ಪುತ್ತೂರು

ನಾಳೆ ವಿದ್ಯುತ್ ನಿಲುಗಡೆ| ಎಲ್ಲೆಲ್ಲಿ? : ಇಲ್ಲಿದೆ ಡಿಟೈಲ್ಸ್

ಪುತ್ತೂರು: ತುರ್ತು ನಿರ್ವಹಣಾ ಕಾಮಗಾರಿ ಮತ್ತು ಉಪ್ಪಿನಂಗಡಿ – ಪುತ್ತೂರು ಚತುಷ್ಪಥ  ಮಾರ್ಗ ಕಾಮಗಾರಿ ನಿಮಿತ್ತ 110/33/11 ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ವಾಟರ್‌ಸಪ್ಲ್ಯ, ಕಾಂಚನ ಮತ್ತು ಉಪ್ಪಿನಂಗಡಿ ಎಕ್ಸ್‌ಪ್ರೆಸ್ ಫೀಡರ್‌ನಲ್ಲಿ ಜೂ.13ರಂದು ಪೂರ್ವಾಹ್ನ 10 ರಿಂದ ಅಪರಾಹ್ನ 5.30 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. 33 ಕೆವಿ ಪುತ್ತೂರು-ಕಡಬ ವಿದ್ಯುತ್ ಮಾರ್ಗದ ಮುಂಗಾರು ಪೂರ್ವ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂ.13ರಂದು ಪೂರ್ವಾಹ್ನ 10 ರಿಂದ ಸಾಯಂಕಾಲ 5 ಗಂಟೆಯವರೆಗೆ 33 ಕೆವಿ ಪುತ್ತೂರು- ಕಡಬ […]

ನಾಳೆ ವಿದ್ಯುತ್ ನಿಲುಗಡೆ| ಎಲ್ಲೆಲ್ಲಿ? : ಇಲ್ಲಿದೆ ಡಿಟೈಲ್ಸ್ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ  ‘ಆದಿಯೋ ಬ್ಲಾಸಮ್ಸ್ ‘ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಪುತ್ತೂರು: ವಿದ್ಯಾರ್ಥಿಗಳು ತಮ್ಮ ಸ್ವಾತಂತ್ರ್ಯವನ್ನು ಜವಾಬ್ದಾರಿಯಿಂದ ಉಪಯೋಗಿಸಬೇಕು. ನಮ್ಮ ಸಂತೋಷ, ಇನ್ನೊಬ್ಬರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಈ ಸಂಸ್ಥೆಯಿಂದ ಹೊರಹೋದ ಮೇಲೂ ಹಿರಿಯ ವಿದ್ಯಾರ್ಥಿಗಳಾಗಿ ಕಾಲೇಜಿನ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದು ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್‌ ಮೊಂತೇರೊ ಹೇಳಿದರು . ಸಂತ ಫಿಲೋಮಿನಾ ಕಾಲೇಜಿನ ಮಾನವಿಕ ವಿಭಾಗದ ಆಶ್ರಯದಲ್ಲಿ  ಆಯೋಜಿಸಿದ ‘ಆದಿಯೋ ಬ್ಲಾಸಮ್ಸ್’   ಬಿಎ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾನವಿಕ ವಿಭಾಗದ ಮುಖ್ಯಸ್ಥ  ಡಾ. ನಾಬರ್ಟ್  ಮಸ್ಕರೇನ್ಸಸ್ ಮಾತನಾಡಿ, ವಿದ್ಯಾರ್ಥಿಗಳು ಬದುಕಿನಲ್ಲಿ

ಸಂತ ಫಿಲೋಮಿನಾ ಕಾಲೇಜಿನಲ್ಲಿ  ‘ಆದಿಯೋ ಬ್ಲಾಸಮ್ಸ್ ‘ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ Read More »

