ಪುತ್ತೂರು

ಸಂತ ಫಿಲೋಮಿನಾ ಕಾಲೇಜಿನಲ್ಲಿ ಫೆಸ್ಟ್ ಆ್ಯಂಬಿಯೋರ-  2024 “ಲಕ್ಷ್ಯ” ಸ್ಪರ್ಧಾ ಕಾರ್ಯಕ್ರಮ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ “ಲಕ್ಷ್ಯ” ಆ್ಯಂಬಿಯೋರ-2024 ಸ್ಪರ್ಧೆಯನ್ನು ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಆಯೋಜಿಸಲಾಯಿತು. ಮುಖ್ಯ ಅತಿಥಿಯಾಗಿ ಬೆಂಗಳೂರಿನ ನಾರ್ದನ್ ಟ್ರಸ್ಟ್ ನ ಸೀನಿಯರ್ ಅನಲಿಸ್ಟ್ ಬಿಪಿನ್ ಸಂಕದ್ ಮಾತನಾಡಿ, ವಿದ್ಯಾರ್ಥಿಗಳು ಪ್ರತಿದಿನ ಹೊಸತನ್ನು ಕಲಿತು ಉತ್ತಮ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಪ್ರತಿಯೊಂದು ಸ್ಪರ್ಧೆಯೂ ಹೊಸ ವಿಷಯಗಳನ್ನು ಕಲಿಯುವಲ್ಲಿ ಸಹಕಾರಿಯಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಿನ್ಸಿಪಾಲ್ ವಂ.ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ, ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ದೊರಕುವಜ್ಞಾನ ಹಾಗೂ ಅನುಭವಗಳು ವಿದ್ಯಾರ್ಥಿಗಳ […]

ಸಂತ ಫಿಲೋಮಿನಾ ಕಾಲೇಜಿನಲ್ಲಿ ಫೆಸ್ಟ್ ಆ್ಯಂಬಿಯೋರ-  2024 “ಲಕ್ಷ್ಯ” ಸ್ಪರ್ಧಾ ಕಾರ್ಯಕ್ರಮ Read More »

ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬವಣೆ | ಈ ಹಿಂದೆ ಇದ್ದ 31 ಪಂಪ್ ಆಪರೇಟರ್ ಗಳನ್ನು ಪುನಃ ನಿಯೋಜನೆ ಮಾಡಬೇಕು | ನಿಯೋಜನೆ ಮಾಡದಿದ್ದಲ್ಲಿ ನಗರಸಭೆ, ಜಲಸಿರಿ ಅಧಿಕಾರಿಗಳ ವಿರುದ್ಧ ಉಗ್ರ ಪ್ರತಿಭಟನೆ : ಎಚ್‍.ಮಹಮ್ಮದಾಲಿ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿರುವ 170 ಕೊಳವೆ ಬಾವಿಗಳ ನಿರ್ವಹಣೆಯನ್ನು ನಗರಸಭೆ ಈಗಾಗಲೇ ಜಲಸಿರಿ ಸುಪರ್ದಿಗೆ ನೀಡಿದ್ದ ಪರಿಣಾಮ ಎಲ್ಲೆಡೆ ಕುಡಿಯುವ ನೀರಿನ ಬವಣೆ ಉಂಟಾಗಿದೆ. ಈ ನಿಟ್ಟಿನಲ್ಲಿ 170 ಕೊಳವೆ ಬಾವಿಗಳ ನಿರ್ವಹಣೆಗೆ ಈ ಹಿಂದೆ ಇದ್ದ 31 ಪಂಪ್ ಆಪರೇಟರ್‍ ಗಳನ್ನು ಪುನಃ ನಿಯೋಜನೆ ಮಾಡಿ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದಲ್ಲಿ ನಗರಸಭೆ ಹಾಗೂ ಜಲಸಿರಿ ಅಧಿಕಾರಿಗಳ ವಿರುದ್ಧ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ನಗರಸಭೆ ಮಾಜಿ ವಿಪಕ್ಷ ನಾಯಕ ಎಚ್‍.ಮಹಮ್ಮದಾಲಿ ಎಚ್ಚರಿಕೆ ನೀಡಿದ್ದಾರೆ.

ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬವಣೆ | ಈ ಹಿಂದೆ ಇದ್ದ 31 ಪಂಪ್ ಆಪರೇಟರ್ ಗಳನ್ನು ಪುನಃ ನಿಯೋಜನೆ ಮಾಡಬೇಕು | ನಿಯೋಜನೆ ಮಾಡದಿದ್ದಲ್ಲಿ ನಗರಸಭೆ, ಜಲಸಿರಿ ಅಧಿಕಾರಿಗಳ ವಿರುದ್ಧ ಉಗ್ರ ಪ್ರತಿಭಟನೆ : ಎಚ್‍.ಮಹಮ್ಮದಾಲಿ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಚೆಂಡೆ ಸೇವಾ ವಾದಕ ಆನಂದ ದೇವಾಡಿಗ ನಿಧನ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಚೆಂಡೆವಾದಕ, ಆಲಂಕಾರು ನಿವಾಸಿ ಆನಂದ ದೇವಾಡಿಗ (50) ಶುಕ್ರವಾರ ರಾತ್ರಿ ನಿಧನರಾದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ 28 ವರ್ಷಗಳಿಂದ ಚೆಂಡೆ ಸೇವಾ ವಾದಕರಾಗಿದ್ದ ಅವರು, ಆನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ನಿಧನರಾಗಿದ್ದಾರೆ. ಮೃತರು ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿ, ಸಹೋದರರು, ಸಹೋದರಿಯರನ್ನು ಅಗಲಿದ್ದಾರೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಚೆಂಡೆ ಸೇವಾ ವಾದಕ ಆನಂದ ದೇವಾಡಿಗ ನಿಧನ Read More »

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ವಿದ್ಯಾರ್ಥಿಗಳ ಪ್ರತಿಭಾ ದಿನ

ಪುತ್ತೂರು: ಜೀವನದಲ್ಲಿ ಎಡರುತೊಡರುಗಳು, ಜಯ-ಅಪಜಯಗಳು, ಸನ್ಮಾನ-ಅಪಮಾನಗಳು ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಅವುಗಳನ್ನು ಸ್ವೀಕರಿಸುವ ಮತ್ತು ಅದರಿಂದ ಪಾಠ ಕಲಿಯುವ ಸಾಧ್ಯತೆಗಳನ್ನು ಆರಿಸುವ ಸ್ವಾತಂತ್ರ್ಯ ಮಾತ್ರ ನಮಗಿದೆ ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ.ದೇವಿಚರಣ್ ರೈ ಹೇಳಿದರು. ಅವರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳ ಪ್ರತಿಭಾ ದಿನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತಾಡಿದರು. ಏಕಾಂತದಲ್ಲಿ ಕಣ್ಮುಚ್ಚಿ ನಮ್ಮ ಬಗ್ಗೆ ನಾವು ಯೋಚಿಸಿದಾಗ ನಮ್ಮ ಅಂತರಂಗವು ತೆರೆದುಕೊಳ್ಳುತ್ತದೆ ಮತ್ತು ಸಮಾಜದಲ್ಲಿ

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ವಿದ್ಯಾರ್ಥಿಗಳ ಪ್ರತಿಭಾ ದಿನ Read More »

ಯೋಗ ಮನುಷ್ಯ ಹಾಗೂ ಪ್ರಕೃತಿಯನ್ನು ಒಂದಾಗಿಸುವ ಸಾಧನ | ಯೋಗ ಶಿಬಿರಕ್ಕೆ ಚಾಲನೆ ನೀಡಿ ವಸಂತ ಸುವರ್ಣ

ಪುತ್ತೂರು: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗಾಗಿ ಮೂರು ದಿನಗಳ ಯೋಗ ಶಿಬಿರ ನರೇಂದ್ರ ಪ.ಪೂ. ಕಾಲೇಜಿನಲ್ಲಿ ಉದ್ಘಾಟನೆಗೊಂಡಿತು. ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸಂಚಾಲಕ ವಸಂತ ಸುವರ್ಣ ಶಿಬಿರ ಉದ್ಘಾಟಿಸಿ ಮಾತನಾಡಿ, ಯೋಗವು ಮನುಷ್ಯ ಹಾಗೂ ಪ್ರಕೃತಿಯನ್ನು ಸೇರಿಸುವ, ಒಂದಾಗಿಸುವ ಒಂದು ಸಾಧನ. ಭೌತಿಕದಿಂದ ಅಭೌತಿಕದೆಡೆಗೆ ನಡೆಸುವ ಪಯಣಕ್ಕೆ ಈ ಯೋಗವೇ ಮಾರ್ಗದರ್ಶಕ. ಯೋಗವನ್ನು ಅಭ್ಯಾಸ ಮಾಡಿದರೆ ದೇಹದ ಜಡತ್ವವು ನಿವಾರಣೆಯಾಗಿ ಸೂಕ್ಷ್ಮ ಹಾಗೂ ಕ್ರಿಯಾಶೀಲವಾದ ಮನಸ್ಸಿನೊಡನೆ ಸ್ಪಂದಿಸಲು ಸಿದ್ಧಗೊಳ್ಳುತ್ತದೆ. ಆನಂತರ

