್ನ ದಂಬೆಕ್ಕಾನ […]

ಪುತ್ತೂರು: (ಜು.24) ಜರ್ನಲಿಸ್ಟ್ ಯೂನಿಯನ್‌ನಿಂದ ಪತ್ರಿಕಾ ದಿನಾಚರಣೆ-ಹಿರಿಯ ಪತ್ರಕರ್ತ ಡಾ. ನರೇಂದ್ರ ರೈ ದೇರ್ಲರವರಿಗೆ ಗೌರವ-ಸನ್ಮಾನ Read More »

ಜು.27 : ಬನ್ನೂರು ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೃಹತ್‍ ವೈದ್ಯಕೀಯ ಶಿಬಿರ

ಪುತ್ತೂರು: ಬನ್ನೂರು ಎವಿಜಿ ಆಂಗ್ಲ ಮಾಧ್ಯಮ ಶಾಲೆ, ಸುಳ್ಯ ಕೆವಿಜಿ ಮೆಡಿಕಲ್‍ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಸುಳ್ಯ ಕೆವಿಜಿ ಆಯುರ್ವೇದಿಕ್‍ ಕಾಲೇಜ್‍ ಮತ್ತು ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಬೃಹತ್‍ ವೈದ್ಯಕೀಯ ಶಿಬಿರ ಜು.27 ಭಾನುವಾರ ಬನ್ನೂರು ಎವಿಜಿ ಆಂಗ್ಲ ಮಾಧ್ಯಮ ಶಾಲಾ ವಠಾರದಲ್ಲಿ ನಡೆಯಲಿದೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನದ ವರೆಗೆ ನಡೆಯುವ ಶಿಬಿರದಲ್ಲಿ ಜನರಲ್‍ ಮೆಡಿಸಿನ್‍, ಶಸ್ತ್ರಚಿಕಿತ್ಸೆ ವಿಭಾಗ, ಹೆರಿಗೆ ಮತ್ತು ಸ್ತ್ರೀರೋಗ ವಿಭಾಗ, ಎಲುಬು ಮತ್ತು ಕೀಲುರೋಗ ವಿಭಾಗ, ಕಿವಿ, ಮೂಗು, ಗಂಟಲು

ಜು.27 : ಬನ್ನೂರು ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೃಹತ್‍ ವೈದ್ಯಕೀಯ ಶಿಬಿರ Read More »

ಮಿನಿ ಟಿಪ್ಪರ್ – ಕಾರು ಅಪಘಾತ : ಕಾರು ಚಾಲಕ ಮೃತ್ಯು

ವಿಟ್ಲ: ಮಿನಿ ಟಿಪ್ಪ‌ರ್ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಕಾರು ಚಾಲಕ ಮೃತಪಟ್ಟು, ಅವರ ಸಹೋದರಿ ಹಾಗೂ ಮಗು ಗಂಭೀರ ಗಾಯಗೊಂಡ ಘಟನೆ ವಿಟ್ಲ ಸಮೀಪ ವೀರಕಂಬ ಗ್ರಾಮದ ಕೆಲಿಂಜ ಜಂಕ್ಷನ್‌ನಲ್ಲಿ ನಡೆದಿದೆ. ಕಾರು ಚಾಲಕ ಅನೀಶ್‍ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಲ್ಲಡ್ಕದಿಂದ ವಿಟ್ಲ ಕಡೆಗೆ ತೆರಳುತ್ತಿದ್ದ ಆಲ್ಟೋ ಕಾರಿಗೆ, ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ಮಿನಿ ಟಿಪ್ಪರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕಾರಿನೊಳಗಿನವರು ತೀವ್ರ

ಮಿನಿ ಟಿಪ್ಪರ್ – ಕಾರು ಅಪಘಾತ : ಕಾರು ಚಾಲಕ ಮೃತ್ಯು Read More »

ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ NEET, CET  /JEE ಫೌಂಡೇಶನ್‍ ತರಬೇತಿ ಆರಂಭ

