ಪುತ್ತೂರು

ಸೆ.5: ಪುತ್ತೂರಿನಲ್ಲಿ 33ನೇ ವರ್ಷದ ಮಿಲಾದ್ ಸಮಾವೇಶ ಹಾಗೂ ನಾತೇ ಶರೀಫ್

ಪುತ್ತೂರು: ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಮತ್ತು ತಾಲೂಕು ಈದ್ ಮಿಲಾದ್ ಸಮಿತಿಯ ನೇತೃತ್ವದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ(ಸ.ಅ)ಅವರ 1500ನೇ ಜನ್ಮ ದಿನಾಚರಣೆಯ ಪ್ರಯುಕ್ತ 33ನೇ ವರ್ಷದ ಮೀಲಾದ್ ಸಮಾವೇಶ ಹಾಗೂ ನಾತೇ ಶರೀಫ್ ಕಾರ್ಯಕ್ರಮ ಸೆ.5ರಂದು ಸಂಜೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಹಾಜಿ ಕಲ್ಲೇಗ ತಿಳಿಸಿದ್ದಾರೆ. ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶದ ಸಭಾ ಕಾರ್ಯಕ್ರಮಕ್ಕೆ ಮೊದಲು ನಗರದ ದರ್ಬೆ ಪ್ರವಾಸಿ ಮಂದಿರದ ಬಳಿಯಿಂದ ಕಿಲ್ಲೆ ಮೈದಾನದ […]

ಸೆ.5: ಪುತ್ತೂರಿನಲ್ಲಿ 33ನೇ ವರ್ಷದ ಮಿಲಾದ್ ಸಮಾವೇಶ ಹಾಗೂ ನಾತೇ ಶರೀಫ್ Read More »

ಪ್ರಮಾಣಕ್ಕೆ ಸ್ಥಳ, ಸಮಯ ನಿಗದಿಪಡಿಸಿ | ಪುತ್ತೂರು ಶಾಸಕ ಅಶೋಕ್ ರೈಗೆ ಪುತ್ತೂರು ಬಿಜೆಪಿ ಪ್ರತಿ ಸವಾಲ್.

ಪುತ್ತೂರು: ಹಿಂದಿನ ಅವಧಿಯಲ್ಲಿ ಅಕ್ರಮ ಸಕ್ರಮದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಹಣ ಪಡೆದುಕೊಂಡಿದ್ದಾರೆ ಎಂದು 47 ಮಂದಿ ಫಲಾನುಭವಿಗಳು ನನಗೆ ದೂರು ನೀಡಿದ್ದಾರೆ ಎಂದು ಹಾಲಿ ಶಾಸಕ ಅಶೋಕ್ ಕುಮಾರ್ ರೈ ಆರೋಪಿಸಿದ್ದು, ಅಲ್ಲವೆಂದಾದಲ್ಲಿ ಸಂಜೀವ ಮಠಂದೂರು ಅವರು ಮಹಾಲಿಂಗೇಶ್ವರ ದೇವಳಕ್ಕೆ ಆಗಮಿಸಿ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದರು. ಇದಕ್ಕೆ ಪ್ರತಿ ಸವಾಲ್ ನೀಡಿರುವ ಬಿಜೆಪಿ ಪ್ರಮಾಣಕ್ಕೆ ಮಾಜಿ ಶಾಸಕರು ಸಿದ್ದರಿದ್ದಾರೆ. ಅಶೋಕ್ ರೈ ಅವರು ಪ್ರಮಾಣಕ್ಕೆ ಸ್ಥಳ ಮತ್ತು ಸಮಯ ನಿಗದಿ

ಪ್ರಮಾಣಕ್ಕೆ ಸ್ಥಳ, ಸಮಯ ನಿಗದಿಪಡಿಸಿ | ಪುತ್ತೂರು ಶಾಸಕ ಅಶೋಕ್ ರೈಗೆ ಪುತ್ತೂರು ಬಿಜೆಪಿ ಪ್ರತಿ ಸವಾಲ್. Read More »

ಇಚ್ಚ್ಯೂರಲ್ಲಿ ಶ್ರೀ ಮಹಾಭಾರತ ಸರಣಿ ತಾಳ ಮದ್ದಳೆಯ ಮೂರನೇ ಹಂತದ ಕಾರ್ಯಕ್ರಮ.

