ಪುತ್ತೂರು

ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರಾಗಿ ಚನಿಲ ತಿಮ್ಮಪ್ಪ ಶೆಟ್ಟಿ, ಸಹಸಂಚಾಲಕರಾಗಿ ಉಮೇಶ್ ಕೋಡಿಬೈಲು

ಪುತ್ತೂರು: ವಿಧಾನಸಭಾ ಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರಾಗಿ ಚನಿಲ ತಿಮ್ಮಪ್ಪ ಶೆಟ್ಟಿ, ಸಹಸಂಚಾಲಕರಾಗಿ ಉಮೇಶ್ ಕೋಡಿಬೈಲು ಅವರು ನೇಮಕಗೊಂಡಿದ್ದಾರೆ. ಕಲ್ಲೇಗ ಭಾರತ್ ಮಾತಾ ಸಭಾಭವನದಲ್ಲಿ ನಡೆದ ಲೋಕಸಭಾ ಚುನಾವಣಾ ನಿರ್ವಹಣಾ ಸಮಿತಿ ಸಭೆಯಲ್ಲಿ ಈ ಘೋಷಣೆ ಮಾಡಲಾಯಿತು. ವಿವಿಧ ವಿಭಾಗಗಳ ಹೆಸರನ್ನು ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್ ಬೆಳ್ತಂಗಡಿ ಘೋಷಣೆ ಮಾಡಿದರು.

ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರಾಗಿ ಚನಿಲ ತಿಮ್ಮಪ್ಪ ಶೆಟ್ಟಿ, ಸಹಸಂಚಾಲಕರಾಗಿ ಉಮೇಶ್ ಕೋಡಿಬೈಲು Read More »

ಅಸ್ಪೃಶ್ಯರಲ್ಲದ ಮೀನುಗಾರ ಮೊಗೇರರಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯಲು ಹುನ್ನಾರ | ನೈಜ ಪರಿಶಿಷ್ಟ ಜಾತಿಯವರಿಂದ ರಾಜ್ಯವ್ಯಾಪಿ ಉಗ್ರ ಹೋರಾಟದ ಎಚ್ಚರಿಕೆ

ಪುತ್ತೂರು: ಅಸ್ಪೃಶ್ಯರಲ್ಲದ ಮೀನುಗಾರ ಮೊಗೇರರು ರಾಜಕೀಯ ಒತ್ತಡದಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯಲು ಹುನ್ನಾರ ನಡೆಸುತ್ತಿದ್ದು, ಈ ಕುರಿತು ಜೆ.ಸಿ.ಪ್ರಕಾಶ್ ನೀಡಿದ ವರದಿಯನ್ನು ತಿರಸ್ಕರಿಸಬೇಕು. ರಾಜ್ಯ ಸರಕಾರ ಮೀನುಗಾರ ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಮುಂದಾದಲ್ಲಿ ನಾವು ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಸಲಿದ್ದೇವೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಅಶೋಕ್ ಕೊಂಚಾಡಿ ತಿಳಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಅಸ್ಪೃಶ್ಯರಲ್ಲದ ಮೀನುಗಾರ ಮೊಗೇರರಿಗೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡುವ ಪ್ರಯತ್ನ

ಅಸ್ಪೃಶ್ಯರಲ್ಲದ ಮೀನುಗಾರ ಮೊಗೇರರಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯಲು ಹುನ್ನಾರ | ನೈಜ ಪರಿಶಿಷ್ಟ ಜಾತಿಯವರಿಂದ ರಾಜ್ಯವ್ಯಾಪಿ ಉಗ್ರ ಹೋರಾಟದ ಎಚ್ಚರಿಕೆ Read More »

ಪುಣ್ಚತ್ತಾರು ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಗೊನೆ ಮುಹೂರ್ತ

ಕಾಣಿಯೂರು: ಪುಣ್ಚತ್ತಾರು ಕರಿಮಜಲು ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಶ್ರೀ ಕಾಳಿಕಾಂಬಾ ದೇವಿ ದೇವಸ್ಥಾನದಲ್ಲಿ ಎ.3 ಹಾಗೂ 4ರಂದು ನಡೆಯಲಿರುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲದ ಅಂಗವಾಗಿ ಗೊನೆ ಮುಹೂರ್ತ ನಡೆಯಿತು. ಬೆಳಿಗ್ಗೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಹಾಗೂ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಪ್ರಾರ್ಥನೆ ನಡೆಸಿ ಬಳಿಕ ಗೊನೆ ಮುಹೂರ್ತ ನಡೆಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್, ಮೊಕ್ತಸರ ವೆಂಕಟ್ರಮಣ ಆಚಾರ್ಯ ವಿಷ್ಣುಪುರ, ಜನಾರ್ದನ ಆಚಾರ್ಯ ವಿಷ್ಣುಪುರ, ಕೃಷ್ಣ ಆಚಾರ್ಯ

