ಪುತ್ತೂರು

ಜನರ ಜೊತೆ ಸಹಭೋಜನಕ್ಕಾಗಿ ವಸ್ತ್ರ ವಿತರಣೆ | ವಸ್ತ್ರ ವಿತರಣೆ ಪೂರ್ವಭಾವಿ ಸಭೆಯಲ್ಲಿ ಸುಮಾ ಅಶೋಕ್ ರೈ

ಪುತ್ತೂರು: ಸುಮಾರು ಹತ್ತು ವರ್ಷಗಳಿಂದ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಡ್ ವತಿಯಿಂದ ಪ್ರತೀ ದೀಪಾವಳಿಯಂದು ವಸ್ತ್ರ ವಿತರಣೆ ಕಾರ್ಯಕ್ರಮನಡೆಸುತ್ತಿದ್ದು ಇದು ಜನರ ಜೊತೆ ಸಹಭೋಜನ ನಡೆಸುವ ಏಕೈಕ ಉದ್ದೇಶವನ್ನು ಹೊಂದಿದ್ದು ಜನತೆಯ ಆಶೀರ್ವಾದವೇ ನಮ್ಮ ಟ್ರಸ್ಟಿಗೆ ಆಧಾರವಾಗಿದೆ ಎಂದು ಟ್ರಸ್ಟಿನಮುಖ್ಯಸ್ಥೆ ಸುಮಾ ಅಶೋಕ್ ರೈ ಹೇಳಿದರು. ನ.13ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ವಸ್ತ್ರ ವಿತರಣಾ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಶನಿವಾರ ಅವರು ಮಾತನಾಡಿದರು. ಹಲವು ವರ್ಷಗಳಿಂದ ಕೋಡಿಂಬಾಡಿ ರೈ ಎಸ್ಟೇಟ್ ನಲ್ಲಿ ನಡೆಯುತ್ತಿದ್ದ […]

ಜನರ ಜೊತೆ ಸಹಭೋಜನಕ್ಕಾಗಿ ವಸ್ತ್ರ ವಿತರಣೆ | ವಸ್ತ್ರ ವಿತರಣೆ ಪೂರ್ವಭಾವಿ ಸಭೆಯಲ್ಲಿ ಸುಮಾ ಅಶೋಕ್ ರೈ Read More »

ಪಡ್ನೂರು ಶ್ರೀ ಜನಾರ್ದನ ಯುವಕ ಮಂಡಲದ ಸುವರ್ಣ ಸಂಭ್ರಮ ‘ಪಡ್ನೂರು ಉತ್ಸವ’  ಉದ್ಘಾಟನೆ

ಪುತ್ತೂರು: ಪಡ್ನೂರು ಹಿ.ಪ್ರಾ ಶಾಲಾ ಜನಾರ್ದನ ರಂಗ ಮಂದಿರದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಶ್ರೀ ಜನಾರ್ದನ ಯುವಕ ಮಂಡಲದ ಸುವರ್ಣ ಮಹೋತ್ಸವ ‘ಪಡ್ನೂರು ಉತ್ಸವ’ಕ್ಕೆ ಶನಿವಾರ ಚಾಲನೆ ನೀಡಲಾಯಿತು. ಬೆಳಿಗ್ಗೆ ಗಣಹೋಮದೊಂದಿಗೆ ಸುವರ್ಣ ಸಂಭ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಭಾರತೆ ಮಾತೆಗೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಸಲ್ಲಿಸಲಾಯಿತು. ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿದ ಡಾ.ಕೃಷ್ಣ ಪ್ರಸಾದ್ ಸರ್ಪಂಗಳ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಜನಾರ್ದನ ಯುವಕ ಮಂಡಲ ಹಲವು ಕಾರ್ಯಕ್ರಮಗಳ ಮೂಲಕ

ಪಡ್ನೂರು ಶ್ರೀ ಜನಾರ್ದನ ಯುವಕ ಮಂಡಲದ ಸುವರ್ಣ ಸಂಭ್ರಮ ‘ಪಡ್ನೂರು ಉತ್ಸವ’  ಉದ್ಘಾಟನೆ Read More »

