ಪುತ್ತೂರು

ಕೆದಂಬಾಡಿಯಲ್ಲಿ ಹಾಳೆ ತಟ್ಟೆ ಘಟಕ ಉದ್ಘಾಟನೆ

ಕೆದಂಬಾಡಿ: ಕೆದಂಬಾಡಿ ಗ್ರಾಮ ಪಂಚಾಯತ್ ನ ಆಸರೆ ಸಂಜೀವಿನಿ ಒಕ್ಕೂಟ, ಕೆದಂಬಾಡಿ  ನಂದಿನಿ ರೈತ ಮಹಿಳಾ ಉತ್ಪಾದಕರ ಸಂಘದ ಹಾಳೆ ತಟ್ಟೆ ಘಟಕ  ಉದ್ಘಾಟನಾ ಕಾರ್ಯಕ್ರಮ ನಂದಿನಿ ರೈತ ಮಹಿಳಾ ಉತ್ಪಾದಕರ ಸಂಘದ ಸದಸ್ಯೆ  ಕವಿತಾ ಐತಪ್ಪ ಪೂಜಾರಿ ಇದ್ಯಾಪೆ ಕೆದಂಬಾಡಿ  ಮನೆಯಲ್ಲಿ ನಡೆಯಿತು.  ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷೆ ಚಂದ್ರಾವತಿ  ಕಾರ್ಯಕ್ರಮ ಉದ್ಘಾಟಿಸಿ ಉತ್ಪಾದಕರ ಸಂಘಕ್ಕೆ ಶುಭ ಹಾರೈಸಿದರು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಜಗತ್ ಕೆ – ಎನ್.ಆರ್.ಎಲ್.ಎಂ  ಯೋಜನೆಯ ಬಗ್ಗೆ, ರೈತ ಉತ್ಪಾದಕರ ಸಂಘದ […]

ಕೆದಂಬಾಡಿಯಲ್ಲಿ ಹಾಳೆ ತಟ್ಟೆ ಘಟಕ ಉದ್ಘಾಟನೆ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಆಡಳಿತಾಧಿಕಾರಿ ನೇಮಕ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಮೂರು ವರ್ಷಗಳ ಅವಧಿ ಮುಗಿದಿದ್ದು, ಮುಳಿಯ ಕೇಶವ ಪ್ರಸಾದ್ ಅಧ್ಯಕ್ಷತೆ ಅವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ತಾಪಂ ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಪುತ್ತೂರು ತಾಪಂ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಕಳೆದ 5 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ನವೀನ್ ಭಂಡಾರಿ ಬ್ರಹ್ಮಾವರ ತಾಪಂ ಇ.ಒ. ಆಗಿ ವರ್ಗವಾಗಿದ್ದಾರೆ. ಇದೀಗ ಅವರು ಪುತ್ತೂರು ದೇವಳದ ಆಡಳಿತಾಧಿಕಾರಿಯಾಗಿಯೂ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮೊದಲು ಇವರು ದೇವಳದ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಆಡಳಿತಾಧಿಕಾರಿ ನೇಮಕ Read More »

ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನಕ್ಕೆ ಭೇಟಿ ನೀಡಿದ ಕ್ಯಾಪ್ಟನ್ ಬ್ರಿಜೇಶ್ ಚೌಟ

ಮಾಣಿ: ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆ ನಡೆಯುತ್ತಿದ್ದು, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕ್ಯಾ.ಬ್ರಿಜೇಶ್ ಚೌಟ ಭೇಟಿ ನೀಡಿದರು. ದೈವಸ್ಥಾನಕ್ಕೆ ಭೇಟಿ ನೀಡಿದ ಅವರು ಶ್ರೀ ಉಳ್ಳಾಲ್ತಿ ಅಮ್ಮನವರ ದರ್ಶನ ಪಡೆದು ಗಂಧ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿ ಮುಖ್ಯಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.

ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನಕ್ಕೆ ಭೇಟಿ ನೀಡಿದ ಕ್ಯಾಪ್ಟನ್ ಬ್ರಿಜೇಶ್ ಚೌಟ Read More »

ಕುಂದರ್ ಕುಟುಂಬಸ್ಥರ ನಾಗಬನದಲ್ಲಿ ನಾಗಪ್ರತಿಷ್ಠೆ

ಪಂಜ : ಕುಂದರ್ ಕುಟುಂಬಸ್ಥರ ನಾಗಬನದ ನಾಗಾಪ್ರತಿಷ್ಠೆ ಕಾರ್ಯಕ್ರಮ ಪಂಜದ ಶೆಟ್ಟಿಮೂಲೆ ಎಂಬಲ್ಲಿ ನಡೆಯಿತು. ಕುಟುಂಬದ ಹಿರಿಯರಾದ ರತ್ನಾಕರ ಸುವರ್ಣ, ಆನಂದ ಪೂಜಾರಿ ಅಡೆಕಲ್ಲು, ಹಾಗೂ 150 ಮಂದಿ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪಂಜದ ಶೆಟ್ಟಿಮೂಲೆಯಲ್ಲಿನ ನಾಗಬನದ ಉಸ್ತುವಾರಿಯನ್ನು ಪ್ರಸ್ತುತ ಮಂಗಳೂರಿನ ಕುಂದರ್ ಕುಟುಂಬಸ್ಥರು ನಡೆಸಿಕೊಂಡು ಬರುತಿದ್ದಾರೆ. ಮಂಗಳೂರಿನ ಕುಂದರ್ ಕುಟುಂಬಸ್ಥರು ಮೂಲತಃ ಪಂಜದ ಶೆಟ್ಟಿಮೂಲೆಯವರು. ಹಲವು ವರ್ಷಗಳ ಹಿಂದೆ ಕುಂದರ್ ವಂಶಸ್ಥರು ಎರಡು ಕವಲುಗಳಾಗಿ ಒಂದು ಕವಲು ಮಂಗಳೂರಿನತ್ತ ಪಯಣ ಬೆಳೆಸಿತು ಎಂದು ತಿಳಿದು ಬಂದಿರುತ್ತದೆ.

ಕುಂದರ್ ಕುಟುಂಬಸ್ಥರ ನಾಗಬನದಲ್ಲಿ ನಾಗಪ್ರತಿಷ್ಠೆ Read More »

ಈಶ್ವರಮಂಗಲ ಯುವ ಒಕ್ಕಲಿಗ ಗೌಡ ಸೇವಾ ಸಂಘದಿಂದ ಯುವ ಕ್ರೀಡಾ ಸಂಗಮ-2024

ಪುತ್ತೂರು: ಈಶ್ವರಮಂಗಲ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ನೇತೃತ್ವದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಈಶ್ವರಮಂಗಲ ವಲಯ, ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ, ಒಕ್ಕಲಿಗ ಗೌಡ ಮಹಿಳಾ ಘಟಕದ ಸಹಭಾಗಿತ್ವದಲ್ಲಿ ಮಾಡ್ನೂರು, ಬಡಗನ್ನೂರು, ನೆಟ್ಟಣಿಗೆ ಮುಡ್ನೂರು, ಪಡವನ್ನೂರು, ನಿಡ್ಪಳ್ಳಿ, ನೆಟ್ಟಣಿಗೆ ಬೆಳ್ಳೂರು ಗ್ರಾಮಗಳನ್ನೊಳಗೊಂಡ ವಲಯ ಮಟ್ಟದ ಯುವ ಕ್ರೀಡಾ ಸಂಗಮ ಪಟ್ಟೆ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಜರಗಿತು. ಪೆರಿಗೇರಿ ಶ್ರಿ ಅಯ್ಯಪ್ಪ ಭಜನಾ ಮಂದಿರದ ಮಾಜಿ ಅಧ್ಯಕ್ಷ ಗಣಪತಿ ಗೌಡ ಕೊಡಿಯಡ್ಕ ದೀಪ ಬೆಳಗಿಸಿ

ಈಶ್ವರಮಂಗಲ ಯುವ ಒಕ್ಕಲಿಗ ಗೌಡ ಸೇವಾ ಸಂಘದಿಂದ ಯುವ ಕ್ರೀಡಾ ಸಂಗಮ-2024 Read More »

