ಪುತ್ತೂರು

ಭಾರತ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠವಾದ ಸಂವಿಧಾನವಾಗಿದೆ | ತಾಲೂಕು ಗಣರಾಜ್ಯೋತ್ಸವದಲ್ಲಿ ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ

ಪುತ್ತೂರು; ಗಣರಾಜ್ಯೋತ್ಸವವು ಭಾರತದ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡ ಐತಿಹಾಸಿಕ ದಿನವಾಗಿದ್ದು, ನಮ್ಮ ಸಂವಿಧಾನವೂ ವಿಶ್ವದ ಅತೀ ಶ್ರೇಷ್ಠ ಸಂವಿಧಾನ ಎಂದೆಣಿಸಿಕೊಂಡಿದೆ ಎಂದು ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಅಭಿಪ್ರಾಯಪಟ್ಟರು. ಅವರು ಕೊಂಬೆಟ್ಟು ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ನಡೆದ ೭೫ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ನಾಡಿಗೆ ಸಂದೇಶ ನೀಡಿದರು. ನಮ್ಮ ಸಂವಿಧಾನದಲ್ಲಿ ಎಲ್ಲಾ ಜನರ ಆಶೋತ್ತರಗಳ ಅಂಶಗಳ ಜತೆಗೆ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳಿವೆ. ಸರ್ಕಾರಕ್ಕೆ ನೀತಿ ನಿರ್ದೇಶನವಿದೆ. ಸಂವಿಧಾನದ […]

ಭಾರತ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠವಾದ ಸಂವಿಧಾನವಾಗಿದೆ | ತಾಲೂಕು ಗಣರಾಜ್ಯೋತ್ಸವದಲ್ಲಿ ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ Read More »

ಹಿರೇಬಂಡಾಡಿ ಗ್ರಾ.ಪಂ.ನಲ್ಲಿ ಗಣರಾಜ್ಯೋತ್ಸವ ಆಚರಣೆ

ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮ ಪಂಚಾಯತ್’ನಲ್ಲಿ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ, ಧ್ವಜ ನಮನ ಮಾಡಲಾಯಿತು. ಇದೇ ಸಂಧರ್ಭ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ್ ಸದಸ್ಯರು, ಪಂಚಾಯತ್ ಸಿಬ್ಬಂದಿ ವರ್ಗ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಹಿರೇಬಂಡಾಡಿ ಗ್ರಾ.ಪಂ.ನಲ್ಲಿ ಗಣರಾಜ್ಯೋತ್ಸವ ಆಚರಣೆ Read More »

ಡಾ.ಸುರೇಶ್‍ ಪುತ್ತೂರಾಯರಿಗೆ ಮಧುಮೇಹ ಜಾಗೃತಿ-2024 ರಾಷ್ಟ್ರಪ್ರಶಸ್ತಿ | ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಸುತ್ತಿರುವ ಉಚಿತ ವೈದ್ಯಕೀಯ ಶಿಬಿರಕ್ಕಾಗಿ ಈ ಗೌರವ

ಪುತ್ತೂರು: ಪುತ್ತೂರಿನ ವೈದ್ಯ ಡಾ.ಸುರೇಶ್‍ ಪುತ್ತೂರಾಯ ಅವರು ಮಧುಮೇಹ ಜಾಗೃತಿ-2024 ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾರ್ವಜನಿಕ ಭಕ್ತಾದಿಗಳ ಅನುಕೂಲಕ್ಕಾಗಿ ಪ್ರತಿ ತಿಂಗಳು ನಡೆಸುತ್ತಿರುವ ಉಚಿತ ವೈದ್ಯಕೀಯ ಶಿಬಿರದ ಮೂಲಕ ಅವರು ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಶಿಬಿರದ ಮೂಲಕ ಮಧುಮೇಹ ತಪಾಸಣೆಯಲ್ಲಿ ನೀಡಿದ ಅದ್ವಿತೀಯ ಸೇವೆ ಹಾಗೂ ಜನರಲ್ಲಿ ಆರೋಗ್ಯ ಜಾಗೃತಿಗಾಗಿ ಈ ಶಿಬಿರದ ರೂವಾರಿಯಾಗಿರುವ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ಡಾ.ಸುರೇಶ್ ಪುತ್ತೂರಾಯ ಮಧುಮೇಹ ಜಾಗೃತಿ-2024 ರಾಷ್ಟ್ರ

