ಪುತ್ತೂರು

ನೆಲ್ಲಿಕಟ್ಟೆ ಅಂಗನವಾಡಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ | ಅಸಹಾಯಕರ ಸೇವಾ ಟ್ರಸ್ಟ್, ನೆಲ್ಲಿಕಟ್ಟೆ ಮಿತ್ರ ಮಂಡಳ ಜಂಟಿ ಆಶ್ರಯ

ಪುತ್ತೂರು: ಅಸಹಾಯಕರ ಸೇವಾ ಟ್ರಸ್ಟ್ ಹಾಗೂ ನೆಲ್ಲಿಕಟ್ಟೆ ಮಿತ್ರ ಮಂಡಳದ ವತಿಯಿಂದ ಒಡಿಯೂರು ಶ್ರೀ ವಜ್ರಮಾತ ಮಹಿಳಾ ಘಟಕ ಪುತ್ತೂರು ಹಾಗೂ ಗುರುದೇವ ಸೇವಾ ಬಳಗದ ಸಹಕಾರದೊಂದಿಗೆ ವರ್ಷಂ ಪ್ರತಿ ನಡೆಯುವ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನೆಲ್ಲಿಕಟ್ಟೆ ಅಂಗನವಾಡಿ ಮಕ್ಕಳಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ ಮತ್ತು ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೆಲ್ಲಿಕಟ್ಟೆ ಮಿತ್ರ ಮಂಡಳ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಮಹಿಳಾ ಒಕ್ಕೂಟದ ಅಧ್ಯಕ್ಷೆ  […]

ನೆಲ್ಲಿಕಟ್ಟೆ ಅಂಗನವಾಡಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ | ಅಸಹಾಯಕರ ಸೇವಾ ಟ್ರಸ್ಟ್, ನೆಲ್ಲಿಕಟ್ಟೆ ಮಿತ್ರ ಮಂಡಳ ಜಂಟಿ ಆಶ್ರಯ Read More »

ಗ್ರಾಮೀಣ ಕೈಗಾರಿಕಾ ಇಲಾಖೆಯಿಂದ ಫಲಾನುಭವಿಗಳಿಗೆ ವಿವಿಧ ಸಲಕರಣೆಗಳ ವಿತರಣೆ

ಪುತ್ತೂರು: ಸರಕಾರದ ವಿವಿಧ ಇಲಾಖೆಯಿಂದ ಸಾರ್ವಜನಿಕರಿಗೆ ಯಾವುದೆಲ್ಲಾ ಸೌಲಭ್ಯಗಳು ದೊರೆಯುತ್ತದೆಯೋ ಅವುಗಳ ಮಾಹಿತಿಯನ್ನು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ತಾಣದಲ್ಲಿ ಪ್ರಕಟಿಸಿ ಪ್ರಚಾರ ಮಾಡಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈಯವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅವರು ದ ಕ ಜಿಲ್ಲಾ ಪಂಚಾಯತ್, ಗ್ರಾಮೀಣ ಕೈಗಾರಿಕಾ ಇಲಾಖೆಯ ವತಿಯಿಂದ ಪುತ್ತೂರು ವಿಧಾನಸಭಾ ಕ್ಷೆತ್ರದ ವಿವಿಧ ಕುಶಲ ