ಪುತ್ತೂರು

ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

ಪುತ್ತೂರು: ನರಿಮೊಗರಿನ ಸರಸ್ವತಿ ವಿದ್ಯಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸರಸ್ವತಿ ವಿದ್ಯಾಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ಅವಿನಾಶ್‍ ಕೊಡಂಕಿರಿ ಶ್ರೀ ಕೃಷ್ಣ -ರಾಧಾ ವೇಷ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಪುರುಷೋತ್ತಮನಾದ ಭಗವಂತ ಶ್ರೀ ಕೃಷ್ಣನ ಆದರ್ಶ ಗುಣಗಳ ಅನುಸರಣೆಗಾಗಿ ಮಕ್ಕಳಿಗೆ ಕೃಷ್ಣ ವೇಷ ಹಾಕಿಸಿ ಬಾಲ್ಯದಲ್ಲೇ ಸಂಸ್ಕಾರ ನೀಡುವುದು ಅಭಿನಂದನೀಯ ಎಂದರು. ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಬಲ್ಯಾಯ ಉಪಸ್ಥಿತರಿದ್ದರು. ಸದಸ್ಯ ರಂಗಯ್ಯ ಬಲ್ಲಾಳ್, ಹಿರಿಯ ಪಾಕತಜ್ಞ ಮುರಳಿ […]

ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ Read More »

ಆ.30 : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಪುತ್ತೂರು ತಾಲೂಕು ಶಾಖೆಯ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ, ನಿವೃತ್ತ ಪದಾಧಿಕಾರಿಗಳಿಗೆ ಬೀಳ್ಕೊಡುಗೆ

ಪುತ್ತೂರು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಪುತ್ತೂರು ತಾಲೂಕು ಶಾಖೆಯ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ, ನಿವೃತ್ತ ಪದಾಧಿಕಾರಿಗಳಿಗೆ ಬೀಳ್ಕೊಡುಗೆ ಸಮಾರಂಭ ಆ.30 ಶುಕ್ರವಾರ ಪುತ್ತೂರು ಸರಕಾರಿ ನೌಕರರ ಸಭಾಭವನದ ಮೇರಿ ದೇವಾಸಿಯಾ ಸಭಾಂಗಣದಲ್ಲಿ ನಡೆಯಲಿದೆ. ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಿದ್ದು, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಶಿವಾನಂದ ಆಚಾರ್ಯ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಲೋಕೋಪಯೋಗಿ

ಆ.30 : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಪುತ್ತೂರು ತಾಲೂಕು ಶಾಖೆಯ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ, ನಿವೃತ್ತ ಪದಾಧಿಕಾರಿಗಳಿಗೆ ಬೀಳ್ಕೊಡುಗೆ Read More »

ಸೆ.5 : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕದಿರು ಕಟ್ಟುವ ಕಾರ್ಯಕ್ರಮ

ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕದಿರು ಕಟ್ಟುವ ಕಾರ್ಯಕ್ರಮ ಸೆ..5 ರಂದು ನಡೆಯಲಿದೆ. ಭಾದ್ರಪದ ಶುಕ್ಲದ ಹಸ್ತಾನಕ್ಷತ್ರದಂದು ಕದಿರು ಕಟ್ಟುವ ಕ್ರಮ ವರ್ಷಂಪ್ರತಿ ಇಲ್ಲಿ ನಡೆಯುತ್ತಿದ್ದು, ಮೊದಲಿಗೆ ಉತ್ಸವಮೂರ್ತಿಯೊಂದಿಗೆ ದೇವಳದ ಪಶ್ಚಿಮ ಭಾಗದ ಅಶ್ವತ್ಥ ಕಟ್ಟೆಯವರೆಗೆ ಚೆಂಡೆ. ವಾದ್ಯದೊಂದಿಗೆ ಸಾಗಿ ಅಲ್ಲಿ ಸಂಗ್ರಹಿಸಿಟ್ಟ ತೆನೆಗಳನ್ನು ತರಲಾಗುತ್ತದೆ. ಬಳಿಕ ಪೂಜೆ ನಡೆದು ದೇಗುಲದ ಗರ್ಭಗುಡಿ, ಪರಿವಾರ ದೇವರ ಗುಡಿಗಳು, ತೀರ್ಥಬಾವಿ. ಉಗ್ರಾಣ, ತುಳಸೀಕಟ್ಟೆ ಇತ್ಯಾದಿಗಳಿಗೆ ಕದಿರನ್ನು ಕಟ್ಟಿದ ಬಳಿಕ ನೆರೆದ ಭಕ್ತರಿಗೆ ಕದಿರನ್ನು

ಸೆ.5 : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕದಿರು ಕಟ್ಟುವ ಕಾರ್ಯಕ್ರಮ Read More »

