ಪುತ್ತೂರು

ತಲೆಮರೆಸಿಕೊಂಡಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳಿಗೆ ಶೋಧ | ಮಾಹಿತಿ ಇದ್ದಲ್ಲಿ ತಿಳಿಸುವಂತೆ ಎನ್‍ಐಎ ಮನವಿ

ಸುಳ್ಯ: ಬೆಳ್ಳಾರೆ ಪ್ರವೀಣ್‍ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧಿಸಿ ತಲೆ ಮರೆಸಿಕೊಂಡಿದ್ದ ಐವರು ಆರೋಪಿಗಳು ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಎನ್‍ಐಎ ಮನವಿ ಮಾಡಿದೆ. ಆರೋಪಿಗಳಾದ ಎಂ.ಡಿ.ಮುಸ್ತಫ, ಮಸೂದ್ ಅಗ್ನಾಡಿ, ಮಸೂದ್ ಕೆ.ಎ, ಮೊಹಮ್ಮದ್ ಶರೀಫ್ ಕೊಡಾಜೆ, ಉಮ್ಮರ್ ಆರ್. ಉಮ್ಮರ್ ಫಾರೂಕ್, ಅಬೂಬಕ್ಕರ್ ಸಿದ್ದಿಕ್ ರಾಷ್ಟ್ರೀಯ ತನಿಖಾ ತಂಡದ ವಾಂಟೆಡ್ ಲಿಸ್ಟ್ ಪಟ್ಟಿಯಲ್ಲಿದ್ದಾರೆ. ಆರೋಪಿಗಳು ಕಂಡು ಬಂದಲ್ಲಿ, ಇರುವಿಕೆ ಕುರಿತು ಮಾಹಿತಿ ಇದ್ದಲ್ಲಿ ವಾಟ್ಸಾಪ್ ಸಂಖ್ಯೆ 9497715294 ಸಂಪರ್ಕಿಸುವಂತೆ ಸಾರ್ವಜನಿಕರನ್ನು ಎನ್ಐಎ ವಿನಂತಿಸಿದೆ. ಮಾಹಿತಿ ನೀಡಿದವರಿಗೆ ಸೂಕ್ತ […]

ತಲೆಮರೆಸಿಕೊಂಡಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳಿಗೆ ಶೋಧ | ಮಾಹಿತಿ ಇದ್ದಲ್ಲಿ ತಿಳಿಸುವಂತೆ ಎನ್‍ಐಎ ಮನವಿ Read More »

ಕೆಎಸ್‌ಆರ್‌ಟಿಸಿ ಯ ನಿವೃತ್ತ ಟಿಸಿ ಶಾಂತರಾಮ ವಿಟ್ಲ ಆತ್ಮಹತ್ಯೆ

ಪುತ್ತೂರು: ಕೆಎಸ್‌ಆರ್‌ಟಿಸಿ ನಿವೃತ್ತ ಟಿಸಿ, ಭಾರತೀಯ ಮಜ್ದೂರು ಸಂಘದ ಮುಖಂಡ ಶಾಂತರಾಮ ವಿಟ್ಲ ಪತ್ತೂರಿನ ಬಪ್ಪಳಿಗೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಂತರಾಮ ವಿಟ್ಲ ಅವರು ಜನಪರ ಕಾರ್ಯಗಳಲ್ಲಿ ತಮ್ಮನ್ನು ಗುರುತಿಸಿಕೊಂಡವರು. ಹಲವಾರು ಸಮಾಜ ಮುಖಿ ಕಾರ್ಯಗಳ ಮೂಲಕ ಅಶಕ್ತರ ಬಾಳಿಗೆ ಬೆಳಕಾಗಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ ಪ್ರಮೀಶಾ ಎಸ್‌ ಶೆಟ್ಟಿ, ಮಕ್ಕಳಾದ ಶ್ರೇಯಾ ಹಾಗೂ ಸ್ನೇಹಾ ಶೆಟ್ಟಿ, ಕುಟುಂಬಸ್ಥರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಕೆಎಸ್‌ಆರ್‌ಟಿಸಿ ಯ ನಿವೃತ್ತ ಟಿಸಿ ಶಾಂತರಾಮ ವಿಟ್ಲ ಆತ್ಮಹತ್ಯೆ Read More »

