ಪುತ್ತೂರು

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ, ಎಂಸಿಎ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಪುತ್ತೂರು : ಪ್ರಸಕ್ತ ಸನ್ನಿವೇಶದಲ್ಲಿ ಕಾರ್ಯಕ್ಷೇತ್ರ ನಮ್ಮತ್ತ ಎಸೆಯುವ ಸವಾಲುಗಳನ್ನು ಎದುರಿಸಲು ನಮಗೆ ಅಪಾರವಾದ ಶಕ್ತಿ ಹಾಗೂ ಅಗಾಧವಾದ ತಾಳ್ಮೆ ಬೇಕಾಗುತ್ತದೆ. ಇದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಬಹುದು ಎಂದು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಹೇಳಿದರು. ಅವರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಶ್ರೀರಾಮ ಸಭಾಭವನದಲ್ಲಿ ನಡೆದ ಕಾಲೇಜಿನ ಎಂಬಿಎ ಮತ್ತು ಎಂಸಿಎ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮಾತಾಡಿದರು. […]

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ, ಎಂಸಿಎ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ Read More »

ಜಾತಿ-ಧರ್ಮ-ಮತ ಬಿಟ್ಟು ಜನಸಂಖ್ಯಾ ಸ್ಪೋಟಕಕ್ಕೆ ನಿಯಂತ್ರಣ ಹಾಕಬೇಕಾದ ಅವಶ್ಯಕತೆಯಿದೆ | ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪುತ್ತೂರು ಆರೋಗ್ಯಾಧಿಕಾರಿಗಳ ಕಚೇರಿ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಪುತ್ತೂರು ಪುರಭವನದಲ್ಲಿ ಶನಿವಾರ ನಡೆಯಿತು. ಶಾಸಕ ಅಶೋಕ್‍ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನ ಸಂಖ್ಯೆ ಕುರಿತು ಗಂಭೀರವಾಗಿ ಪರಿಗಣಿಸದಿರುವುದು ಅಪಾಯ. ಈ ರೀತಿ ಜನಸಂಖ್ಯೆಯನ್ನು ಕಂಟ್ರೋಲ್ ಮಾಡದಿದ್ದರೆ ದೇಶದ ಆರ್ಥಿಕ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋದೀತು ಎಂಬುದನ್ನು ತಿಳಿಕೊಳ್ಳಬೇಕಾದ  ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಾಮುಖ್ಯತೆಯನ್ನು

ಜಾತಿ-ಧರ್ಮ-ಮತ ಬಿಟ್ಟು ಜನಸಂಖ್ಯಾ ಸ್ಪೋಟಕಕ್ಕೆ ನಿಯಂತ್ರಣ ಹಾಕಬೇಕಾದ ಅವಶ್ಯಕತೆಯಿದೆ | ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ Read More »

ಬೇರಿಕೆಯಲ್ಲಿ ಗುಡ್ಡ ಕುಸಿತ | ಸೇಡಿಯಾಪು-ಬೇರಿಕೆ- ಪಡ್ನೂರು ಸಂಪರ್ಕ ರಸ್ತೆ ತಾತ್ಕಾಲಿಕ ಬಂದ್

ಪುತ್ತೂರು: ತಾಲೂಕಿನ ಉಪ್ಪಿನಂಗಡಿ ಹೋಬಳಿಯ ಪಡ್ನೂರು ಗ್ರಾಮದ ಬೇರಿಕೆ ಎಂಬಲ್ಲಿ ಗುಡ್ಡ ಜರಿದಿದೆ. ಈ ನಿಟ್ಟಿನಲ್ಲಿ ಸೇಡಿಯಾಪು-ಬೇರಿಕೆ- ಪಡ್ನೂರು ಸಂಪರ್ಕ ರಸ್ತೆಯನ್ನು ತಾತ್ಕಾಲಿಕ ಮುಚ್ಚಲಾಗಿದೆ. ಗುಡ್ಡ ಜರಿದ ಪರಿಣಾಮ ಅಲ್ಲಿಯ ಮೂರು ಕುಟುಂಬಗಳನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಗುಡ್ಡ ಕುಸಿದಿರುವ ಇನ್ನೊಂದು ಭಾಗದಲ್ಲಿ ಅಂದರೆ ಬಂಟ್ವಾಳ ತಾಲೂಕಿನ ಪೆರ್ನೆಗೆ ಸಂಪರ್ಕಿಸುವ ರಸ್ತೆಯನ್ನೂ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಪರ್ಯಾಯವಾಗಿ ಉಪ್ಪಿನಂಗಡಿ-ಪುತ್ತೂರು ಸಂಪರ್ಕ ರಸ್ತೆಯಲ್ಲಿ ಸಂಚರಿಸುವಂತೆ, ಈ ಕುರಿತು ಅಗತ್ಯ ಕ್ರಮ ವಹಿಸುವಂತೆ ಗ್ರಾಮ ಪಂಚಾಯತ್ ಹಾಗೂ ಪೊಲೀಸ್

