ಪುತ್ತೂರು

ಅರುಣ್ ಪುತ್ತಿಲರಿಗೆ ಜಾಮೀನು ಮಂಜೂರು | ಸುಳ್ಳು ಆರೋಪಕ್ಕೆ ಕಾನೂನು ಹೋರಾಟಕ್ಕೆ ತಯಾರಿ – ಪುತ್ತಿಲ

ಪುತ್ತೂರು: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರಿನ ಪ್ರಿನ್ಸಿಪಾಲ್  ಸಿವಿಲ್ ಜಡ್ಜ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಹಿನ್ನಲೆಯಲ್ಲಿ ಕಾನೂನಿಗೆ ಗೌರವ ನೀಡಿ ನ್ಯಾಯಾಲಯಕ್ಕೆ ತನ್ನ ವಕೀಲರಾದ ನರಸಿಂಹ ಪ್ರಸಾದ್ ಮೂಲಕ ಹಾಜರಾದ ಅರುಣ್ ಕುಮಾರ್ ಪುತ್ತಿಲರಿಗೆ ಪುತ್ತೂರಿನ ಪ್ರಿನ್ಸಿಪಾಲ್  ಸಿವಿಲ್ ಜಡ್ಜ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದ್ದು ಮುಂದಿನ […]

ಅರುಣ್ ಪುತ್ತಿಲರಿಗೆ ಜಾಮೀನು ಮಂಜೂರು | ಸುಳ್ಳು ಆರೋಪಕ್ಕೆ ಕಾನೂನು ಹೋರಾಟಕ್ಕೆ ತಯಾರಿ – ಪುತ್ತಿಲ Read More »

ಸರಕಾರಿ ಜಾಗವನ್ನು ಕಂದಾಯ, ಅರಣ್ಯ ಹಾಗೂ ಗ್ರಾಪಂ ಜಂಟಿ ಸರ್ವೇ ಮಾಡಿ ಸರಕಾರಿ ಇಲಾಖೆಗಳಿಗೆ ಕಾದಿರಿಸಬೇಕು | ಪತ್ರಿಕಾಗೋಷ್ಠಿಯಲ್ಲಿ ಸುರೇಶ್‍ ಭಟ್‍ ಕೊಜಂಬೆ ಆಗ್ರಹ

ಪುತ್ತೂರು: ಕಂದಾಯ. ಅರಣ್ಯ ಇಲಾಖೆ ಹಾಗೂ ಪಂಚಾಯತ್ ಇಲಾಖೆಗಳು ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಜಂಟಿ ಸರ್ವೆ ನಡೆಸಿ ನೂರಕ್ಕೆ ನೂರು ಸರಕಾರಿ ಜಾಗವಾಗಿದ್ದರೆ ಆ ಜಾಗವನ್ನು ಶಾಲಾ, ಕಾಲೇಜು, ಗ್ರಾಮ ಪಂಚಾಯತ್ ಕಚೇರಿ, ಸ್ಮಶಾನ ಮುಂತಾದ ಸರಕಾರಿ ಇಲಾಖೆಗಳಿಗೆ ಕಾದಿರಿಸಬೇಕು ಎಂದು ಕರ್ನಾಟಕ ರಾಜ್ಯ ರೈ ಸಂಘ ಹಾಗೂ ಹಸಿರು ರಾಜ್ಯ ಉಪಾಧ್ಯಕ್ಷ ಸುರೇಶ್‍ ಭಟ್‍ ಕೊಜಂಬೆ ಆಗ್ರಹಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದ.ಕ.ಜಿಲ್ಲೆಯ ಒಂದೊಂದು ಗ್ರಾಮದಲ್ಲಿ ಸುಮಾರು 200 ಎಕ್ರೆಯಷ್ಟು ಜಾಗ ಪಹಣಿ ಪತ್ರದಲ್ಲಿ

ಸರಕಾರಿ ಜಾಗವನ್ನು ಕಂದಾಯ, ಅರಣ್ಯ ಹಾಗೂ ಗ್ರಾಪಂ ಜಂಟಿ ಸರ್ವೇ ಮಾಡಿ ಸರಕಾರಿ ಇಲಾಖೆಗಳಿಗೆ ಕಾದಿರಿಸಬೇಕು | ಪತ್ರಿಕಾಗೋಷ್ಠಿಯಲ್ಲಿ ಸುರೇಶ್‍ ಭಟ್‍ ಕೊಜಂಬೆ ಆಗ್ರಹ Read More »

ವಿವೇಕಾನಂದ ಕಾಲೇಜಿನಲ್ಲಿ ಯುವ ಉದ್ಯಮಿಗಳೊಂದಿಗೆ ಸಂವಹನ ಕಾರ್ಯಕ್ರಮ

ಪುತ್ತೂರು; ಇಲ್ಲಿನ ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿ ವ್ಯವಹಾರ ನಿರ್ವಹಣಾ ವಿಭಾಗ, ಐಕ್ಯೂಎಸಿ ಘಟಕ ಮತ್ತು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಸಹಯೋಗದಲ್ಲಿ  ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಯುವ ಉದ್ಯಮಿಗಳೊಂದಿಗೆ ಸಂವಹನ ಕಾರ್ಯಕ್ರಮ ನಡೆಯಿತು. ಕಾಲೇಜಿನ ಹಿರಿಯ ವಿದ್ಯಾರ್ಥಿ, ಉದ್ಯಮಿ ಅನಂತ ಕೃಷ್ಣ ಮುಳಿಯ ಉದ್ಯಮ, ವ್ಯಾಪಾರ ಮತ್ತು ಮಾರುಕಟ್ಟೆಯ ಅಧ್ಯಯನದ ಕುರಿತು ತಿಳಿಸಿದರು. ತಮ್ಮ ಕುಟುಂಬದ ಉದ್ಯಮ ವ್ಯವಹಾರ, ಅದು ಅವರಿಗೆ ನೀಡಿದ ಅನುಭವ ಮತ್ತು ತಮ್ಮ

ವಿವೇಕಾನಂದ ಕಾಲೇಜಿನಲ್ಲಿ ಯುವ ಉದ್ಯಮಿಗಳೊಂದಿಗೆ ಸಂವಹನ ಕಾರ್ಯಕ್ರಮ Read More »

ಪರಿಶಿಷ್ಟ ಜಾತಿ ರೈತರಿಗೆ ವೈಜ್ಞಾನಿಕ ತೆಂಗು ಕೃಷಿ ತರಬೇತಿ

ಪುತ್ತೂರು: ಪರಿಶಿಷ್ಟ ಜಾತಿ ರೈತರಿಗೆ ವೈಜ್ಞಾನಿಕ ತೆಂಗು ಕೃಷಿ ತರಬೇತಿ ಕಾರ್ಯಕ್ರಮ ರಾಮಕುಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಮಂಗಳೂರು ಕೃಷಿ ವಿಜ್ಞಾನ ಕೇಂದ್ರ, ಕಾಸರಗೋಡು ಸಿ.ಪಿ.ಸಿ.ಆರ್.ಐ  ಕಾಸರಗೋಡು, ಡೇ-ಎನ್ ಆರ್ ಎಲ್‌ ಎಮ್ ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ. ಎಸ್,  ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಕಡಬ ತಾಲೂಕು ಪಂಚಾಯತ್, ಪುತ್ತೂರು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೈತ ಉತ್ಪಾದಕ ಕಂಪೆನಿ ಸಹಭಾಗಿತ್ವದಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ

ಪರಿಶಿಷ್ಟ ಜಾತಿ ರೈತರಿಗೆ ವೈಜ್ಞಾನಿಕ ತೆಂಗು ಕೃಷಿ ತರಬೇತಿ Read More »

