ಕ್ಷುಲ್ಲಕ ವಿಚಾರದಲ್ಲಿ ಗಲಾಟೆ : ಚೂರಿ ಇರಿತ
ಪುತ್ತೂರು : ಹಿರಿಯ ನಾಗರಿಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಓರ್ವರಿಗೆ ಚೂರಿಯಿಂದ ಇರಿದ ಘಟನೆ ಕೋರ್ಟ್ ರಸ್ತೆಯಲ್ಲಿ ಇಂದು ನಡೆದಿದೆ. ಗುಣಶೇಖರ್ ಶೆಟ್ಟಿ ಹಾಗೂ ಸದಾಶಿವ ಪೈ ಎಂಬವರ ಮಧ್ಯೆ ಪಾರ್ಕಿಂಗ್ ವಿಚಾರವಾಗಿ ಈ ಗಲಾಟೆ ನಡೆದಿದ್ದು, ಜಗಳ ತಾರಕಕ್ಕೇರಿ ಚೂರಿ ಇರಿಯಲಾಗಿದೆ ಎಂದು ತಿಳಿದು ಬಂದಿದೆ. ಸದಾಶಿವ ಪೈ ಅವರ ಕೈ ಗೆ ಚೂರಿ ತಾಗಿದ್ದು, ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಕ್ಷುಲ್ಲಕ ವಿಚಾರದಲ್ಲಿ ಗಲಾಟೆ : ಚೂರಿ ಇರಿತ Read More »










