ಪುತ್ತೂರು

ಬಿಜೆಪಿ ಸೇರ್ಪಡೆ ಕುರಿತು ಷರತ್ತುಗಳಿಗೆ ಒಪ್ಪಿಕೊಳ್ಳುವ ಮತ್ತು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ | ಮುಂದಿನ ಮೂರು ದಿನಳೊಳಗೆ ಎಲ್ಲವೂ ಸರಿಯಾಗುವಂತೆ ನೋಡಿಕೊಳ್ಳಬೇಕು | ರಾಷ್ಟ್ರೀಯ ಪಕ್ಷ ಬಿಜೆಪಿಗೆ ಸವಾಲೆಸೆದ ಶ್ರೀಕೃಷ್ಣ ಉಪಾಧ್ಯಾಯ

ಪುತ್ತೂರು: ಮುಂದಿನ ಮೂರು ದಿನಗಳೊಳಗೆ ಎಲ್ಲವೂ ಸರಿಯಾಗುವಂತೆ ನೋಡಿಕೊಳ್ಳಬೇಕು. ಆದರೆ ಬಿಜೆಪಿ ಸೇರ್ಪಡೆ ಕುರಿತು ಯಾವುದೇ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಹೀಗೆಂದು ಹೇಳಿದ್ದಾರೆ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ. ಪುತ್ತಿಲ ಪರಿವಾರ ವತಿಯಿಂದ ನಡೆದ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಅವರು ರಾಷ್ಟ್ರೀಯ ಪಕ್ಷವಾದ ಬಿಜೆಪಿ ನಾಯಕರಿಗೆ ಸವಾಲೆಸೆದಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿ ಹಿಂದೂಗಳ ನೋವಿಗೆ ರಾತ್ರಿ ಹಗಲೆನ್ನದೆ ಸ್ಪಂದಿಸುತ್ತಿರುವ ಅರುಣ್ ಕುಮಾರ್ ಪುತ್ತಿಲರ ನಾಯಕತ್ವವಿಲ್ಲದೆ ಪುತ್ತೂರಿನಲ್ಲಿ ಯಾರಿಗೂ ತಾಕತ್ತಿಲ್ಲ. ಪ್ರಸ್ತುತ ಬಿಜೆಪಿಗೆ ಪುತ್ತಿಲ ಪರಿವಾರವನ್ನು ಒಳಗೆ […]

ಬಿಜೆಪಿ ಸೇರ್ಪಡೆ ಕುರಿತು ಷರತ್ತುಗಳಿಗೆ ಒಪ್ಪಿಕೊಳ್ಳುವ ಮತ್ತು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ | ಮುಂದಿನ ಮೂರು ದಿನಳೊಳಗೆ ಎಲ್ಲವೂ ಸರಿಯಾಗುವಂತೆ ನೋಡಿಕೊಳ್ಳಬೇಕು | ರಾಷ್ಟ್ರೀಯ ಪಕ್ಷ ಬಿಜೆಪಿಗೆ ಸವಾಲೆಸೆದ ಶ್ರೀಕೃಷ್ಣ ಉಪಾಧ್ಯಾಯ Read More »

ಗೊನೆ ಮುಹೂರ್ತ ಕಾರ್ಯಕ್ರಮ- ಶ್ರೀ ಉಳ್ಳಾಲ್ತಿ ದೈವಸ್ಥಾನ ಕೆಲಿಂಜ

ಕೆಲಿಂಜ: ಫೆ. 14ರಂದು ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ಮೆಚ್ಚಿ ಜಾತ್ರೆಯು ನಡೆಯಲಿದ್ದು, ಆ ಪ್ರಯುಕ್ತ ಅನಂತಕೋಡಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಪ್ರಾರ್ಥನೆ ಸಲ್ಲಿಸಿ  ಪುಂಡಿಕಾಯಿ ಮನೆಯಲ್ಲಿ ಗೊನೆ ಮುಹೂರ್ತ ಕಾರ್ಯಕ್ರಮವು ನಡೆಯಿತು.  ಈ ಸಂದರ್ಭ ಊರಿನ ಮೊಕ್ತೇಸರರು, ಊರಿನ ಹಿರಿಯರು ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.    ಕ್ಷೇತ್ರದ ಗೊನೆಮುಹೂರ್ತದ ವಿಶೇಷತೆ ಇಲ್ಲಿದೆ : ಜಾತ್ರೋತ್ಸವದ ತಯಾರಿಯ ಬಗ್ಗೆ ಯಾವುದೇ ಸಲಹೆ ಸೂಚನೆಗಳಿದ್ದರೂ ಗೊನೆ ಕಡಿಯುವ ಮೊದಲು ಪ್ರಸ್ತಾಪಿಸಬೇಕು ನಂತರ ಅದರ ಬಗ್ಗೆ ಯಾರೂ ಪ್ರಸ್ತಾಪಿಸುವಂತಿಲ್ಲ.ಹಿಂದಿನ

ಗೊನೆ ಮುಹೂರ್ತ ಕಾರ್ಯಕ್ರಮ- ಶ್ರೀ ಉಳ್ಳಾಲ್ತಿ ದೈವಸ್ಥಾನ ಕೆಲಿಂಜ Read More »

ಬಡವರ ಮನೆ‌ ಮೇಲೆ ಹಾಕಿರುವ ವಿದ್ಯುತ್ ತಂತಿಗಳನ್ನು ತೆರವು ಮಾಡಿ : ಇಂಧನ‌ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು: ಬಡವರ ಮನೆಯ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ಇಲಾಖೆಯ ಖರ್ಚಿನಲ್ಲೇ ತೆರವು ಮಾಡಬೇಕು. ಮನೆಯ ಮೇಲೆ ತಂತಿ ಹೋಗಿರುವ ಕಾರಣ ಸಮಸ್ಯೆಯಾಗಿದ್ದು ಶೀಘ್ರ ತೆರವು ಮಾಡಬೇಕು‌ ಎಂದು ಶಾಸಕ ಅಶೋಕ್ ರೈ ಇಂಧನ‌ಸಚಿವ ಕೆ. ಜೆ ಜಾರ್ಜ್ ಗೆ ಮನವಿ ಮಾಡಿದ್ದಾರೆ. ಶಾಸಕರ ಪ್ರಶ್ನೆಗೆ ವಿವರಣೆ ನೀಡಿದ ಕೆಪಿಟಿಸಿಎಲ್ ಎಂ ಡಿ ಪಂಕಜ್ ಪಾಂಡೆಯವರು, ಮನೆ ಕಟ್ಟಿದ ಮೇಲೆ ತಂತಿ ಎಳೆದಿಲ್ಲ, ತಂತಿಯ ಅಡಿಯಲ್ಲೇ ಮನೆ ಕಟ್ಟಿದ್ದಾರೆ ಎಂಬ ಮಾಹಿತಿ‌ನೀಡಿದರು. ಇದಕ್ಕೆ ಪ್ರತ್ಯುತ್ತರ ನೀಡಿದ

ಬಡವರ ಮನೆ‌ ಮೇಲೆ ಹಾಕಿರುವ ವಿದ್ಯುತ್ ತಂತಿಗಳನ್ನು ತೆರವು ಮಾಡಿ : ಇಂಧನ‌ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ Read More »

ರಾಷ್ಟ್ರಮಟ್ಟದ ಹಿರಿಯರ ಕ್ರೀಡಾಕೂಟ | ವೆಂಕಟೇಶ್ ಪ್ರಸಾದ್ ರಿಲೇಯಲ್ಲಿ ದ್ವಿತೀಯ ಸ್ಥಾನ

ಪುತ್ತೂರು: ವೆಟರನ್ಸ್ ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ತಮಿಳುನಾಡಿನ ತಿರುನಲ್ವೇಲಿಯ ಅಣ್ಣಾ ಸ್ಟೇಡಿಯಂನಲ್ಲಿ ಮೂರು ದಿನಗಳ ಕಾಲ ನಡೆದ 43ನೇ ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ದರ್ಬೆತ್ತಡ್ಕ ವೆಂಕಟೇಶ್ ಪ್ರಸಾದ್ 45ರ ವಯೋಮಾನದ 4×100 ರಿಲೇಯಲ್ಲಿ ದ್ವಿತೀಯ, ಮತ್ತು 4×100 ಮಿಕ್ಸೆಡ್ ರಿಲೇಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಅವರು ದರ್ಬೆತ್ತಡ್ಕ ಹಿರಿಯ ಪ್ರಾಥಮಿಕ ಶಾಲೆ,  ಪೆರ್ನಾಜೆ ಶ್ರೀ ಸೀತಾರಾಘವ ಪದವಿಪೂರ್ವ ಕಾಲೇಜು ಹಾಗೂ ಪುತ್ತೂರು ಸಂತ ಫಿಲೋಮಿನಾ ಪದವಿ ಕಾಲೇಜಿನ 