ಅರುಣ್ ಕುಮಾರ್ ಪುತ್ತಿಲ ವಿರುದ್ಧ ಲೈಂಗಿಕ ದೌರ್ಜನ್ಯ ದೂರು | ಪ್ರಕರಣ ದಾಖಲು

ಪುತ್ತೂರು: ಪುತ್ತಿಲ ಪರಿವಾರ ಸಂಸ್ಥಾಪಕ ಅರುಣ್ ಕುಮಾ‌ರ್ ಪುತ್ತಿಲ ವಿರುದ್ಧ ಮಹಿಳೆಯೊಬ್ಬರು ಪುತ್ತೂರು ಮಹಿಳಾ ಠಾಣೆಗೆ ದೂರು  ನೀಡಿದ್ದು ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಪೈ ವಿಸ್ಟಾ ಹೋಟೆಲ್ ಗೆ ಆತ್ಮಹತ್ಯೆ ಮಾಡುವುದಾಗಿ ಬೆದರಿಸಿ 2023ರ ಜೂನ್ ತಿಂಗಳಲ್ಲಿ ಮಹಿಳೆಯೊಬ್ಬರನ್ನು ಕರೆಸಿಕೊಂಡು ಇಚ್ಚೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದೂ ಅಲ್ಲದೆ, ನಂಬಿಕೆ ದ್ರೋಹ, ಮಾನಹಾನಿ, ಬ್ಲಾಕ್ ಮೇಲಿಂಗ್, ಶಾರೀರಿಕ ಮತ್ತು ಮಾನಸಿಕ ಪೀಡನೆ, ಕೊಲೆ ಬೆದರಿಕೆಯನ್ನು ಹಾಕುತ್ತಿರುವ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2023ರ ಜೂನ್‌ ತಿಂಗಳಲ್ಲಿ

ಅರುಣ್ ಕುಮಾರ್ ಪುತ್ತಿಲ ವಿರುದ್ಧ ಲೈಂಗಿಕ ದೌರ್ಜನ್ಯ ದೂರು | ಪ್ರಕರಣ ದಾಖಲು Read More »

ಪುತ್ತೂರ್ದ ಪಿಲಿಗೊಬ್ಬು ಸೀಸನ್ -೨ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುವ ಪುತ್ತೂರ್ದ ಪಿಲಿಗೊಬ್ಬು ಸೀಸನ್ -೨ ಹಾಗೂ ಫುಡ್ ಫೆಸ್ಟ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ರವಿವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಬೆಳಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಡೆಯಲ್ಲಿ ಪ್ರಾರ್ಥನೆಯನ್ನು ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್. ಭಟ್ ನೆರವೇರಿಸಿದರು. ಬಳಿಕ ಆಮಂತ್ರಣ ಪತ್ರಿಕೆಯನ್ನು ಡಾ. ಸುರೇಶ್ ಪುತ್ತೂರಾಯ ಪರದೆ ಸರಿಸುವ ಮೂಲಕ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಪುತ್ತೂರ್ದ ಪಿಲಿಗೊಬ್ಬು

ಪುತ್ತೂರ್ದ ಪಿಲಿಗೊಬ್ಬು ಸೀಸನ್ -೨ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ವಿದ್ಯಾರಶ್ಮಿಯಲ್ಲಿ ವನಮಹೋತ್ಸವ ಆಚರಣೆ

ಸವಣೂರು: ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ರೋಟರಿ ಕ್ಲಬ್ ಎಲೈಟ್ ಪುತ್ತೂರು ಸಹಯೋಗದೊಂದಿಗೆ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ, ಸಹಕಾರ ರತ್ನ ಸವಣೂರು ಸೀತಾರಾಮ ರೈ ಕಾರ್ಯಕ್ರಮ ಉದ್ಘಾಟಿಸಿ, ಪರಿಸರ ಪ್ರೀತಿ ಇದ್ದರೆ ಸಮಾಜ ಸ್ಪಸ್ಥವಾಗಿರುತ್ತದೆ ಮತ್ತು ಪರಿಸರ ಪ್ರಜ್ಞೆಯು ಶುಧ್ಧ ವಾತಾವರಣ ಮತ್ತು ಉದ್ಯೋಗ ಪಡೆಯುವುದಕ್ಕೂ ಸಹಕಾರಿಯಾಗುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಪುತ್ತೂರಿನ ಸಹಾಯಕ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್ ಮಾತನಾಡಿ, ಹಸಿರು ಇದ್ದಲ್ಲಿ ಹೇಗೆ ವಾತಾವರಣದ ಸಮತೋಲನ ಇರುತ್ತದೆ ಎಂದು

ವಿದ್ಯಾರಶ್ಮಿಯಲ್ಲಿ ವನಮಹೋತ್ಸವ ಆಚರಣೆ Read More »

ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆ | ಅಧ್ಯಕ್ಷರಾಗಿ ಗುರುಪ್ರಸಾದ್, ಕಾರ್ಯದರ್ಶಿಯಾಗಿ ಅಶ್ವಿತ್ ರೈ ಆಯ್ಕೆ

