ಪುತ್ತೂರು

ದೀಪದ ಬೆಳಕು ಹರಿಯುವಂತೆ ಸಾಹಿತ್ಯದ ಬೆಳಕು ಹರಿಯಬೇಕು | ಭಾರತೀಯ ಭಾಷಾ ಉತ್ಸವ- ಬಹುಭಾಷಾ ಕವಿಗೋಷ್ಠಿಯಲ್ಲಿ ಡಾ. ಹರಿಕೃಷ್ಣ ಪಾಣಾಜೆ

ಪುತ್ತೂರು,ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ವಿವೇಕಾನಂದ ಬಿ.ಎಡ್ ಕಾಲೇಜು , ರೇಡಿಯೋ ಪಾಂಚಜನ್ಯ  90.80ಎಫ್. ಎಂ, ವಿದ್ಯಾಭಾರತೀ ಉಚ್ಚ ಶಿಕ್ಷಾ ಸಂಸ್ಥಾನ್- ಕರ್ನಾಟಕ ಸಂಯುಕ್ತ   ಆಶ್ರಯದಲ್ಲಿ  ‘ಭಾರತೀಯ ಭಾಷಾ ಉತ್ಸವದ’ ಪ್ರಯುಕ್ತ ಬಹುಭಾಷಾ ಕವಿ  ಗೋಷ್ಠಿ  ತೆಂಕಿಲ ವಿವೇಕಾನಂದ  ಬಿ.ಎಡ್. ಕಾಲೇಜಿನಲ್ಲಿ ನಡೆಯಿತು. ಆಯುರ್ವೇದಿಕ್ ವೈದ್ಯ ಡಾ. ಹರಿಕೃಷ್ಣ ಪಾಣಾಜೆ ದೀಪ ಪ್ರಜ್ವಲಿಸುವುದರ ಮೂಲಕ  ಕಾರ್ಯಕ್ರಮ ಉದ್ಘಾಟಿಸಿ ದೀಪವು ಬೆಳಕನ್ನು ನೀಡಿ ಕತ್ತಲೆಯನ್ನು ಹೋಗಲಾಡಿಸುವಂತೆ ಉತ್ತಮ ಸಾಹಿತ್ಯದ ಮೂಲಕ ಜ್ಞಾನದ ಬೆಳಕು ಹರಿದು ತನ್ಮೂಲಕ ಅಜ್ಞಾನದ […]

ದೀಪದ ಬೆಳಕು ಹರಿಯುವಂತೆ ಸಾಹಿತ್ಯದ ಬೆಳಕು ಹರಿಯಬೇಕು | ಭಾರತೀಯ ಭಾಷಾ ಉತ್ಸವ- ಬಹುಭಾಷಾ ಕವಿಗೋಷ್ಠಿಯಲ್ಲಿ ಡಾ. ಹರಿಕೃಷ್ಣ ಪಾಣಾಜೆ Read More »

ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಗಣೇಶ್ ಉದನಡ್ಕ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಐ. ಅವಿರೋಧ ಆಯ್ಕೆ

ಕಾಣಿಯೂರು : ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಗಣೇಶ್ ಉದನಡ್ಕ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಐ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಆಡಳಿತ ಮಂಡಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇಂದು ನಡೆಯಿತು. ಆಯ್ಕೆ ಪ್ರಕ್ರಿಯೆ ಬಳಿಕ ನಡೆದ ಸಭೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ಕೆಡೆಂಜಿ, ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಾಯಿತು.

ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಗಣೇಶ್ ಉದನಡ್ಕ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಐ. ಅವಿರೋಧ ಆಯ್ಕೆ Read More »

ಡಾ.ಪ್ರಭಾಕರ ಭಟ್ ಕಲ್ಲಡ್ಕಗೆ ಮಧ್ಯಂತರ ಜಾಮೀನು

ಬೆಂಗಳೂರು: ಮುಸ್ಲಿಂ ಮಹಿಳೆಯರನ್ನು ನಿಂದಿಸಿದ ಪ್ರಕರಣದಲ್ಲಿ ಡಾ.ಕಲ್ಲಡ್ಕ ಪ್ರಭಾಕರ್ ಭಟ್‍ ಮೇಲ್ ಪ್ರಕರಣ ದಾಖಲಾಗಿದ್ದು, ಇದೀಗ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಕುರಿತು ಹಿರಿಯ ವಕೀಲ, ಕರ್ನಾಟಕ ಮಾಜಿ ಎಎಜೆ ಅರುಣ್ ಶ್ಯಾಮ್ ಮಾಹಿತಿ ನೀಡಿದ್ದಾರೆ. ಡಿ.24 ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಹನುಮ ಜಯಂತಿ ಅಂಗವಾಗಿ ನಡೆದ ಸಂಕೀರ್ತನಾ ಯಾತ್ರೆಯಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ಪ್ರಭಾಕರ್ ಭಟ್ ನಿಂದನಾತ್ಮಕ ಆರೋಪ ಎದುರಿಸುತ್ತಿದ್ದಾರೆ.