ಪ್ರಫುಲ್ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಕಬಡ್ಡಿ ತಂಡಕ್ಕೆ ಆಯ್ಕೆ

ಪುತ್ತೂರು: ಇಲ್ಲಿಯ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿ ಪ್ರಫುಲ್ ಯು. ಎಸ್. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕಾಲೇಜಿನ ತೃತೀಯ ವರ್ಷದ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಷಿನ್ ಲರ್ನಿಂಗ್ ವಿಭಾಗದ ವಿದ್ಯಾರ್ಥಿಯಾಗಿರುವ ಪ್ರಫುಲ್ ಎಸ್‌ಐಟಿ ತುಮಕೂರಿನಲ್ಲಿ ನಡೆದ ಆಯ್ಕೆ ಶಿಬಿರದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿ ವಿಶ್ವವಿದ್ಯಾನಿಲಯ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ನ.9 ರಿಂದ 12ರ ವರೆಗೆ  ಆಂದ್ರಪ್ರದೇಶ ಕಾಕಿನಾಡದ ಜವಾಹರ್‌ಲಾಲ್ ನೆಹರೂ ತಾಂತ್ರಿಕ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಸುರಂಪಲೆಮ್ ಆದಿತ್ಯ

ಪ್ರಫುಲ್ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಕಬಡ್ಡಿ ತಂಡಕ್ಕೆ ಆಯ್ಕೆ Read More »

ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಅಂಗಡಿಗಳಲ್ಲಿ ಸರಣಿ ಕಳ್ಳತನ | ನಗದು ದೋಚಿದ ಕಳ್ಳರು

ಉಪ್ಪಿನಂಗಡಿ: 34 ನೆಕ್ಕಿಲಾಡಿ ಹಾಗೂ ಉಪ್ಪಿನಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಅಂಗಡಿ, ಪೆಟ್ರೋಲ್ ಪಂಪ್‌ಗಳಲ್ಲಿ ಸರಣಿ ಕಳ್ಳತನ ನಡೆದ ಘಟನೆ ಶನಿವಾರ ಮುಂಜಾನೆ ಬೆಳಕಿಗೆ ಬಂದಿದೆ. ಗಾಂಧಿಪಾರ್ಕ್ ಬಳಿ ಜಗದೀಶ್ ನಾಯಕ್ ಎಂಬವರಿಗೆ ಸೇರಿದ ಟೈಲ್ಸ್ ಅಂಗಡಿಯ ಶಟರ್‌ನ ಬೀಗ ಮುರಿದು ಒಳನುಗ್ಗಿದ ಕಳ್ಳ ಕ್ಯಾಶ್ ಡ್ರಾವರ್‌ನಲ್ಲಿದ್ದ ಸುಮಾರು 20 ಸಾವಿರದಷ್ಟು ನಗದನ್ನು ಕಳ್ಳರು ಕದ್ದೊಯ್ದಿದ್ದಾರೆ. ಅಲ್ಲೇ ಪಕ್ಕದ ಗುಜಿರಿ ಅಂಗಡಿಗೂ ನುಗ್ಗಿದ ಕಳ್ಳ ಅಲ್ಲಿ ಇದ್ದ ತಾಮ್ರದ ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿ, ಪಕ್ಕದ

ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಅಂಗಡಿಗಳಲ್ಲಿ ಸರಣಿ ಕಳ್ಳತನ | ನಗದು ದೋಚಿದ ಕಳ್ಳರು Read More »

ಕುಮಾರಧಾರದಲ್ಲಿ ಅಪರಿಚಿತ ಮೃತದೇಹ ಪತ್ತೆ

ಸವಣೂರು:  ಸವಣೂರು ಸಮೀಪ ಕುಮಾರಧಾರ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾದ ಘಟನೆ ಶನಿವಾರ ನಡೆದಿದೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಬೆಳ್ಳಾರೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಕುಮಾರಧಾರದಲ್ಲಿ ಅಪರಿಚಿತ ಮೃತದೇಹ ಪತ್ತೆ Read More »

ಮಾಣಿ- ಸಂಪಾಜೆ ಚತುಷ್ಪಥ ರಸ್ತೆ ಕಾಮಗಾರಿಗೆ ಶೀಘ್ರವೇ ಕೇಂದ್ರದ ಅಸ್ತು | 2200 ಕೋಟಿ ರೂ ಪ್ರಸ್ತಾವನೆ ಸಲ್ಲಿಕೆ- ಶಾಸಕ ಅಶೋಕ್ ರೈ