ಉಪ್ಪಿನಂಗಡಿ: ಶ್ರೀ ಕಾಳಿಕಾಂಬಾ ಯಕ್ಷ ಕಲಾ ಟ್ರಸ್ಟಿನ 50ನೇ ವರ್ಷದ ಸುವರ್ಣ ಶತಕ  ಶ್ರೀ ಮಹಾಭಾರತ ಸರಣಿಯ ಮೂರನೇ ಹಂತದ ತಾಳಮದ್ದಳೆ ಕಾರ್ಯಕ್ರಮ ಇಚ್ಚುರೂ ಶ್ರೀ ಬಾಲಸುಬ್ರಮಣ್ಯ ದೇವಸ್ಥಾನದಲ್ಲಿ ಜರಗಿತು . ಕಾರ್ಯಕ್ರಮವನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ಸುರೇಶ್ ಪುತ್ತೂರಾಯ ಉದ್ಘಾಟಿಸಿದರು. ಕಲಾಪೋಷಕ ಉಮೇಶ ಶೆಣೈ ರಾಮನಗರ, ಸತೀಶ್ ಕುಮಾರ್ ಸಾಫ್ಟ್ವೆರ್ ಇಂಜಿನಿಯರ್ ಬೆಂಗಳೂರು, ಅನುರಾಧ ಸತೀಶ್ ಕರ್ನಾಟಕ ಬ್ಯಾಂಕ್ ಬೆಂಗಳೂರು, ಪೆರಿಯಡ್ಕ ಸಾಂಸ್ಕೃತಿಕ ಕಲಾ ಕೇಂದ್ರದ ಸಂಚಾಲಕ ಕೆ.ಮಹಾಲಿಂಗೇಶ್ವರ ಭಟ್, ಪದ್ಮಾ ಕೆ ಆರ್ ಆಚಾರ್ಯ

ಇಚ್ಚ್ಯೂರಲ್ಲಿ ಶ್ರೀ ಮಹಾಭಾರತ ಸರಣಿ ತಾಳ ಮದ್ದಳೆಯ ಮೂರನೇ ಹಂತದ ಕಾರ್ಯಕ್ರಮ. Read More »

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಸ್ಥಾಪನಾ ದಿನಾಚರಣೆ | ಸಂಘದ ಎಲ್ಲಾ ಶಾಖೆಗಳಲ್ಲಿ ದೀಪ ಪ್ರಜ್ವಲನೆ ಮೂಲಕ ಆಚರಣೆ

ಕಾಣಿಯೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಸ್ಥಾಪನಾ ದಿನಾಚರಣೆಯನ್ನು ಇಂದು ಮಂಗಳವಾರ ಕಾಣಿಯೂರು ಶಾಖೆಯಲ್ಲಿ ಆಚರಿಸಲಾಯಿತು. ಹಿರಿಯರಾದ, ಸಲಹಾ ಸಮಿತಿ ಸದಸ್ಯ ಸೀತಾರಾಮ ಗೌಡ ಮುಂಡಾಳ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಸಲಹಾ ಸಮಿತಿ ಸದಸ್ಯ ಗೋಪಾಲಕೃಷ್ಣ ಪಟೇಲ್‍ ಚಾರ್ವಾಕ ಸಂಘ ನಡೆದು ಬಂದ ಹಾದಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ಸಂಘ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದರು. ಸಲಹಾ ಸಮಿತಿ ಸದಸ್ಯರಾದ ಚಂದ್ರಶೇಖರ ಗೌಡ ಬರೆಪ್ಪಾಡಿ, ನಾಗೇಶ್ ಕೆಡೆಂಜಿ, ಶೇಷಪ್ಪ ಗೌಡ ಅಬೀರ

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಸ್ಥಾಪನಾ ದಿನಾಚರಣೆ | ಸಂಘದ ಎಲ್ಲಾ ಶಾಖೆಗಳಲ್ಲಿ ದೀಪ ಪ್ರಜ್ವಲನೆ ಮೂಲಕ ಆಚರಣೆ Read More »

