ಪುತ್ತೂರು

ಕಡಬ ತಾಲೂಕು ಪಂಚಾಯಿತಿ ಕಚೇರಿಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು

ಕಡಬ:  ತಾಲೂಕು ಪಂಚಾಯಿತಿ ಗೆ ಬುಧವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ. ವಿ. ಜಯಣ್ಣ ಅವರನ್ನು ಲೋಕಾಯುಕ್ತ ಅಧಿಕಾರಿಗಳು ತನಿಖೆಗೆ ಒಳಡಿಸಿದ್ದಾರೆ. ಈ ಹಿಂದೆ ಸೋಮವಾರಪೇಟೆ ತಾಲೂಕು ಪಂಚಾಯಿತಿಯಲ್ಲಿ ಕಾರ್ಯ ನಿರ್ವಾಹಕ ಅಧಿಕಾರಿಯಾಗಿದ್ದ ಬಿ.ವಿ.ಜಯಣ್ಣ ಅವರು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದಲ್ಲಿ ಲೋಕಾಯುಕ್ತ ಪೊಲೀಸರು ತನಿಖೆಗಾಗಿ ಬುಧವಾರ ಬೆಳ್ಳಂಬೆಳಗ್ಗೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ಜಯಣ್ಣ ಅವರು ವಾಸ್ತವ್ಯ […]

ಕಡಬ ತಾಲೂಕು ಪಂಚಾಯಿತಿ ಕಚೇರಿಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು Read More »

ಲಕ್ಷಾಂತರ ನಗದು, ಚಿನ್ನಾಭರಣ ಕಳವು | ಇಬ್ಬರು ಆರೋಪಿಗಳ ಬಂಧನ

ಕಡಬ: ಮನೆಯೊಂದರಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಪ್ರಕರಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾದತ್ ಆಲಿ ಫರಂಗಿಪೇಟೆ (30) ಮತ್ತು ಹಮೀದ್ ವಳಚ್ಚಿಲ್ (31) ಬಂಧಿತ ಆರೋಪಿಗಳು ಆರೋಪಿಗಳು ಮಾ.11 ರಂದು ರಾಮಕುಂಜದ ನೆಬಿಸಾ ಎಂಬವರ ಮನೆಯ ಬಾಗಿಲು ಮುರಿದು ಕೊಠಡಿಯಲ್ಲಿದ್ದ ಕಪಾಟಿನಿಂದ 1.08 ಲಕ್ಷ ರೂ. ನಗದು, 13 ಪವನ್ ಚಿನ್ನಾಭರಣ ಕಳವು ಮಾಡಿದ್ದರು. ಒಟ್ಟು 5.20 ಲಕ್ಷ ರೂ. ಆಗಿತ್ತು. ಈ ಕುರಿತು ನೆಬಿಸಾ ಅವರು ಕಡಬ ಠಾಣೆಗೆ

ಲಕ್ಷಾಂತರ ನಗದು, ಚಿನ್ನಾಭರಣ ಕಳವು | ಇಬ್ಬರು ಆರೋಪಿಗಳ ಬಂಧನ Read More »

ದೇವರಲ್ಲಿ ದೃಢವಾದ ಭಕ್ತಿಯಿಂದ ಮುಕ್ತಿ ಸಾಧ್ಯ : ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ | ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಪುತ್ತೂರು: ನಾವು ತಾದಾತ್ಮ್ಯದಿಂದ ದೇವರನ್ನು ನಂಬಿಕೊಂಡು ಹೋದರೆ ಯಾವುದೇ ಸಂದರ್ಭದಲ್ಲಿ ದೇವರು ಅನುಗ್ರಹ ಮಾಡುತ್ತಾನೆ ಎಂದು ಎಡನೀರು ಮಠಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ನುಡಿದರು. ಅವರು ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ನೂತನ ಬ್ರಹ್ಮರಥ ಸಮರ್ಪಣಾ ಕಾರ್ಯಕ್ರಮದ ಅಂಗವಾಗಿ ಸೋಮವಾರ ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಜನರಿಗೆ ಬಹಳ ಹತ್ತಿರವಾದ ಸ್ವಾಮಿ ಜನಾರ್ದನ ಸ್ವಾಮಿ. ಪ್ರಸ್ತುತ ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಮಧ್ಯ ವಯಸ್ಸಿನ

ದೇವರಲ್ಲಿ ದೃಢವಾದ ಭಕ್ತಿಯಿಂದ ಮುಕ್ತಿ ಸಾಧ್ಯ : ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ | ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ Read More »

ಮಾಜಿ ಪವರ್ ಮ್ಯಾನ್‍ ಗಣೇಶ್ ಪೂಜಾರಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ !

ಪುತ್ತೂರು: ಮಾಜಿ ಪವರ್ ಮ್ಯಾನ್ ಒಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೊಡಿಪಾಡಿ ರಸ್ತೆಯ ಕುಂದ್ರುಕೋಟೆ ಎಂಬಲ್ಲಿ ನಡೆದಿದೆ. ಮಾಜಿ ಪವರ್ ಮ್ಯಾನ್‍ ಗಣೇಶ್ ಪೂಜಾರಿ (55) ಎಂಬವರ ಮೃತದೇಹ ಪತ್ತೆಯಾದದ್ದು. ಗಣೇಶ್ ಪೂಜಾರಿ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದು, ಮಾ.25 ರಂದು ಸಂಜೆ ವೇಳೆ ಮನೆ ಸುತ್ತ ವಾಸನೆ ಬರುತ್ತಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದಾಗ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.

ಮಾಜಿ ಪವರ್ ಮ್ಯಾನ್‍ ಗಣೇಶ್ ಪೂಜಾರಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ ! Read More »

ಕೃಷಿಕ ಶಿವಣ್ಣ ಗೌಡ ಆತ್ಮಹತ್ಯೆ !

ಕಡಬ: ಕೃಷಿಕರೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದ ಬುಡಲೂರಿನಲ್ಲಿ ನಡೆದಿದೆ. ಬುಡಲೂರು ನಿವಾಸಿ ಶಿವಣ್ಣ ಗೌಡ (61) ಆತ್ಮಹತ್ಯೆ ಮಾಡಿಕೊಂಡವರು. ಶಿವಣ್ಣ ಅವರು ಸ್ಥಳೀಯ ಕೃಷಿ ಪತ್ತಿನ ಸಹಕಾರಿ ಸಂಘ ಸೇರಿದಂತೆ ಇನ್ನಿತರ ಸಹಕಾರಿ ಸಂಘದಿಂದ ಸಾಲ ಪಡೆದಿದ್ದು, ವಿಪರೀತ ಸಾಲ ಮಾಡಿ ಮರುಪಾವತಿ ಮಾಡಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಮೃತರ ಪುತ್ರ ಹೇಮಂತ್ ಕಡಬ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೃಷಿಕ ಶಿವಣ್ಣ ಗೌಡ ಆತ್ಮಹತ್ಯೆ ! Read More »

ಹೈ ಮಾಸ್ಕ್ ಲೈಟ್‍ ಉದ್ಘಾಟನೆ

ಪುತ್ತೂರು: ಕ್ಯಾಂಪ್ಕೋ ಸಂಸ್ಥೆಯು ತನ್ನ ಸಾರ್ವಜನಿಕ ಹಿತಾಸಕ್ತಿ ನಿಧಿಯಿಂದ  ದೇಂತಡ್ಕ ವನದುರ್ಗ ದೇವಸ್ಥಾನದ ವಠಾರಕ್ಕೆ ನೀಡಿದ ಹೈ ಮಾಸ್ಟ್ ಲೈಟ್ ನ್ನು ಉದ್ಘಾಟಿಸಲಾಯಿತು. ಕ್ಯಾಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೋಡ್ಗಿಯವರು ತೆಂಗಿನಕಾಯಿ ಒಡೆಯುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಇದನ್ನು ತರಿಸಿದ ಕ್ಯಾಂಪ್ಕೋ ನಿರ್ದೇಶಕರಾದ ರಾಘವೇಂದ್ರ ಭಟ್ ಕೆದಿಲ, ಮಹೇಶ್ ಚೌಟ, ಪಂಚಾಯತ್ ಅಧ್ಯಕ್ಷ ಹರೀಶ್, ವನದುರ್ಗ ದೇವಸ್ಥಾನದ ಆಡಳಿತ ಮಂಡಳಿ ಟ್ರಸ್ಟಿ ಜೆ. ಸುಂದರ ಭಟ್ ಜತ್ತನಕೋಡಿ, ಮಾಜಿ ಪಂಚಾಯತ್ ಸದಸ್ಯ ಕುಶಾಲಪ್ಪ

ಹೈ ಮಾಸ್ಕ್ ಲೈಟ್‍ ಉದ್ಘಾಟನೆ Read More »

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಆರಂಭ | ಪುತ್ತೂರು, ಕಡಬದಲ್ಲಿ ಮೊದಲ ದಿನವೇ 42 ವಿದ್ಯಾರ್ಥಿಗಳು ಗೈರು.