ಪುತ್ತೂರು: ಮಾಣಿ-ಸಂಪಾಜೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ೨೨೦೦ ಕೋಟಿ ರೂ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು ಮುಂದಿನ ನಾಲ್ಕು ವರ್ಷದೊಳಗೆ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳಲಿದ್ದು ಈ ಭಾಗದ ಜನತೆಯ ಬಹುವರ್ಷಗಳ ಕನಸು ನನಸಾಗುವ ಕಾಲ ಬಂದಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ಮಾಣಿಯಿಂದ ಸಂಪಾಜೆ ತನಕ 76 ಕಿ ಮೀ ರಸ್ತೆಯು ಮುಂದಿನ ದಿನಗಳಲ್ಲಿ ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಲಿದೆ. 76 ಕಿ ಮಿ ರಸ್ತೆ ಕಾಮಗಾರಿಗೆ ಮೊದಲ ಹಂತದಲ್ಲಿ 1100  ಕೋಟಿ ರೂ ಮತ್ತು ಎರಡನೇ

ಮಾಣಿ- ಸಂಪಾಜೆ ಚತುಷ್ಪಥ ರಸ್ತೆ ಕಾಮಗಾರಿಗೆ ಶೀಘ್ರವೇ ಕೇಂದ್ರದ ಅಸ್ತು | 2200 ಕೋಟಿ ರೂ ಪ್ರಸ್ತಾವನೆ ಸಲ್ಲಿಕೆ- ಶಾಸಕ ಅಶೋಕ್ ರೈ Read More »

ರೈಲ್ವೇ ಖಾಸಗೀಕರಣ ವಿರುದ್ಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ಪುತ್ತೂರು: ದೇಶದ ಆರ್ಥಿಕತೆಯ ಜೀವಾಳ, ಜನರ ಜೀವನಾಡಿ ರೈಲ್ವೇ ಖಾಸಗೀಕರಣದ ವಿರುದ್ಧ ದೇಶದಾದ್ಯಂತ ಎಲ್ಲಾ ರೈಲ್ವೇ ನಿಲ್ದಾಣಗಳ ಎದುರು ಬೃಹತ್ ಪ್ರತಿಭಟನೆ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್, ದ.ಕ.ಜಿಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ, ವಿವಿಧ ರೈತ ಸಂಘಟನೆಗಳ ಒಕ್ಕೂಟ ಹಾಗೂ ವಿದ್ಯಾರ್ಥಿ ಯುವಜನ ಮಹಿಳಾ ದಲಿತ ಆದಿವಾಸಿ ಹಾಗೂ ಜನಪರ ಸಂಘಟನೆಗಳ ವೇದಿಕೆ ಆಶ್ರಯದಲ್ಲಿ ಬೃಹತ್ ಪ್ರತಿಭಟನಾ ಸಭೆ ಶುಕ್ರವಾರ ಪುತ್ತೂರಿನ ರೈಲ್ವೇ ನಿಲ್ದಾಣದ ಮುಂಭಾಗ ನಡೆಸಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ಕೆಪಿಸಿಸಿ ಸಂಯೋಜಕ

ರೈಲ್ವೇ ಖಾಸಗೀಕರಣ ವಿರುದ್ಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ Read More »

ರಾಜ್ಯಮಟ್ಟದ ದಸರಾ ಸಿ.ಎಂ. ಕಪ್ – ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪವಿತ್ರ ಜಿ. ಗೆ ಚಿನ್ನದ ಪದಕ

ಪುತ್ತೂರು: ಇಲ್ಲಿಯ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಅಂತಿಮ ವರ್ಷದ ಎಂಬಿಎ ವಿಭಾಗದ ವಿದ್ಯಾರ್ಥಿನಿ ಪವಿತ್ರ.ಜಿ ರಾಜ್ಯ ಮಟ್ಟದ ದಸರಾ ಸಿ.ಎಂ ಕಪ್ ಅತ್ಪೆಟಿಕ್ ಸ್ಪರ್ಧೆ-2023 ರಲ್ಲಿ ಟ್ರಿಪಲ್‌ಜಂಪ್ ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಅಸೋಸಿಯೇಶನ್ ಮತ್ತು ಮೈಸೂರು ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ 12.90 ಮೀಟರ್ ದೂರ ಜಿಗಿದು ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.

