ಮತ್ತೆ ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಕಾಣಿಸಿಕೊಂಡ ಆನೆ
ಪುತ್ತೂರು : ಮತ್ತೆ ಆನೆಯೊಂದು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದಲ್ಲಿ ತೋಟವೊಂದರದಲ್ಲಿ ಕಾಣಿಸಿಕೊಂಡಿದೆ. ಸವಣೂರಿನ ಗೌರಿ ಹೊಳೆ ದಾಟಿ ಬಂದಿದ್ದ ಆನೆ ಸುಳ್ಯ ತಾಲೂಕಿನ ಕೆಲವೆಡೆ ತೋಟಗಳಿಗೆ ನುಗ್ಗಿ ಕೃಷಿ ಹಾನಿಗೊಳಿಸಿದೆ. ಬಳಿಕ ಆನೆ ಪುತ್ತೂರು ತಾಲೂಕಿನ ಮಾಡಾವು ಸುತ್ತಮುತ್ತಲ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಸೋಮವಾರ ಶಾಂತಿಗೋಡು ಗ್ರಾಮದಲ್ಲಿ ಕಾಣಿಸಿಕೊಂಡು ಮನೆಯೊಂದರ ಗೇಟಿಗೆ ಹಾನಿ ಮಾಡಿ, ಕೃಷಿ ತೋಟಕ್ಕೆ ನುಗ್ಗಿತ್ತು. ಇದೀಗ ಈ ಆನೆ ಇಂದು ನಸುಕಿನ ಜಾವ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದ ಬಾರ್ತೋಲಿ ಎಂಬಲ್ಲಿ ತೋಟದಲ್ಲಿ ಕಂಡು ಬಂದಿದೆ. […]
ಮತ್ತೆ ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಕಾಣಿಸಿಕೊಂಡ ಆನೆ Read More »