ಪುತ್ತೂರು: 2023-24ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯು ಇಂದಿನಿಂದ ಆರಂಭಗೊಂಡಿದ್ದು, ಮೊದಲ ದಿನವೇ ಪರೀಕ್ಷೆಗೆ ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ 42 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಪುತ್ತೂರು, ಕಡಬ ತಾಲೂಕಿನಲ್ಲಿ ಉಭಯ ತಾಲೂಕಿನಲ್ಲಿ ಒಟ್ಟು 4732 ಮಂದಿ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು ಒಟ್ಟು 4690ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ಮೂಲಕ ಶೇ.99.11ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದಾರೆ. ಸೋಮವಾರ ಪ್ರಥಮ ಭಾಷಾ ಪರೀಕ್ಷೆ ನಡೆದಿದೆ. ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ ತೆರೆಯಲಾಗಿರುವ 13 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದೆ.

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಆರಂಭ | ಪುತ್ತೂರು, ಕಡಬದಲ್ಲಿ ಮೊದಲ ದಿನವೇ 42 ವಿದ್ಯಾರ್ಥಿಗಳು ಗೈರು. Read More »

ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಶ್ರೀ ಜನಾರ್ದನ ದೇವರು ಸಹಿತ ಶ್ರೀ ಶಾಸ್ತಾರ ದೇವರ ಪುನಃ ಪ್ರತಿಷ್ಠೆ

ಪುತ್ತೂರು: ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಪುತ್ತೂರು ತಾಲೂಕಿನ ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಸೋಮವಾರ ಶ್ರೀ ಜನಾರ್ದನ ದೇವರ ಪುನಃ ಪ್ರತಿಷ್ಠೆ, ಶ್ರೀ ಶಾಸ್ತಾರ ದೇವರ ಪುನಃ ಪ್ರತಿಷ್ಠೆ ನಡೆಯಿತು. ಸೋಮವಾರ ಮುಂಜಾನೆ 5 ರಿಂದ ತಂತ್ರಿ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮಹಾಗಣಪತಿ ಹೋಮ, ಅಲ್ಪಪ್ರಾಸಾದ ಶುದ್ದಿ, ಪ್ರಾಸಾದ ಪ್ರತಿಷ್ಠೆ, ನಾಂದೀಪುಣ್ಯಾಹ, ನಪುಂಸಕ ಶಿಲಾ ಪ್ರತಿಷ್ಠೆ, ರತ್ನನ್ಯಾಸಾದಿ ಪೀಠ ಪ್ರತಿಷ್ಠೆ, ಶಯ್ಯಾ ಮಂಟಪದಿಂದ ಜೀವಕಲಶ ಬಿಂಬ, ನಿದ್ರಾ ಕಲಶಾಧಿಗಳನ್ನು ಗರ್ಭಗೃಹದ ಒಳಗೆ ಒಯ್ಯುವುದು ನಡೆದ ಬಳಿಕ

ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಶ್ರೀ ಜನಾರ್ದನ ದೇವರು ಸಹಿತ ಶ್ರೀ ಶಾಸ್ತಾರ ದೇವರ ಪುನಃ ಪ್ರತಿಷ್ಠೆ Read More »

