ಪುತ್ತೂರು

ಪೈಂಟರ್ ಬಾಲಕೃಷ್ಣ ಆತ್ಮಹತ್ಯೆ !

ಪುತ್ತೂರು: ಬೆದ್ರಾಳ ನಿವಾಸಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ವೃತ್ತಿಯಲ್ಲಿ ಪೈಂಟರ್ ಆಗಿರುವ ಬಾಲಕೃಷ್ಣ ಆತ್ಮಹತ್ಯೆ ಮಾಡಿಕೊಂಡವರು. ಬೆದ್ರಾಳ ರೈಲ್ವೇ ಸೇತುವೆ ಬಳಿ ವಾಸಿಸುತ್ತಿದ್ದ ಅವರು, ಕಳೆದ ಕೆಲ ಸಮಯಗಳಿಂದ ಸಾಮೆತ್ತಡ್ಕದಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ.

ಪೈಂಟರ್ ಬಾಲಕೃಷ್ಣ ಆತ್ಮಹತ್ಯೆ ! Read More »

ಪಾದಚಾರಿಗೆ ಬೈಕ್ ಡಿಕ್ಕಿ | ಪ್ರಕರಣ ದಾಖಲು

ಪುತ್ತೂರು: ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಗಾಯಗೊಂಡ ಘಟನೆ ಕುಂಬ್ರದಲ್ಲಿ ನಡೆದಿದೆ. ಕೆದಂಬಾಡಿ ಗ್ರಾಮದ ಕುರಿಕ್ಕಾರ ನಿವಾಸಿ ಕೊರಗಪ್ಪ ಪೂಜಾರಿ ಗಾಯಗೊಂಡವರು. ಪತ್ನಿ ರೇವತಿ ಜೊತೆ ಕುಂಬ್ರ ಪೇಟೆಗೆ ಬಂದು ರಸ್ತೆ ಬದಿ ನಡೆದುಕೊಂಡು ಬರುತ್ತಿದ್ದ ವೇಳೆ ಹಿಂದಿನಿಂದ ಬಂದ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ರಸ್ತೆಗೆ ಬಿದ್ದು ಗಾಯಗೊಂಡರು. ತಕ್ಷಣ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾದಚಾರಿಗೆ ಬೈಕ್ ಡಿಕ್ಕಿ | ಪ್ರಕರಣ ದಾಖಲು Read More »

ಸರಕಾರದ ರಿಯಾಯಿತಿ ದರದ ಸಾಲಗಳು ದ.ಕ., ಉಡುಪಿಯಲ್ಲಿ ಅನುಷ್ಠಾನವಾಗಿಲ್ಲ | ಅಧಿವೇಶನದಲ್ಲಿ ಸರಕಾರದ ಗಮನಸೆಳೆದ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ರಾಜ್ಯ ಸರಕಾರ ಕೃಷಿಕರ, ರೈತರ ಪರವಾಗಿದೆ. ಈ ಕಾರಣಕ್ಕೆ ಸರಕಾರ ಕೃಷಿಕರಿಗೆ ಸಹಕಾರಿ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ನೀಡುತ್ತಿದ್ದ ಅಲ್ಪಾವಧಿ ಸಾಲದ ಮೊತ್ತ 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಿತ್ತು. ಶೇ. 3 ಬಡ್ಡಿದರದಲ್ಲಿ ಕೃಷಿಕರಿಗೆ ದೊರೆಯುತ್ತಿದ್ದ ಸಾಲದ ಮೊತ್ತವನ್ನು 10 ರಿಂದ 15 ಲಕ್ಷಕ್ಕೆ ಏರಿಕೆ ಮಾಡಿದೆ. ಆದರೆ ಈ ಎರಡೂ ಯೋಜನೆಗಳು ದ ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಅನುಷ್ಠಾನವಾಗಿಲ್ಲ ಇದುವರೆಗೂ ಯಾವುದೇ ಕೃಷಿಕರಿಗೆ ಯೋಜನೆಯು ತಲುಪಿಲ್ಲ ಎಂದು ಪುತ್ತೂರು ಶಾಸಕರಾದ

ಸರಕಾರದ ರಿಯಾಯಿತಿ ದರದ ಸಾಲಗಳು ದ.ಕ., ಉಡುಪಿಯಲ್ಲಿ ಅನುಷ್ಠಾನವಾಗಿಲ್ಲ | ಅಧಿವೇಶನದಲ್ಲಿ ಸರಕಾರದ ಗಮನಸೆಳೆದ ಶಾಸಕ ಅಶೋಕ್ ಕುಮಾರ್ ರೈ Read More »