ಡಾ.ಪ್ರಭಾಕರ ಭಟ್ ಕಲ್ಲಡ್ಕಗೆ ಮಧ್ಯಂತರ ಜಾಮೀನು Read More »

ಬೈತಡ್ಕ ಹೊಳೆಗೆ ಬಿದ್ದ ಕಾರು | ಜ್ಯೋತಿಷಿ ಅಪಾಯದಿಂದ ಪಾರು

ಪುತ್ತೂರು : ಕಾಣಿಯೂರು ಸಮೀಪದ ಬೈತ್ತಡ್ಕ ಮಸೀದಿ ಎದುರಿನ ಹೊಳೆಗೆ ಕಾರು ಪಲ್ಟಿಯಾಗಿ ಜ್ಯೋತಿಷಿಯೊಬ್ಬರಿಗೆ ಗಾಯವಾದ ಘಟನೆ ಡಿ.28ರಂದು ಮಧ್ಯಾಹ್ನ ನಡೆದಿದೆ. ಬೆಳಂದೂರಿನ ಜ್ಯೋತಿಷಿ ಪ್ರಸಾದ್‌ ಪಂಗಣ್ಣಾಯರ ಮಾರುತಿ ಬ್ರಿಝಾ ಕಾರು ಇದಾಗಿದ್ದು, ಅವರೇ ಚಾಲನೆ ಮಾಡುವಾಗ ಅಪಘಾತ ಸಂಭವಿಸಿದ್ದು ನೀರು ಕಡಿಮೆ ಇದ್ದಿದ್ದದರಿಂದ ಅವಘಡ ತಪ್ಪಿದೆ ಪಂಗಾಣ್ಣಯರಿಗೆ ಅಲ್ಪ ಸ್ವಲ್ಪ ಗಾಯವಾಗಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಜುಲೈನಲ್ಲಿ ಇದೇ ಸ್ಥಳದಲ್ಲಿ ಮಾರುತಿ 800ಕಾರು ಇದೇ ಸ್ಥಳದಲ್ಲಿ ಹೊಳೆಗೆ ಬಿದ್ದು ಇಬ್ಬರು ನೀರುಪಾಲದ ಘಟನೆ

ಬೈತಡ್ಕ ಹೊಳೆಗೆ ಬಿದ್ದ ಕಾರು | ಜ್ಯೋತಿಷಿ ಅಪಾಯದಿಂದ ಪಾರು Read More »

ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 15ನೇ ಉಪ್ಪಿನಂಗಡಿ ಶಾಖೆ ಸ್ಥಳಾಂತರಗೊಂಡು ಶುಭಾರಂಭ

ಉಪ್ಪಿನಂಗಡಿ: ಸುಳ್ಯದಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ರಾಜ್ಯಾದ್ಯಂತ ಶಾಖೆಗಳನ್ನು ಹೊಂದಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 15ನೇ ಉಪ್ಪಿನಂಗಡಿ ಶಾಖೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು. ಸರ್ವೆ ಕಾಂಪ್ಲೆಕ್ಸ್ ನಿಂದ ಎಚ್.ಎಂ ಆಡಿಟೋರಿಯಂ ಬಳಿಯ ಬಿ.ಎಂ ಆರ್ಕೇಡ್ ಗೆ ಸ್ಥಳಾಂತರಗೊಂಡ ಶಾಖೆಯನ್ನು ಕೆಎಸ್‌ಆ‌ರ್ ಟಿಸಿ ನಿವೃತ್ತ ಉದ್ಯೋಗಿ ಬೆಳ್ಯಪ್ಪ ಗೌಡ ಕಣಿಯ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಿ.ಸಿ. ಜಯರಾಮ ವಹಿಸಿದ್ದರು. ಅತಿಥಿಗಳಾಗಿ ಅಶ್ವಿನಿ ಇಲೆಕ್ಟ್ರಾನಿಕ್ಸ್ ಮಾಲಕ, ಉದ್ಯಮಿ ಪ್ರಕಾಶ್‌, ಬಿ.ಎಂ.

ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 15ನೇ ಉಪ್ಪಿನಂಗಡಿ ಶಾಖೆ ಸ್ಥಳಾಂತರಗೊಂಡು ಶುಭಾರಂಭ Read More »

ಕೌಡಿಚ್ಚಾರಿನಲ್ಲಿ ಕಾರು ಪಲ್ಟಿ !

ಪುತ್ತೂರು: ಮಡಿಕೇರಿಯಿಂದ ಕಾರ್ಕಳಕ್ಕೆ ಹೋಗುತ್ತಿದ್ದ ಕಾರೊಂದು ಕೌಡಿಚ್ಚಾರಿನ ಮಡ್ಯಂಗಲ ಬಳಿ ಪಲ್ಟಿಯಾಗಿದೆ. ಮಡಿಕೇರಿಯ ನಾಗೇಶ್ ಎಂಬವರು ತನ್ನ ಸ್ನೇಹಿತನನ್ನು ಕರೆತರಲು ಮಡಿಕೇರಿಯಿಂದ ಬೆಳಗ್ಗಿನ ಜಾವ ಕಾರ್ಕಳಕ್ಕೆ ತೆರಳುತ್ತಿದ್ದ ವೇಳೆ ಕೌಡಿಚ್ಚಾರಿನ ಬಳಿ ಎದುರಿನಿಂದ ರಾಂಗ್ ಸೈಡಲ್ಲಿ ಬರುತ್ತಿದ್ದ ವಾಹನವೊಂದರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಾರು ಪಲ್ಟಿಯಾಗಿದೆ. ಕಾರನ್ನು ಸ್ವತಃ ನಾಗೇಶ್ ಅವರೇ ಚಲಾಯಿಸುತ್ತಿದ್ದು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.

ಕೌಡಿಚ್ಚಾರಿನಲ್ಲಿ ಕಾರು ಪಲ್ಟಿ ! Read More »

ರಸ್ತೆ ಕಾಮಗಾರಿ ವೇಳೆ ಲಾರಿ ಮೇಲೆ ಬಿದ್ದ ಮರ !

ಉಪ್ಪಿನಂಗಡಿ: ಪುತ್ತೂರು-ಉಪ್ಪಿನಂಗಡಿ ಹೆದ್ದಾರಿಯಲ್ಲಿ ಕಾಮಗಾರಿ ಹಿನ್ನಲೆಯಲ್ಲಿ ಹಿಟಾಚಿಯಲ್ಲಿ ಮಣ್ಣು ತೆಗೆಯುತ್ತಿದ್ದ ವೇಳೆ ಸಂಚರಿಸುತ್ತಿದ್ದ ಲಾರಿಯೊಂದರ ಮೇಲೆ ಮರ ಬಿದ್ದ ಘಟನೆ  ಬೇರಿಕೆಯಲ್ಲಿ ನಡೆದಿದೆ. ಘಟನೆಯಿಂದ ಯಾವುದೇ ಅವಘಡಗಳಾಗದಿದ್ದರೂ, ಲಾರಿಗೆ ಹಾನಿಯಾಗಿದೆ. ಈ ಪರಿಣಾಮ ಸುಮಾರು 5 ವಿದ್ಯುತ್‍ ಕಂಬಗಳು ಧರೆಗುರುಳಿದ್ದು, ಕೆಲಸಹೊತ್ತು ಸಂಚಾರಕ್ಕೆ ತಡೆ ಉಂಟಾಯಿತು. ಘಟನೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ.

ರಸ್ತೆ ಕಾಮಗಾರಿ ವೇಳೆ ಲಾರಿ ಮೇಲೆ ಬಿದ್ದ ಮರ ! Read More »

ವಿಟ್ಲ ಅಂಬೇಡ್ಕರ್ ಭವನಕ್ಕೆ ಒಂದು ಕೋಟಿ ರೂ. ಅನುದಾನ | ಶಾಸಕರಿಗೆ ಭರವಸೆ ನೀಡಿದ ಸಚಿವ ಎಚ್ ಸಿ ಮಹದೇವಪ್ಪ

