ಪುತ್ತೂರು

ಆ.10 : ಆಟಿಡೊಂಜಿ ಬಂಟರ ಸೇರಿಗೆ ಕಾರ್ಯಕ್ರಮ

ಪುತ್ತೂರು: ವಿಶೇಷ ಆಹ್ವಾನಿತರ ಸಭೆ ಹಾಗೂ ತಾಲೂಕು ಬಂಟರ ಸಂಘದ ಕಾರ್ಯಕಾರಿ ಸಮಿತಿಯಿಂದ ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರು ಮಾತನಾಡಿ ಆ.10ರಂದು ನಡೆಯಲಿರುವ ಆಟಿಡೊಂಜಿ ಬಂಟೆರೆ ಸೇರಿಗೆ ಕಾರ್ಯಕ್ರಮದ ಯಶಸ್ಸಿಗೆ ಬಂಟ ಸಮಾಜದ ಸರ್ವರ ಸಹಕಾರ ಅಗತ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಚಿನ್ನದ ಪದಕ ಪ್ರಶಸ್ತಿ ಪ್ರಧಾನ, ವಿದ್ಯಾರ್ಥಿ ವೇತನ […]

ಆ.10 : ಆಟಿಡೊಂಜಿ ಬಂಟರ ಸೇರಿಗೆ ಕಾರ್ಯಕ್ರಮ Read More »

ಮಡ್ಯಂಗಳದಲ್ಲಿ ಅಪಾಯಕಾರಿ ಮರ ಹಾಗೂ ವಿದ್ಯುತ್ ಕಂಬಗಳ ತೆರವು

ಪುತ್ತೂರು: ಮಾಣಿ-ಮೈಸೂರು ರಾಜ್ಯ ಹೆದ್ದಾರಿಲ್ಲಿರುವ ಮಡ್ಯಂಗಳ ಎಂಬಲ್ಲಿ ಅಪಾಯಕಾರಿಮರಗಳು ಹಾಗೂ ವಿದ್ಯುತ್ ಕಂಬಳಗಳನ್ನು ಭಾನುವಾರ ತೆರವು ಮಾಡಲಾಯಿತು. ಕಳೆದ ಮಂಗಳವಾರ ಭಾರೀ ಮಳೆಗೆ ಶೇಖಮಲೆ ಭಾಗದಲ್ಲಿ ಗುಡ್ಡ ಜರಿದು ಮಣ್ಣು ರಾಜ್ಯ ಹೆದ್ದಾರಿಯನ್ನು ಆವರಿಸಿತ್ತು. ಈ ಸಂದರ್ಭ ಮಾಣಿ-ಮೈಸೂರು ಸಂಚಾರ ಬಂದ್‍ ಮಾಡಲಾಗಿತ್ತು. ಬಳಿಕ ಸ್ಥಳೀಯರ ನೆರವಿನೊಂದಿಗೆ ಮಣ್ಣು ತೆರವು ಕಾರ್ಯ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳೀಯರು ಇಲ್ಲಿರುವ ಅಪಾಯಕಾರಿ ಮರ ಹಾಗೂ ವಿದ್ಯುತ್ ಕಂಬಗಳನ್ನು ತೆರವು ಮಾಡುವಂತೆ ಒತ್ತಾಯಿಸಿದ್ದರು. ಅದರಂತೆ ಭಾನುವಾರ

ಮಡ್ಯಂಗಳದಲ್ಲಿ ಅಪಾಯಕಾರಿ ಮರ ಹಾಗೂ ವಿದ್ಯುತ್ ಕಂಬಗಳ ತೆರವು Read More »

ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಮಹಾಸಭೆ : 1.54 ಕೋಟಿ ರೂ. ಲಾಭ, ಸದಸ್ಯರಿಗೆ ಶೇ.12 ಡಿವಿಡೆಂಡ್ ಘೋಷಣೆ

ಪುತ್ತೂರು: ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ 2023-24ನೇ ಸಾಲಿನಲ್ಲಿ 1.54 ಕೋಟಿ ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡಲಾಗುವುದು ಎಂದು ಬ್ಯಾಂಕ್ ನ ಅಧ್ಯಕ್ಷ ಎನ್. ಕಿಶೋರ್ ಕೊಳತ್ತಾಯ ತಿಳಿಸಿದ್ದಾರೆ. ಭಾನುವಾರ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್‌ನ 115ನೇ ವರ್ಷದ ಮಹಾಸಭೆ ಹಾಗೂ ಸಹಕಾರಿ ಪಿತಾಮಹ ದಿ. ಮೊಳಹಳ್ಳಿ ಶಿವರಾಯರ 144ನೇ ಜನ್ಮದಿನಾಚರಣೆ ಅಂಗವಾಗಿ ಬ್ಯಾಂಕ್‌ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಾಲಿ ವರ್ಷಾಂತ್ಯದಲ್ಲಿ ಸಂಘದಲ್ಲಿ 9168 ಸದಸ್ಯರಿದ್ದು, 1869 ಮಂದಿ

ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಮಹಾಸಭೆ : 1.54 ಕೋಟಿ ರೂ. ಲಾಭ, ಸದಸ್ಯರಿಗೆ ಶೇ.12 ಡಿವಿಡೆಂಡ್ ಘೋಷಣೆ Read More »

ಅನಾರೋಗ್ಯಕ್ಕೆ ತುತ್ತಾದ ಧನ್ವಿತ್ ನಿಧನ

ಭವಿಷ್ಯದ ಸುಂದರ ಬದುಕಿನ ಕನಸಿನೊಂದಿಗೆ ಹೆಜ್ಜೆ ಹಾಕಬೇಕಾಗಿದ್ದ ಬಾಲಕ ಮಾ.ಧನ್ವಿತ್ ತೀವ್ರ ಅನಾರೋಗ್ಯಕ್ಕೀಡಾಗಿ ನಿನ್ನೆ ಬೆಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಕಡಬ ತಾಲೂಕಿನ ಸವಣೂರು ಗ್ರಾಮದ ಕೇಕುಡೆ ನಿವಾಸಿ ಮೋನಪ್ಪ ಪೂಜಾರಿ ಹಾಗೂ ವನಿತಾ ದಂಪತಿ ಕಿರಿಯ ಪುತ್ರ 13 ವರ್ಷದ ಧನ್ವಿತ್ ಮೃತಪಟ್ಟ ಬಾಲಕ. ಮಧ್ಯಾಹ್ನ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಿತು.

ಅನಾರೋಗ್ಯಕ್ಕೆ ತುತ್ತಾದ ಧನ್ವಿತ್ ನಿಧನ Read More »

ವಾರಂಟ್ ಆರೋಪಿ ಬಂಧನ | ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಹಸ್ತಾಂತರ

ಪುತ್ತೂರು: ನ್ಯಾಯಾಲಯದಿಂದ ವಾರಂಟ್ ಆರೋಪಿಯೊಬ್ಬನನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ಪರ್ಪುಂಜ ಎಂಬಲ್ಲಿ ಬಂಧಿಸಿ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ ಆತನಿಗೆ ಶಿಕ್ಷಾಧೀನ ಖೈದಿಯಾಗಿ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಬಿಡುವಂತೆ ಆದೇಶಿಸಿದೆ. ಆರೋಪಿ ಒಳಮೊಗ್ರು ಗ್ರಾಮದ ಕಮಲಾಕ್ಷ ಎಂಬವರ ಪುತ್ರ ದಿನೇಶ್ ಪಿ. ಎಂಬಾತನಿಗೆ ಪ್ರಕರಣವೊಂದರಲ್ಲಿ ಪುತ್ತೂರು ನ್ಯಾಯಾಲಯ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಿತ್ತು. ಬಳಿಕ ಆರೋಪಿ ಈ ಕುರಿತು ಉಚ್ಛನ್ಯಾಯಾಲಯಕ್ಕೆ ಅಪೀಲು ಅರ್ಜಿ ಸಲ್ಲಿಸಿದ್ದ. ಉಚ್ಛನ್ಯಾಯಾಲಯ ವಿಚಾರಣೆ ನಡೆಸಿ ಈತನಿಗೆ

ವಾರಂಟ್ ಆರೋಪಿ ಬಂಧನ | ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಹಸ್ತಾಂತರ Read More »

ಗ್ರಾಹಕರ ವರ್ಗ ಸಂಸ್ಥೆಯ ಮೇಲಿಟ್ಟ ಅಚಲವಾದ ನಂಬಿಕೆ, ವಿಶ್ವಾಸಕ್ಕೆ ಚಿರಋಣಿ : ಚಿದಾನಂದ ಬೈಲಾಡಿ | ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ | ಪ್ರಸ್ತುತ ವರ್ಷದಲ್ಲಿ 1.50 ಕೋಟಿ ಲಾಭ, ಸದಸ್ಯರಿಗೆ ಶೇ.14 ಡಿವಿಡೆಂಡ್ ಘೋಷಣೆ

ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಭಾನುವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದ.ಕ. ಜಿಲ್ಲೆಗೆ ಪುತ್ತೂರು ತಾಲೂಕು ಕೇಂದ್ರ ಸ್ಥಾನವಾಗಿದ್ದು, ಮೊಳಹಳ್ಳಿ ಶಿವರಾಯರಂತಹ ಹಿರಿಯ ಸಹಕಾರಿ ಧುರೀಣರ ದೂರದೃಷ್ಟಿಯಿಂದ ಪುತ್ತೂರಿನಲ್ಲಿ ಇವತ್ತು ಸಾಕಷ್ಟು ಸಹಕಾರ ಸಂಸ್ಥೆಗಳು ಬೆಳೆದು ನಿಂತಿದೆ. ಈ ಹಿನ್ನಲೆಯಲ್ಲಿ ಹೆಚ್ಚು ಜನಸಂಖ್ಯೆಯುಳ್ಳ ಗೌಡ ಸಮುದಾಯದ ಸಂಘಟನೆಯು ಹಲವಾರು ದಶಕದ ಹಿಂದೆಯೇ ಪ್ರಾರಂಭಗೊಂಡಿದ್ದು, ಡಿ.ವಿ ಸದಾನಂದ ಗೌಡ

ಗ್ರಾಹಕರ ವರ್ಗ ಸಂಸ್ಥೆಯ ಮೇಲಿಟ್ಟ ಅಚಲವಾದ ನಂಬಿಕೆ, ವಿಶ್ವಾಸಕ್ಕೆ ಚಿರಋಣಿ : ಚಿದಾನಂದ ಬೈಲಾಡಿ | ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ | ಪ್ರಸ್ತುತ ವರ್ಷದಲ್ಲಿ 1.50 ಕೋಟಿ ಲಾಭ, ಸದಸ್ಯರಿಗೆ ಶೇ.14 ಡಿವಿಡೆಂಡ್ ಘೋಷಣೆ Read More »

ವಿದ್ಯಾಭಾರತಿ ಯೋಗ : ವಿವೇಕಾನಂದ  ಕನ್ನಡ ಮಾಧ್ಯಮ  ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಪುತ್ತೂರು: ವಿದ್ಯಾಭಾರತಿ ಕರ್ನಾಟಕ ವತಿಯಿಂದ ಕಡಬ ಸರಸ್ವತಿ ವಿದ್ಯಾಲಯದಲ್ಲಿ ನಡೆದ ಜಿಲ್ಲಾಮಟ್ಟದ ಯೋಗ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಕಿಶೋರ ವಿಭಾಗ ಮತ್ತು ಬಾಲವರ್ಗ ಈ ಎರಡೂ  ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲವರ್ಗದ ಬಾಲಕರ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯೊಂದಿಗೆ ವೈಯಕ್ತಿಕ ವಿಭಾಗದಲ್ಲಿ ನಿಶಾಂತ್ ಪ್ರಥಮ, ಅಥ್ಲೆಟಿಕ್ಸ್ ವಿಭಾಗದಲ್ಲಿ ರಾಹುಲ್  ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಕಿಶೋರ ವರ್ಗದ ಬಾಲಕರ ವಿಭಾಗದಲ್ಲಿ ಶೃಜನ್ ಜೆ ರೈ ದ್ವಿತೀಯ, ಸ್ಕಂದ

ವಿದ್ಯಾಭಾರತಿ ಯೋಗ : ವಿವೇಕಾನಂದ  ಕನ್ನಡ ಮಾಧ್ಯಮ  ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ Read More »