ನಗರಸಭೆ ಉಪ ಚುನಾವಣೆ : ಕಾಂಗ್ರೇಸ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಪುತ್ತೂರು : ಪುತ್ತೂರು ನಗರಸಭೆಯಲ್ಲಿ ತೆರವಾದ ಎರಡು ಸ್ಥಾನಗಳಿಗೆ ಡಿ.27 ರಂದು ನಡೆಯುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಶುಕ್ರವಾರ ಕಾಂಗ್ರೇಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.ನಗರಸಭೆಯ ವಾರ್ಡ್ ನಂ.1ರ ಸ್ಥಾನಕ್ಕೆ ದಿನೇಶ್ ಶೇವಿರೆ ಹಾಗೂ ವಾರ್ಡ್ 11ರ ಸ್ಥಾನಕ್ಕೆ ದಾಮೋದರ ಭಂಡಾರ್ಕರ್ ನಾಮಪತ್ರ ಸಲ್ಲಿಸಿದರು. ಅಭ್ಯರ್ಥಿಗಳು ಹಾಗೂ ಕಾಂಗ್ರೇನ ಮುಖಂಡರು ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ವೆಂಕಟರಮಣ ದೇವಸ್ಥಾನ, ಪುತ್ತೂರಿನ ಕೇಂದ್ರ ಮಸೀದಿ ಹಾಗೂ ಚರ್ಚ್‍ ನಲ್ಲಿ ಪ್ರಾರ್ಥಿಸಿದ ನಂತರ ನಗರಸಭೆಗೆ

ನಗರಸಭೆ ಉಪ ಚುನಾವಣೆ : ಕಾಂಗ್ರೇಸ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ Read More »

ತಾಲೂಕು ಭಜನಾ ಪರಿಷತ್‌ ಗೆ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಲೋಕೇಶ್‍ ಬೆತ್ತೋಡಿ, ಕಾಯ೯ದಶಿ೯ಯಾಗಿ ಗೋಪಾಲಕೃಷ್ಣ ಪಾಟಾಳಿ

ಪುತ್ತೂರು: ಶ್ರೀ ಧಮ೯ಸ್ಥಳ ಮಂಜುನಾಥೇಶ್ವರ ಪುತ್ತೂರು ತಾಲೂಕು ಭಜನಾ ಪರಿಷತ್‌ನ ನೂತನ ಅಧ್ಯಕ್ಷರಾಗಿ ಲೋಕೇಶ್‌ ಬೆತ್ತೋಡಿ, ಉಪಾಧ್ಯಕ್ಷರಾಗಿ ದಿನೇಶ್‌ ಸಾಲಿಯಾನ್, ಗಂಗಾಧರ್‌ ರೈ, ಕಾಯ೯ದಶಿ೯ಯಾಗಿ ಗೋಪಾಲಕೃಷ್ಣ ಪಾಟಾಳಿ, ಜೊತೆಕಾಯ೯ದಶಿ೯ಯಾಗಿ ಸುಜಯ ಹಾಗೂ ಕೋಶಾಧಿಕಾರಿಯಾಗಿ ಸುದಾಕರ್‌ ಕುಲಾಲ್ ಅವರನ್ನು ಆಯ್ಕೆ ಮಾಡಲಾಯಿತು ಪುತ್ತೂರು ಯೋಜನಾ ಕಚೇರಿಯಲ್ಲಿ ಭಜನಾ ಪರಿಷತ್‌ ಅಧ್ಯಕ್ಷ ಸುಬ್ಬಯ್ಯ ಅವರ ನೇತೃತ್ವದಲ್ಲಿ ಶ್ರೀ ಧಮ೯ಸ್ಥಳ ಮಂಜುನಾಥೇಶ್ವರ ಪುತ್ತೂರು ತಾಲೂಕು ಭಜನಾ ಪರಿಷತ್‌ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪುತ್ತೂರು ತಾಲೂಕಿನಲ್ಲಿ 6 ವಷ೯ಗಳಿಂದ ಭಜನಾಪರಿಷತ್‌ನ ಪದಾಧಿಕಾರಿಗಳ