ಸಂತ ಫಿಲೋಮಿನ ಕಾಲೇಜು ಮಾನವಿಕ ವಿಭಾಗದಿಂದ ‘ಬೇಸಾಯದತ್ತ ನಮ್ಮ ಚಿತ್ತ’ ಕಾರ್ಯಕ್ರಮ

ಪುತ್ತೂರು: ಸಂತ ಫಿಲೋಮಿನ ಕಾಲೇಜಿನ ಮಾನವಿಕ ವಿಭಾಗದಿಂದ ‘ಬೇಸಾಯದತ್ತ ನಮ್ಮ ಚಿತ್ತ’ ಕಾರ್ಯಕ್ರಮ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಶಿವ ಭಟ್ ಅವರ ಕೃಷಿ ಪ್ರದೇಶ ಕೆಯ್ಯೂರಿನ ಕಣಿಯಾರು ದೇವಳಿಕೆಯಲ್ಲಿ ನಡೆಯಿತು. ಮಾನವಿಕ ವಿಭಾಗದ ಮುಖ್ಯಸ್ಥ ಡಾ.ನೋರ್ಬರ್ಟ್ ಮಸ್ಕರೆನ್ಹಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿಯ ಮಹತ್ವ, ಗದ್ದೆಯಲ್ಲಿ ಬೆಳೆಯುವ ಭತ್ತ ಮತ್ತು ನಾಟಿ ನೆಡುವ ವಿಧಾನ, ಭತ್ತದ ವಿವಿಧ ತಳಿಗಳು, ತುಳುನಾಡಿನ ವಿವಿಧ ಕೃಷಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮ ಪ್ರಾಯೋಜಕ ಶಿವ ಭಟ್, ನಾಟಿ ಮಾಡುವ ವಿಧಾನವನ್ನು

ಸಂತ ಫಿಲೋಮಿನ ಕಾಲೇಜು ಮಾನವಿಕ ವಿಭಾಗದಿಂದ ‘ಬೇಸಾಯದತ್ತ ನಮ್ಮ ಚಿತ್ತ’ ಕಾರ್ಯಕ್ರಮ Read More »

ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ

ಪುತ್ತೂರು:  ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟದ    ಉದ್ಘಾಟನೆ ನಡೆಯಿತು. ಸತೀಶ್ ಬೊಲಾರ್ ದೀಪ ಬೆಳಗಿಸಿ ಉದ್ಘಾಟಿಸಿ, ಜೀವನದಲ್ಲಿ ಸವಾಲುಗಳನ್ನು   ಧೈರ್ಯದಿಂದ  ಎದುರಿಸಿ.  ಎಲ್ಲಾ ವಿದ್ಯಾರ್ಥಿಗಳಿಗೂ ಒಂದಲ್ಲ ಒಂದು ರೀತಿಯ  ಕೌಶಲ್ಯ ಇದ್ದೇ ಇರುತ್ತದೆ. ಅದನ್ನು ನಾವು ಸಮಯೋಚಿತವಾಗಿ ಪ್ರಸ್ತುತ ಪಡಿಸಬೇಕು. ನಾಯಕತ್ವ ಗುಣ ಮೈಗೂಡಿಸಿ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ  ಗುರುತಿಸಿಕೊಳ್ಳಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿ,   ಪೋಷಕರು ತಮ್ಮ ಮಕ್ಕಳಿಗೆ ಉತ್ತಮ

ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ Read More »

ಪುತ್ತೂರು ನಗರ ಠಾಣೆ ಇನ್‍ ಸ್ಪೆಕ್ಟರ್ ಆಗಿ ಜಾನ್ಸನ್ ಕಿರಣ್ ಡಿ’ಸೋಜಾ

ಪುತ್ತೂರು: ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಆಗಿ ಜಾನ್ಸನ್ ಕಿರಣ್ ಡಿಸೋಜ ಆಗಮಿಸಿದ್ದಾರೆ. ಮೂಲತಃ ಸಾಗರ ನಿವಾಸಿಯಾಗಿರುವ ಜಾನ್ಸನ್ ಕಿರಣ್ ಡಿಸೋಜ ದ.ಕ.ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಮಂಗಳೂರು ಗ್ರಾಮಾಂತರ ಹಾಗೂ ಮಂಗಳೂರು ಕೇಂದ್ರ ಕಚೇರಿಯಲ್ಲಿಯೂ ಕರ್ತವ್ಯ ನಿರ್ವಹಿಸಿರುತ್ತಾರೆ. ಇದೀಗ ಪುತ್ತೂರು ನಗರ ಪೊಲೀಸ್ ಠಾಣೆಗೆ ಇನ್‌ಸ್ಪೆಕ್ಟರ್ ಆಗಿ ವರ್ಗಾವಣೆಗೊಂಡಿದ್ದಾರೆ.

ಪುತ್ತೂರು ನಗರ ಠಾಣೆ ಇನ್‍ ಸ್ಪೆಕ್ಟರ್ ಆಗಿ ಜಾನ್ಸನ್ ಕಿರಣ್ ಡಿ’ಸೋಜಾ Read More »

ತಲೆಕ್ಕಿಮಾರ್ ಶಿವಾಜಿ ಸ್ಪೋರ್ಟ್ಸ್ ಕ್ಲಬ್‍ ನಿಂದ ಮೊಸರು ಕುಡಿಕೆ ಉತ್ಸವ, ಇಬ್ಬರಿಗೆ ಸನ್ಮಾನ

ಮಾಣಿಲ: ತಲೆಕ್ಕಿಮಾರ್ ಶಿವಾಜಿ ಸ್ಪೋರ್ಟ್ಸ್ ಕ್ಲಬ್ ನ 21ನೇ ಮೊಸರು ಕುಡಿಕೆ ಉತ್ಸವ ದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾಣಿಲ ಗ್ರಾಮದಲ್ಲಿ ನಲ್ವತ್ತೊಂದು ವರುಷಗಳಿಂದ ಅಂಚೆ ಸೇವೆಗೈಯುತ್ತಿದ್ದ ಧೂಮ ಮಡಿವಾಳ ಮತ್ತು ಆಶಾ ಕಾರ್ಯಕರ್ತೆ ರತ್ನಾವತಿ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಬ್ರೀಟಿಷ್ ತಂತ್ರಜ್ಞಾನ ದ ಪ್ರಮುಖ ಡಾ.ವಿನಯಕುಮಾರ್ ಎಂ.ಎಸ್. ವಹಿಸಿದ್ಜರು. ಮುಖ್ಯ ಅತಿಥಿಗಳಾಗಿ ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಬಾಳೆಕಲ್ಲು, ವಿಷ್ಣು ಕನ್ನಡಗುಳಿ, ಧನರಾಜ್ ಬಿರಿಕಾಪು.ಜಗನ್ನಾಥ ರೈ.ಕೆಳಗಿನ ಮನೆ

ತಲೆಕ್ಕಿಮಾರ್ ಶಿವಾಜಿ ಸ್ಪೋರ್ಟ್ಸ್ ಕ್ಲಬ್‍ ನಿಂದ ಮೊಸರು ಕುಡಿಕೆ ಉತ್ಸವ, ಇಬ್ಬರಿಗೆ ಸನ್ಮಾನ Read More »

ನಾಳೆ (ಆ.28) : ಬಿಜೆಪಿ ಯುವಮೋರ್ಚಾ, ನಗರ ಹಾಗೂ ಗ್ರಾಮಾಂತರ ಮಂಡಲದಿಂದ ಬೃಹತ್ ಪ್ರತಿಭಟನೆ

ಪುತ್ತೂರು: ಬಿಜೆಪಿ ಯುವಮೋರ್ಚಾ, ನಗರ ಹಾಗೂ ಗ್ರಾಮಾಂತರ ಮಂಡಲದ ವತಿಯಿಂದ ಬೃಹತ್ ಪ್ರತಿಭಟನೆ ಆ.28 ಬುಧವಾರ ಸಂಜೆ 4.30 ಕ್ಕೆ ದರ್ಬೆ ವೃತ್ತದಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯ ಸರಕಾರ ಮತ್ತು ರಾಜ್ಯಪಾಲರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಕಾಂಗ್ರೆಸ್ ನಾಯಕರ ವಿರುದ್ಧ ಈ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಯಲ್ಲಿ ಮುಖ್ಯ ಭಾಷಣಕಾರರಾಗಿ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.

ನಾಳೆ (ಆ.28) : ಬಿಜೆಪಿ ಯುವಮೋರ್ಚಾ, ನಗರ ಹಾಗೂ ಗ್ರಾಮಾಂತರ ಮಂಡಲದಿಂದ ಬೃಹತ್ ಪ್ರತಿಭಟನೆ Read More »

ಪುತ್ತೂರು ವಿದ್ಯಾರ್ಥಿಗೆ ಚೂರಿ ಇರಿತ ಹೈಡ್ರಾಮ ಪ್ರಕರಣದಲ್ಲಿ ಕೋಮುಗಲಭೆ ಪ್ರಚೋದನೆಗೆ ಯತ್ನ | ವಾಟ್ಸಾಪ್ ಸಂದೇಶ ರವಾನಿಸಿದ ಇಬ್ರಾಹಿಂ ವಿರುದ್ಧ ದೂರು