ಫೆ.13: ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ, ಪರಿವಾರ ದೈವಗಳ ಕಾಲಾವಧಿ ಮೆಚ್ಚಿ ಜಾತ್ರೆ

ಕೆಲಿಂಜ: ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಹಾಗೂ ಪರಿವಾರ ದೈವಗಳ ಕಾಲಾವಧಿ ಮೆಚ್ಚಿ ಜಾತ್ರೆ ಫೆ. 14 ಬುಧವಾರ ರಾತ್ರಿ ನಡೆಯಲಿದೆ. ಜಾತ್ರೆಯ ಪ್ರಯುಕ್ತ ಫೆ.13 ಮಂಗಳವಾರ ರಾತ್ರಿ ಶ್ರೀ ಉಳ್ಳಾಲ್ತಿ ಮಲರಾಯ ಮೂಲ ಭಂಡಾರ ಚಾವಡಿ ಬೆಂಞಣ್ತಿಮಾರ್ ಗುತ್ತಿನಿಂದ ಕೆಲಿಂಜ ಶ್ರೀ ಅಮ್ಮನವರ ಸನ್ನಿಧಾನಕ್ಕೆ ಭಂಡಾರ ಆಗಮನವಾಗಲಿದೆ. ಬೆಳಿಗ್ಗೆ 8 ಗಂಟೆಗೆ ತಂತ್ರಿವರ್ಯರ ಆಗಮನ, 9ಕ್ಕೆ ಪ್ರಾರ್ಥನೆ, ಬಿಂಬ ಶುದ್ಧಿ ನಡೆದು ಬಳಿಕ ಬೆಳಿಗ್ಗೆ 10ಕ್ಕೆ ಬಂಟ್ವಾಳ ಬಡ್ಡಕಟ್ಟೆ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ

ಫೆ.13: ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ, ಪರಿವಾರ ದೈವಗಳ ಕಾಲಾವಧಿ ಮೆಚ್ಚಿ ಜಾತ್ರೆ Read More »

ಲಘು ಮತ್ತು ಪ್ರವಾಹ ರಕ್ಷಣಾ ವಾರ್ಷಿಕ ತರಬೇತಿಯಲ್ಲಿ ಪುತ್ತೂರಿನ ಕೇಶವ ಎಸ್‍. ಅವರಿಗೆ ಚಿನ್ನದ ಪದಕ

ಪುತ್ತೂರು: ಕರ್ನಾಟಕ ರಾಜ್ಯ ಗೃಹರಕ್ಷಕ ದಳ ಮತ್ತು ಬೆಂಗಳೂರು ಪೌರ ರಕ್ಷಣಾ ಅಕಾಡೆಮಿ ವತಿಯಿಂದ ಬೆಂಗಳೂರಿನಲ್ಲಿ ನಡೆದ ಲಘು ಮತ್ತು ಪ್ರವಾಹ ರಕ್ಷಣಾ ವಾರ್ಷಿಕ ತರಬೇತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಘಟಕದ ಕೇಶವ ಎಸ್. ಚಿನ್ನದ ಪದಕ ಪಡೆದಿದ್ದಾರೆ. ಕೇಶವ ಅವರು ಪುತ್ತೂರು ನಗರ ಸಂಚಾರ, ಪುತ್ತೂರು ಗ್ರಾಮಾಂತರ, ಕಡಬ, ಉಪ್ಪಿನಂಗಡಿ ಠಾಣೆಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಪುತ್ತೂರು ಸಂಚಾರ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಪೊಲೀಸು ಉಪ ಮಹಾ ನಿರ್ದೇಶಕ ರವಿ

ಲಘು ಮತ್ತು ಪ್ರವಾಹ ರಕ್ಷಣಾ ವಾರ್ಷಿಕ ತರಬೇತಿಯಲ್ಲಿ ಪುತ್ತೂರಿನ ಕೇಶವ ಎಸ್‍. ಅವರಿಗೆ ಚಿನ್ನದ ಪದಕ Read More »