ಡಾ.ಸುರೇಶ್‍ ಪುತ್ತೂರಾಯರಿಗೆ ಮಧುಮೇಹ ಜಾಗೃತಿ-2024 ರಾಷ್ಟ್ರಪ್ರಶಸ್ತಿ | ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಸುತ್ತಿರುವ ಉಚಿತ ವೈದ್ಯಕೀಯ ಶಿಬಿರಕ್ಕಾಗಿ ಈ ಗೌರವ Read More »

ಜ.27 ರಂದು ಕೊಕ್ಕಪುಣಿ ಶ್ರೀ ಅರಸು ಕುರಿಯಾಡಿತ್ತಾಯ ಚಾವಡಿಯಲ್ಲಿ ಪಂಚಮ ವರ್ಷದ ಪ್ರತಿಷ್ಠಾ ವರ್ಧಂತಿ

ಪುತ್ತೂರು: ಬೋಳಂತೂರು ಗ್ರಾಮದ ಕೊಕ್ಕಪುಣಿ ಶ್ರೀ ಅರಸು ಕುರಿಯಾಡಿತ್ತಾಯ ಚಾವಡಿಯಲ್ಲಿ ಪಂಚಮ ವರ್ಷದ ಪ್ರತಿಷ್ಠಾ ವರ್ಧಂತಿ ಜ.27 ಶನಿವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7 ಕ್ಕೆ ಗಣಹೋಮ, ಸಂಜೆ 3.30 ರಿಂದ 4 ರ ವರೆಗೆ ತುಳಸೀವನ ಶ್ರೀ ಸಿದ್ಧಿ ವಿನಾಯಕ ಭಜನಾ ಮಂಡಳಿ, 5 ರಿಂದ 6 ರ ವರೆಗೆ ಗುಂಡಿಮಜಲು ಶೃಂಗಗಿರಿ ಶ್ರೀ ಶಾರದಾಂಬಾ ಭಜನಾ ಮಂಡಳಿ ವತಿಯಿಂದ ಕುಣಿತ ಭಜನೆ ನಡೆಯಲಿದೆ. ರಾತ್ರಿ 7.30 ರಿಂದ ದೈವಗಳಿಗೆ

ಜ.27 ರಂದು ಕೊಕ್ಕಪುಣಿ ಶ್ರೀ ಅರಸು ಕುರಿಯಾಡಿತ್ತಾಯ ಚಾವಡಿಯಲ್ಲಿ ಪಂಚಮ ವರ್ಷದ ಪ್ರತಿಷ್ಠಾ ವರ್ಧಂತಿ Read More »

ನಾಳೆ : ಕುದ್ಮಾರು ಸ್ಕಂದಗಣೇಶ ನಗರದಲ್ಲಿ “ಸ್ಕಂದಶ್ರೀ” ಬಾರ್ & ರೆಸ್ಟೋರೆಂಟ್ ಶುಭಾರಂಭ

ಪುತ್ತೂರು: ‘ಸ್ಕಂದಶ್ರೀ ‘ ಬಾರ್ & ರೆಸ್ಟೋರೆಂಟ್ ಕುದ್ಮಾರು ಸ್ಕಂದಗಣೇಶ ನಗರದಲ್ಲಿರುವ ಸ್ಕಂದಶ್ರೀ ಕಾಂಪ್ಲೆಕ್ಸ್  ನಲ್ಲಿ ಜ.26 ರಂದು ಶುಭಾರಂಭಗೊಳ್ಳಲಿದೆ. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ಗೌಡ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರಾದ ಪವಿತ್ರ, ಚೆನ್ನಪ್ಪ ಗೌಡ ನೂಜಿ ಹಾಗೂ ಜಸ್ಮಿತಾ, ಪ್ರಖ್ಯಾತ್

ನಾಳೆ : ಕುದ್ಮಾರು ಸ್ಕಂದಗಣೇಶ ನಗರದಲ್ಲಿ “ಸ್ಕಂದಶ್ರೀ” ಬಾರ್ & ರೆಸ್ಟೋರೆಂಟ್ ಶುಭಾರಂಭ Read More »