ವಿಟ್ಲ:: ವಿದ್ಯಾರ್ಥಿಗೆ ಚೂರಿ ಇರಿತ ಹೈಡ್ರಾಮ ಪ್ರಕರಣವನ್ನು ವಿಷಯಾಂತರ ಮಾಡಿ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಿ ಕೋಮುಗಲಭೆಗೆ ಯತ್ನಿಸುವ ವಾಟ್ಸಾಪ್ ಸಂದೇಶವನ್ನು ರವಾನಿಸಿದ ಇಬ್ರಾಹಿಂ ಎಂಬವನ ವಿರುದ್ಧ ವಿಟ್ಲ ಠಾಣಾಧಿಕಾರಿಗೆ ನವೀನ್ ಎಂಬವರು ಸಾರ್ವಜನಿಕರ ಪರವಾಗಿ ದೂರು ನೀಡಿದ್ದಾರೆ. ಪುತ್ತೂರು ಕಾಲೇಜು ಹುಡುಗಿಗೆ ಚೂರಿ ಇರಿದ ಪ್ರಕರಣ ಸುಖಾಂತ್ಯ ಕಂಡ ಕೂಡಲೇ ತನ್ನ ನೀಚ ಬುದ್ದಿಯನ್ನು ಪ್ರದರ್ಶಿಸಿರುವ ಇಬ್ರಾಹಿಂ ಸೂರ್ಯ ಎಂಬ ವ್ಯಕ್ತಿ ವಾಟ್ಸಾಪ್ ಸಂದೇಶವನ್ನು ಕಳಿಸುತ್ತಾ ಮಿತ್ತೂರು ಆರ್‌ ಎಸ್‌ ಎಸ್‌ ಉಗ್ರರ ಕೇಂದ್ರವಾಗುತ್ತಿದೆಯೇ?

ಪುತ್ತೂರು ವಿದ್ಯಾರ್ಥಿಗೆ ಚೂರಿ ಇರಿತ ಹೈಡ್ರಾಮ ಪ್ರಕರಣದಲ್ಲಿ ಕೋಮುಗಲಭೆ ಪ್ರಚೋದನೆಗೆ ಯತ್ನ | ವಾಟ್ಸಾಪ್ ಸಂದೇಶ ರವಾನಿಸಿದ ಇಬ್ರಾಹಿಂ ವಿರುದ್ಧ ದೂರು Read More »

ಕಬಕ ಸಾರ್ವಜನಿಕ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರಿಂದ ನಿತ್ಯ ಕಿರುಕುಳ | ಕ್ರಮ ಕೈಗೊಳ್ಳುವಂತೆ ಶಾಸಕರಿಗೆ ಮನವಿ

ಪುತ್ತೂರು: ಪುತ್ತೂರು ಟ್ರಾಫಿಕ್ ಪೊಲೀಸರಿಂದ ಕಬಕದ ಸಾರ್ವಜನಿಕರಿಗೆ ನಿತ್ಯ ಕಿರುಕುಳ ಆಗುತ್ತಿದ್ದು, ಇದರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕಬಕದ ಸಾರ್ವಜನಿಕರ ನಿಯೋಗವೊಂದು ಶಾಸಕ ಅಶೋಕ್ ರೈ ಅವರಿಗೆ ಮನವಿ ಮಾಡಿದೆ. ಸ್ಥಳೀಯ ಮುಂದಾಳು ಮೋಹನ್ ಗುರ್ಜಿನಡ್ಕ ನೇತೃತ್ವದಲ್ಲಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಪ್ರತೀ ದಿನ ಬೆಳಿಗ್ಗೆ 8.30ಕ್ಕೆ ಕಬಕಕ್ಕೆ ಬರುವ ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ನೆಪದಲ್ಲಿ ಬೈಕ್‌ ಸವಾರರಿಗೆ ನಿತ್ಯ ತೊಂದರೆ ನೀಡುತ್ತಿದ್ದಾರೆ. ಬೆಳಿಗ್ಗೆ ಶಾಲಾ ಮಕ್ಕಳನ್ನು ಬಸ್ಸಿಗೆ ಬಿಡಲು ಪೋಷಕರು ಮಕ್ಕಳನ್ನು ಬೈಕಿನಲ್ಲಿ ಕೂರಿಸಿಕೊಂಡು

ಕಬಕ ಸಾರ್ವಜನಿಕ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರಿಂದ ನಿತ್ಯ ಕಿರುಕುಳ | ಕ್ರಮ ಕೈಗೊಳ್ಳುವಂತೆ ಶಾಸಕರಿಗೆ ಮನವಿ Read More »

error: Content is protected !!
Scroll to Top