ಪುತ್ತೂರು

ಪುತ್ತೂರು ಶಿವಳ್ಳಿ ಕ್ರಿಕೆಟರ್ಸ್ ನಿಂದ ನಡೆದ ಶಿವಳ್ಳಿ ಕ್ರಿಕೆಟ್ ಲೀಗ್- ಸೀಸನ್ 4 ಸಂಪನ್ನ

ಪುತ್ತೂರು: ಶಿವಳ್ಳಿ ಕ್ರಿಕೆಟರ್ಸ್ ಸತತ 4ನೇ ವರ್ಷ ಅದ್ದೂರಿಯಾಗಿ ಆಯೋಜಿಸಿರುವ ಶಿವಳ್ಳಿ ಬ್ರಾಹ್ಮಣರ ಆಹ್ವಾನಿತ 13ತಂಡಗಳ ಅಂತರ್ ರಾಜ್ಯ ಮಟ್ಟದ ಶಿವಳ್ಳಿ ಕ್ರಿಕೆಟ್ ಲೀಗ್- ಸೀಸನ್ 4 ಓವರ್ ಅರ್ಮ್ ಕ್ರಿಕೆಟ್ ಪಂದ್ಯಾಕೂಟವು, ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಪಂದ್ಯಕೂಟವನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಉದ್ಘಾಟಿಸಿ, ಹಿಂದೂ ಸಮಾಜ ಒಗ್ಗಟ್ಟಾಗಿ ಮುಂದೆ ಸಾಗುವಲ್ಲಿ ವಿಪ್ರ ಸಮಾಜ ಮುಖ್ಯ ಪಾತ್ರವಹಿಸಲಿದೆ ಎಂದರು. ಹೃದ್ರೋಗ ತಜ್ಞ ಡಾ. ಸುರೇಶ ಪುತ್ತೂರಾಯರು, ಬಿ.ಜೆ.ಪಿ ನಗರ ಮಂಡಲ ಅಧ್ಯಕ್ಷ […]

ಪುತ್ತೂರು ಶಿವಳ್ಳಿ ಕ್ರಿಕೆಟರ್ಸ್ ನಿಂದ ನಡೆದ ಶಿವಳ್ಳಿ ಕ್ರಿಕೆಟ್ ಲೀಗ್- ಸೀಸನ್ 4 ಸಂಪನ್ನ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವಿಜ್ಞಾನ ವಿಭಾಗ, ಸಯನ್ಸ್‌ ಫಾರಮ್‌, ಆಂತರಿಕ ಗುಣಮಟ್ಟ ಭರವಸೆ ಕೋಶ, ಹಾಗೂ ಐಐಸಿಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿ ಹಬ್ಬ ಸಭಾಭವನದಲ್ಲಿ ವಿಜ್ಞಾನ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ| ಡಾ| ಆಂಟೊನಿ ಪ್ರಕಾಶ್ ಮೊಂತೆರೋ, ವಿದ್ಯಾರ್ಥಿಗಳು ವಿಜ್ಞಾನದ ಮಹತ್ವವನ್ನು ಅರಿತುಕೊಂಡು ವೈಜ್ಞಾನಿಕ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ವೈಜ್ಞಾನಿಕ ಅನ್ವೇಷಣೆಗಳಲ್ಲಿ ಶ್ರದ್ಧೆ, ಉತ್ಸಾಹ ಮತ್ತು ಸಮರ್ಪಣೆಯ ಪ್ರಾಮುಖ್ಯತೆಯನ್ನು ತಿಳಿದುಕೊಂಡು ಯುವ ಪೀಳಿಗೆಯು ತಮ್ಮ ಆಲೋಚನೆಗಳು, ಮಾತುಗಳು ಮತ್ತು ಕಾರ್ಯಗಳನ್ನು

ಸಂತ ಫಿಲೋಮಿನಾ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ Read More »

ಲೋಕಸಭೆ ಚುನಾವಣೆಯಲ್ಲಿ ದ.ಕ.ಜಿಲ್ಲೆಯಲ್ಲಿ ಮೂರು ಲಕ್ಷಕ್ಕೂ ಅಧಿಕ ಮತಗಳ ಲೀಡ್‍ ನಿಂದ ಗೆಲುವು | ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

ಪುತ್ತೂರು: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಮೂರು ಲಕ್ಷಕ್ಕೂ ಅಧಿಕ ಮತಗಳಿಂದ ಬಿಜೆಪಿ ದ..ಕ.ಜಿಲ್ಲೆಯಲ್ಲಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಪುತ್ತೂರು ಬಿಜೆಪಿ ಮಂಡಲ ವತಿಯಿಂದ ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ನಡೆದ ಗ್ರಾಮ ಚಲೋ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ 195 ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಿದ್ದು, 3-4 ದಿನಗಳಲ್ಲಿ ದ.ಕ. ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗಬಹುದು. ನರೇಂದ್ರ ಮೋದಿಯವರು 10 ವರ್ಷ ಪ್ರಧಾನಿಯಾಗಿ

ಲೋಕಸಭೆ ಚುನಾವಣೆಯಲ್ಲಿ ದ.ಕ.ಜಿಲ್ಲೆಯಲ್ಲಿ ಮೂರು ಲಕ್ಷಕ್ಕೂ ಅಧಿಕ ಮತಗಳ ಲೀಡ್‍ ನಿಂದ ಗೆಲುವು | ಜಿಲ್ಲಾಧ್ಯಕ್ಷ ಸತೀಶ್ ಕುಂಪಲ Read More »

ವಿಷ ಸೇವಿಸಿ ವಿದ್ಯಾರ್ಥಿನಿ ಮೃತ್ಯು !

ಪುತ್ತೂರು : ವಿಷ ಸೇವಿಸಿದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸುಳ್ಯದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಪುತ್ತೂರು ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಆರತಿ ಮೃತ ಯುವತಿ. ಆರತಿ 15 ದಿನಗಳ ಹಿಂದೆ ವಿಷ ಸೇವಿಸಿದ್ದು,ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ಚಿಕಿತ್ಸೆಕೊಡಿಸಲಾಗುತ್ತಿತ್ತು. ಅಲ್ಲದೇ ವೈದ್ಯರ ಸಲಹೆ ಮೇರೆಗೆ ಸುಳ್ಯಕ್ಕೆ ತಂದು ಚಿಕಿತ್ಸೆ ಕೊಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮೃತಪಟ್ಟಿದ್ದಾರೆ. ಮೃತ ವಿದ್ಯಾರ್ಥಿನಿ ಐವರ್ನಾಡು ಸಮೀಪದ ಪಾಂಬಾರು ಸೋಮಸುಂದರ ಎಂಬುವವರ ಪುತ್ರಿ.

ವಿಷ ಸೇವಿಸಿ ವಿದ್ಯಾರ್ಥಿನಿ ಮೃತ್ಯು ! Read More »

ಎಸ್.ಬಿ.ಜಯರಾಮ ರೈ ಬಳಜ್ಜ 3ನೇ ಬಾರಿಗೆ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆ

ಪುತ್ತೂರು : ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ  ಎಸ್.ಬಿ ಜಯರಾಮ ರೈ ಬಳಜ್ಜ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಸತತ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ. ಪ್ರತಿಷ್ಠಿತ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ (ಕೆ.ಎಮ್.ಎಫ್) ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಸಹಕಾರಿ ಕ್ಷೇತ್ರದ ಹಿರಿಯ ಧುರೀಣರೂ, ಹಲವಾರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸಂಸ್ಥೆಗಳಲ್ಲಿ ಹಂತ-ಹಂತವಾಗಿ ಬೆಳೆದು ಸ್ಕ್ಯಾಡ್ಸ್ ನ ನಿರ್ದೇಶಕರೂ, ಶ್ರೀ ಕ್ಷೇತ್ರ ಕೆಯ್ಯೂರು ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು, ಶ್ರೀ ಹೊಸಮ್ಮ

ಎಸ್.ಬಿ.ಜಯರಾಮ ರೈ ಬಳಜ್ಜ 3ನೇ ಬಾರಿಗೆ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆ Read More »

