ಪುತ್ತೂರು

ವಿಟ್ಲದಲ್ಲಿ ಮನೆ ಮೇಲೆ ಗುಡ್ಡ ಕುಸಿತ | ಸ್ಥಳಕ್ಕೆ ಪಟ್ಟಣ ಪಂಚಾಯತ್ ಅಧಿಕಾರಿಗಳು ಭೇಟಿ

ವಿಟ್ಲ: ವ್ಯಾಪ್ತಿಯ ಮನೆಯೊಂದರ ಮೇಲೆ ಗುಡ್ಡ ಕುಸಿದ ಘಟನೆ ನಡೆದಿದ್ದು, ಮನೆ ಮಂದಿ ಅಪಾಯದಿಂದ ಪಾರಾದ ಘಟನೆ ನಡೆದಿದೆ. ಕುರುಂಬಳ ನಿವಾಸಿ ಕಲಂದರ್ ಅಲಿ ಎಂಬವರ ಮನೆ ಮೇಲೆ ಭಾರೀ ಪ್ರಮಾಣದ ಗುಡ್ಡ ಕುಸಿದು ಬಿದ್ದಿದೆ. ಮನೆಯಲ್ಲಿ ಮಕ್ಕಳು ಸಹಿತ ಏಳು ಮಂದಿ ಇದ್ದು, ಅವರು ಮನೆಯೊಳಗಡೆ ಇದ್ದ ಕಾರಣ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಮತ್ತಷ್ಟು ಗುಡ್ಡ ಕುಸಿಯುವ ಭೀತಿಯಿದ್ದು, ಮನೆಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಪಟ್ಟಣ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ […]

ವಿಟ್ಲದಲ್ಲಿ ಮನೆ ಮೇಲೆ ಗುಡ್ಡ ಕುಸಿತ | ಸ್ಥಳಕ್ಕೆ ಪಟ್ಟಣ ಪಂಚಾಯತ್ ಅಧಿಕಾರಿಗಳು ಭೇಟಿ Read More »

ರಾಜ್ಯ ಮಟ್ಟದ ವೈಟ್ ಲಿಫ್ಟ್ ಚಿನ್ನದ ಪದಕ ವಿಜೇತೆ ಸ್ಪಂದನಾ ಕೆ ಪುಣಚಾರಿಗೆ ಶಾಸಕರಿಂದ ಸನ್ಮಾನ

ಪುತ್ತೂರು: ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ವೈಟ್ ಲಿಫ್ಟ್ ಸ್ಪರ್ದೆಯಲ್ಲಿ  ಜ್ಯೂನಿಯರ್ ಮತ್ತು ಸೀನಿಯರ್ ವಿಭಾಗದ ಸ್ಪರ್ದೆಯಲ್ಲಿ‌ಚಿನ್ನದ  ಪದಕ ವಿಜೇತೆ ಸ್ಪಂದನಾ ಕೆ ಪುಣಚಾ ಅವರನ್ನು ಶಾಸಕ ಅಶೋಕ್ ರೈ ಅವರು ತಮ್ಮ ಕಚೇರಿಯಲ್ಲಿ ಸನ್ಮಾನಿಸಿದರು.‌ ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ ಈ ಸ್ಪರ್ದೆಯಲ್ಲಿ 45 ಕೆ ಜಿ ವಿಭಾಗದಲ್ಲಿ ಚಿನ್ನದ ಪದಕದ ಜತೆಗೆ ಬೆಸ್ಟ್ ವೈಟರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಸ್ಪಂದನಾ ಪುತ್ತೂರು ಸಂತಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು ಪುಣಚಾ ಗ್ರಾಮದ ಕುರುಡ ಕಟ್ಟೆ

ರಾಜ್ಯ ಮಟ್ಟದ ವೈಟ್ ಲಿಫ್ಟ್ ಚಿನ್ನದ ಪದಕ ವಿಜೇತೆ ಸ್ಪಂದನಾ ಕೆ ಪುಣಚಾರಿಗೆ ಶಾಸಕರಿಂದ ಸನ್ಮಾನ Read More »

