ಪುತ್ತೂರು

ಅಕ್ಷಯ್ ಕಲ್ಲೇಗ ಹತ್ಯೆಯಲ್ಲಿ ಭಾಗಿಯಾದವರ ಕುರಿತು ತನಿಖೆ ಆಗಬೇಕು | ಸರಕಾರದಿಂದ ಒಂದು ಕೋಟಿ ಪರಿಹಾರ ನೀಡಬೇಕು | ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹ

ಪುತ್ತೂರು: ಹುಲಿವೇಷ ತಂಡ ಕಟ್ಟು ಮೂಲಕ ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ ಅಕ್ಷಯ್ ಕಲ್ಲೇಗ ಅವರ ಹತ್ಯೆಯ ಹಿಂದೆ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬ ಕುರಿತು ಪೊಲೀಸ್ ಇಲಾಖೆಯಿಂದ ಪತ್ತೆ ಹಚ್ಚುವ ಕಾರ್ಯ ಶೀಘ್ರ ಆಗಬೇಕು. ಜತೆಗೆ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡುವ ಕೆಲಸ ಸರಕಾರದಿಂದ ಆಗಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ. ಸೋಮವಾರ ತಡರಾತ್ರಿ ನೆಹರೂನಗರದಲ್ಲಿ ಹತ್ಯೆಯಾದ ಅಕ್ಷಯ್ ಕಲ್ಲೇಗ ಅವರ ಪಾರ್ಥಿವ ಶರೀರದ ದರ್ಶನ ಮಾಡಿದ  ಬಳಿಕ ಅವರು ಮಾಧ್ಯಮದವರೊಂದಿಗೆ […]

ಅಕ್ಷಯ್ ಕಲ್ಲೇಗ ಹತ್ಯೆಯಲ್ಲಿ ಭಾಗಿಯಾದವರ ಕುರಿತು ತನಿಖೆ ಆಗಬೇಕು | ಸರಕಾರದಿಂದ ಒಂದು ಕೋಟಿ ಪರಿಹಾರ ನೀಡಬೇಕು | ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹ Read More »

ಕಲ್ಲೇಗ ಟೈಗರ್ಸ್‍ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಹತ್ಯೆ | ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

ಪುತ್ತೂರು: ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಹತ್ಯೆಗೆ ಸಂಬಂಧಿಸಿದಂತೆ ಮೂವರಿ ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬನ್ನೂರು ಜೈನರಗುರಿ ನಿವಾಸಿ ಚೇತು ಅಲಿಯಾಸ್ ಚೇತನ್, ಮಂಜು ಯಾನೆ ಮಂಜುನಾಥ ಹಾಗೂ ಪಡೀಲು ನಿವಾಸಿ ಮನೀಶ್ ಮಣಿಯಾಣಿ ಪೊಲೀಸ್ ವಶದಲ್ಲಿದ್ದಾರೆ. ಇನ್ನೋರ್ವ ಆರೋಪಿ ಕೇಶವ ಎಂಬಾತ ಇನ್ನಷ್ಟೇ ಪೊಲೀಸರಿಗೆ ಶರಣಾಗಬೇಕಾಗಿದೆ ಎಂದು ತಿಳಿದು ಬಂದಿದೆ. ಸೋಮವಾರ ತಡರಾತ್ರಿ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಗಳು ಹಾಗೂ ಅಕ್ಷಯ್‍ ಮಧ್ಯೆ ಚರ್ಚೆಗಳು ನಡೆದಿವೆ. ಇದು ತಾರಕಕ್ಕೇರಿ ಅಕ್ಷಯ್

ಕಲ್ಲೇಗ ಟೈಗರ್ಸ್‍ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಹತ್ಯೆ | ಮೂವರು ಆರೋಪಿಗಳು ಪೊಲೀಸ್ ವಶಕ್ಕೆ Read More »

ನಾಳೆ: ವೈದ್ಯಕೀಯ ತಪಾಸಣಾ ಶಿಬಿರ | ನಗರಸಭೆ, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್, ಪೌರಸೇವಾ ನೌಕರರ ಸಂಘ, ಸುಳ್ಯ ಕೆವಿಜಿ ಮೆಡಿಕಲ್, ಆಸ್ಪತ್ರೆ ಸಹಯೋಗ