ಯೋಗ ಮನುಷ್ಯ ಹಾಗೂ ಪ್ರಕೃತಿಯನ್ನು ಒಂದಾಗಿಸುವ ಸಾಧನ | ಯೋಗ ಶಿಬಿರಕ್ಕೆ ಚಾಲನೆ ನೀಡಿ ವಸಂತ ಸುವರ್ಣ Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಮುಖ ಆರೋಪಿ ಮುಸ್ತಫಾ ಪೈಚಾರ್ ಬಂಧನ | ಸಂತಸ ವ್ಯಕ್ತಪಡಿಸಿದ ಪ್ರವೀಣ್ ಪತ್ನಿ ನೂತನ

ಬೆಳ್ಳಾರೆ: ಮುಸ್ತಫಾ ಪೈಚಾರ್ ಎನ್ನುವವನು ಈ ಪ್ರಕರಣದ ಪ್ರಮುಖ ಆರೋಪಿ ಅವನ ಬಂಧನವಾಗಿರುವುದು ನಮಗೆ ತುಂಬಾ ಸಂತೋಷದ ವಿಷಯ ಹಾಗೂ ಇವನ ಹಿಂದೆ ಇನ್ನೂ ಎಷ್ಟು ಮಂದಿ ಆರೋಪಿಗಳಿದ್ದಾರೋ ಅವರೆಲ್ಲರ ಬಂಧನ ಆಗಬಹುದೆಂಬ ಭರವಸೆ ಹಾಗೂ ನಂಬಿಕೆ ಎನ್‍ ಐಎ ಮೇಲೆ ಇದೆ ಎಂದು ಹತ್ಯೆಗೀಡಾದ ದಿ.ಪ್ರವೀಣ್ ನೆಟ್ಟಾರು ಪತ್ನಿ ನೂತನ ತಿಳಿಸಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ನಾಲ್ಕನೇ ಆರೋಪಿಯಾಗಿರುವ ಮುಸ್ತಫಾ ಪೈಚಾರ್ ಬಂಧಿಸಿರುವ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ನೂತನ ನೆಟ್ಟಾರುರವರು, ನನ್ನ ಪತಿಯ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಮುಖ ಆರೋಪಿ ಮುಸ್ತಫಾ ಪೈಚಾರ್ ಬಂಧನ | ಸಂತಸ ವ್ಯಕ್ತಪಡಿಸಿದ ಪ್ರವೀಣ್ ಪತ್ನಿ ನೂತನ Read More »

ವಾಹವ ಅಪಘಾತದಲ್ಲಿ ಕಾಂಗ್ರೆಸ್ ನಾಯಕ ಶಿವಕುಮಾರ್ ಮೃತ್ಯು !

ವಾಹನ ಅಪಘಾತದಲ್ಲಿ ತಮಿಳು ಕಾರ್ಮಿಕ ಮುಖಂಡ, ಕಾಂಗ್ರೆಸ್ ನಾಯಕ ಶಿವಕುಮಾರ್ ಕೌಡಿಚ್ಚಾರ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಬೆಳಗಾವಿಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

ವಾಹವ ಅಪಘಾತದಲ್ಲಿ ಕಾಂಗ್ರೆಸ್ ನಾಯಕ ಶಿವಕುಮಾರ್ ಮೃತ್ಯು ! Read More »

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದೇಣಿಗೆ ಚೆಕ್ ಹಸ್ತಾಂತರ

ಪುತ್ತೂರು: ತಾಲೂಕಿನ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ನಡೆದಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಜೀರ್ಣೋದ್ಧಾರ ಕಾರ್ಯಕ್ಕೆ ಈಗಾಗಲೇ ಮೂರು ಲಕ್ಷ ರೂ. ದೇಣಿಗೆ ನೀಡಲಾಗಿದೆ. ಇದೀಗ ಎರಡನೇ ಹಂತದ 2.50 ಲಕ್ಷ ರೂ. ಹೀಗೆ ಒಟ್ಟು 5.50 ಲಕ್ಷ ರೂ. ನೀಡಿದ್ದಾರೆ. ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಎಮ್‍. ಸಮಿತಿ ಸದಸ್ಯರಿಗೆ 2.50 ಲಕ್ಷ ಚೆಕ್‍ ನ್ನು ಶುಕ್ರವಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಬ್ರಹ್ಮಕಲಶೋತ್ಸವ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ,

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದೇಣಿಗೆ ಚೆಕ್ ಹಸ್ತಾಂತರ Read More »