ತಾಲೂಕು ಭಜನಾ ಪರಿಷತ್‌ ಗೆ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಲೋಕೇಶ್‍ ಬೆತ್ತೋಡಿ, ಕಾಯ೯ದಶಿ೯ಯಾಗಿ ಗೋಪಾಲಕೃಷ್ಣ ಪಾಟಾಳಿ Read More »

ಕಾನೂನುಬಾಹಿರ ಮರಳು ದಂಧೆಗೆ ಹಾಕಬೇಕಾಗಿದೆ ಕಡಿವಾಣ | ನಾನ್ ಸಿಆರ್ ಝೆಡ್ ಮರಳು ಗುತ್ತಿಗೆದಾರರ ಸಂಘದ ಪತ್ರಿಕಾಗೋಷ್ಠಿಯಲ್ಲಿ ದಿನೇಶ್ ಮೆದು

ಪುತ್ತೂರು: ದ.ಕ.ಜಿಲ್ಲೆಯಲ್ಲಿ ಮರಳು ಕೊರತೆಯಿರುವ ಕುರಿತು ವರದಿಯಾಗುತ್ತಿದ್ದು, ಸಿಆರ್ ಝೆಡ್ ನ ಕಾನೂನು ತೊಡಕಿನಿಂದ ಮರಳುಗಾರಿಕೆ ನಿಂತಿದೆ. ಆದರೆ ನಾನ್ ಸಿಆರ್‍ಝೆಡ್ ನಿಂದ ದ.ಕ.ಜಿಲ್ಲೆಯಲ್ಲಿ ಮರಳಿನ ಕೊರತೆಯಿಲ್ಲ. ಸಾರ್ವಜನಿಕರಿಗೆ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ನಾನ್‍ ಸಿಆರ್‍ ಝೆಡ್ ಮರಳು ಗುತ್ತಿಗೆದಾರರ ಸಂಘದ ದ.ಕ.ಜಿಲ್ಲಾ ಅಧ್ಯಕ್ಷ ದಿನೇಶ್‍ ಮೆದು ತಿಳಿಸಿದ್ದಾರೆ. ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದ.ಕ.ಜಿಲ್ಲೆಯಲ್ಲಿ ನಾನ್‍ ಸಿಆರ್ ಝೆಡ್ ಮರಳು ಗುತ್ತಿಗೆದಾರರ ಸಂಘ ಕಾನೂನಾತ್ಮಕವಾಗಿ ಮರಳು ಮಾರಾಟ ಮಾಡುತ್ತಿದ್ದು, ಸರಕಾರಕ್ಕೆ

ಕಾನೂನುಬಾಹಿರ ಮರಳು ದಂಧೆಗೆ ಹಾಕಬೇಕಾಗಿದೆ ಕಡಿವಾಣ | ನಾನ್ ಸಿಆರ್ ಝೆಡ್ ಮರಳು ಗುತ್ತಿಗೆದಾರರ ಸಂಘದ ಪತ್ರಿಕಾಗೋಷ್ಠಿಯಲ್ಲಿ ದಿನೇಶ್ ಮೆದು Read More »