ಪುಣ್ಚತ್ತಾರು ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಗೊನೆ ಮುಹೂರ್ತ Read More »

‘ಮೌನ ದೊಳಗಿನ ಮಾತು ‘ ಕವನ ಸಂಕಲನ ಬಿಡುಗಡೆ

ಪುತ್ತೂರು: ಅಮೃತ ಪ್ರಕಾಶನ ಪತ್ರಿಕೆಯಿಂದ ಸರಣಿ ಕೃತಿ ಬಿಡುಗಡೆ 39ನೇ ಕೃತಿ ಸಪ್ನ ದಿನಕರ್ ಅವರ ‘ಮೌನದೊಳಗಿನ ಮಾತು ‘ ಕವನ ಸಂಕಲನವನ್ನು  ಲೇಖಕಿ, ವಿಮರ್ಶಕಿ ವಿದ್ಯಾ ನಾಯಕ್ ಬಿಡುಗಡೆಗೊಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ ಹರೀಶ್ ರೈ ವಹಿಸಿದರು. ಮುಖ್ಯ ಅತಿಥಿಗಳಾಗಿ ಯುಗ ಪುರುಷ ಪತ್ರಿಕೆ ಸಂಪಾದಕ ಕುಡೆತ್ತೂರು ಭುವನಾಭಿರಾಮ ಉಡುಪ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಲೇಖಕಿ ವೀಣಾ ಟಿ. ಶೆಟ್ಟಿ, ಕವಿಯತ್ರಿ, ಶಿಕ್ಷಕಿ ಸುಧಾ ನಾಗೇಶ್ 

‘ಮೌನ ದೊಳಗಿನ ಮಾತು ‘ ಕವನ ಸಂಕಲನ ಬಿಡುಗಡೆ Read More »

ಲೋಕಸಭೆ ಚುನಾವಣೆ | ಬಿಜೆಪಿಯಿಂದ ಚುನಾವಣಾ ಪ್ರಭಾರಿಗಳ ನೇಮಕ

ಪುತ್ತೂರು: ಲೋಕಸಭೆ ಚುನಾವಣೆಯನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಪ್ರಭಾರಿಗಳನ್ನು ನೇಮಿಸಲಾಗಿದೆ.ಆಯ್ಕೆಯಾದ ಬಿಜೆಪಿ ಚುನಾವಣಾ ಪ್ರಭಾರಿಗಳ ವಿವರ ಈ ಕೆಳಗಿನಂತಿದೆ. ಹರಿಕೃಷ್ಣ ಬಂಟ್ವಾಳ (ಬೆಳ್ತಂಗಡಿ), ಚಂದ್ರಶೇಖರ ರಾವ್ ಬಪ್ಪಳಿಗೆ (ಮೂಡುಬಿದಿರೆ), ರೂಪ ಡಿ. ಬಂಗೇರ (ಮಂಗಳೂರು ನಗರ ಉತ್ತರ), ರವಿಶಂಕರ ಮಿಜಾರ್ (ಮಂಗಳೂರು ನಗರ ದಕ್ಷಿಣ), ರಾಧಾಕೃಷ್ಣ ರೈ ಬೂಡಿಯಾರ್ (ಮಂಗಳೂರು), ಜಗದೀಶ ಶೇಣವ (ಬಂಟ್ವಾಳ), ಸುಲೋಚನಾ ಜಿ.ಕೆ.ಭಟ್ (ಪುತ್ತೂರು), ಅಪ್ಪಯ್ಯ ಮಣಿಯಾಣಿ (ಸುಳ್ಯ)

ಲೋಕಸಭೆ ಚುನಾವಣೆ | ಬಿಜೆಪಿಯಿಂದ ಚುನಾವಣಾ ಪ್ರಭಾರಿಗಳ ನೇಮಕ Read More »

