ಪುತ್ತೂರು

ಫೆ.10 : ಬೃಹತ್ ಆಧ್ಯಾತ್ಮಿಕ ಸಂಗಮ ‘’ನೂರೇ ಅಜ್ಮೀರ್”

ಪುತ್ತೂರು: ರೆಂಜಿಲಾಡಿ ಇಸ್ಲಾಮಿಕ್ ಸೆಂಟರ್ ವತಿಯಿಂದ ಬೃಹತ್ ಆಧ್ಯಾತ್ಮಿಕ ಸಂಗಮ “ನೂರೇ ಅಜ್ಮೀರ್’’ ಕಾರ್ಯಕ್ರಮ ಫೆ.10 ರಂದು ರೆಂಜಿಲಾಡಿ ಖ್ವಾಜಾ ನಗರದಲ್ಲಿ ನಡೆಯಲಿದೆ ಎಂದು ಕರ್ನಾಟಕ ದಾರಿಮಿ ಉಲಮಾ ಒಕ್ಕೂಟದ ಅಧ್ಯಕ್ಷ ಎಸ್‍.ಬಿ.ಮುಹಮ್ಮದ್ ದಾರಿಮಿ ತಿಳಿಸಿದ್ದಾರೆ. ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲಕ್ಷಾಂತರ ಜನರಿಗೆ ಶಾಂತಿ, ಸಮಾಧಾನ ಹಾಗೂ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುವ ವಿಶ್ವಾಸಿಗಳ ಸಾಂತ್ವನದ ಭರವಸೆಯ ಬೆಳಕು, ವಿಶೇಷ ಆಧ್ಯಾತ್ಮಿಕತೆಯ ಚೈತನ್ಯ ನೀಡುವ ನಿಟ್ಟಿನಲ್ಲಿ ನೂರೇ ಅಜ್ಮೀರ್ ಕಾರ್ಯಕ್ರಮ ಪ್ರಸಿದ್ಧಿ ಪಡೆದಿದ್ದು, ಬಡ ಮಕ್ಕಳ […]

ಫೆ.10 : ಬೃಹತ್ ಆಧ್ಯಾತ್ಮಿಕ ಸಂಗಮ ‘’ನೂರೇ ಅಜ್ಮೀರ್” Read More »

ಪಡೀಲ್ ವಿಜಯನಗರ ಬಡಾವಣೆಯಲ್ಲಿ ವಿದ್ಯುತ್ ಶಾರ್ಟ್‍ ಸರ್ಕ್ಯೂಟ್ | ಸ್ಥಳಕ್ಕೆ ಭೇಟಿ ನೀಡಿ ಸ್ಪಂದಿಸಿದ ಮಾಜಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ನಗರದ ಹೊರವಲಯದ ಪಡೀಲ್ ವಿಜಯನಗರ ಬಡಾವಣೆಯಲ್ಲಿ ವಿದ್ಯುತ್ ಶಾರ್ಟ್‍ ಸರ್ಕ್ಯೂಟ್‍ ನಿಂದ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಬುಧವಾರ ತಡರಾತ್ರಿ ನಡೆದಿದೆ. ವಿಜಯನಗರ ಬಡಾವಣೆ ನಿವಾಸಿ ಶಾಂಭವಿ ನಾಯ್ಕ್ ಅವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಬೆಂಕಿಯಿಂದಾಗಿ ಅಡಿಕೆ ಹಾಗೂ ಅಪಾರ ವಸ್ತುಗಳು ಸುಟ್ಟು ಹೋಗಿ ನಷ್ಟ ಉಂಟಾಗಿದೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಮೆಸ್ಕಾಂ ಅಧಿಕಾರಿಗೆ ಕರೆ

ಪಡೀಲ್ ವಿಜಯನಗರ ಬಡಾವಣೆಯಲ್ಲಿ ವಿದ್ಯುತ್ ಶಾರ್ಟ್‍ ಸರ್ಕ್ಯೂಟ್ | ಸ್ಥಳಕ್ಕೆ ಭೇಟಿ ನೀಡಿ ಸ್ಪಂದಿಸಿದ ಮಾಜಿ ಶಾಸಕ ಸಂಜೀವ ಮಠಂದೂರು Read More »