ಬೇರಿಕೆಯಲ್ಲಿ ಗುಡ್ಡ ಕುಸಿತ | ಸೇಡಿಯಾಪು-ಬೇರಿಕೆ- ಪಡ್ನೂರು ಸಂಪರ್ಕ ರಸ್ತೆ ತಾತ್ಕಾಲಿಕ ಬಂದ್ Read More »

ಜ್ಯೋತಿಷಿ ಶಿವಪ್ರಸಾದ್ ಭಾರದ್ವಾಜರಿಗೆ ಸೇವಾರತ್ನ ಪ್ರಶಸ್ತಿ

ಪುತ್ತೂರು: ಮ್ಯಾಕ್ಸ್ ಲೈಫ್‍ ಇನ್ಸೂರೆನ್ಸ್ ಹಾಗೂ ಆಕ್ಸಿಸ್ ಬ್ಯಾಂಕ್‍ ವತಿಯಿಂದ ಜಿಲ್ಲಾ ಮಟ್ಟದ ಸೇವಾರತ್ನ ಪ್ರಶಸ್ತಿಯನ್ನು ಪುತ್ತೂರಿನ ಜ್ಯೋತಿಷಿ ಶಿವಪ್ರಸಾದ್ ಭಾರದ್ವಾಜ್ ರಿಗೆ ನೀಡಿ ಗೌರವಿಸಲಾಯಿತು. ಶಿವಪ್ರಸಾದ್‍ ಅವರು ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿರುವ ಅಲ್ಫಾ ಕಾಂಪ್ಲೆಕ್ಸ್ ನಲ್ಲಿ ಶ್ರೀ ಸಾಯಿ ಜ್ಯೋತಿಷಾಲಯ ನಡೆಸುತ್ತಿದ್ದಾರೆ. ಅವರು ಮೈಸೂರಿನ ಶ್ರೀ ಲಗಧ ಮಹರ್ಷಿ ಜ್ಯೋತಿರ್ವಿಜ್ಞಾನ ಸಂಸ್ಥೆಯಿಂದ ತರಬೇತು ಪಡೆದಿರುತ್ತಾರೆ.

ಜ್ಯೋತಿಷಿ ಶಿವಪ್ರಸಾದ್ ಭಾರದ್ವಾಜರಿಗೆ ಸೇವಾರತ್ನ ಪ್ರಶಸ್ತಿ Read More »

‘ಡೆಲ್ಲಿ ಬಾಬು’ ರಕ್ಷಣೆ, ಪುನರ್ವಸತಿ  ಕೇಂದ್ರಕ್ಕೆ ಸೇರ್ಪಡೆ | ನಗರ ಪೊಲೀಸ್ ಠಾಣೆ ಹಾಗೂ ಪುತ್ತೂರು ಉಮೇಶ್ ನಾಯಕ್ ನೇತೃತ್ವ

ಪುತ್ತೂರು, ಕಳೆದ ಒಂದು ವಾರದಿಂದ ಪುತ್ತೂರಿನ ಮುರ ಜಂಕ್ಷನ್ ಬಳಿಯ ಹೋಟೆಲ್ ನ್ಯೂ ವಿಶಾಲ್ ಪಕ್ಕದಲ್ಲಿ ಅನಾಥ ಹಾಗೂ ಅಸಹಾಯಕ ಸ್ಥಿತಿಯಲ್ಲಿ ವಾಸವಿದ್ದು, ಇಲ್ಲೇ ಮಲಮೂತ್ರ ವಿಸರ್ಜನೆ ಮಾಡಿ  ಪರಿಸರವನ್ನು ಮಾಲಿನ್ಯ  ಮಾಡುತ್ತಿದ್ದ ಸುಮಾರು 70 ವರ್ಷ ವಯೋಮಾನದ   ‘ಬಾಬು’ ಎಂಬವರನ್ನು  ಸ್ಥಳೀಯರ ದೂರಿನ ಮೇರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ  ಪುತ್ತೂರು ನಗರ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ವಸಂತಗೌಡ  ಎನ್ ಹಾಗೂ ರೋಟರಿ ಕ್ಲಬ್ ಪುತ್ತೂರು ಇದರ ಮಾಜಿ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ಮಂಗಳೂರಿನ

‘ಡೆಲ್ಲಿ ಬಾಬು’ ರಕ್ಷಣೆ, ಪುನರ್ವಸತಿ  ಕೇಂದ್ರಕ್ಕೆ ಸೇರ್ಪಡೆ | ನಗರ ಪೊಲೀಸ್ ಠಾಣೆ ಹಾಗೂ ಪುತ್ತೂರು ಉಮೇಶ್ ನಾಯಕ್ ನೇತೃತ್ವ Read More »