ನರಿಮೊಗರು ವಲಯ ಕಾಂಗ್ರೆಸ್  ಅಧ್ಯಕ್ಷ ಪ್ರಕಾಶ್ ನಿಧನ

ಪುತ್ತೂರು: ಮೊಬೈಲ್ ಮಳಿಗೆ ಹೊಂದಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಇಂದು ನಿಧನರಾದರು. ಪುರುಷರಕಟ್ಟೆ ನಿವಾಸಿ ಪ್ರಕಾಶ್ (45) ಮೃತಪಟ್ಟವರು. ಪ್ರಕಾಶ್ ಅವರು ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಯಂಗ್ ಬ್ರಿಗೆಡ್ ನಲ್ಲಿ ತೊಡಗಿಸಿಕೊಂಡಿದ್ದರು. ಕ್ರಿಕೆಟ್ ಆಟಗಾರರಾಗಿದ್ದ ಅವರು ಕೆಎಸ್‍ ಆರ್‍ ಟಿಸಿ ಬಸ್ ನಿಲ್ದಾಣದಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದರು. ಮೃತರು ಪತ್ನಿ, ಮಗಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ನರಿಮೊಗರು ವಲಯ ಕಾಂಗ್ರೆಸ್  ಅಧ್ಯಕ್ಷ ಪ್ರಕಾಶ್ ನಿಧನ Read More »

ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ | ಕಾಣಿಯೂರು ಪೇಟೆಯಲ್ಲಿ ಸಂಭ್ರಮಾಚರಣೆ

ಪುತ್ತೂರು: `ಭಾರತೀಯ ಜನತಾ ಪಾರ್ಟಿ (ಎನ್ ಡಿಎ) ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಮೊದಲ ಬಾರಿ ಸತತ ಮೂರನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ಕಾಣಿಯೂರು ಪೇಟೆಯಲ್ಲಿ ಸಂಭ್ರಮಾಚರಣೆ ಹಾಗೂ ವಿಜಯೋತ್ಸವವು ನಡೆಯಿತು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸುಳ್ಯ ಮಂಡಲದ ಕಾರ್ಯದರ್ಶಿ ಗಣೇಶ್ ಕೆ ಎಸ್ ಉದನಡ್ಕ, ರೈತಮೋರ್ಚ ಕಾರ್ಯದರ್ಶಿ ಧರ್ಮೇಂದ್ರ ಕಟ್ಟತ್ತಾರು, ಶಕ್ತಿ ಕೇಂದ್ರದ ಪ್ರಮುಖ್ ಧನಂಜಯ ಕೇನಾಜೆ, ಬೂತ್‌ ಸಮಿತಿಯ ಅಧ್ಯಕ್ಷರುಗಳಾದ

ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ | ಕಾಣಿಯೂರು ಪೇಟೆಯಲ್ಲಿ ಸಂಭ್ರಮಾಚರಣೆ Read More »

ಪ್ರಾಣಿಗಳ ಹತ್ಯೆ ನಿಷೇಧ | ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳುವಂತೆ ವಿಹಿಂಪ, ಬಜರಂಗದಳ ವತಿಯಿಂದ ನಗರ ಠಾಣೆಗೆ ಮನವಿ

ಪುತ್ತೂರು : ರಾಜ್ಯ ಮತ್ತು ದೇಶದ ಕಾನೂನಿನನ್ವಯ ಹಾಗೂ Animal welfare board of India ಇದರ ಸುತ್ತೋಲೆ ಅನ್ವಯ ಸುಪ್ರೀಂ ಕೋರ್ಟ್ ಆದೇಶದನ್ವಯ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣ ಕಾಯಿದೆ ಜಾರಿಯಲ್ಲಿದ್ದು ಅದರ ಪ್ರಕಾರ ಕುರ್ಬಾನಿಗೆ ನಿಷೇಧವಿದೆ. ಹಾಗೂ ಕುರ್ಬಾನಿಗೆ ಜಾನುವಾರು ಸಾಗಾಟವೂ ಶಿಕ್ಷಾರ್ಹ ಅಪರಾಧವಾಗಿದೆ. ಕುರ್ಬಾನಿ ಕೊಟ್ಟ ಸ್ಥಳವನ್ನು ಸರಕಾರ ಮುಟ್ಟುಗೋಲಿಗೆ ಅವಕಾಶವಿದೆ. ರಾಜ್ಯದಲ್ಲಿ ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯಿದೆ 1959 ತಿದ್ದುಪಡಿ 1975 ಇದರ ಪ್ರಕಾರವೂ

ಪ್ರಾಣಿಗಳ ಹತ್ಯೆ ನಿಷೇಧ | ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳುವಂತೆ ವಿಹಿಂಪ, ಬಜರಂಗದಳ ವತಿಯಿಂದ ನಗರ ಠಾಣೆಗೆ ಮನವಿ Read More »