ವೈದ್ಯಕೀಯ ಚಿಕಿತ್ಸೆಗೆ ಪುತ್ತಿಲ ಪರಿವಾರ ಟ್ರಸ್ಟ್ ನಿಂದ ಧನ ಸಹಾಯ ಹಸ್ತಾಂತರ

ಪುತ್ತೂರು: ತೆಂಕಿಲ ನಿವಾಸಿ ಗಿರೀಶ್ ನಾಯ್ಕ್ ರವರು ಅರೋಗ್ಯ ಸಮಸ್ಯೆಯಿಂದ ಬಳಲುತಿದ್ದು ಅವರ ವೈದ್ಯಕೀಯ ಚಿಕಿತ್ಸೆಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ಮೂಲಕ ಸಹಾಯ ಹಸ್ತದ ಚೆಕ್ಕನ್ನು ಹಸ್ತಾಂತರಿಸಲಾಯಿತು. ಟ್ರಸ್ಟ್ ಕಚೇರಿಯಲ್ಲಿ ಧನಸಹಾಯ ಹಸ್ಥಾಂತರಿಸಲಾಯಿತು ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಕೋಶಾಧಿಕಾರಿ ರೂಪೇಶ್ ನಾಯ್ಕ್ ಟಿ, ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ, ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಕೊಡಿಬೈಲ್, ಪ್ರಮುಖರಾದ

ವೈದ್ಯಕೀಯ ಚಿಕಿತ್ಸೆಗೆ ಪುತ್ತಿಲ ಪರಿವಾರ ಟ್ರಸ್ಟ್ ನಿಂದ ಧನ ಸಹಾಯ ಹಸ್ತಾಂತರ Read More »

ಅಕ್ಷಯ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ

ಪುತ್ತೂರು: ಅಕ್ಷಯ ಕಾಲೇಜಿನ ಬೈಟ್-ಬ್ಲಿಟ್ಜ್ ಐಟಿ ಕ್ಲಬ್ ಮತ್ತು ಐಕ್ಯೂಎಸಿ ಯಿಂದ “ಬ್ರಿಡ್ಜಿಂಗ್ ದಿ ಗ್ಯಾಪ್ – ತಾಂತ್ರಿಕ ಜ್ಞಾನದಿಂದ ಶಕ್ತಿಶಾಲಿ ಸಂವಹನಕ್ಕೆ ಸೇತುವೆ” ಎಂಬ ವಿಚಾರ ಸಂಕಿರಣ ಇತ್ತೀಚೆಗೆ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಡಿವಿಷನ್‍ ಎಫ್‍ ಜಿಲ್ಲೆ 121 ರ ಡಿವಿಷನ್‍ ಡೈರೆಕ್ಟರ್ ಡಾ. ಮೀರಾ ಎ. ರಾವ್, ತಾಂತ್ರಿಕ ಜ್ಞಾನದಿಂದ ಶಕ್ತಿಶಾಲಿ ಸಂವಹನಕ್ಕೆ ಎಂಬ ವಿಷಯವನ್ನು ವಿವರಿಸುತ್ತಾ, ತಂತ್ರಜ್ಞಾನದ ಭಾಷೆಯನ್ನು ಸಾಮಾನ್ಯ ಮಾನವನ ಭಾಷೆಗೆ ಭಾಷಾಂತರಿಸುವುದು ಹಿಂದಿನಿಂದಲೂ ಒಂದು ದೊಡ್ಡ

ಅಕ್ಷಯ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ Read More »

ವಿವೇಕಾನಂದ ಕಾಲೇಜಿನಲ್ಲಿ 44 ನೇ ವರ್ಷದ ಮಾನ್ಸೂನ್‌ ಚೆಸ್ ಪಂದ್ಯಾಟ | ಕ್ಷಿಪ್ರ ನಿರ್ಧಾರ ತೆಗೆದುಕೊಳ್ಳುವಲ್ಲಿ ಚೆಸ್ ಸಹಕಾರಿಯಾಗಿದೆ : ಶ್ರೀಹರಿ. ಪಿ