ಫೆ.7-21 : ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ

ಪುತ್ತೂರು: ನರಿಮೊಗರು ಗ್ರಾಮ ಪಂಚಾಯಿತಿ ಹಾಗೂ ಕಲ್ಲಾರೆ ಕಂಪಾನಿಯೋ ನೆಮ್ಮದಿ ವೆಲ್ ನೆಸ್ ಸೆಂಟರ್ ಜಂಟಿ ಆಶಯದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ ಫೆ. 7 ರಿಂದ ಫೆ. 21ರವರೆಗೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ. ಶಿಬಿರದ ಅಂಗವಾಗಿ ಬೆಳಿಗ್ಗೆ 9.30 ರಿಂದ ಸಂಜೆ 4.30 ರ ತನಕ ಪ್ರತಿದಿನ ಯಾವುದೇ ರೀತಿಯ ಔಷಧವಿಲ್ಲದೆಯೇ ರಕ್ತ ಸಂಚಾರ ಮತ್ತು ನರ ಸಂಬಂಧಿತ ಕಾಯಿಲೆಗಳಿಗೆ ಉಚಿತ ಥೆರಪಿ ನಡೆಯಲಿದೆ. ಫೆ.7 ರಂದು ಶಿಬಿರದ ಉದ್ಘಾಟನೆಯನ್ನು ನರಿಮೊಗರು ಪಂಚಾಯಿತಿ ಅಧ್ಯಕ್ಷೆ

ಫೆ.7-21 : ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ Read More »

ಮುಂಡೂರು ವಲಯ ‘ಯುವ ಕ್ರೀಡಾ ಸಂಭ್ರಮ’ | ಪಾರಿವಾಳ ಹಾರಿ ಬಿಡುವ ಮೂಲಕ ಚಾಲನೆ ನೀಡಿದ ಲೋಕಪ್ಪ ಗೌಡ

ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ತಾಲೂಕು, ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಯುವ ಒಕ್ಕಲಿಗ ಗೌಡ ಸೇವಾ ಸಂಘಪುತ್ತೂರು ಮತ್ತು ಮಹಿಳಾ ಘಟಕದ ಸಹಕಾರದೊಂದಿಗೆ ಯುವ ಒಕ್ಕಲಿಗ ಗೌಡ ಸೇವಾ ಸಂಘ ಮುಂಡೂರು ವಲಯದ ಆತಿಥ್ಯದಲ್ಲಿ ಮುಂಡೂರು ವಲಯ ಮಟ್ಟದ ‘ಯುವ ಕ್ರೀಡಾ ಸಂಭ್ರಮ’ ನರಿಮೊಗರು ಉ.ಹಿ.ಪ್ರಾ.ಶಾಲಾ ಮೈದಾನದಲ್ಲಿ ನಡೆಯಿತು. ನಡೆಯಿತು. ನರಿಮೊಗರು ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಕರೆಮನೆ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಬಳಿಕ

ಮುಂಡೂರು ವಲಯ ‘ಯುವ ಕ್ರೀಡಾ ಸಂಭ್ರಮ’ | ಪಾರಿವಾಳ ಹಾರಿ ಬಿಡುವ ಮೂಲಕ ಚಾಲನೆ ನೀಡಿದ ಲೋಕಪ್ಪ ಗೌಡ Read More »

ನವವಿವಾಹಿತೆ ಶೋಭಾ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ಪುತ್ತೂರು: ನವವಿವಾಹಿತೆ ಶೋಭಾ (26) ಪುತ್ತೂರಿನ ಕುರಿಯ ಗಡಾಜೆ ಎಂಬಲ್ಲಿ ತನ್ನ ಪತಿಯ ಮನೆಯಲ್ಲಿ ಸೋಮವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕುಕ್ಕಾಜೆ ರಾಮಣ್ಣ ಗೌಡ ಮತ್ತು ಪುಷ್ಪ ದಂಪತಿ ಪುತ್ರಿಯಾಗಿರುವ ಶೋಭಾ ಅವರನ್ನು ಕಳೆದ ಒಂದೂವರೆ ತಿಂಗಳ ಹಿಂದೆ ಪುತ್ತೂರು ಗಡಾಜೆ ರೋಹಿತ್ ಅವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರಣ

ನವವಿವಾಹಿತೆ ಶೋಭಾ ನೇಣು ಬಿಗಿದು ಆತ್ಮಹತ್ಯೆ Read More »

error: Content is protected !!
Scroll to Top