ಬೆದ್ರಾಳ ತೋಡಿಗೆ ಗುಡ್ಡ ಕುಸಿದು ಬಿದ್ದು ತೋಟಗಳು ಜಲಾವೃತ, ಮನೆ ಅಪಾಯದ ಅಂಚಿನಲ್ಲಿ

ಪುತ್ತೂರು : ಕೆಮ್ಮಿಂಜೆ ಗ್ರಾಮದ ಪುತ್ತೂರಮೂಲೆ ಮತ್ತು ಕೆಮ್ಮಿಂಜೆ ಬೈಲು ಎಂಬಲ್ಲಿರುವ ಬೆದ್ರಾಳ ತೋಡಿಗೆ ಗುಡ್ಡೆ ಜರಿದ ಪರಿಣಾಮ ಪಕ್ಕದ ತೋಟಗಳಿಗೆ ನೀರು ನುಗ್ಗಿ ಜಲಾವೃತವಾಗಿದೆ. ಬೆದ್ರಾಳ ತೋಡಿಗೆ ಗುಡ್ಡೆ ಕುಸಿದ ಪರಿಣಾಮ ನೀರು ಹರಿಯಲಾಗದೆ ಪಕ್ಕದ ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಇಂಜಿನಿಯರ್ ಸಚಿನ್ ಹಾಗೂ ಮುತ್ತುಶೆಟ್ಟಿ ಸಹಿತ ಹಲವರ ತೋಟ ಜಲಾವೃತಗೊಂಡಿದೆ. ಪಕ್ಕದ ಯಶೋಧರ ಎಂಬವರ ಮನೆ ಅಪಾಯದ ಅಂಚಿನಲ್ಲಿದೆ. ಸ್ಥಳಕ್ಕೆ ನಗರಸಭೆ ಸದಸ್ಯ ಬಾಲಚಂದ್ರ, ಪೌರಾಯುಕ್ತ ಮಧು ಎಸ್.ಮನೋಹರ್, ಅಧಿಕಾರಿಗಳು ತೆರಳಿದ್ದಾರೆ. ಆದರೂ ಸ್ಥಳಕ್ಕೆ ಜೆಸಿಬಿ

ಬೆದ್ರಾಳ ತೋಡಿಗೆ ಗುಡ್ಡ ಕುಸಿದು ಬಿದ್ದು ತೋಟಗಳು ಜಲಾವೃತ, ಮನೆ ಅಪಾಯದ ಅಂಚಿನಲ್ಲಿ Read More »

ಬೆಳ್ಳಿಪ್ಪಾಡಿ ಧರೆ ಕುಸಿದ ಸ್ಥಳಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ

ಪುತ್ತೂರು : ಬೆಳ್ಳಿಪ್ಪಾಡಿ ಅಂದ್ರಿಗೇರಿಯಲ್ಲಿ ಧರೆ ಕುಸಿದು ಮೂರು ಮನೆಗಳಿಗೆ ಹಾನಿಯುಂಟಾಗಿದ್ದು,ಘಟನಾ ಸ್ಥಳಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದರು. ಮನೆಯವರು ಹಾಗೂ ಸ್ಥಳೀಯರ ಜೊತೆ ಘಟನೆಯ ಕುರಿತು ಮಾಹಿತಿ ಪಡೆದುಕೊಂಡರು. ಧರೆ ಕುಸಿದು ಮೂರು ಮನೆಗಳಿಗೆ ಅಪಾರ ಪ್ರಮಾಣದ ಹಾನಿಯುಂಟಾಗಿದೆ.

ಬೆಳ್ಳಿಪ್ಪಾಡಿ ಧರೆ ಕುಸಿದ ಸ್ಥಳಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ Read More »

ನರಿಮೊಗರು ರೈಲ್ವೇ ಟ್ರ್ಯಾಕ್ ಬಳಿಯ ಗುಡ್ಡ ಕುಸಿತ

ಪುತ್ತೂರು : ಪುತ್ತೂರು ಸಮೀಪದ ನರಿಮೊಗರು ರೈಲ್ವೇ ಟ್ರ್ಯಾಕ್ ಬಳಿಯ ಗುಡ್ಡ ಕುಸಿಯುವ ಭೀತಿಯಲ್ಲಿದೆ. ಒಂದು ಬದಿಯ ಗುಡ್ಡ ಈಗಾಗಲೇ ರೈಲ್ವೇ ಟ್ರ್ಯಾಕ್ ಮೇಲೆ ಕುಸಿದು ಬಿದ್ದಿದ್ದು,ತೆರವು ಕಾರ್ಯ ಮಾಡಲಾಗುತ್ತಿದೆ.  ಇದೀಗ ಮತ್ತೊಂದು ಬದಿಯ ಗುಡ್ಡ ಕೂಡಾ ಕುಸಿಯುವ ಭೀತಿಯಲ್ಲಿದ್ದು ನಿರಂತರ ಮಳೆ ಬಂದರೆ ಕುಸಿದು ಬೀಳುವ ಸಂಭವವಿದೆ ಎನ್ನಲಾಗುತ್ತಿದೆ.