ಪುತ್ತೂರು: ಕ್ಷಣಮಾತ್ರದಲ್ಲಿಯೇ ಎದುರಾಳಿಯನ್ನು  ಹೇಗೆ ಎದುರಿಸಬೇಕೆಂದು ಯೋಚಿಸಿ ಆಡುವ ಕಲೆಯೇ ಚೆಸ್. ಚೆಸ್‌ಆಟದಲ್ಲಿ ತಾಳ್ಮೆ ಹಾಗೂ ಏಕಾಗ್ರತೆ ಬಹು ಮುಖ್ಯವಾಗಿರುತ್ತದೆ. ಆಟದಲ್ಲಿ ಸೋಲು ಗೆಲುವು ಸರ್ವೆ ಸಾಮಾನ್ಯ. ಸೋತರೆ ಅನುಭವ, ಗೆದ್ದರೆ ಅವಕಾಶ ಸಿಗುತ್ತದೆ ಎಂದು ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ, ಕ್ಲಸ್ಟರ್ ಮುಖ್ಯಸ್ಥ ಶ್ರೀಹರಿ ಪಿ. ಹೇಳಿದರು. ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ( ಸ್ವಾಯತ್ತ )ದಲ್ಲಿ ದೈಹಿಕ ಶಿಕ್ಷಣ ವಿಭಾಗ ಮತ್ತು ಕ್ರೀಡಾ ಇಲಾಖೆ ಹಾಗೂ ಐಕ್ಯೂಎಸಿ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲ

ವಿವೇಕಾನಂದ ಕಾಲೇಜಿನಲ್ಲಿ 44 ನೇ ವರ್ಷದ ಮಾನ್ಸೂನ್‌ ಚೆಸ್ ಪಂದ್ಯಾಟ | ಕ್ಷಿಪ್ರ ನಿರ್ಧಾರ ತೆಗೆದುಕೊಳ್ಳುವಲ್ಲಿ ಚೆಸ್ ಸಹಕಾರಿಯಾಗಿದೆ : ಶ್ರೀಹರಿ. ಪಿ Read More »

ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ಅಪಮಾನ | ಪುತ್ತೂರಿನಲ್ಲಿ ಬೃಹತ್ ಜನಾಗ್ರಹ ಸಭೆ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ಈಗಾಗಲೇ ಅಪಪ್ರಚಾರ ಇರುವುದರಿಂದ ನೈಜ ಸಂಗತಿ ಹೊರಬರಲು ಈಗಾಗಲೇ ಎಸ್‌ಐಟಿ ತನಿಖೆ ಒಳಪಡಿಸಿದಂತೆ ಎನ್‌ಐಎ ತನಿಖೆಗೂ ಒಳಪಡಿಸಬೇಕು, ಈಗಾಗಲೇ ಜನರಲ್ಲಿ ಕ್ಷೇತ್ರದ ಕುರಿತು ನಕಾರಾತ್ಮಕ ಚಿಂತನೆಗಳಿದ್ದು, ಅವುಗಳನ್ನು ತಮ್ಮ ಮನಸ್ಸಿನಿಂದ ತೆಗೆದು ಹಾಕಬೇಕು, ಸೌಜನ್ಯ ಅತ್ಯಾಚಾರ ಆಗಿರುವುದಂತೂ ನಿಜ ಸೌಜನ್ಯಗಳಿಗೆ ನ್ಯಾಯ ದೊಕಿಸುವ ಕೆಲಸ ಆಗಬೇಕು ಮುಂತಾದ ಆಗ್ರಹಗಳು ಕೇಳಿ ಬಂದವು. ಇದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನಲ್ಲಿ ಪುತ್ತೂರು ತಾಲೂಕು ಶ್ರೀ ಧರ್ಮಸ್ಥಳ ಸಂರಕ್ಷಣಾ ವೇದಿಕೆ ವತಿಯಿಂದ

ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ಅಪಮಾನ | ಪುತ್ತೂರಿನಲ್ಲಿ ಬೃಹತ್ ಜನಾಗ್ರಹ ಸಭೆ Read More »

ಡಾ. ಚಿನ್ನಪ್ಪ ಗೌಡ- 70  – – ಸರಳತೆಯೇ ಎತ್ತರ!

