ಪುತ್ತೂರು

ಕೃಷಿಕ ಸಮಸ್ಯೆ ಪರಿಹರಿಸಲು ಎಐ ಟೆಕ್ನಾಲಜಿ! | ಮರಹತ್ತುವ ಯಂತ್ರ ಅಭಿವೃದ್ಧಿಪಡಿಸಿದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು

ಪುತ್ತೂರು: ರೋಬೋಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ಮರಹತ್ತುವ ಯಂತ್ರವನ್ನು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆರ್ಟಿಫೀಶಿಯನ್ ಇಂಟೆಲಿಜೆನ್ಸ್ ಎಂಡ್ ಮೆಷಿನ್ ಲರ್ನಿಂಗ್ ವಿಭಾಗದ  ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ಆಧುನಿಕ ಜೀವನ ಪದ್ದತಿಗೆ ಮಾರುಹೋಗಿರುವ ಯುವ ಜನತೆ ಕೃಷಿ ಕ್ಷೇತ್ರವನ್ನು ಕಡೆಗಣಿಸಿದೆ. ಇದರಿಂದಾಗಿ ಕೆಲವು ವಿಷಯಗಳಲ್ಲಿ ನುರಿತ ಕೆಲಸಗಾರರೇ ಸಿಗುತ್ತಿಲ್ಲ. ಅಡಿಕೆಗೆ ಔಷದ ಸಿಂಪಡಣೆ ಅಡಿಕೆ ಕೊಯ್ಲು, ತೆಂಗಿನಕಾಯಿ ಕೊಯ್ಲು ಮುಂತಾದ ನಾಜೂಕಿನ ಕೆಲಸಗಳನ್ನು ಬೆರಳೆಣಿಯಷ್ಟು ಮಂದಿಯಷ್ಟೇ ಮಾಡುತ್ತಿದ್ದಾರೆ. ಈ ಸಮಸ್ಯೆಗಳನ್ನು ಮನಗಂಡು ಪುತ್ತೂರಿನ […]

ಕೃಷಿಕ ಸಮಸ್ಯೆ ಪರಿಹರಿಸಲು ಎಐ ಟೆಕ್ನಾಲಜಿ! | ಮರಹತ್ತುವ ಯಂತ್ರ ಅಭಿವೃದ್ಧಿಪಡಿಸಿದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು Read More »

ವಿಷ ಸೇವಿಸಿ ಆತ್ಮಹತ್ಯೆ!

ಕಡಬ: ಹಿರಿಯ ನಾಗರಿಕೆಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಬೈದ್ರಿಜಾಲ್ ನಲ್ಲಿ ನಡೆದಿದೆ. ಬೈದ್ರಿಜಾಲ್ ನಿವಾಸಿ ಬಾಬು ಗೌಡರ ಪತ್ನಿ ಶಿವಮ್ಮ (78) ಆತ್ಮಹತ್ಯೆ ಮಾಡಿಕೊಂಡವರು. ಮಂಗಳವಾರ ಸಂಜೆ ಮನೆಯಲ್ಲಿ ವಿಷ ಪದಾರ್ಥ ಸೇವಿಸಿದ್ದರು. ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಯಿತು.  ಅಲ್ಲಿ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ವಿಷ ಸೇವಿಸಿ ಆತ್ಮಹತ್ಯೆ! Read More »

ಕುಂಬ್ರದ ಟಿಪ್ಪರ್ ಚಾಲಕನ ಕೊಲೆ ಪ್ರಕರಣ | ಮೂರನೇ ಆರೋಪಿ ಬಂಧನ!