ಕಾವು ವಿಶ್ವಕರ್ಮ ಕೂಡೂವಳಿಕೆ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ವಿಶ್ವಕರ್ಮ ಕೂಡೂವಳಿಕೆ ಕಾವು ವಲಯ ಇದರ ಮುಂದಿನ ಅವಧಿಯ ರಚನಾತ್ಮಕ ಚಟುವಟಿಕೆಗಳು ಮತ್ತು ಸಂಘಟನಾ ದೃಷ್ಟಿಯಿಂದ ನೂತನ ಪದಾಧಿಕಾರಿಗಳ ಆಯ್ಕೆ ಮೊಕ್ತೇಸರ ನಾರಾಯಣ ಆಚಾರ್ಯರ ಉಪಸ್ಥಿತಿಯಲ್ಲಿ ನಡೆಯಿತು. ಕೂಡೂವಳಿಕೆಯ ನೂತನ ಸಮಿತಿಯ ಅಧ್ಯಕ್ಷರಾಗಿ ಶ್ರೀನಿವಾಸ ಆಚಾರ್ಯ, ಕಾರ್ಯದರ್ಶಿಯಾಗಿ ಬಾಲಕೃಷ್ಣ ಆಚಾರ್ಯ ಮಳಿ, ಜೊತೆಕಾರ್ಯದರ್ಶಿಯಾಗಿ ರವೀಂದ್ರ ಆಚಾರ್ಯ ಅರಿಯಡ್ಕ, ಖಜಾಂಚಿಯಾಗಿ ಜಯಕರ ಆಚಾರ್ಯ ಕುಂಬ್ರ ಸರ್ವಾನುಮತದಿಂದ ಆಯ್ಕೆಯಾದರು. ಕೂಡೂವಳಿಕೆಯ ವೆಂಕಟ್ರಮಣ ಆಚಾರ್ಯ ಪೆರ್ಲಂಪಾಡಿ ಸೇರಿದಂತೆ ಎಲ್ಲಾ ಹಿರಿಯ-ಕಿರಿಯ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಕಾವು ವಿಶ್ವಕರ್ಮ ಕೂಡೂವಳಿಕೆ ಪದಾಧಿಕಾರಿಗಳ ಆಯ್ಕೆ Read More »

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಬೆಂಗಳೂರು ಸ್ಕೈ ಬರ್ಡ್ ಏವಿಯೇಶನ್ ವತಿಯಿಂದ ಮಾಹಿತಿ ಕಾರ್ಯಾಗಾರ

ಪುತ್ತೂರು : ನಗರದ ಧರ್ಮಸ್ಥಳ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಬೆಂಗಳೂರು ಸ್ಕೈ ಬರ್ಡ್ ಏವಿಯೇಶನ್ ವತಿಯಿಂದ ಉದ್ಯೋಗಾಧಾರಿತ ಡಿಪ್ಲೋಮ ಮತ್ತು ಬಿಬಿಎ ಏವಿಯೇಶನ್ ಕೋರ್ಸ್ ಗೆ ಸಂಬಂಧಿಸಿದ ಮಾಹಿತಿ ಕಾರ್ಯಗಾರ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಬೆಂಗಳೂರು ಸ್ಕೈ ಬರ್ಡ್ ಏವಿಯೇಶನ್ ಸಂಸ್ಥೆಯ ಚೆಯರ್ ಮ್ಯಾನ್ ಸುಜಾತ ಬೈರಿ ದೀಪ ಬೆಳಗಿಸಿ ಉದ್ಘಾಟಿಸಿ, ತಮ್ಮ ಸಂಸ್ಥೆಯಲ್ಲಿ ಲಭ್ಯವಿರುವ ವಿವಿಧ ಕೋರ್ಸುಗಳ ಬಗ್ಗೆ ಹಾಗೂ ಸಂಸ್ಥೆಯು ನಡೆದು ಬಂದ ಹಾದಿಯನ್ನು ವಿವರಿಸಿದರು. ಬೆಂಗಳೂರು ಸ್ಕೈ ಬರ್ಡ್ ಏವಿಯೇಶನ್

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಬೆಂಗಳೂರು ಸ್ಕೈ ಬರ್ಡ್ ಏವಿಯೇಶನ್ ವತಿಯಿಂದ ಮಾಹಿತಿ ಕಾರ್ಯಾಗಾರ Read More »

ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ ಬಾರ್ತೋಲಿ ಪ್ರದೇಶದಲ್ಲಿ ಪ್ರತ್ಯಕ್ಷವಾದ ಆನೆ | ಶಾಸಕ ಅಶೋಕ್‍ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ

ಪುತ್ತೂರು: ಇಂದು ಮುಂಜಾನೆ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದ ಬಾರ್ತೋಲಿ ಎಂಬಲ್ಲಿಗೆ  ಆನೆ ಲಗ್ಗೆಯಿಟ್ಟಿದ್ದು, ಎರಡು ಆನೆಗಳು ಇರುವ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು, ಈಗಾಗಲೇ ಆನೆ ದಾಳಿಯಿಂದ ಕೃಷಿಗೆ ಹಾನಿಯಾಗಿದ್ದು, ಅಂತವರಿಗೆ ಸರಕಾರದಿಂದ ಪರಿಹಾರ ನೀಡುವ ಕೆಲಸ ಆಗಬೇಕು. ಏನು ನಗರ ಪ್ರದೇಶಕ್ಕೆ ಆನೆಗಳು ಬರುವ ಜಾಗದಲ್ಲಿ ಆನೆ ಕಂದಕಗಳನ್ನು ನಿರ್ಮಾಣ ಮಾಡಬೇಕು.

ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ ಬಾರ್ತೋಲಿ ಪ್ರದೇಶದಲ್ಲಿ ಪ್ರತ್ಯಕ್ಷವಾದ ಆನೆ | ಶಾಸಕ ಅಶೋಕ್‍ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ Read More »

ನೃತ್ಯಾಂತರಂಗ 110 ರಲ್ಲಿ ರಂಜಿಸಿದ ‘ವರ್ಣಿಕ’

ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗದ 110ನೇ ಸರಣಿಯಲ್ಲಿ ಪದವರ್ಣಗಳ ಪ್ರಸ್ತುತಿ ‘ವರ್ಣಿಕ’ ಬಹಳ ವಿಶೇಷವಾಗಿತ್ತು. ಕಲಾವಿದೆಯರಾದ ಅಂಕಿತಾ ಪ್ರಜ್ವಲ್ ಮತ್ತು ವಿಂಧ್ಯಾ ಕಾರಂತರು ಪದವರ್ಣಗಳನ್ನು ಪ್ರಸ್ತುತಪಡಿಸಿದರು. ಪುತ್ತೂರಿನ ‘ದಿ ವೆಬ್ ಪೀಪಲ್’ ಕಂಪೆನಿಯ ಆದಿತ್ಯ ಕಲ್ಲೂರಾಯ ಅಭ್ಯಾಗತರಾಗಿ ಶುಭ ಹಾರೈಸಿದರು. ಹಿಮ್ಮೇಳದ ನಟುವಾಂಗದಲ್ಲಿ ಗುರು ದೀಪಕ್ ಕುಮಾರ್, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ಶ್ಯಾಮ ಭಟ್ ಮತ್ತು ಕೊಳಲಿನಲ್ಲಿ ಕೃಷ್ಣಗೋಪಾಲ್ ಸಹಕರಿಸಿದ್ದರು.

ನೃತ್ಯಾಂತರಂಗ 110 ರಲ್ಲಿ ರಂಜಿಸಿದ ‘ವರ್ಣಿಕ’ Read More »

ಜೂನ್ 12: ವಿವೇಕಾನಂದ ಕಾಲೇಜಿನಲ್ಲಿ ವಿವಿಧ ಕಂಪನಿಗಳ ಜೊತೆ ಒಡಂಬಡಿಕೆ ಕಾರ್ಯಕ್ರಮ

ಪುತ್ತೂರು : ವಿವೇಕಾನಂದ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹಿತಾಸಕ್ತಿ ಹಾಗೂ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ವಿವಿಧ ಕಂಪನಿಗಳು ಹಾಗೂ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗಳ ಜೊತೆಗೆ ಒಡಂಬಡಿಕೆಯನ್ನು ಮಾಡುವುದರ ಪೂರ್ವಭಾವಿಯಾಗಿ ಜೂ.12 ರಂದು ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಸಾಂಕೇತಿಕವಾಗಿ ಒಪ್ಪಂದ ಮಾಡಿಕೊಳ್ಳುವ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಗೇರು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ದಿನಕರ ಅಡಿಗ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ವಹಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ

ಜೂನ್ 12: ವಿವೇಕಾನಂದ ಕಾಲೇಜಿನಲ್ಲಿ ವಿವಿಧ ಕಂಪನಿಗಳ ಜೊತೆ ಒಡಂಬಡಿಕೆ ಕಾರ್ಯಕ್ರಮ Read More »

error: Content is protected !!
Scroll to Top