ರಾಷ್ಟ್ರಮಟ್ಟದ ಹಿರಿಯರ ಕ್ರೀಡಾಕೂಟ | ವೆಂಕಟೇಶ್ ಪ್ರಸಾದ್ ರಿಲೇಯಲ್ಲಿ ದ್ವಿತೀಯ ಸ್ಥಾನ Read More »

ಫೆ.13: ಬೈಲಾಡಿ ಶ್ರೀ ಶಾಸ್ತಾವು ದೇವಸ್ಥಾನದ ವರ್ಷಾವಧಿ ಉತ್ಸವ, ಕುಟುಂಬ ದೈವಗಳ ವಾರ್ಷಿಕ ತಂಬಿಲ

ಪುತ್ತೂರು: ಬೈಲಾಡಿ ಶ್ರೀ ಶಾಸ್ತಾವು ದೇವಸ್ಥಾನದ ವರ್ಷಾವಧಿ ಉತ್ಸವ ಹಾಗೂ ಕುಟುಂಬದ ಧರ್ಮ ದೈವಗಳ ವಾರ್ಷಿಕ ತಂಬಿಲ ಫೆ.13 ಮಂಗಳವಾರ ಶ್ರೀ ದೇವಸ್ಥಾನದಲ್ಲಿ ನಡೆಯಲಿದೆ. ಉತ್ಸವದ ಅಂಗವಾಗಿ ಫೆ.7 ರಂದು ಬೆಳಿಗ್ಗೆ 8 ಕ್ಕೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಹಾಗೂ ಬ್ರಹ್ಮಶ್ರೀ ದಿನೇಶ್ ಮರಡಿತ್ತಾಯ ಗುಮ್ಮಟಗದ್ದೆ ಅವರ ನೇತೃತ್ವದಲ್ಲಿ ಗೊನೆ ಕಡಿಯುವುದು. ಫೆ.13 ರಂದು ಬೆಳಿಗ್ಗೆ 9 ಕ್ಕೆ ಬೈಲಾಡಿ ಮನೆಯಲ್ಲಿ ಶ್ರೀ ವೆಂಕಟರಮಣ ದೇವರ ಮುಡಿಪು ಪೂಜೆ, ಬೆಳಿಗ್ಗೆ 8 ಕ್ಕೆ ದೇವಸ್ಥಾನದಲ್ಲಿ ದೇವತಾ

ಫೆ.13: ಬೈಲಾಡಿ ಶ್ರೀ ಶಾಸ್ತಾವು ದೇವಸ್ಥಾನದ ವರ್ಷಾವಧಿ ಉತ್ಸವ, ಕುಟುಂಬ ದೈವಗಳ ವಾರ್ಷಿಕ ತಂಬಿಲ Read More »

ವಿಟ್ಲ ಸ್ವಸ್ತಿಕ್ ಫ್ರೆಂಡ್ಸ್ ನಿಂದ ಸ್ವಸ್ತಿಕ್ ಕಲೋತ್ಸವ | ನರೇಂದ್ರ ಟ್ರೋಫಿ ಅಂತರ್ ರಾಜ್ಯ ಕಬಡ್ಡಿ ಪಂದ್ಯಾಟ

ವಿಟ್ಲ: ವಿಟ್ಲ ಸ್ವಸ್ತಿಕ್ ಫ್ರೆಂಡ್ಸ್ ನ ಸ್ವಸ್ತಿಕ್ ಕಲೋತ್ಸವ ಹಾಗೂ ನರೇಂದ್ರ ಟ್ರೋಫಿ ಅಂತರ್ ರಾಜ್ಯ ಕಬಡ್ಡಿ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಇಂದು ವಿಟ್ಲದಲ್ಲಿ ನಡೆಯಿತು. ವಿಟ್ಲದ ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಸತೀಶ್ ಆಳ್ವಾ ಇರ ಬಾಳಿಕೆ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಮೋದಿಯವರ ಹೆಸರಲ್ಲಿ  ಕಾರ್ಯಕ್ರಮ ನಡೆಯುತ್ತಿದ್ದು, ಸ್ವಸ್ತಿಕ್ ಫ್ರೆಂಡ್ಸ್ ನ ಸದಸ್ಯರು ಹಲವಾರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದು ಉತ್ಸಾಹಿ ಯುವಕರ ತಂಡವನ್ನು ಹೊಂದಿದೆ ಎಂದರು. ವಿಟ್ಲ ಅರಮನೆಯ ಕೃಷ್ಣಯ್ಯ ವಿಟ್ಲ ಮತ್ತು