ಪುತ್ತೂರು: ಟಿಪ್ಪರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಬಾಗಲಕೋಟೆ ಬಾದಾಮಿ ಡಾಣಕಶಿರೂರು ಮೂಲದ ಹನುಮಂತ ಮಾದರ (22) ಎಂಬವರ ಕೊಲೆ ಪ್ರಕರಣದ ಮೂರನೇ ಆರೋಪಿ ದುರ್ಗಪ್ಪ ಮಾದರ (42) ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಅಪಹರಣಕ್ಕೆ ಬಳಸಿದ್ದ ವಾಹನ ಮತ್ತು ಕೊಲೆ ಮಾಡಲು ಬಳಸಲಾಗಿದ್ದ ರಾಡ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಗಲಕೋಟೆ ಡಾಣಕಶಿರೂರು ರೇಣವ್ವ ಮತ್ತು ಸುರೇಶರವರ ಮಗ ಹನುಮಂತ ಮಾದರ(22) ಅವರನ್ನು ಕುಂಬ್ರದಿಂದ ಮೂವರು ಸೇರಿ ವಾಹನವೊಂದರಲ್ಲಿ ಕರೆದೊಯ್ದು ಕೊಲೆ ಮಾಡಿ ಆಗುಂಬೆ ಘಾಟ್

ಕುಂಬ್ರದ ಟಿಪ್ಪರ್ ಚಾಲಕನ ಕೊಲೆ ಪ್ರಕರಣ | ಮೂರನೇ ಆರೋಪಿ ಬಂಧನ! Read More »

ವಾರ್ಷಿಕೋತ್ಸವ ಪ್ರಯುಕ್ತ ಪೋಷಕರ, ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ

ಕಾಣಿಯೂರು: ಚಾರ್ವಾಕ ಸ.ಉ. ಹಿ.ಪ್ರಾ. ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಶಾಲಾ ಪೋಷಕರ ಹಾಗೂ ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ ನಡೆಯಿತು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಮಣ್ಣ ಗೌಡ ಪೊನ್ನೆತ್ತಡಿ, ಉಪಾಧ್ಯಕ್ಷೆ ಸಾರಿಕಾ ದೇವರತ್ತಿಮಾರು, ಶಾಲಾ ಮುಖ್ಯಗುರು ಪಾರ್ವತಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಖರ ಎರ್ಕ, ಕಾರ್ಯದರ್ಶಿ ಪರಮೇಶ್ವರ ಗೌಡ ಇಡ್ಯಡ್ಕ ಮೊದಲಾದವರು ಉಪಸ್ಥಿತರಿದ್ದರು. ಪೋಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದರು.

ವಾರ್ಷಿಕೋತ್ಸವ ಪ್ರಯುಕ್ತ ಪೋಷಕರ, ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ Read More »

ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಶ್ರಮದಾನ

ಉಪ್ಪಿನಂಗಡಿ: ಉಪ್ಪಿನಂಗಡಿ ಶೌರ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಬಜತ್ತೂರು ಶೌರ್ಯ ವಿಪತ್ತು ನಿರ್ವಹಣೆ ತಂಡದಿಂದ ಗ್ರಾಮ ಪಂಚಾಯಿತಿ ನಿವೇಶನದಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಯಿತು. ಪಂಚಾಯತ್ ನಿವೇಶನ ಜಾಗದಲ್ಲಿ ಗಿಡ ಗಂಟೆಗಳನ್ನು ಕಡಿದು ಸ್ವಚ್ಛತಾ ಕಾರ್ಯದ ಜತೆಗೆ ಸಾಮಗ್ರಿಗಳನ್ನು ಇಡಲು ಶೆಡ್ ನಿರ್ಮಿಸಲಾಯಿತು. ಶ್ರಮದಾನದಲ್ಲಿ ಶೌರ್ಯ ತಂಡದ ಸದಸ್ಯರು ಭಾಗಿಯಾದರು.

ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಶ್ರಮದಾನ Read More »

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿದ ವೈಭವದ ಲಕ್ಷದೀಪೋತ್ಸವ | ಬೆಳಕಿನ ಚಿತ್ತಾರ ಮೂಡಿಸಿದ ಲಕ್ಷಾಂತರ ಹಣತೆ ದೀಪಗಳು