ಪುತ್ತೂರು: ಏಳ್ಮುಡಿಯಲ್ಲಿರುವ ಪ್ರಭು ಬಿಲ್ಡಿಂಗ್‍ ನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ NEET, CET, JEE ಫೌಂಡೇಶನ್‍ ತರಬೇತಿ ಆರಂಭಗೊಂಡಿದೆ. ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕೋರ್ಸ್ ನ ಸದುಪಯೋಗ ಪಡೆದುಕೊಳ್ಳಬಹುದು. ನುರಿತ, ಅನುಭವಿ ಅಧ್ಯಾಪಕರಿಂದ ತರಬೇತಿ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ‘ಪ್ರೇರಣಾ’, ಮೊದಲ ಮಹಡಿ, ಪ್ರಭು ಬಿಲ್ಡಿಂಗ್‍, ಕೆನರಾ ಬ್ಯಾಂಕ್‍ ಬಳಿ, ಅರುಣಾ ಥಿಯೇಟರ್ ಎದುರು, ಮುಖ್ಯ ರಸ್ತೆ ಪುತ್ತೂರು.  8904877721, 7204977721 ಹಾಗೂ 08251-200721 ನಂಬರನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ NEET, CET  /JEE ಫೌಂಡೇಶನ್‍ ತರಬೇತಿ ಆರಂಭ Read More »

ಆರ್ಯಾಪು ನಿವಾಸಿ ವಿಶ್ವನಾಥ ನಾಯ್ಕ ನಿಧನ

ಪುತ್ತೂರು: ತಾಲೂಕಿನ ಆರ್ಯಾಪು ಗ್ರಾಮದ ಮೇಗಿನ‌ ಪಂಜ ನಿವಾಸಿ, ಅರ್ಯಾಪು ಗ್ರಾಪಂನ ಮಾಜಿ ಅಧ್ಯಕ್ಷೆ ಸರಸ್ವತಿ ಅವರ ಪತಿ ವಿಶ್ವನಾಥ ನಾಯ್ಕ(42) ಅವರು ಸೋಮವಾರ ಬೆಳಗ್ಗೆ ನಿಧನರಾದರು. ಕೂಲಿ ಕಾರ್ಮಿಕರಾಗಿದ್ದ ವಿಶ್ವನಾಥ ಅವರು ಭಾನುವಾರ ಸಂಜೆ ಅಸ್ವಸ್ಥತೆಗೆ ಒಳಗಾಗಿದ್ದರು. ಅವರನ್ನು ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ಅವರು ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಆರ್ಯಾಪು ನಿವಾಸಿ ವಿಶ್ವನಾಥ ನಾಯ್ಕ ನಿಧನ Read More »

ಆನೆ ದಾಳಿಯಿಂದ ಮಹಿಳೆ ಮೃತಪಟ್ಟ ಪ್ರಕರಣ | ಅರಣ್ಯ ಇಲಾಖೆಯಿಂದ 20 ಲಕ್ಷ ಪರಿಹಾರ

ಪುತ್ತೂರು: ಕೆಲದಿನಗಳ ಹಿಂದೆ ಕೊಳ್ತಿಗೆ ಗ್ರಾಮದ ಕಣಿಯಾರ್ ಎಂಬಲ್ಲಿ ಆನೆ ದಾಳಿಯಿಂದ ಮೃತಪಟ್ಟಿದ್ದ ಕಾರ್ಮಿಕೆ ಸೆಲ್ಲಮ್ಮ ಅವರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 20 ಲಕ್ಷ ಪರಿಹಾರ ಮಂಜೂರಾಗಿದೆ. ಎ.29 ರಂದು ಬೆಳಗ್ಗಿನ ಜಾವ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ವೇಳೆ ದಿಡೀರನೆ ಕಾಡಿನ ಕಡೆಯಿಂದ ಬಂದ ಆನೆ ಸೆಲ್ಲಮ್ಮ ಅವರ‌ಮೇಲೆ ದಾಳಿ ನಡೆಸಿ ಅವರನ್ನು ಕೊಂದು ಹಾಕಿತ್ತು. ಮೃತ ಸೆಲ್ಲಮ್ಮ ಅವರ ಕುಟುಂಬಕ್ಕೆ ಶಾಸಕ ಅಶೋಕ್ ರೈ ಅವರ ಶಿಫಾರಸ್ಸಿನಂತೆ 20 ಲಕ್ಷ ಪರಿಹಾರ ಮಂಜೂರಾಗಿದೆ. ಮಂಜೂರಾತಿ ಪತ್ರವನ್ನು