ವಿಟ್ಲ: ವಿಟ್ಲದಲ್ಲಿ ನಿರ್ಮಾಣವಾಗಲಿರುವ ಅಂಬೇಡ್ಕರ್ ಭವನಕ್ಕೆ ಒಂದು ಕೋಟಿ ರೂ. ಅನುದಾನ ನೀಡುವುದಾಗಿ ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಪುತ್ತೂರು ಶಾಸಕರಿಗೆ ಭರವಸೆ ನೀಡಿದ್ದಾರೆ. ಪುತ್ತೂರು ಶಾಸಕ ಅಶೋಕ್ ರೈ ಹಾಗೂ ದಲಿತ ಸಂಘಟನೆಗಳ ಪ್ರಮುಖರು ಬೆಂಗಳೂರು ಡಾಲರ್ಸ್ ಕಾಲನಿಯಲ್ಲಿರುವ ಸಚಿವರ ನಿವಾಸಕ್ಕೆ ಭೇಟಿ ನೀಡಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ವಿಟ್ಲದಲ್ಲಿ ನಿರ್ಮಾಣವಾಗಲಿರುವ ಅಂಬೇಡ್ಕರ್ ಭವನಕ್ಕೆ ಒಂದು ಕೋಟಿ ಅನುದಾನ ನೀಡುವುದಾಗಿ

ವಿಟ್ಲ ಅಂಬೇಡ್ಕರ್ ಭವನಕ್ಕೆ ಒಂದು ಕೋಟಿ ರೂ. ಅನುದಾನ | ಶಾಸಕರಿಗೆ ಭರವಸೆ ನೀಡಿದ ಸಚಿವ ಎಚ್ ಸಿ ಮಹದೇವಪ್ಪ Read More »

ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ !

ಕಾಣಿಯೂರು: ರಿಕ್ಷಾ ಚಾಲಕರೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಣಿಯೂರಿನ ಎಲುವೆ ಎಂಬಲ್ಲಿ ನಡೆದಿದೆ.. ಕಾಣಿಯೂರು ಬೆದ್ರಾಜೆ ನಿವಾಸಿ ವಸಂತ (42) ಎಂಬವರ ಶವ ಪತ್ತೆಯಾಗಿದೆ. ಅವರ ರಿಕ್ಷಾ ಕಾಣಿಯೂರು ರಸ್ತೆಯ ಎಲುವೆ ಎಂಬಲ್ಲಿ ನಿಲ್ಲಿಸಿತ್ತು. ಅಲ್ಲೇ ಸಮೀಪದ ಕಾಡಿನಲ್ಲಿ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ! Read More »

ನೀಡಿದ  ಪರಿಷತ್ ಜವಾಬ್ದಾರಿಯನ್ನು ಸಮರ್ಥವಾಗಿ ನಡೆಸುತ್ತಿದ್ದಾರೆ | ಹಿರೇಬಂಡಾಡಿ ಗ್ರಾಮ ಸಾಹಿತ್ಯ ಸಂಭ್ರಮದಲ್ಲಿ ಸಂಜೀವ ಮಠಂದೂರು

ಪುತ್ತೂರು: ಯುವ ಜನತೆಗೆ ಸಾಹಿತ್ಯ ಪರಿಷತ್ ಜವಾಬ್ದಾರಿ ನೀಡಿರುವ ಕಾರಣ ಅದಕ್ಕೊಂದು ಹೊಸ ಆಯಾಮವನ್ನೇ ನೀಡುವ ಮೂಲಕ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕ ಸಾ ಪ ಪುತ್ತೂರು  ನೇತೃತ್ವದಲ್ಲಿ   ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಹಾಗೂ ಚಿಗುರೆಲೆ ಸಾಹಿತ್ಯ ಬಳಗದ ಸಹಕಾರದಲ್ಲಿ  ಮಿತ್ರಂಪಾಡಿ ಜಯರಾಮ ರೈ ಅವರ ಮಹಾ ಪೋಷಕತ್ವದಲ್ಲಿ    “ಸಾಹಿತ್ಯದ ನಡೆಗೆ ಗ್ರಾಮದ ಕಡೆಗೆ” ಎಂಬ ಘೋಷ

ನೀಡಿದ  ಪರಿಷತ್ ಜವಾಬ್ದಾರಿಯನ್ನು ಸಮರ್ಥವಾಗಿ ನಡೆಸುತ್ತಿದ್ದಾರೆ | ಹಿರೇಬಂಡಾಡಿ ಗ್ರಾಮ ಸಾಹಿತ್ಯ ಸಂಭ್ರಮದಲ್ಲಿ ಸಂಜೀವ ಮಠಂದೂರು Read More »

error: Content is protected !!
Scroll to Top