ಮಾ.3: ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ನಿಂದ ಉಚಿತ ಉದರ ಸಂಬಂಧಿ ರೋಗಗಳ ತಪಾಸಣಾ ಶಿಬಿರ

ಪುತ್ತೂರು: ಪುರುಷರಕಟ್ಟೆ ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ವತಿಯಿಂದ ಉಚಿತ ಉದರ ಸಂಬಂಧಿ ರೋಗಗಳ ತಪಾಸಣಾ ಶಿಬಿರ ಮಾ.3 ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 5 ರ ತನಕ ನಡೆಯಲಿದೆ. ಶಿಬಿರದಲ್ಲಿ ಗ್ಯಾಸ್ ಟ್ರಬಲ್, ಆಸಿಡಿಟಿ, ಮಲ ಬದ್ಧತೆ, ಹೊಟ್ಟೆ ನೋವು, ಎದೆ ಮತ್ತು ಹೊಟ್ಟೆ ಉರಿ, ಹುಳಿ ತೇಗು, ಹೊಟ್ಟೆ ಉಬ್ಬರ, ಕಿಡ್ನಿ ಹಾಗೂ ಲಿವರ್ ಸಂಬಂಧಿ ಮುಂತಾದ ಸಮಸ್ಯೆ ಇದ್ದವರು ಕೂಡಲೇ ತಪಾಸಣೆ ಮಾಡಿಕೊಂಡು ಮುಂದೆ ಆಗುವ ಅನೇಕ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬಹುದು. ಆತ್ರೇಯ

ಮಾ.3: ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ನಿಂದ ಉಚಿತ ಉದರ ಸಂಬಂಧಿ ರೋಗಗಳ ತಪಾಸಣಾ ಶಿಬಿರ Read More »

ವ್ಯಾಪಾರಿ ಶ್ರೀರಾಮ್ ಭಟ್ ಮೃತದೇಹ ಕೆರೆಯಲ್ಲಿ ಪತ್ತೆ !

ಪೆರ್ಲ: ಪೆರ್ಲ ಪೇಟೆಯ ವ್ಯಾಪಾರಿಯೊಬ್ಬರ ಮೃತದೇಹ ಮನೆ ಸಮೀಪದ ತೋಟದ ಕರೆಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ವಿನಾಯಕ ಸ್ಟೋರ್ಸ್ ಮಾಲಕ, ಪಳ್ಳತ್ತಮೂಲೆ ನಿವಾಸಿ ಶ್ರೀರಾಮ್ ಭಟ್‌ (52) ಎಂಬವರ ಮೃತದೇಹ ಮನೆ ಸಮೀಪದ ತೋಟದ ಕೆರೆಯಲ್ಲಿ ಗುರುವಾರ ರಾತ್ರಿ ಪತ್ತೆಯಾಗಿದೆ. ಪೆರ್ಲ ಪೇಟೆಯಲ್ಲಿ ಕಳೆದ ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದ ಶ್ರೀರಾಮ್ ಭಟ್‍ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಸದಸ್ಯರಾಗಿ, ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದರು. ತೀವ್ರ ಖಿನ್ನತೆಯಿಂದ ಬಳಲುತ್ತಿದ್ದ ಅವರು ಅಂಗಡಿಯ‌ನ್ನು ಸರಿಯಾಗಿ ತೆರಯುತ್ತಿರಲಿಲ್ಲ. ಎರಡು

ವ್ಯಾಪಾರಿ ಶ್ರೀರಾಮ್ ಭಟ್ ಮೃತದೇಹ ಕೆರೆಯಲ್ಲಿ ಪತ್ತೆ ! Read More »

ಹಾರೂನ್ ಪುರುಷರಕಟ್ಟೆ ನಿಧನ

ಪುತ್ತೂರು: ಪುರುಷರಕಟ್ಟೆ ಹಿಮಾಯತ್ತುಲ್ ಇಸ್ಲಾಂ ಮದ್ರಸದ ಸ್ಥಾಪಕ ಅಧ್ಯಕ್ಷ ಹಾರೂನ್ ಪುರುಷರಕಟ್ಟೆ (65) ಅಲ್ಪ ಕಾಲದ ಅಸೌಖ್ಯದಿಂದ ಫೆ.29 ರಂದು ನಿಧನರಾದರು. ಪುರುಷರಕಟ್ಟೆ ಹಿಮಾಯತ್ತುಲ್ ಇಸ್ಮಾಂ ಮದ್ರಸದಲ್ಲಿ 20 ವರ್ಷಕ್ಕಿಂತ ಅಧಿಕ ವರ್ಷ ಅಧ್ಯಕ್ಷರಾಗಿ, ಮುಕ್ವೆ ರೆಹ್ಮನಿಯ ಜುಮಾ ಮಸೀದಿಯ ಕಾರ್ಯದರ್ಶಿಯಾಗಿ, ಮುಕ್ವೆ ದರ್ಗಾ ಶರೀಫ್‍ ನ ಉರೂಸ್ ಕಮಿಟಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ, ಪುತ್ರಿ, ಸಹೋದರರನ್ನು ಅಗಲಿದ್ದಾರೆ.

