ಪುತ್ತೂರು

ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಸ್ತ್ರ ವಿತರಣೆ, ಸಹಭೋಜನ | ಯಾವುದೇ ರಾಜಕೀಯ ಪಕ್ಷ, ಧರ್ಮ, ಜಾತಿ ಬೇಧವಿಲ್ಲ : ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ನಡೆಯುವ ವಸ್ತ್ರ ವಿತರಣಾ ಕಾರ್ಯಕ್ರಮ ಹಾಗೂ ಸಹಭೋಜನ ಕಾರ್ಯಕ್ರಮದ ಅಂಗವಾಗಿ ಈ ಬಾರಿ 50 ಸಾವಿರ ಮಂದಿಗೆ ವಸ್ತವಿತರಣೆ ಮಾಡಲಾಗುವುದು. ಅದಕ್ಕಾಗಿ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿದೆ ಎಂದು ರೈ ರೈ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಅವರು ಸೋಮವಾರ ಶಾಸಕರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಬಾರಿ ವಸ್ತ್ರ ವಿತರಣೆ ಅಂಗವಾಗಿ ಮಹಿಳೆಯರಿಗೆ ಸೀರೆ ಹಾಗೂ ಪುರುಷರು ಮತ್ತು ಮಕ್ಕಳಿಗೆ […]

ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಸ್ತ್ರ ವಿತರಣೆ, ಸಹಭೋಜನ | ಯಾವುದೇ ರಾಜಕೀಯ ಪಕ್ಷ, ಧರ್ಮ, ಜಾತಿ ಬೇಧವಿಲ್ಲ : ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅಶೋಕ್ ಕುಮಾರ್ ರೈ Read More »

ಸರಕಾರಿ ಶಾಲಾ ಶಿಕ್ಷಕರ ಕೊರತೆ ಪರಿಹರಿಸಲಾಗಿದೆ | ಕಕ್ಕೂರು ಸ. ಹಿ. ಪ್ರಾ. ಶಾಲಾ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ಪರಿಹರಿಸಲಾಗಿದೆ. ಮಾತ್ರವಲ್ಲದೆ ಶಾಲೆಗಳಿಗೆ ವಿಷಯವಾರು ಶಿಕ್ಷಕರ ನೇಮಕಾತಿಯೂ ನಡೆದಿದ್ದು ಗುಣಮಟ್ಡದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಬೆಟ್ಟಂಪಾಡಿ ಗ್ರಾಮದ ಕಕ್ಕೂರು ಸರಕಾರಿ ಹಿಪ್ರಾ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ‘ಸೃಜನ ದರ್ಶನ’ ಮಕ್ಕಳ ಸಾಂಸ್ಕೃತಿಕ ಹಬ್ಬವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಶಾಲೆಯಲ್ಲಿ ಶಿಕ್ಷಕರ ನಡುವೆ ಹೊಂದಾಣಿಕೆ ಇರಬೇಕಾಗಿದೆ. ಶಿಕ್ಷಕರೊಳಗೆ ಪರಸ್ಪರ ಹೊಂದಾಣಿಕೆಯ ಕೊರತೆ ಇದ್ದಲ್ಲಿ‌ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಹೊಂದಾಣಿಕೆಯಲ್ಲಿ

ಸರಕಾರಿ ಶಾಲಾ ಶಿಕ್ಷಕರ ಕೊರತೆ ಪರಿಹರಿಸಲಾಗಿದೆ | ಕಕ್ಕೂರು ಸ. ಹಿ. ಪ್ರಾ. ಶಾಲಾ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ Read More »

ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ನಿಂದ ವಸ್ತ್ರ ವಿತರಣೆ | ಕೊಂಬೆಟ್ಟು ಕ್ರೀಡಾಂಗಣದಲ್ಲಿ ಚಪ್ಪರ ಮುಹೂರ್ತ

ಪುತ್ತೂರು: ರೈ ಎಸ್ಟೇಟ್ ಎಜುಕೇಶನಲ್ ಆಂಡ್  ಚಾರಿಟೇಬಲ್ ಟ್ರಸ್ಟ್ ವತಿಯಿಂದ ನ.13 ರಂದು ದೀಪಾವಳಿ ಪ್ರಯುಕ್ತ ನಡೆಯುವ ವಸ್ತ್ರ ವಿತರಣೆ ಹಾಗೂ ಸಹಭೋಜನಾ ಕಾರ್ಯಕ್ರಮವು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದ್ದು ಚಪ್ಪರ ಮುಹೂರ್ತ ಸೋಮವಾರ ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ ಟ್ರಸ್ಟ ಮುಖ್ಯಸ್ಥರಾದ ಸುಮಾ ಅಶೋಕ್ ರೈ, ಸೀತಾರಾಮ ರೈ ಹೆಗ್ಗಡೆ ಹಿತ್ತಿಲು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ,

ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ನಿಂದ ವಸ್ತ್ರ ವಿತರಣೆ | ಕೊಂಬೆಟ್ಟು ಕ್ರೀಡಾಂಗಣದಲ್ಲಿ ಚಪ್ಪರ ಮುಹೂರ್ತ Read More »

ಮೊಗಪ್ಪೆ- ಕುರ್ಲಪ್ಪಾಡಿ ರಸ್ತೆ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ

ಪುತ್ತೂರು: ಮಾಡುವ ಕೆಲಸ ಚೆನ್ನಾಗಿರಬೇಕು. ಕಾಮಗಾರಿ ನಡೆಯುವಾಗ ಗ್ರಾಮಸ್ಥರು ಪರಿಶೀಲನೆ ಮಾಡಬೇಕು, ಅರ್ದಂಬರ್ಧಕಾಮಗಾರಿ ನಡೆಸಿ ಸ್ಥಳ ಖಾಲಿ ಮಾಡಬಾರದು. ಯಾರಿಗೂ ಪರ್ಸಂಟೇಜ್ ಕೊಡ್ಲಿಕ್ಕೆ ಇಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈಯವರು ರಸ್ತೆ ಕಾಮಗಾರಿ ನಡೆಸುವ ಗುತ್ತಿಗೆದಾರರಿಗೆ ಸೂಚನೆಯನ್ನು ನೀಡಿದ್ದಾರೆ. ಅವರು ಕೊಳ್ತಿಗೆ ಗ್ರಾಮದ ಮೊಗಪ್ಪ-ಕುರ್ಲಪ್ಪಾಡಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಜನರ ದುಡ್ಡಿನ ಹಣದಿಂದಲೇ ಇಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ ಎಂಬ ಪರಿಜ್ಞಾನ ಗುತ್ತಿಗೆದಾರನಿಗೆ ಇರಬೇಕು. ಅವರಿಗೆ ಕೊಡ್ಲಿಕ್ಕೆ , ಇವರಿಗೆ ಕೊಡ್ಲಿಕ್ಕೆ ಇದೆ

ಮೊಗಪ್ಪೆ- ಕುರ್ಲಪ್ಪಾಡಿ ರಸ್ತೆ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ Read More »

ನಾಪತ್ತೆಯಾದವರ ಮೃತದೇಹ ಬಾವಿಯಲ್ಲಿ ಪತ್ತೆ

ಪುತ್ತೂರು: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಬಕದಲ್ಲಿ ನಡೆದಿದೆ. ಕಡಬಕ ಗ್ರಾಮದ ತೋಟಗಾರಿಕೆ ಇಲಾಖೆ ಬಳಿಯ ಜನತಾ ಕಾಲನಿ ನಿವಾಸಿ ವಿ.ಪಿ.ವೇಣು (44) ಮನೆ ಸಮೀಪದ ಬಾವಿಗೆ ಬಿದ್ದು ಮೃತಪಟ್ಟವರು. ಪಿ.ಕೆ.ವಿಜಯ ಎಂಬವರ ಪುತ್ರರಾಗಿರುವ ವೇಣು ಅವರು ಹಲವು ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು. ನ.4 ರಂದು ಕಾಣೆಯಾಗಿದ್ದ ಅವರನ್ನು ಹುಡುಕಾಡಿದಾಗ ಮನೆ ಸಮೀಪದ ಸರಕಾರಿ ಬಾವಿ ಬಳಿ ಚಪ್ಪಲಿ ಇರುವ ಮಾಹಿತಿ ತಿಳಿದು ಅಗ್ನಿಶಾಮಕ ದಳದವರನ್ನು ಕರೆಸಲಾಗಿತ್ತು. ಅಗ್ನಿಶಾಮಕ ದಳದವರು

ನಾಪತ್ತೆಯಾದವರ ಮೃತದೇಹ ಬಾವಿಯಲ್ಲಿ ಪತ್ತೆ Read More »

ಪಡ್ನೂರು ಶ್ರೀ ಜನಾರ್ಧನ ಯುವಕ ಮಂಡಲದ ಸುವರ್ಣ ಮಹೋತ್ಸವ “ ಪಡ್ನೂರು ಉತ್ಸವ” | 58 ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾಟ

ಪುತ್ತೂರು: ಪಡ್ನೂರು ಶ್ರೀ ಜನಾರ್ದನ ಯುವಕ ಮಂಡಲದ ಸುವರ್ಣ ಮಹೋತ್ಸವ ‘ಪಡ್ನೂರು ಉತ್ಸವ’ದ ಅಂಗವಾಗಿ 58 ಕೆ.ಜಿ. ವಿಭಾಗದ ಮ್ಯಾಟ್ ಅಂಕಣ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭ ಭಾನುವಾರ ಪಡ್ನೂರು ಶಾಲಾ ವಠಾರದ ಶ್ರೀ ಜನಾರ್ದನ ವೇದಿಕೆಯಲ್ಲಿ ನಡೆಯಿತು. ನಿವೃತ್ತ ಕ್ರೀಡಾಧಿಕಾರಿ ಮಾಧವ ಬಿ.ಕೆ. ದೀಪ ಬೆಳಗಿಸಿ ಉದ್ಘಾಟಿಸಿ, ಪ್ರಸ್ತುತ ಸಂಸ್ಕೃತಿ, ಸಂಸ್ಕಾರ ಉಳಿಸುವ ಕಾರ್ಯ ಯುವಜನ ಮೇಳಗಳಿಂದ ನಡೆಯುತ್ತಿದ್ದು, ತಾಲೂಕು ಮಟ್ಟದ ಯುವಜನ ಮೇಳವನ್ನು ರದ್ದುಗೊಳಿಸಿದ ಪರಿಣಾಮ ಯುವಕರಿಗೆ ಅವಕಾಶ ಕಡಿಮೆಯಾಗಿದೆ. ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು

ಪಡ್ನೂರು ಶ್ರೀ ಜನಾರ್ಧನ ಯುವಕ ಮಂಡಲದ ಸುವರ್ಣ ಮಹೋತ್ಸವ “ ಪಡ್ನೂರು ಉತ್ಸವ” | 58 ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾಟ Read More »

ಕೌಡಿಚ್ಚಾರಿನಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ : ಮೆಸ್ಕಾಂ ಬಳಕೆದಾರರ ತುರ್ತು ಸಭೆ

ಪುತ್ತೂರು: ಮೆಸ್ಕಾಂ ಬಳಕೆದಾರರ ತುರ್ತು ಸಭೆ ಕೌಡಿಚ್ಚಾರಿನಲ್ಲಿ ನಡೆಯಿತು. ಬಳಕೆದಾರರ ಅಧ್ಯಕ್ಷ ಎಸ್‍.ಅಬೂಬಕ್ಕರ್ ಕೌಡಿಚ್ಚಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕೌಡಿಚ್ಚಾರಿನಲ್ಲಿ ನಾಲ್ಕೈದು ದಿನಗಳಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಗ್ರಾಪಂನ ಕುಡಿಯುವ ನೀರನ್ನು ನಂಬಿದವರಿಗೆ ಸಮಸ್ಯೆ ಉಂಟಾಗಿದೆ. ಅಂಗಡಿ ವ್ಯಾಪಾರ ನಡೆಸುವವರಿಗೂ ವಿದ್ಯುತ್ ವ್ಯತ್ಯಯದಿಂದ ಸಮಸ್ಯೆ ಉಂಟಾಗಿದೆ. ಕೌಡಿಚ್ಚಾರು ಪ್ರದೇಶದವರು ಕತ್ತಲಲ್ಲಿ ಕಾಲಕಳೆಯುವಂತಾಗಬಾರದು ಎಂದು ಸಭೆಯಲ್ಲಿ ವಿದ್ಯುತ್ ಬಳಕೆದಾರರು ಆಗ್ರಹಿಸಿದರು. ಕೌಡಿಚ್ಚಾರ್ ಪ್ರದೇಶಕ್ಕೆ ಒಂದು ಟಿಸಿ ಅಳವಡಿಸುವಂತೆ ಹಾಗೂ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಮೆಸ್ಕಾಂ ಸಹಾಯಕ

ಕೌಡಿಚ್ಚಾರಿನಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ : ಮೆಸ್ಕಾಂ ಬಳಕೆದಾರರ ತುರ್ತು ಸಭೆ Read More »

ಫೆ.17 ರಿಂದ 24 : ನಳಿಲು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ | ಭಕ್ತಾದಿಗಳ ಸಭೆ