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ ಮಂಗಳವಾರ ರಾತ್ರಿ ವೈಭವದಿಂದ ನಡೆಯಿತು. ದೇವಸ್ಥಾನದ ರಥಬೀದಿಯಲ್ಲಿ ನೂರಾರು  ಭಕ್ತಾದಿಗಳಿಂದ ಬೆಳಗಿದ ಲಕ್ಷಾಂತರ ಹಣತೆ ದೀಪಗಳು ಇದಕ್ಕೆ ಸಾಕ್ಷಿಯಾದವು. ದೀಪೋತ್ಸವದ ಅಂಗವಾಗಿ ಬೆಳಿಗ್ಗೆ ಶ್ರೀ ದೇವಸ್ಥಾನದ ಒಳಾಂಗಣದಲ್ಲಿ ಲಕ್ಷ ಬಿಲ್ವಾರ್ಚನೆ ಸೇವೆ ನಡೆದು ಮಧ್ಯಾಹ್ನ ಮಹಾಪೂಜೆ ನಡೆಯಿತು. ಸಂಜೆ ಭಕ್ತಾದಿಗಳಿಂದ ಭಜನಾ ಸೇವೆ ನಡೆಯಿತು. ಸಂಜೆ ಹಿಂದೂ ಧಾರ್ಮಿಕ ಶಿಕ್ಷಣ ಯೋಜನೆಯ ವಿದ್ಯಾರ್ಥಿಗಳಿಂದ ದೀಪ ನಮನ ಹಾಗೂ ಧಾರ್ಮಿಕ ಸತ್ಸಂಗ ನಡೆಯಿತು. ಸಂಜೆ 7 ಗಂಟೆಗೆ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿದ ವೈಭವದ ಲಕ್ಷದೀಪೋತ್ಸವ | ಬೆಳಕಿನ ಚಿತ್ತಾರ ಮೂಡಿಸಿದ ಲಕ್ಷಾಂತರ ಹಣತೆ ದೀಪಗಳು Read More »

ರಾಷ್ಟ್ರೀಯ ಮಹಿಳಾ ಕಬಡ್ಡಿಗೆ ಕಾಣಿಯೂರಿನ ಸೌಮ್ಯ ಪೂಜಾರಿ ಆಯ್ಕೆ

ಪುತ್ತೂರು : ಪಂಜಾಬ್‌ನ ಲ್ಯಾಮ್ರನ್ ಟೆಕ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ 70ನೇ ಸೀನಿಯ‌ರ್ ರಾಷ್ಟ್ರೀಯ ಮಹಿಳೆಯರ ಕಬಡ್ಡಿ ಚಾಂಪಿಯನ್‌ಶಿಪ್  ಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಕಾಣಿಯೂರಿನ ಸೌಮ್ಯ ಪೂಜಾರಿ ಆಯ್ಕೆಯಾಗಿದ್ದಾರೆ. ಸೌಮ್ಯ ಪೂಜಾರಿ ಕಾಣಿಯೂರು ಅಬೀರ ರಾಮಣ್ಣ ಪೂಜಾರಿ ಮತ್ತು ಲಲಿತಾ ದಂಪತಿ ಪುತ್ರಿ ಹಾಗೂ ಪುತ್ತೂರಿನ ಪೊಲೀಸ್‌ ಇಲಾಖೆಯ ಸಿಬ್ಬಂದಿ ಸಂತೋಷ್ ಕುಮಾರ್ ಅವರ ಸಹೋದರಿ. ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರಗತಿ ಆಂಗ್ಲಮಾದ್ಯಮ ಶಾಲೆ ಹಾಗೂ ಆಳ್ವಾಸ್‌ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿನಿಯಾಗಿರುವ ಸೌಮ್ಯಾ ಅವರು

ರಾಷ್ಟ್ರೀಯ ಮಹಿಳಾ ಕಬಡ್ಡಿಗೆ ಕಾಣಿಯೂರಿನ ಸೌಮ್ಯ ಪೂಜಾರಿ ಆಯ್ಕೆ Read More »

ಕಲ್ಲಿನ ಕೋರೆಯಲ್ಲಿ ಕಾರ್ಮಿಕ ಮೃತ್ಯು!

ವಿಟ್ಲ: ಕಾರ್ಮಿಕನೋರ್ವ ಕಲ್ಲಿನ ಕೋರೆಯಲ್ಲಿ ಜಾರಿ ಬಿದ್ದು ಮೃತಪಟ್ಟ ಘಟನೆ ವಿಟ್ಲ ಸಮೀಪದ ಕುದ್ದುಪದವಿನಲ್ಲಿ ನಡೆದಿದೆ. ಉಕ್ಕುಡ ದರ್ಬೆ ನಿವಾಸಿ ಕಾರ್ತಿಕ್ (24) ಮೃತಪಟ್ಟ ದುರ್ದೈವಿ. ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮತ್ತಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರಿಗೆ ಈಜು ಬರುತ್ತಿರಲಿಲ್ಲ ಎಂದು ಹೇಳಲಾಗಿದೆ.