ಆನೆ ದಾಳಿಯಿಂದ ಮಹಿಳೆ ಮೃತಪಟ್ಟ ಪ್ರಕರಣ | ಅರಣ್ಯ ಇಲಾಖೆಯಿಂದ 20 ಲಕ್ಷ ಪರಿಹಾರ Read More »

ಧರ್ಮಸ್ಥಳ ಪ್ರಕರಣದ ತನಿಖೆಗಾಗಿ ಸರಕಾರ ಎಸ್‍ ಐಟಿ ರಚಿಸಿರುವುದು ಸ್ವಾಗತಾರ್ಹ : ವಿಶ್ವ ಹಿಂದೂ ಪರಿಷತ್‍

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಢಳದ ಪ್ರಕರಣದಲ್ಲಿ ಸರಕಾರ ಎಸ್‍ ಐಟಿ ರಚಿಸಿ ತನಿಖೆಗೆ ಆದೇಶಿಸಿರುವುದು ಸ್ವಾಗತಾರ್ಹ. ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಶವಗಳನ್ನು ಹೂತಿರುವ ಆರೋಪದ ತನಿಖೆಗಾಗಿ ಸರ್ಕಾರ ಎಸ್‍ ಐಟಿ ರಚಿಸಿ ತನಿಖೆಗೆ ಆದೇಶಿಸಿದ ನಿರ್ಧಾರವನ್ನು ವಿಶ್ಟ ಹಿಂದೂ ಪರಿಷದ್ ಸ್ಟಾಗತಿಸುತ್ತಿದೆ. ತನಿಖೆಯು ನಿಷ್ಪಕ್ಷಪಾತವಾಗಿ ನಡೆಯಲಿ ಹಾಗೂ ವಿಷಯದ ಸತ್ಯಾಸತ್ಯತೆ ಸಮಾಜಕ್ಕೆ ತಿಳಿಯಲಿ ಎಂದು ವಿಶ್ವ ಹಿಂದೂ ಪರಿಷತ್‍ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧರ್ಮಸ್ಥಳ ಪ್ರಕರಣದ ತನಿಖೆಗಾಗಿ ಸರಕಾರ ಎಸ್‍ ಐಟಿ ರಚಿಸಿರುವುದು ಸ್ವಾಗತಾರ್ಹ : ವಿಶ್ವ ಹಿಂದೂ ಪರಿಷತ್‍ Read More »

ಆ.3 : ಪುತ್ತಿಲ ಪರಿವಾರ ಟ್ರಸ್ಟ್ ನಿಂದ ‘‘ಪುತ್ತೂರ್ದ ಕೆಸರ್ದ ಗೊಬ್ಬು’’| ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಪುತ್ತಿಲ ಪರಿವಾರ ಟ್ರಸ್ಟ್ ವತಿಯಿಂದ ಆಗಸ್ಟ್ 3 ರಂದು ಪುತ್ತೂರಿನ ಕಾರ್ಜಾಲು ಗದ್ದೆಯಲ್ಲಿ ನಡೆಯುವ “ಪುತ್ತೂರ್ದ ಕೆಸರ್ದ ಗೊಬ್ಬು- 2025” ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಪುತ್ತೂರು ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಸೋಮವಾರ ನೆರವೇರಿತು. ಬೆಳಿಗ್ಗೆ ಗರ್ಭಗುಡಿಯಲ್ಲಿ ದೇವಸ್ಥಾನದ ಅರ್ಚಕ ಜಯರಾಮ ಭಟ್‍ ಅವರು ಪ್ರಾರ್ಥನೆ ನೆರವೇರಿಸಿದ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್‍ ಪಂಜಿಗುಡ್ಡೆ, ಪುತ್ತಿಲ ಪರಿವಾರ ಟ್ರಸ್ಟ್ ಸಂಚಾಲಕ