ಹಾರೂನ್ ಪುರುಷರಕಟ್ಟೆ ನಿಧನ Read More »

ಪುತ್ತೂರು ಪೇಟೆಯಲ್ಲಿನ ಅಪಾಯಕಾರಿ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಒತ್ತಾಯ | ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ನಗರಸಭೆಗೆ ಮನವಿ

ಪುತ್ತೂರು: ಪುತ್ತೂರು ಪೇಟೆಯಲ್ಲಿ ಹಲವಾರು ಕಡೆಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ನಗರಸಭೆ ಪೌರಾಯುಕ್ತ ಮಧು ಎಸ್‍.ಮನೋಹರ್ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು. ನಗರದ ಗಾಂಧಿಕಟ್ಟೆ, ಅರುಣಾ ಕಲಾ ಮಂದಿರ, ಸಚಿನ್ ಟ್ರೇಡಿಂಗ್ ಮುಂಭಾಗದ ರಸ್ತೆ, ತೆಂಕಿಲ ವಿವೇಕಾನಂದ ಶಾಲೆಗೆ ತೆರಳುವ ಇಳಿಜಾರಿನಲ್ಲಿ ಮುಂತಾದ ಹಲವು ಕಡೆಗಳಲ್ಲಿ ರಸ್ತೆಗಳನ್ನು ಅಗೆದು ದುರಸ್ತಿ ಮಾಡಲಾಗದೆ ಹಾಗೇ ಬಿಡಲಾಗಿದೆ. ಪರಿಣಾಮ ಅಪಘಾತಗಳಾಗುವ ಸಂಭವವಿದ್ದು, ತಕ್ಷಣ ರಸ್ತೆಗಳನ್ನು ಪರಿಶೀಲಿಸಿ ದುರಸ್ತಿ ಕಾರ್ಯ

ಪುತ್ತೂರು ಪೇಟೆಯಲ್ಲಿನ ಅಪಾಯಕಾರಿ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಒತ್ತಾಯ | ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ನಗರಸಭೆಗೆ ಮನವಿ Read More »

ಮುಂದಿನ ಲೋಕಸಭಾ ಚುನಾವಣೆ ಸಹಿತ ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಚುನಾವಣೆಗಳಲ್ಲಿ ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆ ! | ಸ್ಪರ್ಧೆಯ ಕುರಿತು ಪುತ್ತಿಲ ಪರಿವಾರದ ಅಧ್ಯಕ್ಷರು ಹೇಳಿದ್ದೇನು ?

ಪುತ್ತೂರು: ಮುಂದಿನ ಲೋಕಸಭಾ ಚುನಾವಣೆ ಸೇರಿದಂತೆ ದ.ಕ.ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಚುನಾವಣೆಗಳಲ್ಲಿ ಪುತ್ತಿಲ ಪರಿವಾರದ ನಾಯಕ ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆ ಮಾಡಲಿದ್ದು, ಕಾರ್ಯಕರ್ತರು, ಹಿತೈಷಿಗಳ, ಮತದಾರರ ನಿರ್ಧಾರದಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ ತಿಳಿಸಿದ್ದಾರೆ. ಪುತ್ತಿಲ ಪರಿವಾರದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಪಕ್ಷೇತರವಾಗಿ ನಿಂತು 60 ಸಾವಿರಕ್ಕೂ ಅಧಿಕ ಮತಗಳನ್ನು ಪಡೆಯುವ ಮೂಲಕ ಸಂಚಲನ ಮೂಡಿಸಿತ್ತು. ಬಳಿಕದ

ಮುಂದಿನ ಲೋಕಸಭಾ ಚುನಾವಣೆ ಸಹಿತ ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಚುನಾವಣೆಗಳಲ್ಲಿ ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆ ! | ಸ್ಪರ್ಧೆಯ ಕುರಿತು ಪುತ್ತಿಲ ಪರಿವಾರದ ಅಧ್ಯಕ್ಷರು ಹೇಳಿದ್ದೇನು ? Read More »

ಮಾ.1-2 : ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ | ನವೀಕೃತ ರಂಗ ಮಂಟಪ ಉದ್ಘಾಟನೆ