ಕಲ್ಲಿನ ಕೋರೆಯಲ್ಲಿ ಕಾರ್ಮಿಕ ಮೃತ್ಯು! Read More »

ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕ ಸಂಸ್ಥೆಯಿಂದ ‘ಕಲ್ಪವಿಕಾಸ’ ಯೋಜನೆ ಆರಂಭ

ಪುತ್ತೂರು: ತೆಂಗಿನ ಮರದ ಮೌಲ್ಯವರ್ಧನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆ ‘ಕಲ್ಪವಿಕಾಸ’ ಯೋಜನೆಯನ್ನು ಆರಂಭಿಸಿದೆ ಎಂದು ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆ ಪುತ್ತೂರು ಶಾಖಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ತಿಳಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ತೆಂಗು ಬೆಳೆ ಪ್ರಮುಖ ಸ್ಥಾನಗಳನ್ನು ಪಡೆದಿದ್ದರೂ ಪ್ರಾಕೃತಿಕ ವಿಕೋಪ, ರೋಗಗಳು ಮುಂತಾದವುಗಳಿಗೆ ತುತ್ತಾಗಿ ಹಾನಿಗೊಳಗಾದ ತೆಂಗಿನ ಮರಗಳಿಗೆ ನ್ಯಾಯಯುತ ಪರಿಹಾರ ಸಿಗದೆ ರೈತ ಕಂಗೆಟ್ಟಿದ್ದಾನೆ.

ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕ ಸಂಸ್ಥೆಯಿಂದ ‘ಕಲ್ಪವಿಕಾಸ’ ಯೋಜನೆ ಆರಂಭ Read More »

ದಶಮಾನೋತ್ಸವ ಹೊಸ್ತಿಲಲ್ಲಿರುವ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯ | ಡಿ. 16: ‘ಅಂತರ್ಮನಸ್ಸಿನ ವಿಸ್ಮಯ ಶಕ್ತಿಗಳ’ ಕುರಿತು ವಿಶೇಷ ಕಾರ್ಯಕ್ರಮ

ಪುತ್ತೂರು: ದಶಮಾನೋತ್ಸವ ಹೊಸ್ತಿಲಲ್ಲಿರುವ ಬಪ್ಪಳಿಗೆ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ ‘ದಶಾಂಬಿಕೋತ್ಸವ’ ಕಾರ್ಯಕ್ರಮದ ಅಂಗವಾಗಿ ‘ಅಂತರ್ಮನಸ್ಸಿನ ವಿಸ್ಮಯ ಶಕ್ತಿಗಳ’ ಕುರಿತು ವಿಶೇಷ ಕಾರ್ಯಕ್ರಮ ಡಿ. 16 ರಂದು ಹಮ್ಮಿಕೊಳ್ಳಲಾಗಿದೆ ಎಂದು ದಶಾಂಬಿಕೋತ್ಸವ ಸಮಿತಿ ಅಧ್ಯಕ್ಷ, ನ್ಯಾಯವಾದಿ ಮಹೇಶ್ ಕಜೆ ತಿಳಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಇಂತಹಾ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಸಮ್ಮೋಹಿನಿ ತಜ್ಞ, ಕುಂಡಲಿನಿ ಯೋಗ ಗುರು ಬೆಂಗಳೂರಿನ ಡಾ.ರಾಮಚಂದ್ರ ಗುರೂಜಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು. ಡಾ. ರಾಮಚಂದ್ರ ಗುರೂಜಿಯವರು ಅಂತರಾಷ್ಟ್ರೀಯ

ದಶಮಾನೋತ್ಸವ ಹೊಸ್ತಿಲಲ್ಲಿರುವ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯ | ಡಿ. 16: ‘ಅಂತರ್ಮನಸ್ಸಿನ ವಿಸ್ಮಯ ಶಕ್ತಿಗಳ’ ಕುರಿತು ವಿಶೇಷ ಕಾರ್ಯಕ್ರಮ Read More »

error: Content is protected !!
Scroll to Top