ವಿವೇಕಾನಂದ ಕಾಲೇಜಿನ ನವೀಕೃತ ಜಾಲತಾಣ ಲೋಕಾರ್ಪಣೆ

ಪುತ್ತೂರು: ಆಧುನಿಕ ಯುಗದಲ್ಲಿ ಸಂಸ್ಥೆಯ ಬೆಳವಣಿಗೆಗೆ ವೆಬ್ಸೈಟ್ ತುಂಬಾ ಪ್ರಾಮುಖ್ಯತೆಯನ್ನು ವಹಿಸುತ್ತದೆ. ಬಹಳ ವೇಗವಾಗಿ ಬದಲಾಗುವ ತಂತ್ರಜ್ಞಾನವನ್ನು ನಾವು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ಪರೀಕ್ಷೆಯ ವೇಳಾಪಟ್ಟಿಗಳು, ಶೈಕ್ಷಣಿಕ ನೆರವು, ಕೋರ್ಸ್ ವಿವರಣೆಗಳು ಮತ್ತು ಇತರ ಪ್ರಮುಖ ಪ್ರಕಟಣೆಗಳ ವಿವರಗಳನ್ನು ನೀಡಬಹುದು. ಈ ಮೂಲಕ ಕಾಲೇಜಿನ ಎಲ್ಲಾ ಮಾಹಿತಿ ಅಂಗೈ ಅಂಗಳದಲ್ಲೆ ದೊರಕುವುದು ಎಂದು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ  ಡಾ ಶ್ರೀಪತಿ ಕಲ್ಲೂರಾಯ ಹೇಳಿದರು. ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಐಕ್ಯೂಎಸಿ ಇದರ

ವಿವೇಕಾನಂದ ಕಾಲೇಜಿನ ನವೀಕೃತ ಜಾಲತಾಣ ಲೋಕಾರ್ಪಣೆ Read More »

ಮನೆಗೆ ತಗುಲಿದ‌ ಬೆಂಕಿ : ಸೊತ್ತುಗಳಿಗೆ ಹಾನಿ

ಪುತ್ತೂರು: ಮರೀಲ್ ನ ಪುತ್ತೂರು ಕ್ಲಬ್ ಗೆ ಹೋಗುವಲ್ಲಿ ರಸ್ತೆ ಬದಿಯ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಮಾ.27 ರಂದು ನಡೆದಿದೆ. ಮರೀಲ್ ದಿ ವಿಶ್ವನಾಥ ಶೆಣೈ ಅವರ ಮನೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು. ಮಾಹಿತಿ ತಿಳಿದ ಅಗ್ನಿಶಾಮಕದಳ ಸ್ಥಳಕ್ಕೆ ತೆರಳಿ ಬೆಂಕಿಯನ್ನು ಶಮನಗೊಳಿಸಿದ್ದಾರೆ. ಬೆಂಕಿಯ ಜ್ವಾಲೆಗೆ ಮನೆಯೊಳಗಿದ್ದ ಸೊತ್ತುಗಳಿಗೆ ಹಾನಿಯಾಗಿದೆ.

ಮನೆಗೆ ತಗುಲಿದ‌ ಬೆಂಕಿ : ಸೊತ್ತುಗಳಿಗೆ ಹಾನಿ Read More »

ತ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಕಾಲೇಜಿಗೆ ದ್ವಿತೀಯ ಪ್ರಶಸ್ತಿ

ಪುತ್ತೂರು: ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಪದವಿ ವಿದ್ಯಾರ್ಥಿಗಳ ತ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಕಾಲೇಜು ದ್ವಿತೀಯ ಸ್ಥಾನ ಪಡೆದಿದೆ. ಪುತ್ತೂರಿನ ವಿವೇಕಾನಂದ ಕಾಲೇಜಿನ (ಸ್ವಾಯತ್ತ) ಮಹಿಳಾ ತಂಡ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದೆ. ತಂಡಕ್ಕೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ವಿ.ಎಸ್, ಡಾ.ಜ್ಯೋತಿ ಕುಮಾರಿ ಹಾಗೂ ಯತೀಶ್ ಕುಮಾರ್ ಬಿ. ತರಬೇತು ನೀಡಿದ್ದಾರೆ.