ಪುತ್ತೂರು: ಮೂಂಡೂರು ಗ್ರಾಮದ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ, ದೈವಗಳ ನೇಮೋತ್ಸವ ಹಾಗೂ ನವೀಕೃತ ರಂಗ ಮಂಟಪದ ಉದ್ಘಾಟನೆ ಮಾ.1 ಹಾಗೂ 2 ರಂದು ವಿವಿಧ ವೈದಿಕ, ಧಾರ್ಮಿಕ ಸಭಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಜಾತ್ರೋತ್ಸವ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮುಖ್ಯವಾಗಿ ಮುಂಡೂರು ಹಾಗೂ ಕೆದಂಬಾಡಿ ಗ್ರಾಮಕ್ಕೊಳಪಟ್ಟ ದೇವಸ್ಥಾನ ಎರಡು ವರ್ಷಗಳ ಹಿಂದೆ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡು ಬಳಿಕದ ಜಾತ್ರೋತ್ಸವದಲ್ಲಿ

ಮಾ.1-2 : ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ | ನವೀಕೃತ ರಂಗ ಮಂಟಪ ಉದ್ಘಾಟನೆ Read More »

ಶ್ರೀ ಕ್ಷೇತ್ರ ದೈಪಿಲ ಕ್ರೀಡಾ ಸೇವಾ ಸಂಘದ ನೇತೃತ್ವದಲ್ಲಿ ಮಹಾ ಹಗ್ಗಜಗ್ಗಾಟ, ಮನೋರಂಜನಾ ಕ್ರೀಡೆ | ದೈಪಿಲ ಕ್ರೀಡಾಂಗಣದಲ್ಲಿ ಮೇಳೈಸಲಿದೆ ಅಂತರರಾಜ್ಯ ಮತ್ತು ಕಾಲೇಜು ವಿಭಾಗ ಹಾಗೂ ವಲಯ ಮಟ್ಟದ ಹೊನಲು ಬೆಳಕಿನ ಮಹಾ ಹಗ್ಗಜಗ್ಗಾಟ | ಅಂತರರಾಜ್ಯ ಮಟ್ಟದ ನಿರೂಪಕರ ನಿರೂಪಣೆಯಲ್ಲಿ ಕ್ರೀಡಾಕೂಟ

ಪುತ್ತೂರು: ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಶ್ರೀ ಕ್ಷೇತ್ರ ದೈಪಿಲ ಕ್ರೀಡಾ ಸೇವಾ ಸಂಘದ ನೇತೃತ್ವದಲ್ಲಿ ಪುತ್ತೂರು ತಾಲೂಕು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಕಾರದೊಂದಿಗೆ 4ನೇ ವರ್ಷದ ಅಂತರರಾಜ್ಯ ಮತ್ತು ಕಾಲೇಜು ವಿಭಾಗ ಹಾಗೂ ವಲಯ ಮಟ್ಟದ ಹೊನಲು ಬೆಳಕಿನ ಮಹಾ ಹಗ್ಗಜಗ್ಗಾಟ ಮತ್ತು ಮನೋರಂಜನಾ ಕ್ರೀಡೆ ಮಾ.2 ಶನಿವಾರ ಬೆಳಿಗ್ಗೆ 10 ರಿಂದ ದೈಪಿಲ ಕ್ರೀಡಾಂಗಣದಲ್ಲಿ ನಡೆಯಲಿದೆ. ಲೆವೆಲ್, ಸಿಂಗಲ್ ಗ್ರಿಪ್ ಹಾಗೂ ಪುಲ್ ಗ್ರಿಪ್ ಮಾದರಿಯಲ್ಲಿ 11 ವಿಧದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ

ಶ್ರೀ ಕ್ಷೇತ್ರ ದೈಪಿಲ ಕ್ರೀಡಾ ಸೇವಾ ಸಂಘದ ನೇತೃತ್ವದಲ್ಲಿ ಮಹಾ ಹಗ್ಗಜಗ್ಗಾಟ, ಮನೋರಂಜನಾ ಕ್ರೀಡೆ | ದೈಪಿಲ ಕ್ರೀಡಾಂಗಣದಲ್ಲಿ ಮೇಳೈಸಲಿದೆ ಅಂತರರಾಜ್ಯ ಮತ್ತು ಕಾಲೇಜು ವಿಭಾಗ ಹಾಗೂ ವಲಯ ಮಟ್ಟದ ಹೊನಲು ಬೆಳಕಿನ ಮಹಾ ಹಗ್ಗಜಗ್ಗಾಟ | ಅಂತರರಾಜ್ಯ ಮಟ್ಟದ ನಿರೂಪಕರ ನಿರೂಪಣೆಯಲ್ಲಿ ಕ್ರೀಡಾಕೂಟ Read More »

error: Content is protected !!
Scroll to Top