ಭಾರತೀಯ ಸೇನೆಯ ನಿವೃತ್ತ ವಿದ್ಯಾಧರ್ ಎನ್.ರಿಗೆ ಈಶ್ವರಮಂಗಲ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದಿಂದ ಗೌರವಾರ್ಪಣೆ

ಕಾವು: ಭಾರತೀಯ ಸೇನೆಯಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ಸೇವೆಯಿಂದ ನಿವೃತ್ತಿಗೊಂಡ ಬಡಗನ್ನೂರು ಗ್ರಾಮದ ಪಟ್ಟೆ ವಿದ್ಯಾಧರ್ ಎನ್ ಇವರಿಗೆ ಈಶ್ವರಮಂಗಲ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ನಡೆದ ವಲಯ ಮಟ್ಟದ ಯುವ ಕ್ರೀಡಾ ಸಂಗಮ- 2024 ಕಾರ್ಯಕ್ರಮದ ಸಮಾರೋಪ  ಸಮಾರಂಭದಲ್ಲಿ ಸನ್ಮಾನಿಸಲಾಯಿತು. ವಿದ್ಯಾಧರ ಎನ್‍ಅವರನ್ನು ಶಾಲು ಹೊದಿಸಿ, ಹಾರ ಹಾಕಿ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಪೂರ್ವ ಅಧ್ಯಕ್ಷ ನಾಗಪ್ಪ

ಭಾರತೀಯ ಸೇನೆಯ ನಿವೃತ್ತ ವಿದ್ಯಾಧರ್ ಎನ್.ರಿಗೆ ಈಶ್ವರಮಂಗಲ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದಿಂದ ಗೌರವಾರ್ಪಣೆ Read More »

ದ್ಚಿಚಕ್ರ ವಾಹನ ಕಳವು | ಪ್ರಕರಣ ದಾಖಲು

ಉಪ್ಪಿನಂಗಡಿ: ಗ್ರಾಮ ಪಂಚಾಯಿತಿ ನೀರು ನಿರ್ವಾಹಕ ಉಮೇಶ್ ನಾಯಕ್ ಅವರ  ದ್ವಿಚಕ್ರ ವಾಹನವನ್ನು ಕಳವುಗೈದ ಕುರಿತು ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಉಮೇಶ್ ನಾಯಕ್ ಅವರು ಗಾಂಧೀ ಪಾರ್ಕ್ ನ ಹೈ ಮಾಸ್ಕ್ ವಿದ್ಯುತ್ ಕಂಬದ ಬಳಿ ಹೊಂಡಾ ಆ್ಯಕ್ಟಿವಾವನ್ನು ನಿಲ್ಲಿಸಿದ್ದರು. ಬಳಿಕ ಅದೇ ಸ್ಥಳಕ್ಕೆ ಬಂದಾಗ ವಾಹನ ಕಳವುಗೈದಿರುವ ಕುರಿತು ಗಮನಕ್ಕೆ ಬಂದಿದೆ. ತಕ್ಷಣ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ದ್ಚಿಚಕ್ರ ವಾಹನ ಕಳವು | ಪ್ರಕರಣ ದಾಖಲು Read More »

ಕರ್ನಾಟಕ ಬ್ಯಾಂಕ್‍ ಅಡ್ಯನಡ್ಕ ಶಾಖೆಗೆ ನುಗ್ಗಿದ ಕಳ್ಳರು | ಲಕ್ಷಾಂತರ ಮೌಲ್ಯದ ನಗ, ನಗದು ಕಳವು

ವಿಟ್ಲ: ಅಡ್ಯನಡ್ಕ ಕರ್ನಾಟಕ ಬ್ಯಾಂಕ್‍ಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನ, ಹಣ ಕಳವು ಮಾಡಿ ಪರಾರಿಯಾದ ಘಟನೆ ಬುಧವಾರ ತಡರಾತ್ರಿ ನಡೆದಿದೆ. ವಿಟ್ಲ ಅಡ್ಯನಡ್ಕದಲ್ಲಿ ಕಾರ್ಯಾಚರಿಸುತ್ತಿದ್ದ ಸುಮಾರು 20 ವರ್ಷ ಹಳೆಯ ಕಟ್ಟಡದಲ್ಲಿರುವ ಕರ್ನಾಟಕ ಬ್ಯಾಂಕ್ ಶಾಖೆಯ ಕಿಟಕಿಗಳನ್ನು ಮುರಿದು ಕಳ್ಳರು ಒಳನುಗ್ಗಿದ್ದಾರೆ. ಯಾವುದೇ ಭದ್ರತೆಯಿಲ್ಲದ ಈ ಬ್ಯಾಂಕ್ ನಿಂದ ಕಳ್ಳತನಕ್ಕೆ ಅಜಾಗರೂಕತೆಯೇ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕಳವಾದ ಸೊತ್ತುಗಳ ನಿಖರವಾದ ಮೌಲ್ಯ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.