ತ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಕಾಲೇಜಿಗೆ ದ್ವಿತೀಯ ಪ್ರಶಸ್ತಿ Read More »

ಏ.15 : ಖ್ಯಾತ ಈವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆ “ಟೈಮ್ & ಟೈಡ್” ಮತ್ತು “ನ್ಯೂಸ್ ಪುತ್ತೂರು” ಸಹಯೋಗದೊಂದಿಗೆ ಪ್ರಸ್ತುತ ಪಡಿಸಲಿದೆ “ಪುತ್ತೂರ ಹಬ್ಬ” | ಹೆಜ್ಜೆನಾದ ತಂಡದಿಂದ ಮನಸೂರೆಗೊಳಿಸುವ ನೃತ್ಯಗಳು, ಚಲನಚಿತ್ರ ನಟ-ನಟಿಯರ ಸಮಾಗಮ, ಖ್ಯಾತ ಗಾಯಕರಿಂದ ಎಂದೂ ಮರೆಯದ ಹಾಡುಗಳು

ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ನಡೆಯುವ ಕಟ್ಟೆಪೂಜೆ ಹಾಗೂ ಪೇಟೆ ಸವಾರಿ ಪ್ರಯುಕ್ತ ಖ್ಯಾತ ಈವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆ “ಟೈಮ್ & ಟೈಡ್” ಪ್ರಸ್ತುತ ಪಡಿಸುವ “ಪುತ್ತೂರ ಹಬ್ಬ” ಪುತ್ತೂರುದ ಮುತ್ತುಲೆನ ಪರ್ಬ ಏ.15 ರಂದು ಬನ್ನೂರು ಜೋಡುಕಟ್ಟೆ ಮೈದಾನದಲ್ಲಿ ನಡೆಯಲಿದೆ. ಪುತ್ತೂರಿನ ಅತೀ ದೊಡ್ಡ ಪರಿಪೂರ್ಣ ಮನರಂಜನೆಯ ಶೋ ಇದಾಗಿದ್ದು, ಸಂಗೀತದ ರಸದೌತಣ, ಮಂಗಳೂರು ಹೆಜ್ಜೆ ನಾದ ನೃತ್ಯ ತಂಡದಿಂದ ಮನಸೂರೆಗೊಳಿಸುವ ನೃತ್ಯ, ಚಲನಚಿತ್ರ ನಟ-ನಟಿಯರ ಸಮಾಗಮದ

ಏ.15 : ಖ್ಯಾತ ಈವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆ “ಟೈಮ್ & ಟೈಡ್” ಮತ್ತು “ನ್ಯೂಸ್ ಪುತ್ತೂರು” ಸಹಯೋಗದೊಂದಿಗೆ ಪ್ರಸ್ತುತ ಪಡಿಸಲಿದೆ “ಪುತ್ತೂರ ಹಬ್ಬ” | ಹೆಜ್ಜೆನಾದ ತಂಡದಿಂದ ಮನಸೂರೆಗೊಳಿಸುವ ನೃತ್ಯಗಳು, ಚಲನಚಿತ್ರ ನಟ-ನಟಿಯರ ಸಮಾಗಮ, ಖ್ಯಾತ ಗಾಯಕರಿಂದ ಎಂದೂ ಮರೆಯದ ಹಾಡುಗಳು Read More »

ಮತದಾನದ ಹಕ್ಕನ್ನು ಚಲಾಯಿಸುವುದು ನಮ್ಮ ಕರ್ತವ್ಯ: ಲಕ್ಷ್ಮೀಕಾಂತ ರೈ ಅನಿಕೂಟೇಲು | ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

ಬೆಳಂದೂರು: ಜನರಿಂದ ಆಳ್ವಿಕೆಯಾಗುವ ಈ ಸಮಾಜವು ಸಶಕ್ತವಾಗಬೇಕಾದರೆ ನಮ್ಮನ್ನು ಆಳುತ್ತಿರುವ ಸರ್ಕಾರ ಮತ್ತು ನಾವು ಆಯ್ಕೆ ಮಾಡುವ ಜನಪ್ರತಿನಿಧಿಗಳು ಸಚ್ಚಾರಿತ್ರರಾಗಿರಬೇಕು. ಅಂತಹ ವ್ಯಕ್ತಿಗಳಿಗೆ ನಾವು ಮತದಾನ ಮಾಡುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಪುತ್ತೂರು ತಾಲೂಕು ಮಟ್ಟದ ಸ್ವೀಪ್ ಸಮಿತಿ ತರಬೇತುದಾರ ಹಾಗೂ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಲಕ್ಷ್ಮೀಕಾಂತ ರೈ ಅನಿಕೂಟೇಲು ಹೇಳಿದರು. ಅವರು ಕಡಬ ತಾಲೂಕಿನ ಬೆಳಂದೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ

ಮತದಾನದ ಹಕ್ಕನ್ನು ಚಲಾಯಿಸುವುದು ನಮ್ಮ ಕರ್ತವ್ಯ: ಲಕ್ಷ್ಮೀಕಾಂತ ರೈ ಅನಿಕೂಟೇಲು | ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ Read More »

error: Content is protected !!
Scroll to Top