ಯುವಕನ ಅನುಮಾನಾಸ್ಪದ ಸಾವು : ಕೊಲೆ ಶಂಕೆ

ಪುತ್ತೂರು: ಬೆಟ್ಟಂಪಾಡಿ ಗ್ರಾಮದ  ಬರೆ ಎಂಬಲ್ಲಿ ಯುವಕನೋರ್ವನ  ಶವ ಅನುಮಾನಾಸ್ಪದವಾಗಿ ಮೃತಪಟ್ಟ ರೀತಿಯಲ್ಲಿ ಪತ್ತೆಯಾಗಿದ್ದು, ಇದೊಂದು ಕೊಲೆ ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ  ಗ್ರಾಮಾಂತರ ಪೊಲೀಸರು  ಮೂವರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ. ಬೆಟ್ಟಂಪಾಡಿ ಬರೆ ದಿ.ಕೊರಗಪ್ಪ ಶೆಟ್ಟಿ ಯವರ ಪುತ್ರ ಚೇತನ್ (33ವ.) ಮೃತಪಟ್ಟವರು. ಮದ್ಯ ವ್ಯಸನಿಯಾಗಿದ್ದ ಚೇತನ್ ಮೇ.9ರಂದು ರಾತ್ರಿ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡಿದ್ದರು. ನಂತರ ನೆರೆಯ ಮನೆಗೆ ಹೋಗಿ  ಅಲ್ಲಿಯೂ  ಗಲಾಟೆ ಮಾಡಿದ್ದರು. ಅಲ್ಲಿಂದ  ಚೇತನ್ ರವರನ್ನು ಆತನ  ತಾಯಿ, ಬಾವ

ಯುವಕನ ಅನುಮಾನಾಸ್ಪದ ಸಾವು : ಕೊಲೆ ಶಂಕೆ Read More »

80 ವರ್ಷಗಳ ವಸ್ತ್ರ ಪರಂಪರೆಯಲ್ಲಿ ಪ್ರಸಿದ್ಧ ಪಡೆದ ‘ಎಂ.ಸಂಜೀವ ಶೆಟ್ಟಿ’ ಸಾರೀಸ್ & ರೆಡಿಮೇಡ್ಸ್ | ನೂತನ ಮಳಿಗೆ ದರ್ಬೆ ವೃತ್ತದ ಬಳಿ ಶುಭಾರಂಭ

ಪುತ್ತೂರು: 80 ವರ್ಷಗಳ ವಸ್ತ್ರ ಪರಂಪರೆಯಲ್ಲಿ ಪ್ರಸಿದ್ಧಿ ಪಡೆದ ‘ಎಂ.ಸಂಜೀವ ಶೆಟ್ಟಿ’ ಸಾರೀಸ್ & ರೆಡಿಮೇಡ್ಸ್ ನ ನೂತನ ಮಳಿಗೆ ದರ್ಬೆ ವೃತ್ತದ ಬಳಿ ಇಂದು ಶುಭಾರಂಭಗೊಂಡಿತು. ಸಂಸ್ಥೆಯನ್ನು ಉದ್ಯಮಿ ವಾಮನ್ ಪೈ ಉದ್ಘಾಟಿಸಿ ಮಾತನಾಡಿ, ವ್ಯಾಪಾರದಲ್ಲಿ ಕಮಿಟ್ಮೆಂಟ್ ಹಾಗೂ ಡೆಡಿಕೇಶನ್ ಎರಡೂ ಬೇಕು. ಜತೆಗೆ ವ್ಯಾಪಾರ ಎಂಬುದು ಒಂದು ತಪಸ್ಸು. ಇಂದು ಎಂ.ಸಂಜೀವ ಶೆಟ್ಟಿ ಅವರ ಪ್ರಯತ್ನದ ಫಲವಾಗಿ 5ನೇ ಶಾಖೆ ದರ್ಬೆ ವೃತ್ತದ ಬಳಿ ಶುಭಾರಂಭಗೊಂಡಿದೆ. ಮಳಿಗೆ ಮಂಗಳೂರು ಅಲ್ಲದೆ ಬೆಂಗಳೂರಿನಲ್ಲಿ ಮನೆಮಾತಾಗಿದೆ. ಜನರಿಗೆ

80 ವರ್ಷಗಳ ವಸ್ತ್ರ ಪರಂಪರೆಯಲ್ಲಿ ಪ್ರಸಿದ್ಧ ಪಡೆದ ‘ಎಂ.ಸಂಜೀವ ಶೆಟ್ಟಿ’ ಸಾರೀಸ್ & ರೆಡಿಮೇಡ್ಸ್ | ನೂತನ ಮಳಿಗೆ ದರ್ಬೆ ವೃತ್ತದ ಬಳಿ ಶುಭಾರಂಭ Read More »

error: Content is protected !!
Scroll to Top