ಪುತ್ತೂರು: ಪುತ್ತೂರು ನಗರಸಭೆ, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್, ನಗರಸಭೆ ಪೌರಸೇವಾ ನೌಕರರ ಸಂಘ ಹಾಗೂ ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಸಹಯೋಗದೊಂದಿಗೆ ಪೌರ ಕಾರ್ಮಿಕರು ಹಾಗೂ ಪೌರ ಸೇವಾ ನೌಕರರಿಗೆ ವೈದ್ಯಕೀಯ ತಪಾಸಣಾ ಶಿಬಿರ ನ.8 ಬುಧವಾರ ಪುತ್ತೂರು ನಗರಸಸಭೆ ಸಭಾಂಗಣದಲ್ಲಿ ನಡೆಯಲಿದೆ. ಬೆಳಿಗ್ಗೆ 9 ರಿಂದ ಆರಂಭಗೊಂಡು ಮಧ್ಯಾಹ್ನ 1 ಗಂಟೆ ತನಕ ನಡೆಯುವ ಶಿಬಿರದಲ್ಲಿ ಜನರಲ್ ಮೆಡಿಸಿನ್, ಶಸ್ತ್ರ ಚಿಕಿತ್ಸೆ, ಮಕ್ಕಳ ರೋಗ, ಗಂಟಲು, ಮೂಗು, ಕಿವಿ, ಥೈರಾಯಿಡ್ ಸೋರುವಿಕೆ, ನೇತ್ರ

ನಾಳೆ: ವೈದ್ಯಕೀಯ ತಪಾಸಣಾ ಶಿಬಿರ | ನಗರಸಭೆ, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್, ಪೌರಸೇವಾ ನೌಕರರ ಸಂಘ, ಸುಳ್ಯ ಕೆವಿಜಿ ಮೆಡಿಕಲ್, ಆಸ್ಪತ್ರೆ ಸಹಯೋಗ Read More »

ಹೃದಯಾಘಾತದಿಂದ ವಿದ್ಯಾರ್ಥಿ ಇರ್ಫಾನ್ ಮೃತ್ಯು

ಉಪ್ಪಿನಂಗಡಿ: ವಿದ್ಯಾರ್ಥಿಯೋರ್ವ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ನೆಲ್ಯಾಡಿಯ ಕೌಕ್ರಾಡಿಯಲ್ಲಿ ನಡೆದಿದೆ. ಕೌಕ್ರಾಡಿ ಶಾಂತಿಬೆಟ್ಟು ನಿವಾಸಿ ಯೂಸುಫ್ ಎಂಬವರ ಪುತ್ರ ಮಹಮ್ಮದ್ ಇರ್ಫಾನ್ (18) ಮೃತಪಟ್ಟವರು. ಇರ್ಫಾನ್ ಎ.ಸಿ. ಮೆಕ್ಯಾನಿಕ್ ವ್ಯಾಸಂಗ ಮಾಡುತ್ತಿದ್ದು, ತಂದೆ, ತಾಯಿ, ಸಹೋದರು, ಸಹೋದರಿಯರನ್ನು ಅಗಲಿದ್ದಾರೆ.

ಹೃದಯಾಘಾತದಿಂದ ವಿದ್ಯಾರ್ಥಿ ಇರ್ಫಾನ್ ಮೃತ್ಯು Read More »

ತಿಂಗಳ ಹಿಂದೆ ಆನೆ ತುಳಿತಕ್ಕೊಳಗಾದ ಚೋಮ ಮೃತ್ಯು

ಕಡಬ: ತಿಂಗಳ ಹಿಂದೆ ಆನೆ ತುಳಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ಗೇರ್ತಿಲ ನಿವಾಸಿ ಚೋಮ ಮಂಗಳವಾರ ಮೃತಪಟ್ಟಿದ್ದಾರೆ. ಕಡಬ ತಾಲೂಕಿನ ಐತ್ತೂರು ಕೊಣಾಜೆ ಸಮೀಪ ಚೋಮ ಅವರು ನಡೆದುಕೊಂಡು ಹೋಗುತ್ತಿದ್ದಾಗ ಆನೆ ದಾಳಿ ಮಾಡಿತ್ತು. ಗಂಭಿರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಮನೆಗೆ ಕರೆದುಕೊಂಡು ಬಂದಿದ್ದರು. ಇಂದು ಬೆಳಿಗ್ಗೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ತಿಂಗಳ ಹಿಂದೆ ಆನೆ ತುಳಿತಕ್ಕೊಳಗಾದ ಚೋಮ ಮೃತ್ಯು Read More »