ಸಾಮೆತ್ತಡ್ಕ ನಿವಾಸಿ ಅನಿಲ್ ವಿಲ್ಸನ್ ಸೆಬಾಸ್ಟಿಯನ್ ಮಸ್ಕರೇನಸ್ ನಿಧನ

ಪುತ್ತೂರು: ಸಾಮೆತ್ತಡ್ಕ ಯವಕ ಮಂಡಲದ ಮಾಜಿ ಅಧ್ಯಕ್ಷ ಅನಿಲ್ ವಿಲ್ಸನ್ ಸೆಬಾಸ್ಟಿಯನ್ ಮಸ್ಕರೇನಸ್ (54) ಅಸೌಖ್ಯದಿಂದ ನಿಧನರಾದರು. ಸಾಮೆತ್ತಡ್ಕ ದಿ. ಜೋಸೆಫ್‍ ಝೇವಿಯರ್ ಮಸ್ಕರೇನಸ್ ಹಾಗೂ ಹಿಲ್ಡಾ ರೋಚ್ ಅವರ ಪುತ್ತರಾಗಿರುವ ಅನಿಲ್ ವಿಲ್ಸನ್‍ ಹಲವಾರು ವರ್ಷ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ವಿದೇಶದಿಂದ ಬಂದ ಬಳಿಕ ಪುತ್ತೂರಿನ ಸಾಮೆತ್ತಡ್ಕದಲ್ಲಿ ನೆಲೆಸಿದ್ದರು. ಮೃತರು ತಾಯಿ, ಪತ್ನಿ, ಪುತ್ರಿ, ಸಹೋದರಿಯರನ್ನು ಅಗಲಿದ್ದಾರೆ.

ಸಾಮೆತ್ತಡ್ಕ ನಿವಾಸಿ ಅನಿಲ್ ವಿಲ್ಸನ್ ಸೆಬಾಸ್ಟಿಯನ್ ಮಸ್ಕರೇನಸ್ ನಿಧನ Read More »

ಕಾಂಗ್ರೇಸ್‍ನ ಅತಿಯಾದ ಅಲ್ಪಸಂಖ್ಯಾತ ಓಲೈಕೆಯೇ ಆ್ಯಸಿಡ್ ದಾಳಿಗೆ ಕಾರಣ : ಪುತ್ತಿಲ ಪರಿವಾರ ಆರೋಪ

ಪುತ್ತೂರು: ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ಕಡಬದ ವಿದ್ಯಾರ್ಥಿನಿಗಳ ಮೇಲೆ ಅಬೀನ್ ಎಂಬಾತನಿಂದ ಆ್ಯಸಿಡ್ ದಾಳಿ ನಡೆದಿರುವುದು ನಾಗರಿಕ ಸಮಾಜವೇ ತಲೆತಗ್ಗಿಸುವ ವಿಷಯಾವಾಗಿದ್ದು ಈ ಕೃತ್ಯವನ್ನು ಪುತ್ತಿಲ ಪರಿವಾರ ಖಂಡಿಸುತ್ತದೆ. ಇಂದು ಬೆಳಗ್ಗೆ ಅಲೀನಾ, ಅರ್ಚನ, ಅಮೃತ ಎನ್ನುವ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರ ಮೇಲೆ ಅಬೀನ್ ಎಂಬಾತ ಆ್ಯಸಿಡ್ ದಾಳಿ ನಡೆಸಿದ್ದಾನೆ. ಒಬ್ಬಾಕೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಅತಿಯಾದ ಅಲ್ಪಸಂಖ್ಯಾತ ಓಲೈಕೆಯಿಂದ ಭಯವೇ ಇಲ್ಲದಂತಾಗಿದೆ. ದಕ್ಷಿಣ ಕನ್ನಡದಲ್ಲಂತು ಗಾಂಜಾ, ಕಳ್ಳತನ, ಕೊಲೆ ಪ್ರಕರಣಗಳು, ತಲವಾರು ದಾಳಿಗಳು,

ಕಾಂಗ್ರೇಸ್‍ನ ಅತಿಯಾದ ಅಲ್ಪಸಂಖ್ಯಾತ ಓಲೈಕೆಯೇ ಆ್ಯಸಿಡ್ ದಾಳಿಗೆ ಕಾರಣ : ಪುತ್ತಿಲ ಪರಿವಾರ ಆರೋಪ Read More »

ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದಲ್ಲಿ ಗೊನೆ ಮುಹೂರ್ತ

ಕೆದಿಲ: ಮಾ.11 ರಂದು ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದಲ್ಲಿ ನಡೆಯಲಿರುವ ವಾರ್ಷಿಕ ನೇಮೋತ್ಸವಕ್ಕೆ ಗೊನೆಮುಹೂರ್ತ ಸೋಮವಾರ ನಡೆಯಿತು. ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಜೈ ಕೃಷ್ಣ ಭಟ್ ಕೇಶವ ಕೃಪ ಮೀರಾವನರವರು ದೈವದ ನಡೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಗೊನೆ ಮುಹೂರ್ತ ನಡೆಯಿತು. ಅರ್ಚಕ ಈಶ್ವರ ಪ್ರಕಾಶ್ ಪಂಜಿಬಲ್ಲೆ ವೈದಿಕ ವಿಧಿ ವಿಧಾನ ನೆರವೇರಿಸಿದರು ಈ ಸಂದರ್ಭದಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಜನಾರ್ಧನ ಕುಲಾಲ್ ಗಾನದಕೊಟ್ಯ, ಕುದುಂಬ್ಲಾಡಿ ಗುತ್ತು ಬಾಳಪ್ಪ ಗೌಡ,

ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದಲ್ಲಿ ಗೊನೆ ಮುಹೂರ್ತ Read More »

ಪುತ್ತೂರು ತಾಲೂಕು ತುಳುವೆರೆ ಮೇಳೊ-2024 ಉದ್ಘಾಟನೆ

ಪುತ್ತೂರು: ತುಳು ಭಾಷೆಯ ಉಳಿವಿಗಾಗಿ ಜಾಗೃತಿಯ ಕೆಲಸ ನಿರಂತರವಾಗಿ ನಡೆಯುತ್ತಿದೆ. ತುಳುಲಿಪಿಯ ಬಗ್ಗೆ ಯಾವುದೇ ಅನುಮಾನಗಳು ಬೇಡ. ವಿಧಾನ ಸೌಧದ ಒಳಗೂ ತುಳು ಭಾಷೆ ಕೇಳುತ್ತಿದ್ದು, ರಾಜ್ಯ ಎರಡನೇ ಭಾಷೆಯಾದ ಬಳಿಕ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಮಂಜಲ್ಪಡು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ಪುತ್ತೂರು ತುಳುಕೂಟದಿಂದ ನಡೆದ ಪುತ್ತೂರು ತಾಲೂಕು ತುಳುವೆರೆ ಮೇಳೊ-2024 ನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಕಳಸೆಗೆ ಭತ್ತವನ್ನು

ಪುತ್ತೂರು ತಾಲೂಕು ತುಳುವೆರೆ ಮೇಳೊ-2024 ಉದ್ಘಾಟನೆ Read More »

ನಿರ್ಮಾಣ ಹಂತದ ಮನೆ ಮೇಲಿನಿಂದ ಬಿದ್ದು ಮೃತ್ಯು !

ಉಪ್ಪಿನಂಗಡಿ: ವ್ಯಕ್ತಿಯೋರ್ವರು ನಿರ್ಮಾಣ ಹಂತದ ಮನೆ ಮೇಲಿನಿಂದ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಕರ್ವೇಲು ಎಂಬಲ್ಲಿ ಇಂದು ನಡೆದಿದೆ. ಕರ್ವೇಲು ನಿವಾಸಿ ಮುಹಮ್ಮದ್ ಮುಸ್ತಾಫ (35) ಮೃತಪಟ್ಟವರು. ಮುಹಮ್ಮದ್ ಅವರು ಮನೆಯೊಂದನ್ನು ನಿರ್ಮಿಸುತ್ತಿದ್ದು, ಕಾರ್ಮಿಕರೊಂದಿಗೆ ಸೇರಿ ಮನೆ ಕೆಲಸದಲ್ಲಿ ತೊಡಗಿದ್ದರು. ಇಂದು ಮನೆ ಮೇಲೆ ನೀರು ಹಾಕುತ್ತಿದ್ದ ಸಂದರ್ಭ ಆಯತಪ್ಪಿ ಕೆಳಗೆ ಬಿದ್ದಿದ್ದು ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ. ಮೃತರು ಪತ್ನಿ, ಗಂಡು, ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಈ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿರ್ಮಾಣ ಹಂತದ ಮನೆ ಮೇಲಿನಿಂದ ಬಿದ್ದು ಮೃತ್ಯು ! Read More »

error: Content is protected !!
Scroll to Top