ಕರ್ನಾಟಕ ಬ್ಯಾಂಕ್‍ ಅಡ್ಯನಡ್ಕ ಶಾಖೆಗೆ ನುಗ್ಗಿದ ಕಳ್ಳರು | ಲಕ್ಷಾಂತರ ಮೌಲ್ಯದ ನಗ, ನಗದು ಕಳವು Read More »

ಕಾವು ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾವು:ಮಾ.1 ರಿಂದ 3 ರ ವರೆಗೆ ಕಾವು  ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ದೇವಸ್ಥಾನದ ವಠಾರದಲ್ಲಿ ನಡೆಯಿತು. ಕಾವು ತುಡರ್ ಯುವಕ ಮಂಡಲದ ಸ್ಥಾಪಕ ಅಧ್ಯಕ್ಷ ಸುಬ್ರಾಯ ಬಲ್ಯಾಯ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಸಮಿತಿ ಅಧ್ಯಕ್ಷ ದಿವ್ಯನಾಥ ಶೆಟ್ಟಿ, ಅರಿಯಡ್ಕ ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್ ಚಾಕೋಟೆ, ಶ್ರೀ ಅಯ್ಯಪ್ಪ ಭಜನಾ ಮಂದಿರದ ಸ್ಥಾಪಕಾಧ್ಯಕ್ಷ ಸುಂದರ ಪೂಜಾರಿ ಕೆರೆಮಾರು, ಉದ್ಯಮಿಗಳಾದ

ಕಾವು ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ದೈಪಿಲ ಕ್ಷೇತ್ರದಲ್ಲಿ  ಇಂದು ಶಿರಾಡಿ ರಾಜನ್ ದೈವ, ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ನೇಮೋತ್ಸವ

ಕಾಣಿಯೂರು:  ಚಾರ್ವಾಕ ಗ್ರಾಮದ ದೈಪಿಲದಲ್ಲಿ ಶ್ರೀ ಕ್ಷೇತ್ರ ದೈಪಿಲ, ಸೇವಾ ಪ್ರತಿಷ್ಠಾನದ ವತಿಯಿಂದ ಶ್ರೀ ಶಿರಾಡಿ ರಾಜನ್ ದೈವ ಹಾಗೂ ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ನೇಮೋತ್ಸವ ನಡೆಯುತ್ತಿದೆ. ತಾ.7ರಂದು ಶ್ರೀ ಸ್ಥಾನದಲ್ಲಿ ಸ್ಥಳ ಶುದ್ಧಿ ಹಾಗೂ ಗಣಹೋಮ, ರಾತ್ರಿ ಗಂಟೆ 8ಕ್ಕೆ ಕೊಪ್ಪದಿಂದ ಭಂಡಾರ ತೆಗೆದು ಇಂದು ಬೆಳಗ್ಗೆ ಶ್ರೀ ಶಿರಾಡಿ ರಾಜನ್ ದೈವ ಹಾಗೂ ಚಕ್ರವರ್ತಿ ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯುತ್ತಿದ್ದು , ಸೇವೆಗಳು ಸಹಿತ ಹರಕೆ ಒಪ್ಪಿಸುವಂತೆ ಭಕ್ತಾದಿಗಳು 12 ಗಂಟೆಗೆ ಮುಂಚಿತವಾಗಿ ಬಂದು

ದೈಪಿಲ ಕ್ಷೇತ್ರದಲ್ಲಿ  ಇಂದು ಶಿರಾಡಿ ರಾಜನ್ ದೈವ, ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ನೇಮೋತ್ಸವ Read More »

ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಯರಿಗೆ “ದಿವ್ಯಾಸ್ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ”