ಅಂಬಿಕಾ ವಿದ್ಯಾಲಯ ಸಿಬಿಎಸ್‌ ಇ ಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಪುತ್ತೂರು: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಹಬ್ಬದ ಆಚರಣೆಯ ಹಿನ್ನೆಲೆ ಹಾಗೂ ಮಹತ್ವವನ್ನು ಸಾರುವ ಸಲುವಾಗಿ, ಭಕ್ತಿ ಸಿಂಚನ ಕಾರ್ಯಕ್ರಮ ನಡೆಯಿತು. ಭಗವಧ್ಗೀತೆಯ ಪ್ರಥಮ ಅಧ್ಯಾಯದ ಪಠಣ, ಭಜನೆ ಹಾಡು, ಕುಣಿತ ಭಜನೆಗಳು ನಡೆದವು. ಮುದ್ದು ಕೃಷ್ಣ, ಮುದ್ದು ರಾಧೆಯರಿಗೆ ಆರತಿ ಬೆಳಗಿ, ತಿಲಕವಿಟ್ಟು ಹರಸಲಾಯಿತು. ಕಾರ್ಯಕ್ರಮದ ಅಂಗವಾಗಿ ಶ್ರೀಕೃಷ್ಣನ ಚಿತ್ರಕ್ಕೆ ಬಣ್ಣ ಹಚ್ಚುವ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಕಿರೀಟ ತಯಾರಿ, ಮಡಕೆ ಚಿತ್ರಕಲೆ ಹಾಗೂ ಮೊಸರು ಕುಡಿಕೆ

ಅಂಬಿಕಾ ವಿದ್ಯಾಲಯ ಸಿಬಿಎಸ್‌ ಇ ಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ Read More »

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶ್ರೀ ಕೃಷ್ಣ ಜಯಂತಿ ಆಚರಣೆ

ಪುತ್ತೂರು: ಮಾತಾ ಪಿತರ ಋಣ, ದೇವ ಋಣ, ಋಷಿ  ಋಣ ಇತ್ಯಾದಿಗಳು ನಮಗಿದ್ದು, ಅವುಗಳನ್ನು ತೀರಿಸುವುದು ನಮ್ಮ ಕರ್ತವ್ಯ. ಅದೇ ರೀತಿ ನಾವು ದೇವರನ್ನು ಭಕ್ತಿಯಿಂದ ನಂಬಿದರೆ ಭಕ್ತರ ಋಣ ತೀರಿಸಲು ಭಗವಂತ ಕೂಡ ಕಾಯುತ್ತಾನೆ ಎಂದು ಶಾಸಕ ಅಶೋಕ್ ರೈ ಹೇಳಿದರು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ, ತಾಲೂಕು ಗೊಲ್ಲ (ಯಾದವ ) ಸಂಘ, ಯಾದವ ಸಭಾ ತಾಲೂಕು ಸಮಿತಿ ಸಹಯೋಗದಲ್ಲಿ  ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ಸೋಮವಾರ ನಡೆದ ಶ್ರೀಕೃಷ್ಣ ಜಯಂತಿ

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶ್ರೀ ಕೃಷ್ಣ ಜಯಂತಿ ಆಚರಣೆ Read More »

ಯುವಜನತೆಯನ್ನು ಸಾಹಿತ್ಯ ಕ್ಷೇತ್ರಕ್ಕೆ ಬರಮಾಡಿಕೊಳ್ಳಲು ಉತ್ತಮ ವೇದಿಕೆ – ಲಕ್ಷ್ಮೀಶ ತೋಳ್ಪಾಡಿ | ನರಿಮೊಗರು ಗ್ರಾಮ ಸಾಹಿತ್ಯ ಸಂಭ್ರಮ

ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ನೇತೃತ್ವದಲ್ಲಿ, ಗ್ರಾಮ ಪಂಚಾಯತ್ ನರಿಮೊಗರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಸಹಕಾರದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ, ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುದಾಬಿಯವರ ಪೋಷಕತ್ವದಲ್ಲಿ, ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದಂಗವಾಗಿ ನರಿಮೊಗರು ಸ. ಉ. ಹಿ. ಪ್ರಾ. ಶಾಲೆಯ ಶತ ಸಂಭ್ರಮ ವೇದಿಕೆಯಲ್ಲಿ ನಡೆದ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ -16 ಯಶಸ್ವಿಯಾಗಿ ನಡೆಯಿತು. ನರಿಮೊಗರು ಹಾಗೂ ಶಾಂತಿಗೋಡು ಗ್ರಾಮದ  ಎಂಟು