ಎಲಿಮಲೆ ಶಾಲಾ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಸುಳ್ಯ : ಹತ್ತನೇ ತರಗತಿ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನಲ್ಲಿ ಶುಕ್ರವಾರ ನಡೆದಿದೆ. ಸುಳ್ಯ ತಾಲೂಕಿನ ಎಲಿಮಲೆ ಸರಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಶಮಂತ್ ಆತ್ಮಹತ್ಯೆ ಮಾಡಿಕೊಂಡಾತ. ಮೂಲತಃ ಚೊಕ್ಕಾಡಿಯವರಾಗಿರುವ, ಪ್ರಸ್ತುತ ನೆಲ್ಲೂರು ಕೆಮ್ರಾಜೆ ಗ್ರಾಮದ ಹೊಟ್ಟುಚೋಡಿಯಲ್ಲಿ ನೆಲೆಸಿರುವ ದಿ| ವಾಸುದೇವ ಎಂಬವರ ಪುತ್ರ ಶಮಂತ್ ಶುಕ್ರವಾರ ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಮನೆಯಿಂದ ಹೊರಟು ಬಂದು ಶಾಲಾ ಆವರಣದ ಶೌಚಾಲಯದ ಹಿಂಬದಿ ಗಿಡವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಎಲಿಮಲೆ ಶಾಲಾ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ Read More »

ನಗರಸಭೆ ಉಪಚುನಾವಣೆ | ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ | ಮಗ್ಗುಲ ಬದಲಾಯಿಸಿದ ಪುತ್ತಿಲ ಪರಿವಾರದ ಪ್ರಮುಖ ಡಾ.ಸುರೇಶ್‍ ಪುತ್ತೂರಾಯ

ಪುತ್ತೂರು: ಪುತ್ತಿಲ ಪರಿವಾರದಲ್ಲಿ ಕಾಣಿಸಿಕೊಂಡಿದ್ದ ಡಾ.ಸುರೇಶ್‍ ಪುತ್ತೂರಾಯ ಅವರು ನಗರಸಭೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಂದರ್ಭ ಬಿಜೆಪಿ ಪಾಳಯದಲ್ಲಿ ಕಾಣಿಸಿಕೊಂಡಿದ್ದು ಇದೀಗ ಅಚ್ಚರಿಗೆ ಕಾರಣವಾಗಿದೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಪುತ್ತಿಲ ಪರಿವಾರದಲ್ಲಿ ಪ್ರಮುಖ ನಾಯಕರಾಗಿ ಕಾಣಿಸಿಕೊಂಡಿದ್ದ ಡಾ.ಸುರೇಶ್‍ ಪುತ್ತೂರಾಯ ಇದೀಗ ದಿಢೀರ್ ಪಾಳಯ ಬದಲಾಯಿಸಿ ಬಿಜೆಪಿ ನಾಮಪತ್ರ ಸಂದರ್ಭ ಹಾಜರಾಗಿ ಅಭ್ಯರ್ಥಿಗಳಿಗೆ ಮಾಲಾರ್ಪಣೆ ಮಾಡಿರುವುದು ಕುತೂಹಲ ಮೂಡಿಸಿದೆ. ನಗರಸಭೆಯ ವಾರ್ಡ್‍ 1 ಹಾಗೂ 11 ರ ಸದಸ್ಯರ ಮರಣದಿಂದಾಗಿ ಉಪಚುನಾವಣೆ ಡಿ.27 ರಂದು ನಿಗದಿಯಾಗಿದ್ದು,

ನಗರಸಭೆ ಉಪಚುನಾವಣೆ | ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ | ಮಗ್ಗುಲ ಬದಲಾಯಿಸಿದ ಪುತ್ತಿಲ ಪರಿವಾರದ ಪ್ರಮುಖ ಡಾ.ಸುರೇಶ್‍ ಪುತ್ತೂರಾಯ Read More »

ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಪದಗ್ರಹಣ, ಸಮುದಾಯ ಭವನದ ಶಿಲಾನ್ಯಾಸ ಕುರಿತು ಪೂರ್ವಭಾವಿ ಸಭೆ