ಆ.3 : ಪುತ್ತಿಲ ಪರಿವಾರ ಟ್ರಸ್ಟ್ ನಿಂದ ‘‘ಪುತ್ತೂರ್ದ ಕೆಸರ್ದ ಗೊಬ್ಬು’’| ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಉಜಿರುಪಾದೆ ಮಾದರಿ ಗ್ರಾಮ ಸಮಿತಿಯಿಂದ ಆಟಿ ಆಚರಣೆ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ

ಪುತ್ತೂರು: ಪುತ್ತೂರು ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್, ಮಾದರಿ ಗ್ರಾಮ ಸಮಿತಿ ಬಲ್ನಾಡು ಇದರ ಆಶ್ರಯದಲ್ಲಿ ಆಟಿ ಆಚರಣೆ ಹಾಗೂ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಭಾನುವಾರ ಬಲ್ನಾಡಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ಸಾಧಕ ವಿದ್ಯಾರ್ಥಿಗಳಿಗೆ  ಪ್ರತಿಭಾ ಪುರಸ್ಕಾರ ನೀಡಲಾಯಿತು. ಗ್ರಾಮದ ಸ್ಥಳೀಯರು ನೀಡಿದ ಸೇವೆಗಾಗಿ ಸಮುದಾಯದ ಸತೀಶ್ ಗೌಡ ಒಳಗುಡ್ಡೆ, ಸೀತಾರಾಮ ಗೌಡ ಕಾಂತಿಲ, ತೀರ್ಥ ಪ್ರಸಾದ್ ಕಾಂತಿಲ, ಅಚ್ಚುತ ಗೌಡ ಕೋಡಿಯಡ್ಕ ಲೋಕೇಶ್ ಗೌಡ ಪಟ್ಟೆ ಅವರನ್ನು ಸನ್ಮಾನಿಸಲಾಯಿತ. 1ನೇ ತರಗತಿಯಿಂದ 10ನೇ ತರಗತಿಯ 

ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಉಜಿರುಪಾದೆ ಮಾದರಿ ಗ್ರಾಮ ಸಮಿತಿಯಿಂದ ಆಟಿ ಆಚರಣೆ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ Read More »

ಪುತ್ತೂರು ಮೂಲದ ವ್ಯಕ್ತಿಯ ಮೃತದೇಹ ಮಂಗಳೂರಿನಲ್ಲಿ ಪತ್ತೆ

ಪುತ್ತೂರು: ಪುತ್ತೂರು ಮೂಲದ ವ್ಯಕ್ತಿಯ ಮೃತದೇಹ ಮಂಗಳೂರಿನ ಬಸ್ ನಿಲ್ದಾಣದಲ್ಲಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಮೃತದೇಹದ ಜೊತೆ ಪತ್ತೆಯಾದ ಆಧಾರ್ ಕಾರ್ಡ್ ನಿಂದ ಮೃತರನ್ನು ಶಾಜು (52) ಎಂದು ಗುರುತಿಸಲಾಗಿದೆ. ಸದ್ಯ ವರಿಸುದಾರರ ಮಾಹಿತಿಯ ಕೊರತೆಯ ಹಿನ್ನಲೆ ಮೃತದೇಹವನ್ನು ವೆನ್ನಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು ಮೂಲದ ವ್ಯಕ್ತಿಯ ಮೃತದೇಹ ಮಂಗಳೂರಿನಲ್ಲಿ ಪತ್ತೆ Read More »

error: Content is protected !!
Scroll to Top