ಯುವಜನತೆಯನ್ನು ಸಾಹಿತ್ಯ ಕ್ಷೇತ್ರಕ್ಕೆ ಬರಮಾಡಿಕೊಳ್ಳಲು ಉತ್ತಮ ವೇದಿಕೆ – ಲಕ್ಷ್ಮೀಶ ತೋಳ್ಪಾಡಿ | ನರಿಮೊಗರು ಗ್ರಾಮ ಸಾಹಿತ್ಯ ಸಂಭ್ರಮ Read More »

ಆಟೋ ಚಾಲಕ ನೇಣು ಬಿಗಿದು ಆತ್ಮಹತ್ಯೆ

ವಿಟ್ಲ: ಆಟೋ ಚಾಲಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದ ಶಿವಾಜಿನಗರದಲ್ಲಿ ನಡೆದಿದೆ. ಆಟೋ ಚಾಲಕ ರಮೇಶ್ (45) ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ವಿಟ್ಲ ಆರೋಗ್ಯ ಕೇಂದ್ರ ಶವಗಾರದಲ್ಲಿ ಇರಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಆಟೋ ಚಾಲಕ ನೇಣು ಬಿಗಿದು ಆತ್ಮಹತ್ಯೆ Read More »

ಎಂಎಲ್‍ ಸಿ ಐವನ್ ಡಿ’ಸೋಜಾ ಮನೆ ಮೇಲೆ ಕಲ್ಲು ತೂರಾಟ | ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು | ಪುತ್ತೂರು ಕ್ರಿಶ್ಚಿಯನ್ ಯೂನಿಯನ್ ಒತ್ತಾಯ

ಪುತ್ತೂರು: ಸಿ.ಎಂ.ಸಿದ್ಧರಾಮಯ್ಯರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲರ ನಡೆಯ ವಿರುದ್ಧ ಎಂಎಲ್‍ಸಿ ಐವನ್ ಡಿ’ಸೋಜಾ ಅವರು ನೀಡಿದ ಹೇಳಿಕೆಯನ್ನು ತಿರುಚಿರುವ ಬಿಜೆಪಿಯವರ ಗೂಂಡಾ ಸಂಸ್ಕೃತಿಯನ್ನು ಪುತ್ತೂರು ಕ್ರಿಶ್ಚಿಯನ್ ಯೂನಿಯನ್ ತೀವ್ರವಾಗಿ ಖಂಡಿಸುತ್ತದೆ ಎಂದು ಕ್ರಿಶ್ಚಿಯನ್ ಯೂನಿಯನ್ ಅಧ್ಯಕ್ಷ ಮೌರಿಸ್ ಮಸ್ಕರೇನಸ್ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯ ಏಕೈಕ ಎಂಎಲ್‍ ಸಿ ಅವರ ಮನೆ ಮೇಲೆ ಕಲ್ಲೂ ತೂರಾಟ ಮಾಡಿರುವುದು ಭಯೋತ್ಪಾದಕ ಕೃತ್ಯವಾಗಿದೆ ಎಂದು ಆರೋಪಿಸಿರುವ ಅವರು, ಈ ಘಟನೆಯಲ್ಲಿ ಪಾಲ್ಗೊಂಡ ಆರೋಪಿಗಳನ್ನು

ಎಂಎಲ್‍ ಸಿ ಐವನ್ ಡಿ’ಸೋಜಾ ಮನೆ ಮೇಲೆ ಕಲ್ಲು ತೂರಾಟ | ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು | ಪುತ್ತೂರು ಕ್ರಿಶ್ಚಿಯನ್ ಯೂನಿಯನ್ ಒತ್ತಾಯ Read More »

ಅಕ್ಷಯ ಕಾಲೇಜು ವಿದ್ಯಾರ್ಥಿ ಸ೦ಘ ಚುನಾವಣೆ : ಅಧ್ಯಕ್ಷರಾಗಿ ಜೀವನ್ ಆಯ್ಕೆ.

