ತಡರಾತ್ರಿ ಕೆಟ್ಟು ನಿಂತ ಸರಕಾರಿ ಬಸ್: ಪರ್ಯಾಯ ವ್ಯವಸ್ಥೆ ಮಾಡಿಸಿದ ಶಾಸಕರು
ಪುತ್ತೂರು: ಮಂಗಳೂರಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ ಆರ್ ಟಿ ಸಿ ಬಸ್ ತಡ ರಾತ್ರಿ ಕುಂಬ್ರ ಬಳಿ ಕೆಟ್ಟು ನಿಂತಿದ್ದು ಮಾಹಿತಿ ಅರಿತ ಶಾಸಕರು ತಕ್ಷಣ ಪರ್ಯಾಯ ವ್ಯವಸ್ಥೆ ಮಾಡಿದ್ದಾರೆ. ಈ ಬಸ್ಸಿನಲ್ಲಿ ಬೆಂಗಳೂರಿನಲ್ಲಿ ಪೊಲೀಸ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳೇ ಅಧಿಕವಾಗಿದ್ದು ಹಠಾತ್ತನೆ ಬಸ್ ಕೆಟ್ಟಿರುವ ಕಾರಣ ಆತಂಕದಲ್ಲಿದ್ದರು. ಸ್ಥಳಕ್ಕೆ ಬಂದ ಸಾರ್ವಜನಿಕರು ತಕ್ಷಣವೇ ಶಾಸಕರಾದ ಅಶೋಕ್ ರೈ ಯವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪೃವೃತ್ತರಾದ ಶಾಸಕರು ಪುತ್ತೂರು ಡಿಪೋ ಮೂಲಕ ಬದಲಿ ಬಸ್ ವ್ಯವಸ್ಥೆ ಮಾಡಿಸಿದ್ದಾರೆ. […]
ತಡರಾತ್ರಿ ಕೆಟ್ಟು ನಿಂತ ಸರಕಾರಿ ಬಸ್: ಪರ್ಯಾಯ ವ್ಯವಸ್ಥೆ ಮಾಡಿಸಿದ ಶಾಸಕರು Read More »