ಮತದಾನದ ಹಕ್ಕು ನೀಡಿದ ಭಾರತದ ಕ್ರಮ ಇತಿಹಾಸದಲ್ಲೇ ಪ್ರಥಮ

ಪುತ್ತೂರು: ಮತದಾನ ಜಾರಿಗೆ ಬಂದ ಪ್ರಥಮ ದಿನದಲ್ಲೇ ಪ್ರತಿಯೊಬ್ಬರಿಗೂ ಮತದಾನ ಮಾಡುವ ಹಕ್ಕು ನೀಡಿದ್ದು ಇತಿಹಾಸದಲ್ಲೇ ಭಾರತ ಪ್ರಥಮ. ಆದ್ದರಿಂದ ಯಾವುದೇ ಆಮಿಷಕ್ಕೊಳಗಾಗದೆ ಮತ ಚಲಾವಣೆ ಮಾಡುವುದನ್ನು ಯುವಜನತೆ ಅರಿತಿರಬೇಕು ಎಂದು ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ ಹೇಳಿದರು. ಪುರಭವನದಲ್ಲಿ ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ’ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆದ 14ನೇ ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರತಿಜ್ಞಾವಿಧಿ ಬೋಧಿಸಿ ಯುವ ಮತದಾರರನ್ನುದ್ದೇಶಿಸಿ ಮಾತನಾಡಿದರು. ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಸರಕಾರದಲ್ಲಿ ಶ್ರೀಮಂತರಿಗೆ, ಗಣ್ಯರಿಗೆ

ಮತದಾನದ ಹಕ್ಕು ನೀಡಿದ ಭಾರತದ ಕ್ರಮ ಇತಿಹಾಸದಲ್ಲೇ ಪ್ರಥಮ Read More »

ಜ. 27ರಂದು ಶಿವಸುಜ್ಞಾನ ತೀರ್ಥ ಶ್ರೀಗಳಿಂದ ಪುತ್ತೂರು ವಲಯ ಭಕ್ತರ ಸಮಾಲೋಚನಾ ಸಭೆ

ಪುತ್ತೂರು: ಅರೆಮಾದನಹಳ್ಳಿ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳ ನೇತೃತ್ವದಲ್ಲಿ ಇಲ್ಲಿನ ಬೊಳುವಾರು ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಜ. 27ರಂದು ಪುತ್ತೂರು ವಲಯ ಭಕ್ತರ ಸಮಾಲೋಚನಾ ಸಭೆ ನಡೆಯಲಿದೆ. ಸಂಜೆ 4 ಗಂಟೆಗೆ ಸರಿಯಾಗಿ ನಡೆಯುವ ಸಭೆಯಲ್ಲಿ ಮಹಾಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಅಲ್ಲದೇ, ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದ ಕಜ್ಕೆಯ ಶಾಖಾ ಮಠದಲ್ಲಿ ನಿರ್ಮಾಣಗೊಂಡಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಬಗ್ಗೆಯೂ ಶ್ರೀಗಳು ಮಾತನಾಡಲಿದ್ದಾರೆ. ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನದ ಪುನರ್ ನಿರ್ಮಾಣಕ್ಕೆ

ಜ. 27ರಂದು ಶಿವಸುಜ್ಞಾನ ತೀರ್ಥ ಶ್ರೀಗಳಿಂದ ಪುತ್ತೂರು ವಲಯ ಭಕ್ತರ ಸಮಾಲೋಚನಾ ಸಭೆ Read More »

ಜ.27 ರಂದು 31ನೇ ವರ್ಷದ ಹೊನಲು ಬೆಳಕಿನ ಪುತ್ತೂರು ‘ಕೋಟಿ-ಚೆನ್ನಯ’ ಜೋಡುಕರೆ ಕಂಬಳ

ಪುತ್ತೂರು: 31ನೇ ವರ್ಷದ ಹೊನಲು ಬೆಳಕಿನ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಜ.27 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಎನ್‍. ಚಂದ್ರಹಾಸ ಶೆಟ್ಟಿ ತಿಳಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದಿ.ಜಯಂತ ರೈ ಹಾಗೂ ದಿ.ಎನ್. ಮುತ್ತಪ್ಪ ರೈ ಅವರ ನೇತೃತ್ವದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಗೌರವಾಧ್ಯಕ್ಷತೆಯಲ್ಲಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರ ಗೌರವ ಉಪಸ್ಥಿತಿಯಲ್ಲಿ ಕಳೆದ ಮೂವತ್ತು ವರ್ಷಗಳಿಂದ