ಪುತ್ತೂರು: ಕೊಳ್ತಿಗೆ ಗ್ರಾಮದ ಪಾಲ್ತಾಡು ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವ 2024 ಫೆ.17 ರಿಂದ 24 ರತನಕ ನಡೆಯಲಿದ್ದು ಭಕ್ತಾದಿಗಳ ಸಭೆ ದೇವಸ್ಥಾನದ ವಠಾರದಲ್ಲಿ ಭಾನುವಾರ ನಡೆಯಿತು. ಸಮಿತಿ ಗೌರವಾಧ್ಯಕ್ಷರಾಗಿ ಶಾಸಕ ಅಶೋಕ್ ರೈ ಅವರನ್ನು ಭಕ್ತರ ಸಮ್ಮುಖದಲ್ಲಿ ನೇಮಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಗೌರವಾಧ್ಯಕ್ಷರಾಗಿ ಆಯ್ಕೆಯಾದದ್ದು ನನ್ನ ಯೋಗ. ಕೇವಲ ದುಡ್ಡಿನಿಂದ ಬ್ರಹ್ಮಕಲಶೋತ್ಸವ ನಡೆಯಲು ಸಾಧ್ಯವಿಲ್ಲ. ಭಕ್ತಿ, ಶ್ರದ್ಧೆ, ನಂಬಿಕೆಯಿಂದ ಎಲ್ಲರೂ ಒಟ್ಟಾಗಿ ತೊಡಗಿಸಿಕೊಂಡರೆ ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಊರಿನ

ಫೆ.17 ರಿಂದ 24 : ನಳಿಲು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ | ಭಕ್ತಾದಿಗಳ ಸಭೆ Read More »

ಜಗಳ ತಾರಕಕ್ಕೇರಿ ವಿಷ ಸೇವಿಸಿದ ಗಂಡ-ಹೆಂಡತಿ :  ಹೆಂಡತಿ ಮೃತ್ಯು

ಕಡಬ: ಗಲಾಟೆ ಮಾಡಿಕೊಂಡ ಗಂಡ-ಹೆಂಡತಿ ಜಗಳ ವಿಪರೀತಕ್ಕೇರಿ ಕೊನೆಗೆ ಸಾವಿನಲ್ಲಿ ಅಂತ್ಯವಾದ ಘಟನೆ ಕಡಬ ತಾಲೂಕಿನ ಕುದ್ಮಾರು ಗ್ರಾಮದಲ್ಲಿ ಶನಿವಾರ ರಂದು ಸಂಜೆ ನಡೆದಿದೆ. ಗಂಡ-ಹೆಂಡಿರ ಗಲಾಟೆಯಲ್ಲಿ ಹೆಂಡತಿ ಕುಸುಮ (39) ಮೃತಪಟ್ಟವರು.ಕುಸುಮ ಮತ್ತು ಆಕೆಯ ಪತಿ ಸಂಜೀವರ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಅಂತೆಯೇ ಶನಿವಾರ ಕೂಡ ಮಾತಿಗೆ ಮಾತು ಬೆಳೆದಿದೆ. ಕೋಪದ ಭರದಲ್ಲಿ ಇಬ್ಬರು ಕೂಡ ವಿಷ ಸೇವಿಸಿದ್ದಾರೆ. ಈ ವಿಚಾರ ಸ್ಥಳೀಯರಿಗೆ ತಿಳಿದು ತಕ್ಷಣ ಅವರ ಸಂಬಂಧಿಕರಿಗೆ ವಿಚಾರವನ್ನು ತಿಳಿಸಿರುತ್ತಾರೆ. ಅವರು ಬಂದು

ಜಗಳ ತಾರಕಕ್ಕೇರಿ ವಿಷ ಸೇವಿಸಿದ ಗಂಡ-ಹೆಂಡತಿ :  ಹೆಂಡತಿ ಮೃತ್ಯು Read More »

ಬೆಂಗಳೂರು ಕಂಬಳಕ್ಕೆ ಮುಖ್ಯಮಂತ್ರಿಗಳಿಂದ ಒಂದು ಕೋಟಿ ರೂ. ಘೋಷಣೆ

ಪುತ್ತೂರು: ಬೆಂಗಳೂರು ಅರಮನೆ ಮೈದಾನದಲ್ಲಿ ನ.24ರಿಂದ 26 ರತನಕ ನಡೆಯಲಿರುವ ಬೆಂಗಳೂರು‌ ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಒಂದು ಕೋಟಿ ರೂ. ಘೋಷಣೆ ಮಾಡಿದ್ದಾರೆ ಎಂದು ಕಂಬಳ ಸಮಿತಿ ಅಧ್ಯಕ್ಷ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಕರಾವಳಿಯ ಜನಪದ ಕ್ರೀಡೆಯಾದ ಕಂಬಳವನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿದೆ. ಈಗಾಗಲೇ ಕಂಬಳಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಬೆಂಗಳೂರು ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಕಂಬಳ ಸಮಿತಿ ನೇಮಕ ಮಾಡಿದೆ.

ಬೆಂಗಳೂರು ಕಂಬಳಕ್ಕೆ ಮುಖ್ಯಮಂತ್ರಿಗಳಿಂದ ಒಂದು ಕೋಟಿ ರೂ. ಘೋಷಣೆ Read More »

error: Content is protected !!
Scroll to Top