ಕಡಬ: ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಪದಗ್ರಹಣ ಮತ್ತು ಒಕ್ಕಲಿಗ ಗೌಡ ಸಮುದಾಯ ಭವನದ ಶಿಲಾನ್ಯಾಸ ಬಗ್ಗೆ ಪೂರ್ವಭಾವಿ ಸಭೆ  ಮತ್ತು ವಲಯವಾರು ಭೇಟಿ ಕಾರ್ಯಕ್ರಮ ಡಿ.14 ರಂದು ಆಲಂಕಾರು ಶ್ರೀ ಭಾರತೀ ಶಾಲಾ ಸಭಾಂಗಣದಲ್ಲಿ ನಡೆಯಿತು. ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರ ಆಶೀರ್ವಚನ ಮತ್ತು ಮಾರ್ಗದರ್ಶನದೊಂದಿಗೆ ನಡೆಯಿತು. ಸಭೆಯಲ್ಲಿ ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಮತ್ತು ಪದಾಧಿಕಾರಿಗಳು ಹಾಗೂ ಆಲಂಕಾರು ವಲಯ

ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಪದಗ್ರಹಣ, ಸಮುದಾಯ ಭವನದ ಶಿಲಾನ್ಯಾಸ ಕುರಿತು ಪೂರ್ವಭಾವಿ ಸಭೆ Read More »

ಮುಗೇರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಆಗಮಿಸಿದ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ

ಕುದ್ಮಾರು: ಅಯೋಧ್ಯೆ ಶ್ರೀ ರಾಮಜನ್ಮ ಭೂಮಿಯಲ್ಲಿರುವ ಶ್ರೀ ಶ್ರೀ ರಾಮ ಮಂದಿರದಲ್ಲಿ ಜ.22 ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆ ಅಂಗವಾಗಿ ಅಯೋಧ್ಯೆಯಿಂದ ಆಗಮಿಸಿದ ಪವಿತ್ರ ಮಂತ್ರಾಕ್ಷತೆಯನ್ನು ಮೆರವಣಿಗೆ ಮೂಲಕ ಮುಗೇರು ಶ್ರೀಮಹಾವಿಷ್ಣುಮೂರ್ತಿ  ದೇವಸ್ಥಾನನಕ್ಕೆ ತರಲಾಯಿತು. ಕುದ್ಮಾರು, ಸವಣೂರು ಹಾಗೂ ಪುಣ್ಚಪ್ಪಾಡಿಯ ರಾಮಭಕ್ತರು ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆಯನ್ನು ಸ್ವೀಕರಿಸಿದರು. ಬಳಿಕ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪವಿತ್ರ ಮಂತ್ರಾಕ್ಷತೆಯನ್ನಿರಿಸಿ ಅದಕ್ಕೆಅರ್ಚಕರು ಆರತಿ ಬೆಳಗಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

ಮುಗೇರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಆಗಮಿಸಿದ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ Read More »

ಕೆರೆಗೆ ಬಿದ್ದು ಮೃತ್ಯು !

ವಿಟ್ಲ: ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಬೈರಿಕಟ್ಟೆ ಎಂಬಲ್ಲಿ ನಡೆದಿದೆ. ಬೈರಿಕಟ್ಟೆ ಅಂಗ್ರಿಮನೆ ನಿವಾಸಿ ಗಣೇಶ್ (39) ಮೃತಪಟ್ಟವರು. ತೋಟದಲ್ಲಿ ಹುಲ್ಲು ತೆಗೆಯಲು ಹೋಗಿದ್ದ ಗಣೇಶ್ ಅವರು ಮನೆಗೆ ಬಾರದೆ ಇದ್ದಾಗ ಅವರ ತಂದೆ ತೋಟಕ್ಕೆ ಹುಡುಕಿಕೊಂಡು ಹೋದಾಗ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಕೆರೆಗೆ ಬಿದ್ದು ಮೃತ್ಯು ! Read More »

error: Content is protected !!
Scroll to Top