ಪುತ್ತೂರು: ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಅಂತಿಮ ಬಿ.ಎ. ವಿದ್ಯಾರ್ಥಿ ಗುರುಪ್ರಸಾದ್, ಕಾರ್ಯದರ್ಶಿಯಾಗಿ ದ್ವಿತೀಯ ಬಿ.ಎ. ವಿದ್ಯಾರ್ಥಿ ಅಶ್ವಿತ್ ರೈ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿ ಪ್ರತಿನಿಧಿಗಳಾಗಿ ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಅಕ್ಷಿತಾ, ತೃತೀಯ ಬಿ.ಎ. ಪ್ರತಿನಿಧಿಯಾಗಿ ತೃಪ್ತಿ ಎಂ., ದ್ವಿತೀಯ ಬಿ.ಕಾಂ ಪ್ರತಿನಿಧಿಯಾಗಿ ಸಾಕೇತ್, ತೃತೀಯ ಬಿ.ಕಾಂ ಪ್ರತಿನಿಧಿಯಾಗಿ ದೀಪಾ ಆಯ್ಕೆಯಾದರು. ಆಯ್ಕೆಯಾದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು ಅಭಿನಂದಿಸಿದರು.

ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆ | ಅಧ್ಯಕ್ಷರಾಗಿ ಗುರುಪ್ರಸಾದ್, ಕಾರ್ಯದರ್ಶಿಯಾಗಿ ಅಶ್ವಿತ್ ರೈ ಆಯ್ಕೆ Read More »

ಕಲ್ಲಾರೆ ಮಠದಲ್ಲಿ 43ನೇ ವರ್ಷದ ಶ್ರೀ ಶನೈಶ್ಚರ ವೃತ ಕಲ್ಪೋಕ್ತ ಪೂಜೆ

ಪುತ್ತೂರು: ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸೇವಾ ಸಮಿತಿ ವತಿಯಿಂದ 43ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ವೃತ ಕಲ್ಪೋಕ್ತ ಪೂಜೆ ಶನಿವಾರ ಶ್ರೀ ಗುರು ರಾಘವೇಂದ್ರ ಮಠದ ಸಭಾಭವನದಲ್ಲಿ ನಡೆಯಿತು. ಪೂಜೆಯ ಅಂಗವಾಗಿ ಸಂಜೆ 4 ಕ್ಕೆ ಕಲಶ ಪ್ರತಿಷ್ಠೆ, 6 ಕ್ಕೆ ಮಹಾಪೂಜೆ ನಡೆದು ಬಳಿಕ ಪ್ರಸಾದ ವಿತರಣೆ ನಡೆಯಿತು. ಹಲವಾರು ಭಕ್ತಾದಿಗಳು ಎಳ್ಳೆಣ್ಣೆ ಸಮರ್ಪಿಸಿ ಸೇವಾ ರಶೀದಿ ಮಾಡಿ ಪೂಜೆಯಲ್ಲಿ ಪಾಲ್ಗೊಂಡರು.

ಕಲ್ಲಾರೆ ಮಠದಲ್ಲಿ 43ನೇ ವರ್ಷದ ಶ್ರೀ ಶನೈಶ್ಚರ ವೃತ ಕಲ್ಪೋಕ್ತ ಪೂಜೆ Read More »

ಹಾರ್ಡ್ ವೇರ್ ಅಂಗಡಿಗೆ ಬೆಂಕಿ : ಅಪಾರ ನಷ್ಟ

ಪುತ್ತೂರು: ಹಾರ್ಡ್ ವೇರ್ ಅಂಗಡಿಯೊಂದಕ್ಕೆ ಬೆಂಕಿ ತಗುಲಿ ಅಂಗಡಿ ಸಂಪೂರ್ಣ ಹಾನಿಯಾದ ಘಟನೆ ಪುರುಷರಕಟ್ಟೆಯಲ್ಲಿ ನಡೆದಿದೆ. ಪುರುಷರಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಶ್ವಾಸ್ ಹಾರ್ಡ್ ವೇರ್ ಅಂಗಡಿಗೆ ಬೆಂಕಿ ತಗುಲಿದ್ದು ಅಪಾರ ನಷ್ಟ ಉಂಟಾಗಿದೆ. ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಹಾರ್ಡ್ ವೇರ್ ಅಂಗಡಿಗೆ ಬೆಂಕಿ : ಅಪಾರ ನಷ್ಟ Read More »

error: Content is protected !!
Scroll to Top