ಮಾ.28 : ಶ್ರೀ ಭಗವತಿ ಸಹಕಾರ ಬ್ಯಾಂಕ್‍ ಲಿ. ನ ಪುತ್ತೂರು ಶಾಖೆ ಶುಭಾರಂಭ

ಪುತ್ತೂರು: ಕಳೆದ 48 ವರ್ಷಗಳಿಂದ ಸಹಕಾರಿ ಬ್ಯಾಂಕಿಂಗ್‍ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಾ ಬಂದಿರುವ ““ಶ್ರೀ ಭಗವತಿ ಸಹಕಾರ ಬ್ಯಾಂಕ್‍ಲಿ.”” 8ನೇ ಶಾಖೆ ಪುತ್ತೂರಿನ ಮಾ.28 ರಂದು ಏಳ್ಮುಡಿಯಲ್ಲಿರುವ ಮಹಾದೇವಿ ಸಂಕೀರ್ಣದ ಒಂದನೇ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ ಎಂದು ಬ್ಯಾಂಕ್‍ಅಧ್ಯಕ್ಷ ಮಾಧವ ಬಿ.ಎಮ್‍. ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಂಗಳೂರಿನ ಮೋರ್ಗನ್ಸ್ ಗೇಟ್ ನಲ್ಲಿರುವ ಜಪ್ಪುನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಬಳಿಕ ತೊಕ್ಕೊಟ್ಟು, ಕಂಕನಾಡಿ, ಬಿ.ಸಿ.ರೋಡು, ಕೈಕಂಬ, ಮಂಗಳೂರು  ಮಾರ್ಕೆಟ್ ರೋಡ್, ವಿಟ್ಲ ಶಾಖೆಗಳನ್ನು ತೆರೆದಿದ್ದು ಇದೀಗ ಪುತ್ತೂರಿನಲ್ಲಿ 8ನೇ

ಮಾ.28 : ಶ್ರೀ ಭಗವತಿ ಸಹಕಾರ ಬ್ಯಾಂಕ್‍ ಲಿ. ನ ಪುತ್ತೂರು ಶಾಖೆ ಶುಭಾರಂಭ Read More »

ಮೇಲಿನ ಮುಕ್ಕೂರು ತರವಾಡು ಕ್ಷೇತ್ರ : ಜೀರ್ಣೋದ್ಧಾರದ ಪೂರ್ವಭಾವಿ ಸಭೆ | ಎ.18 : ಗಣಹೋಮ, ಮೃತ್ಯುಂಜಯ ಹೋಮ, ಸತ್ಯನಾರಾಯಣ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ

ಮುಕ್ಕೂರು : ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕಾರಣಿಕ ಶಕ್ತಿಯ ಐತಿಹ್ಯವುಳ್ಳ ದೇವಿ-ದೈವ ಶಕ್ತಿಗಳ ಸಾನಿಧ್ಯದ ನೆಲೆ ಮೇಲಿನ ಮುಕ್ಕೂರು ತರವಾಡು ಕ್ಷೇತ್ರದಲ್ಲಿ ಅಷ್ಟಮಂಗಲ ಚಿಂತನೆಯ ಪ್ರಕಾರ ಊರವರ ಸಹಕಾರದೊಂದಿಗೆ ಸ್ಥಳ ಸಾನಿಧ್ಯಗಳ ಜೀರ್ಣೋದ್ಧಾರ ಕಾರ್ಯಕ್ಕೆ ಸಂಕಲ್ಪ ತೊಡಲಾಗಿದ್ದು ಇದರ ಭಾಗವಾಗಿ ಶ್ರೀ ಕ್ಷೇತ್ರದಲ್ಲಿ ಎ.18 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮೇಲಿನ ಮುಕ್ಕೂರು ತರವಾಡು ಕ್ಷೇತ್ರದ ಮುಖ್ಯಸ್ಥ ಮೋಹನ ಬೈಪಡಿತ್ತಾಯ, ವಸಂತ ಬೈಪಡಿತ್ತಾಯ, ಲಕ್ಷ್ಮೀಶ ಬೈಪಡಿತ್ತಾಯ ಅವರು  ದೈವ ಸಾನಿಧ್ಯಗಳ ಜೀರ್ಣೋದ್ಧಾರ ಕುರಿತಂತೆ ಮಾ.24

ಮೇಲಿನ ಮುಕ್ಕೂರು ತರವಾಡು ಕ್ಷೇತ್ರ : ಜೀರ್ಣೋದ್ಧಾರದ ಪೂರ್ವಭಾವಿ ಸಭೆ | ಎ.18 : ಗಣಹೋಮ, ಮೃತ್ಯುಂಜಯ ಹೋಮ, ಸತ್ಯನಾರಾಯಣ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ Read More »

error: Content is protected !!
Scroll to Top