ಪುತ್ತೂರು: ಮಂಗಳೂರು ನಗರದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯದಲ್ಲಿ ನಡೆದ ಇಂಟಿಗ್ರಲ್  ಯೋಗ ಸತ್ಸಂಗ 2023-24 ನೇ ಸಾಲಿನ “ದಿವ್ಯಾಸ್  ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ”  ಯನ್ನು ಪುತ್ತೂರು ವಿವೇಕಾನಂದ (ಸ್ವಾಯತ್ತ) ಕಾಲೇಜಿನ ವಿದ್ಯಾರ್ಥಿನಿಯರಾದ ಪ್ರಜ್ಞಾ ಡಿ.  ಹಾಗೂ  ಐದನೇ ಸುತ್ತಿನ ಸೇವಾ ಪ್ರಾಜೆಕ್ಟ್ ನಲ್ಲಿ ನಗದು ಹಾಗೂ ವೈಯಕ್ತಿಕ ಟ್ರೋಫಿಯನ್ನು ಒಳಗೊಂಡ    ಎರಡನೆಯ ಬಹುಮಾನವನ್ನು ತೃತೀಯ ಬಿ ಎ ವಿದ್ಯಾರ್ಥಿನಿ ದೀಪ್ತಿ ಅಡ್ಡಂತ್ತಡ್ಕ ಪಡೆದುಕೊಂಡಿದ್ದಾರೆ. ಪ್ರಶಸ್ತಿಯು ರೋಲಿಂಗ್ ಶೀಲ್ಡ್, ನಗದು ಹಾಗೂ ವೈಯಕ್ತಿಕ ಟ್ರೋಫಿ ಒಳಗೊಂಡಿದೆ.

ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಯರಿಗೆ “ದಿವ್ಯಾಸ್ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ” Read More »

ಪುತ್ತೂರಿಗೆ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

ಪುತ್ತೂರು: ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೇ ವರ್ಷಾಚರಣೆ – ದಶಾಂಬಿಕೋತ್ಸವದ ಸಮಾರೋಪ ಸಮಾರಂಭ ಎ.25 ರಂದು ನಡೆಯಲಿದ್ದು, ಕಾರ್ಯಕ್ರಮದಲ್ಲಿ ಶೃಂಗೇರಿ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಸಹಿತ ತತ್ಕರಕಮಲ ಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಭಾಗವಹಿಸಲಿದ್ದಾರೆ. ಎ.24ರಂದು ಸ್ವಾಮೀಜಿಯವರನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಪುತ್ತೂರಿಗೆ ಬರಮಾಡಿಕೊಳ್ಳಲಾಗುವುದು. ಸಂಜೆ ಬಪ್ಪಳಿಗೆ  ಶ್ರೀ ಶಂಕರ ಸಭಾಭವನದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ಶ್ರೀ ಚಂದ್ರಮೌಳೀಶ್ವರ ಪೂಜೆಯನ್ನು ಸ್ವಾಮೀಜಿಯವರು ನೆರವೇರಿಸಲಿದ್ದು, ಬಳಿಕ ಅಂಬಿಕಾ ಸಮೂಹ

ಪುತ್ತೂರಿಗೆ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ Read More »

ಆಸ್ಪತ್ರೆ ಕಟ್ಟಡ ಮಹಡಿಯಿಂದ ಜಿಗಿದು ಆತ್ಮಹತ್ಯೆ !

ಪುತ್ತೂರು: ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಯ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ. ತಿಂಗಳಾಡಿ ಮೂಲದ ಕೂಲಿ ಕಾರ್ಮಿಕ ವಸಂತ ಆತ್ಮಹತ್ಯೆ ಮಾಡಿಕೊಂಡವರು. ವಸಂತ ಅವರು ಫಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದು, ಮೂರು ದಿನಗಳ ಹಿಂದೆ ಚಿಕಿತ್ಸೆಗಾಗಿ ಸುಳ್ಯ ಕೆವಿಜಿ ಆಯುರ್ವೇದಿಕ್‌ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮುಂಜಾನೆ ಆರು ಗಂಟೆ ಸುಮಾರಿಗೆ ಆಸ್ಪತ್ರೆಯ ಕಟ್ಟಡದ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯರನ್ನು ಅಗಲಿದ್ದಾರೆ. ಸುಳ್ಯ ಸರ್ಕಾರಿ

ಆಸ್ಪತ್ರೆ ಕಟ್ಟಡ ಮಹಡಿಯಿಂದ ಜಿಗಿದು ಆತ್ಮಹತ್ಯೆ ! Read More »

error: Content is protected !!
Scroll to Top