ಜ.27 ರಂದು 31ನೇ ವರ್ಷದ ಹೊನಲು ಬೆಳಕಿನ ಪುತ್ತೂರು ‘ಕೋಟಿ-ಚೆನ್ನಯ’ ಜೋಡುಕರೆ ಕಂಬಳ Read More »

ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ತಾಂತ್ರಿಕ ಸಮಿತಿ ಸಭೆ

ಕಡಬ: ಒಕ್ಕಲಿಗ ಗೌಡ ಸೇವಾ ಸಂಘದ ಮಹತ್ವಾಕಾಂಕ್ಷಿ ಯೋಜನೆಯಾದ ಸಮುದಾಯ ಭವನ ನಿರ್ಮಾಣ ಯೋಜನೆಯ ತಾಂತ್ರಿಕ ಸಮಿತಿ ಸಭೆ ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಸಂಘದ ನಿರ್ದೇಶಕ ಬಾಲಕೃಷ್ಣ ಕೋಲ್ಪೆ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭವನ ನಿರ್ಮಾಣ ಕಾರ್ಯದ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಸಂಘದ ಕಾರ್ಯದರ್ಶಿ ಪ್ರಶಾಂತ್ ಪಂಜೋಡಿ, ಸಮುದಾಯದ ಸಿವಿಲ್ ಇಂಜಿನಿಯರ್ಸ್ ಮತ್ತು ಕಾಂಟ್ರಾಕ್ಟರ್ ಗಳು ಉಪಸ್ಥಿತರಿದ್ದರು.

ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ತಾಂತ್ರಿಕ ಸಮಿತಿ ಸಭೆ Read More »

ಪುತ್ತೂರು ತಹಸೀಲ್ದಾರ್ ಜಿ.ಶಿವಶಂಕರ್ ವರ್ಗಾವಣೆ!

ಪುತ್ತೂರು: ಇಲ್ಲಿನ ತಹಸೀಲ್ದಾರ್ ಜಿ. ಶಿವಶಂಕರ್ ಅವರು ವರ್ಗಾವಣೆಗೊಂಡಿದ್ದು, ತೆರವಾದ ಪುತ್ತೂರು ತಹಸೀಲ್ದಾರ್ ಹುದ್ದೆಗೆ ಪುರಂದರ ನೇಮಕಗೊಂಡಿದ್ದಾರೆ. ಪುರಂದರ ಅವರು ಬಾಗಲಕೋಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಪುತ್ತೂರಿಗೆ ವರ್ಗಾವಣೆಗೊಂಡಿದ್ದಾರೆ. ಪುತ್ತೂರು ತಹಸೀಲ್ದಾರ್ ಗ್ರೇಡ್ 1 ಹುದ್ದೆಯಾಗಿದ್ದು, ವರ್ಗಾವಣೆಗೊಂಡಿರುವ ಜಿ. ಶಿವಶಂಕರ್ ಅವರು ಗ್ರೇಡ್ 2 ತಹಸೀಲ್ದಾರ್ ಆಗಿದ್ದರು. ಜಿ. ಶಿವಶಂಕರ್ ಅವರು ಮುಂದಿನ ಸ್ಥಳ ನಿಯುಕ್ತಿಗಾಗಿ ಸರಕಾರದಲ್ಲಿ ವರದಿ ಮಾಡಿಕೊಳ್ಳುವಂತೆ ಸರಕಾರದ ಅಧೀನ ಕಾರ್ಯದರ್ಶಿ ಮುಕ್ತಾರ್ ಪಾಷ ಹೆಚ್.ಜಿ. ಆದೇಶ ಹೊರಡಿಸಿದ್ದಾರೆ.

ಪುತ್ತೂರು ತಹಸೀಲ್ದಾರ್ ಜಿ.ಶಿವಶಂಕರ್ ವರ್ಗಾವಣೆ! Read More »

error: Content is protected !!
Scroll to Top