ನರಿಮೊಗರು ರೈಲ್ವೇ ಟ್ರ್ಯಾಕ್ ಬಳಿಯ ಗುಡ್ಡ ಕುಸಿತ Read More »

ಶಾಂತಿಗೋಡು  ಧರೆ ಕುಸಿದು ಮನೆಗೆ ಹಾನಿ

ಪುತ್ತೂರು : ಶಾಂತಿಗೋಡು ಗ್ರಾಮದಲ್ಲಿ ಸುರಿದ  ಭಾರೀ ಪ್ರಮಾಣದ ಮಳೆಯಿಂದ  ಧರೆ ಕುಸಿದು ಮನೆಗಳಿಗೆ ಹಾನಿಯಾದ ಘಟನೆ ನಡೆದಿದೆ.    ಪಾನಂಬು  ತುಂಗಮ್ಮ  ಇವರ ಮನೆಯ ಹಿಂಬದಿ ಧರೆ ಕುಸಿದ ನಿನ್ನೆ ರಾತ್ರಿ ನಡೆದಿದೆ.  ನಿನ್ನೆ  ನಡೆದ ಭಾರೀ ಮಳೆಯಿಂದ ರಾತ್ರಿ ವೇಳೆ ಕುಸಿತ ಧರೆ ಮನೆಯ ಹಿಂಬದಿ ಗೋಡೆಗೆ ತಾಗಿ ಧರೆ ನಿಂತಿದೆ. ಮನೆಯಲ್ಲಿ ಇದ್ದ ವಸ್ತುಗಳನ್ನು  ಸ‍್ಥಳಾಂತರಿಸಲಾಗಿದೆ.

ಶಾಂತಿಗೋಡು  ಧರೆ ಕುಸಿದು ಮನೆಗೆ ಹಾನಿ Read More »

ಶಾಸಕರ ಬೆಂಗಳೂರು ಕಾರ್ಯಕ್ರಮ ರದ್ದು | ಪುತ್ತೂರಿಗೆ ಭೇಟಿ ನೀಡುವಂತೆ ಸಿಎಂ ಬಳಿ ಅಶೋಕ್ ರೈ ಮನವಿ

ಪುತ್ತೂರು: ದ ಕ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು ಕೆಲವೊಂದು ಅನಾಹುತಗಳು ಸಂಭವಿಸುತ್ತಿದ್ದು ಕ್ಷೇತ್ರದ ಭೇಟಿ ಹಾಗೂ ತುರ್ತು ವ್ಯವಸ್ಥೆ ಕೈಗೊಳ್ಳುವ ಉದ್ದೇಶದಿಂದ ಬೆಂಗಳೂರು ಕಾರ್ಯಕ್ರಮವನ್ನು ರದ್ದುಗೊಳಿಸಿದ ಶಾಸಕ ಅಶೋಕ್ ರೈ ಯವರು ಇಂದು ಪುತ್ತೂರಿನಲ್ಲಿ ವಿವಿಧ ಕಡೆಗಳಿಗೆ ಭೇಟಿ ನೀಡಲಿದ್ದಾರೆ. ಇಂದು ಬೆಂಗಳೂರಿನಲ್ಲಿ ವಿವಿಧ ಸಚಿವರ ಭೇಟಿ ಹಾಗೂ ಕಂಬಳ ಸಮಿತಿ ಸಭೆಯನ್ನು ಕರೆಯಲಾಗಿತ್ತು. ಎಲ್ಲಾ ಕಾರ್ಯಕ್ರಮವನ್ನು ರದ್ದುಗೊಳಿಸಿ ಇಂದು ಪುತ್ತೂರಿಗೆ ಬರಲಿದ್ದು ಮಳೆಯ ಕಾರಣಕ್ಕೆ ಅನೇಕ ಕಡೆಗಳಲ್ಲಿ ಧರೆ ಕುಸಿತ, ಮನೆಗಳಿಗೆ ಹಾಗೂ ಕೃಷಿಗಳಿಗೆ ಹಾನಿಯಾಗಿದ್ದು

ಶಾಸಕರ ಬೆಂಗಳೂರು ಕಾರ್ಯಕ್ರಮ ರದ್ದು | ಪುತ್ತೂರಿಗೆ ಭೇಟಿ ನೀಡುವಂತೆ ಸಿಎಂ ಬಳಿ ಅಶೋಕ್ ರೈ ಮನವಿ Read More »

error: Content is protected !!
Scroll to Top