ಅನಾರೋಗ್ಯದಿಂದ ಕಾಲೇಜು ವಿದ್ಯಾರ್ಥಿ ಮೃತ್ಯು

ಉಪ್ಪಿನಂಗಡಿ: ಅನಾರೋಗ್ಯಕ್ಕೀಡಾಗಿ ಕಾಲೇಜು ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಉಪ್ಪಿನಂಗಡಿಯ ಸರಕಾರಿ ಪ.ಪೂ.ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಮುಹಮ್ಮದ್ ಸಿರಾಜುದ್ದೀನ್ (17) ಮೃತಪಟ್ಟ ವಿದ್ಯಾರ್ಥಿ. ಕೊಯಿಲದ ಗಂಡಿಬಾಗಿಲು ನಿವಾಸಿ ಸಿರಾಜುದ್ದೀನ್ ಕಾಲೇಜಿಗೆಂದು ಬೆಳಗ್ಗೆ ತನ್ನ ಸ್ನೇಹಿತರೊಂದಿಗೆ ಬಂದಿದ್ದಾನೆ. ಕಾಲೇಜಿನ ದಾರಿ ಮಧ್ಯೆ ಬಿ.ಪಿ. ಲೋ ಸಮಸ್ಯೆಯಿಂದ ತಲೆ ತಿರುಗಿ ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ಜೊತೆಗಿದ್ದವರು ಸಿರಾಜುದ್ದೀನ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.  ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಿರಾಜುದ್ದೀನ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಅನಾರೋಗ್ಯದಿಂದ ಕಾಲೇಜು ವಿದ್ಯಾರ್ಥಿ ಮೃತ್ಯು Read More »

ಸರ್ವೆ ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟದಿಂದ ಆಟಿ ಆಚರಣೆ, ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ

ಸರ್ವೆ: ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಸರ್ವೆ, ಒಕ್ಕಲಿಗ ಗೌಡ ಸೇವಾ ಸಂಘ, ಯುವ ಘಟಕ ,ಮಹಿಳಾ ಘಟಕದ ಸಹಯೋಗದಲ್ಲಿ  ಆಟಿ ಆಚರಣೆ, ಪ್ರತಿಭಾ ಪುರಸ್ಕಾರ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮ ಭಕ್ತಕೋಡಿ ಶ್ರೀರಕ್ಷಾ ಸಭಾಭವನದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕೊಂಡಾಡಿಕೊಪ್ಪ ಶಾಲಾ ಮುಖ್ಯ ಶಿಕ್ಷಕ ಜಯಂತ್ ವೈ, ತುಳುನಾಡಿನ ಆಟಿ ತಿಂಗಳ ಆಚರಣೆಗಳ ಬಗ್ಗೆ ಹಾಡಿನ ಮೂಲಕ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಸರ್ವೆ ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ

ಸರ್ವೆ ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟದಿಂದ ಆಟಿ ಆಚರಣೆ, ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ Read More »

ಮ್ಯಾಕ್ಸ್ ಲೈಫ್‍ ಇನ್ಸೂರೆನ್ಸ್ ನಿಂದ ಕುದ್ಮಾರಿನ ರಾಶಿ ಕೆ.ಸಿ.ಯವರಿಗೆ ಕಲಾರತ್ನ ಪ್ರಶಸ್ತಿ

ಪುತ್ತೂರು: ಮ್ಯಾಕ್ಸ್ ಲೈಫ್‍ ಇನ್ಸೂರೆನ್ಸ್ ವತಿಯಿಂದ ಇಂಡಿಯಾ ಬುಕ್ ಆಫ್‍ ರೆಕಾರ್ಡ್‍ ನಲ್ಲಿ ದಾಖಲಾದ ಕುದ್ಮಾರಿನ ರಾಶಿ ಕೆ.ಸಿ. ಅವರಿಗೆ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಶಿ ಕೆ.ಸಿ. ಅವರು 1 ಗಂಟೆ 22 ಸೆಕೆಂಡುಗಳಲ್ಲಿ ಯಾವುದೇ  ವಿರಾಮ ಇಲ್ಲದೆ ನಿರಂತರ 69 ಬಾರಿ ರಾಷ್ಟ್ರಗೀತೆಯನ್ನು ನಿರರ್ಗಳವಾಗಿ ಹಾಡುವ ಮೂಲಕ ಲಿಮ್ಕಾ ಬುಕ್ ಆಫ್‍ ರೆಕಾರ್ಡ್‍ ಸಾಧನೆ ಮಾಡಿದ್ದಾರೆ. ಈ ಸಾಧನೆಯನ್ನು ಗುರುತಿಸಿ ಮ್ಯಾಕ್ಸ್ ಲೈಫ್‍ ಇನ್ಸೂರೆನ್ಸ್ ನಿಂದ ಜಿಲ್ಲಾಮಟ್ಟದ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮ್ಯಾಕ್ಸ್ ಲೈಫ್‍ ಇನ್ಸೂರೆನ್ಸ್ ನಿಂದ ಕುದ್ಮಾರಿನ ರಾಶಿ ಕೆ.ಸಿ.ಯವರಿಗೆ ಕಲಾರತ್ನ ಪ್ರಶಸ್ತಿ Read More »

error: Content is protected !!
Scroll to Top