ರಾಜ್ಯಮಟ್ಟದ ದಸರಾ ಸಿ.ಎಂ. ಕಪ್ – ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪವಿತ್ರ ಜಿ. ಗೆ ಚಿನ್ನದ ಪದಕ Read More »

ನಾಳೆ ಯಾವ್ಯಾವ ಪ್ರದೇಶದಲ್ಲಿ ಕರೆಂಟಿಲ್ಲ | ಇಲ್ಲಿದೆ ಡಿಟೈಲ್ಸ್

ಪುತ್ತೂರು: ನಿರ್ವಹಣೆ ಮತ್ತು ತುರ್ತು ಕಾಮಗಾರಿ ಹಿನ್ನಲೆಯಲ್ಲಿ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಸರಬರಾಜಾಗುವ ದರ್ಬೆ ಫೀಡರ್‌ನಲ್ಲಿ ನ.4 ಶನಿವಾರ ವಿದ್ಯುತ್ ನಿಲುಗಡೆ ಮಾಡಲಾಗುವುದು. ಪೂರ್ವಾಹ್ನ 10 ರಿಂದ ಅಪರಾಹ್ನ 5ರ ವರೆಗೆ ಈ ಕೆಳಗಿನ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು. 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರ ಹೊರಡುವ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಹಾರಾಡಿ, ಚಿಕ್ಕಪುತ್ತೂರು, ನೆಲ್ಲಿಕಟ್ಟೆ, ಕೆಎಸ್ಆರ್‌ಟಿಸಿ ಬಸ್ ಸ್ಟ್ಯಾಂಡ್, ಕಲ್ಲಾರೆ, ದರ್ಬೆ ಪರಿಸರದಲ್ಲಿ ವಿದ್ಯುತ್ ನಿಲುಗಡೆಗೊಳ್ಳಲಿದೆ. ಈ ಪ್ರದೇಶದ

ನಾಳೆ ಯಾವ್ಯಾವ ಪ್ರದೇಶದಲ್ಲಿ ಕರೆಂಟಿಲ್ಲ | ಇಲ್ಲಿದೆ ಡಿಟೈಲ್ಸ್ Read More »

ಬಡವರ ಸೇವೆಗೆಂದೇ ಟ್ರಸ್ಟ್ ಆರಂಭಿಸಲಾಗಿದೆ | ರೈ ಚಾರಿಟೇಬಲ್‌ಟ್ರಸ್ಟ್ ಫಲಾನುಭವಿಗಳ ಸಭೆಯಲ್ಲಿ ನಿಹಾಲ್ ಶೆಟ್ಟಿ

ಪುತ್ತೂರು: ಕಳೆದ ಹತ್ತು ವರ್ಷಗಳ ಹಿಂದೆ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟನ್ನು ಸ್ತಾಪನೆ ಮಾಡಿದ್ದೇ ಬಡವರ ಸೇವೆಗಾಗಿ. ಇದರಲ್ಲಿ ಯಾವುದೇ ರಾಜಕೀಯವಿಲ್ಲ, ಅಶೋಕ್ ರೈಯವರು ಶಾಸಕರಾಗುವ ಮೊದಲೇ ಟ್ರಸ್ಟ್‌ನಿಂದ ಸಮಾಜ ಸೇವೆ ನಡೆಯುತ್ತಲೇ ಇದೆ ಎಂದು ಟ್ರಸ್ಟ್‌ನ ಪ್ರಮುಖರಾದ ನಿಹಾಲ್ ಶೆಟ್ಟಿ ಹೇಳಿದರು. ಅವರು ಬನ್ನೂರು ನವೋದಯ ಯುವಕ ಮಂಡಲದ ಸಭಾಂಗಣದಲ್ಲಿ ನಡೆದ ರೈ ಚಾರಿಟೇಬಲ್ ಟ್ರಸ್ಟ್ ಫಲಾನುಭವಿಗಳ ಸಭೆಯಲ್ಲಿ ಮಾತನಾಡಿದರು. ಕಳೆದ ಹತ್ತು ವರ್ಷಗಳಿಂದ ವಿವಿಧ ಸೇವೆಗಳನ್ನು ಟ್ರಸ್ಟ್ ನೀಡುತ್ತಾ ಬಂದಿದೆ. ಬಡ

ಬಡವರ ಸೇವೆಗೆಂದೇ ಟ್ರಸ್ಟ್ ಆರಂಭಿಸಲಾಗಿದೆ | ರೈ ಚಾರಿಟೇಬಲ್‌ಟ್ರಸ್ಟ್ ಫಲಾನುಭವಿಗಳ ಸಭೆಯಲ್ಲಿ ನಿಹಾಲ್ ಶೆಟ್ಟಿ Read More »

error: Content is protected !!
Scroll to Top