ಸೂರಪ್ಪ ಗೌಡ ಇಡ್ಯಡ್ಕ ನಿಧನ

ಕಾಣಿಯೂರು : ಇಡ್ಯಡ್ಕ ನಿವಾಸಿ ಸೂರಪ್ಪ ಗೌಡ ಇಡ್ಯಡ್ಕ ಸೋಮವಾರ ನಿಧನರಾದರು. ಮೃತರು ಇಡ್ಯಡ್ಕ ಕುಟುಂಬದ ಯಜಮಾನರಾಗಿದ್ದಾರೆ. ಮೃತರು ಪುತ್ರರಾದ ರಮೇಶ ಗೌಡ, ಕುಸುಮಾಧರ ಗೌಡ, ಪುತ್ರಿಯರಾದ ಕುಸುಮಾವತಿ, ಮೀನಾಕ್ಷಿ, ಸೊಸೆಯಂದಿರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಸೂರಪ್ಪ ಗೌಡ ಇಡ್ಯಡ್ಕ ನಿಧನ Read More »

ಕಲ್ಲೇಗ ಟೈಗಸ್೯ ತಂಡದ ಮುಖ್ಯಸ್ಥ ಬರ್ಬರ ಕೊಲೆ | ಸೋಮವಾರ ಮಧ್ಯರಾತ್ರಿ ಮೂರು ಜನರ ತಂಡ ದಾಳಿ ಮಾಡಿರುವ ಶಂಕೆ ! | ದೇರಳಕಟ್ಟೆ ಆಸ್ಪತ್ರೆಗೆ ಮೃತದೇಹ ರವಾನೆ!

ಪುತ್ತೂರು: ಪುತ್ತೂರಿನ ಪ್ರಸಿದ್ಧ ಹುಲಿವೇಷ ತಂಡವಾದ ಕಲ್ಲೇಗ ಟೈಗಸ್೯ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ (24) ಅವರನ್ನು ಸೋಮವಾರ ತಡರಾತ್ರಿ ನೆಹರೂನಗರದಲ್ಲಿ ತಲವಾರಿನಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನೆಹರೂ ನಗರದ ವಿವೇಕಾನಂದ ಕಾಲೇಜು ರಸ್ತೆಯಲ್ಲಿ ಮಧ್ಯರಾತ್ರಿ ತಂಡವೊಂದು ದಾಳಿ ಮಾಡಿ ಹತ್ಯೆ ಮಾಡಿದೆ. ಮಾತುಕತೆಗೆ ಬರಲು ಹೇಳಿ ದಾಳಿ ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ. ಕಾಲೇಜು ರಸ್ತೆಯಲ್ಲಿ ದಾಳಿ ಮಾಡುತ್ತಿದ್ದಂತೆ ಅಕ್ಷಯ್ ಅಲ್ಲಿಂದ ಓಡಿದ್ದು, ದುಷ್ಕರ್ಮಿಗಳ ತಂಡ ಬೆನ್ನಟ್ಟಿಕೊಂಡು ಹೋಗಿದೆ. ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ

ಕಲ್ಲೇಗ ಟೈಗಸ್೯ ತಂಡದ ಮುಖ್ಯಸ್ಥ ಬರ್ಬರ ಕೊಲೆ | ಸೋಮವಾರ ಮಧ್ಯರಾತ್ರಿ ಮೂರು ಜನರ ತಂಡ ದಾಳಿ ಮಾಡಿರುವ ಶಂಕೆ ! | ದೇರಳಕಟ್ಟೆ ಆಸ್ಪತ್ರೆಗೆ ಮೃತದೇಹ ರವಾನೆ! Read More »

ಸೆಲ್ಫಿ ತೆಗೆದದ್ದೇ ಬಿಜೆಪಿಯ ಐದು ವರ್ಷಗಳ ಹಿಂದಿನ ದೊಡ್ಡ ಸಾಧನೆ | ವಿಟ್ಲ ಮುಡ್ನೂರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಅಶೋಕ್ ರೈ