ಪುತ್ತೂರು:  ಅಕ್ಷಯ ಎಜ್ಯುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಕಾಲೇಜು ಚುನಾವಣಾ ಸಮಿತಿ ಮತ್ತು ಐಕ್ಯೂಎಸಿ ಸಹಭಾಗಿತ್ವದಲ್ಲಿ ವಿದ್ಯಾರ್ಥಿ ಸ೦ಘ ಚುನಾವಣೆ ವಿದ್ಯುನ್ಮಾನ ಮತಯಂತ್ರದ  ಮೂಲಕ ನೆರವೇರಿತು.  ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಕಾರ್ಯದರ್ಶಿ ಸ್ಥಾನಗಳಿಗೆ ಚುನಾವಣೆ  ನಡೆಸಲಾಯಿತು. ಅಧ್ಯಕ್ಷ  ಸ್ಥಾನಕ್ಕೆ ಸ್ಪರ್ಧಿಸಿರುವ ತೃತೀಯ ವಾಣಿಜ್ಯ ವಿಭಾಗದ  ವಿದ್ಯಾರ್ಥಿ ಜೀವನ್ ಆಯ್ಕೆಯಾದರೆ, ಉಪಾಧ್ಯಕ್ಷ  ಸ್ಥಾನಕ್ಕೆ  ತೃತೀಯ ಬಿ.ಎಸ್ಸಿ ಫ್ಯಾಷನ್ ಡಿಸೈನ್ ವಿಭಾಗದ ನವಮಿ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ತೃತೀಯ ಇಂಟೀರಿಯರ್ ಡಿಸೈನ್ ವಿದ್ಯಾರ್ಥಿನಿ ಪೂಜಿತ

ಅಕ್ಷಯ ಕಾಲೇಜು ವಿದ್ಯಾರ್ಥಿ ಸ೦ಘ ಚುನಾವಣೆ : ಅಧ್ಯಕ್ಷರಾಗಿ ಜೀವನ್ ಆಯ್ಕೆ. Read More »

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಪದವಿ ಪ್ರದಾನ ಸಮಾರಂಭ

ಪುತ್ತೂರು: ಜೀವನದಲ್ಲಿ ನಾವು ನಾವು ಮಾಡುವ ಕೆಲಸವನ್ನು ಪ್ರಮಾಣಿಕವಾಗಿ ಪ್ರೀತಿಸಿ ಅದರ ಬಗ್ಗೆ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಆಗ ನಮ್ಮ ಗುರಿ ತಲುಪಲು ಸಾಧ್ಯ ಎಂದು ಪುತ್ತೂರು ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್,  ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಹಿರಿಯ ವಿದ್ಯಾರ್ಥಿ ಕನಿಷ್ಕ ಎಸ್. ಚಂದ್ರ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ 2023-24 ನೇ ಸಾಲಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ನಡೆಸಿದ ಇಂಜಿನಿಯರಿಂಗ್ ವಿಭಾಗಗಳ ಅಂತಿಮ ವರ್ಷದ ಪರೀಕ್ಷೆಯಲ್ಲಿ

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಪದವಿ ಪ್ರದಾನ ಸಮಾರಂಭ Read More »

ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ | ಭಗವಾನ್ ಶ್ರೀ ಕೃಷ್ಣನ ಕುರಿತ ವಿಶಿಷ್ಟವಾದ ಮಾಹಿತಿ

1) ಕೃಷ್ಣ ಹುಟ್ಟಿದ್ದು 5253 ವರ್ಷಗಳ ಹಿಂದೆ. 2)ಜನ್ಮ ದಿನಾಂಕ ಜುಲೈ 19 ಕ್ರಿಪೂ 3228 3) ತಿಂಗಳು : ಶ್ರಾವಣ 4) ದಿನ :  ಅಷ್ಟಮಿ 5) ನಕ್ಷತ್ರ : ರೋಹಿಣಿ 6) ದಿನ  : ಬುಧವಾರ 7) ಸಮಯ : 00:00 A.M. 8)  ಶ್ರೀ ಕೃಷ್ಣ 126 ವರ್ಷ 8 ತಿಂಗಳು 7 ದಿನಗಳ ಕಾಲ ಬದುಕಿದ್ದ. 9)  ಮರಣ ದಿನ 18 ಫೆಬ್ರವರಿ ಕ್ರಿಪೂ 3102 10) ಕೃಷ್ಣ 89 ವರ್ಷದವನಿದ್ದಾಗ

ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ | ಭಗವಾನ್ ಶ್ರೀ ಕೃಷ್ಣನ ಕುರಿತ ವಿಶಿಷ್ಟವಾದ ಮಾಹಿತಿ Read More »

error: Content is protected !!
Scroll to Top