ವಿಟ್ಲ ಸ್ವಸ್ತಿಕ್ ಫ್ರೆಂಡ್ಸ್ ನಿಂದ ಸ್ವಸ್ತಿಕ್ ಕಲೋತ್ಸವ | ನರೇಂದ್ರ ಟ್ರೋಫಿ ಅಂತರ್ ರಾಜ್ಯ ಕಬಡ್ಡಿ ಪಂದ್ಯಾಟ Read More »

ಭಗವಂತನ ಕೆಲಸದಲ್ಲಿ ಕೈ ಜೋಡಿಸಿದರೆ ಅನುಗ್ರಹ ಪ್ರಾಪ್ತಿ: ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ | ಪಶುಪತಿನಾಥ ಭಜನಾ ಮಂದಿರದ ನೀಲನಕಾಶೆ ಅನಾವರಣಗೊಳಿಸಿದ ರಾಘವೇಶ್ವರ ಶ್ರೀ

ಪುತ್ತೂರು: ಭಗವಂತ ಕೈಗೊಳ್ಳುವ ಕೆಲಸದಲ್ಲಿ ನಾವು ಕೈಜೋಡಿಸಿದರೆ ಭಗವಂತನ ಅನುಗ್ರಹ ಪ್ರಾಪ್ತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ ಪ್ರತಿಯೊಂದು ಮನೆಯಲ್ಲೂ ಗೋಸಾಕಣೆ, ಗೋವಿನ ಆರಾಧನೆ ಮಾಡಬೇಕಾದ ಅಗತ್ಯವಿದೆ ಎಂದು ಉಡುಪಿ ಅದಮಾರು ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು. ಅವರು ಭಾನುವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ, ಶ್ರೀ ಮಹಾಲಿಂಗೇಶ್ವರ ಗೋಸೇವಾ ಬಳಗದ ನೇತೃತ್ವದಲ್ಲಿ ಮೊಟ್ಟೆತ್ತಡ್ಕ ಎನ್.ಆರ್.ಸಿ.ಸಿ. ಸಮೀಪದ ಸಂಪ್ಯದಮೂಲೆಯ ಗೋವಿಹಾರ ಧಾಮದಲ್ಲಿ ಎರಡು ದಿನಗಳ ಕಾಲ ನಡೆದ ಗೋಲೋಕೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಭಗವಂತನ ಕೆಲಸದಲ್ಲಿ ಕೈ ಜೋಡಿಸಿದರೆ ಅನುಗ್ರಹ ಪ್ರಾಪ್ತಿ: ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ | ಪಶುಪತಿನಾಥ ಭಜನಾ ಮಂದಿರದ ನೀಲನಕಾಶೆ ಅನಾವರಣಗೊಳಿಸಿದ ರಾಘವೇಶ್ವರ ಶ್ರೀ Read More »

ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಶ್ರೀಮಾ ಕೆ.ಎಚ್‍. ಅವರಿಗೆ ಚತುರ್ಥ ಸ್ಥಾನ

ಪುತ್ತೂರು: 67ನೇ ರಾಷ್ಟ್ರಮಟ್ಟದ ಯೋಗಾಸನಾ ಚಾಂಪಿಯನ್ ಶಿಪ್ -2023-24 ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲಾ 7ನೇ ತರಗತಿ ವಿದ್ಯಾರ್ಥಿನಿ ಶ್ರೀಮಾ ಕೆ.ಎಚ್‍.  ಫೈನಲ್‍ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದು, ಚತುರ್ಥ ಸ್ಥಾನ ಪಡೆದುಕೊಂಡಿದ್ದಾರೆ. ಮಧ್ಯಪ್ರದೇಶದ ಸಂಗತಾನ್ ಕೇಂದ್ರೀಯ ವಿದ್ಯಾಲಯದಲ್ಲಿ ಫೆ.1 ರಿಂದ 4 ರ ತನಕ ನಡೆದ ಸ್ಪರ್ಧೆಯಲ್ಲಿ ದೆಹಲಿ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ತ್ರಿಪುರಾ, ವೆಸ್ಟ್ ಬೆಂಗಾಲ್‍ ಫೈನಲ್‍ ಗೆ ಆಯ್ಕೆಯಾಗಿತ್ತು. ಶ್ರೀಮಾ ಕೆ.ಎಚ್‍. ಸುಳ್ಯ ತಾಲೂಕಿನ

ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಶ್ರೀಮಾ ಕೆ.ಎಚ್‍. ಅವರಿಗೆ ಚತುರ್ಥ ಸ್ಥಾನ Read More »

ಗೋವು ಮನುಷ್ಯನ ಜೀವನದ ಅವಿಭಾಜ್ಯ ಅಂಗ | ಗೋಲೋಕೋತ್ಸವದಲ್ಲಿ ಹರೀಶ್ ರಾವ್

ಪುತ್ತೂರು: ಗೋವು ನಮ್ಮ ಜೀವನದ ಅವಿಭಾಜ್ಯ ಅಂಗ. ದುರಾದೃಷ್ಟವಶಾತ್ ಇಂದಿನ ಜನಾಂಗ ಅದನ್ನು ಮರೆಯುತ್ತಿದ್ದು, ಮುಂದಿನ ಪೀಳಿಗೆಗೆ ಗೋವಿನ ಮಹತ್ವದ ಕುರಿತು ತಿಳಿಹೇಳಬೇಕಾದ ಅಗತ್ಯವಿದೆ ಎಂದು ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್ ಹೇಳಿದರು. ಅವರು ಭಾನುವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ, ಶ್ರೀ ಮಹಾಲಿಂಗೇಶ್ವರ ಗೋಸೇವಾ ಬಳಗದ ನೇತೃತ್ವದಲ್ಲಿ ಮೊಟ್ಟೆತ್ತಡ್ಕ ಎನ್‍.ಆರ್‍..ಸಿ.ಸಿ. ಸಮೀಪದ ಸಂಪ್ಯದಮೂಲೆಯಲ್ಲಿರುವ ಗೋವಿಹಾರ ಧಾಮದಲ್ಲಿ ಎರಡು ದಿನಗಳ ಕಾಲ ನಡೆದ ಗೋಲೋಕೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ಗೋವು-ನಾವು

ಗೋವು ಮನುಷ್ಯನ ಜೀವನದ ಅವಿಭಾಜ್ಯ ಅಂಗ | ಗೋಲೋಕೋತ್ಸವದಲ್ಲಿ ಹರೀಶ್ ರಾವ್ Read More »

ಎಂದೆಂದಿಗೂ ಸಾಂಪ್ರದಾಯಿಕ ನೆಲಮೂಲದ ಸಂಸ್ಕೃತಿ ಉಳಿಯಬೇಕು : ತುಕಾರಾಮ ಪೂಜಾರಿ

ಬಿ.ಸಿ ರೋಡ್ : ಅನೇಕ ಚಮತ್ಕಾರಿಕ ಸಂಗತಿಗಳುಳ್ಳ ನಮ್ಮ ನೆಲಮೂಲದ ಸಂಸ್ಕೃತಿ ಅದೆಷ್ಟೋ ವರ್ಷಗಳ ಇತಿಹಾಸವನ್ನು ಹೊಂದಿದೆ. ನಮ್ಮ ಪೂರ್ವಜರ ಪಾಂಡಿತ್ಯ ಹಾಗೂ ಬುದ್ಧಿಮತ್ತೆಯಿಂದ ಸಮಾಜಕ್ಕೆ ಹಲವಾರು ಕೊಡುಗೆಗಳು ಸಂದಿದೆ. ಯಾವ ಕಾಲಕ್ಕೂ ಕ್ಷೇಮಕರವಾದ ನಮ್ಮ ಸಾಂಪ್ರದಾಯಿಕ ಆಚರಣೆಗಳ ಮಹತ್ವವನ್ನರಿತು ಉಳಿಸಿಕೊಂಡು ಮುಂದಿನ ತಲೆಮಾರಿಗೂ ದಾಟಿಸಬೇಕು ಎಂದು ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ನಿರ್ದೇಶಕ  ಹಾಗೂ ಉಪನ್ಯಾಸಕ ತುಕಾರಾಮ ಪೂಜಾರಿ ಹೇಳಿದರು. ಅವರು ಬಿ.ಸಿ ರೋಡ್ ಸಂಜಯಗಿರಿ, ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ, ತುಳು ವಸ್ತು ಸಂಗ್ರಹಾಲಯ

ಎಂದೆಂದಿಗೂ ಸಾಂಪ್ರದಾಯಿಕ ನೆಲಮೂಲದ ಸಂಸ್ಕೃತಿ ಉಳಿಯಬೇಕು : ತುಕಾರಾಮ ಪೂಜಾರಿ Read More »

error: Content is protected !!
Scroll to Top