ಪುತ್ತೂರು: ಕಳೆದ ಐದು ವರ್ಷದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಹೇಳಿಕೊಳ್ಳುವ ಯಾವುದೇ ಅಭಿವೃದ್ದಿ ಕೆಲಸ ಆಗಿಲ್ಲ. ಸೆಲ್ಫಿ ತೆಗೆದದ್ದೇ ಜನರು ಹೇಳಿಕೊಳ್ಳುತ್ತಿರುವ ದೊಡ್ಡ ಸಾಧನೆಯಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾಜಿ ಶಾಸಕರನ್ನು ಮಾತಿನ ಮೂಲಕ ಕುಟುಕಿದ್ದಾರೆ. ಅವರು ವಿಟ್ಲ ಮುಡ್ನೂರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಶಾಸಕನಾಗಿ ನಾಲ್ಕೇ ತಿಂಗಳಲ್ಲಿ ಕುಡಿಯುವ ನೀರಿಗಾಗಿ 1010 ಕೋಟಿ ರೂ. ಅನುದಾನ ತಂದಿದ್ದೇನೆ. ಕೆಎಂಎಫ್‌ನ್ನು ಪುತ್ತೂರಿಗೆ ಶಿಫ್ಟ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ, ಪುತ್ತೂರು ನಗರದ

ಸೆಲ್ಫಿ ತೆಗೆದದ್ದೇ ಬಿಜೆಪಿಯ ಐದು ವರ್ಷಗಳ ಹಿಂದಿನ ದೊಡ್ಡ ಸಾಧನೆ | ವಿಟ್ಲ ಮುಡ್ನೂರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಅಶೋಕ್ ರೈ Read More »

ಕಲ್ಲೇಗ ಟೈಗರ್ಸ್ ಪ್ರಮುಖ ಅಕ್ಷಯ್ ದುಷ್ಕರ್ಮಿಗಳಿಂದ ಹತ್ಯೆ

ಪುತ್ತೂರು:  ಕಲ್ಲೆಗ ಟೈಗರ್ಸ್ ನ ಪ್ರಮುಖ ನಾಯಕರೊಬ್ಬರನ್ನು ತಲವಾರಿನಿಂದ ಕಡಿದು ಹತ್ಯೆಗೈದ ಘಟನೆ ಇದೀಗ ಪುತ್ತೂರಿನ ನೆಹರೂ ನಗರದಲ್ಲಿ ನಡೆದಿದೆ. ಕಲ್ಲೇಗ ಟೈಗರ್ಸ್‍ ನ ಮುಖ್ಯಸ್ಥ ಅಕ್ಷಯ್‍ ಕಲ್ಲೇಗ ಹತ್ಯೆಗೀಡಾದ ಯುವಕ ನೆಹರೂನಗರದಲ್ಲಿ ಇರುವ ವೇಳೆ ತಂಡವೊಂದು ಆಗಮಿಸಿ ಏಕಾಏಕಿ ತಲವಾರಿನಿಂದ ದಾಳಿ ನಡೆಸಿ ಹತ್ಯೆ ಮಾಡಿದೆ. ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.

ಕಲ್ಲೇಗ ಟೈಗರ್ಸ್ ಪ್ರಮುಖ ಅಕ್ಷಯ್ ದುಷ್ಕರ್ಮಿಗಳಿಂದ ಹತ್ಯೆ Read More »

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ : ವಿವೇಕಾನಂದ ಪ.ಪೂ ಕಾಲೇಜಿನ ನಿಹಾಲ್ ರಾಜ್ ಗೆ ಬೆಳ್ಳಿ ಪದಕ

ಪುತ್ತೂರು: ಬಿಹಾರದ ಸರಸ್ವತಿ ವಿದ್ಯಾಮಂದಿರ ಬೆಟ್ಟಯ್ಯದಲ್ಲಿ ನಡೆಯುತ್ತಿರುವ ವಿದ್ಯಾಭಾರತಿ ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ನಿಹಾಲ್ ರಾಜ್ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕವನ್ನು ಪಡೆದುಕೊಂಡಿದ್ದಾರೆ. ಅವರು ಕಬಕ ನಿವಾಸಿ ಬಿ. ನಾಗರಾಜ್ ಹೆಗ್ಡೆ ಮತ್ತು ಭಾನುಮತಿ ದಂಪತಿ ಅವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ : ವಿವೇಕಾನಂದ ಪ.ಪೂ ಕಾಲೇಜಿನ ನಿಹಾಲ್ ರಾಜ್ ಗೆ ಬೆಳ್ಳಿ ಪದಕ Read More »

error: Content is protected !!
Scroll to Top