ನಮ್ಮ ದೇಶದ ವಿಶ್ವವಿದ್ಯಾನಿಲಯಗಳಿಗೆ  ಆದರದ್ದೇ ಒಂದು ಭಾಷೆ ಇದೆ. ಅಧ್ಯಯನ, ಅಧ್ಯಾಪನ, ಸಂಶೋಧನೆ, ಅಭಿವ್ಯಕ್ತಿ… ಎಲ್ಲಾ ದಾರಿಗಳಲ್ಲಿ ಆ ಭಾಷೆ ಜಾರಿಯಲ್ಲಿರುತ್ತದೆ. ವಿಶ್ವವಿದ್ಯಾನಿಲಯದ ಅಂಗಳದಲ್ಲಿ ಅಡ್ಡಾಡುವ ವಿದ್ಯಾರ್ಥಿಗಳೇ ಆಗಿರಲಿ, ತರಗತಿ ಕೋಣೆಯ ಸಮ್ಮುಖದ  ಮಕ್ಕಳೇ ಇರಲಿ, ಅಥವಾ  ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ಗಂಭೀರ ವಿಚಾರಗೋಷ್ಠಿಗಳಾಗಲೀ ಅಲ್ಲೆಲ್ಲ  ತಮ್ಮ ವಿಚಾರ -ಮಾತುಗಳನ್ನು ಸಂಕೀರ್ಣಗೊಳಿಸಿದಷ್ಟು ಅದು ಮೌಲ್ಯ ಎಂದು ಪರಿಭಾವಿಸುವ ಕ್ರಮವದು. ಸರಳವಾಗಿ ಹೇಳುವುದಾದರೆ ಅರ್ಥವಾಗದ ಭಾಷೆಯಲ್ಲಿ ಮಾತನಾಡುವುದೇ  ಘನತೆ, ತೂಕ ಎಂದೆಲ್ಲ ಪರಿಭಾವಿಸುವ ಕ್ರಮದಿಂದಾಗಿಯೇ ಬಹುತೇಕ  ಪ್ರೊಫೆಸರ್ಸುಗಳು  ಸುಲಲಿತ ಸಾಮಾಜಿಕರ ನಡುವೆ  ಕಳೆದುಹೋಗುವುದೇ ಹೆಚ್ಚು. ಭಾಗಶಃ ಅವರ ಅಧ್ಯಯನ,

ಡಾ. ಚಿನ್ನಪ್ಪ ಗೌಡ- 70  – – ಸರಳತೆಯೇ ಎತ್ತರ! Read More »

ಪುತ್ತಿಲ ಪರಿವಾರ ಟ್ರಸ್ಟ್ ನಿಂದ ಧನಸಹಾಯ ವಿತರಣೆ

ಪುತ್ತೂರು: ಪುತ್ತೂರು ಪುತ್ತಿಲಪರಿವಾರ ಸೇವಾ ಟ್ರಸ್ಟ್ ವತಿಯಿಂದ ಪಾಣಾಜೆ ಗ್ರಾಮದ ಮುಂಡೊಮೂಲೆ ನಿವಾಸಿ ರಾಮ ನಾಯ್ಕರವರ ಪತ್ನಿ ಚಿತ್ರಕಲಾರವರ ಅನಾರೋಗ್ಯದ ನಿಮಿತ್ತ ಚಿಕಿತ್ಸೆಗಾಗಿ ಧನಸಹಾಯವನ್ನು ಟ್ರಸ್ಟ್‍ ಕಚೇರಿಯಲ್ಲಿ  ನೀಡಲಾಯಿತು. ಪುತ್ತಿಲ ಟ್ರಸ್ಟ್‍ ಕಚೇರಿಯಲ್ಲಿ ಧನಸಹಾಯ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪುತ್ತಿಲ ಪರಿವಾರ ಟ್ರಸ್ಟ್ ನಿಂದ ಧನಸಹಾಯ ವಿತರಣೆ Read More »

error: Content is protected !!
Scroll to Top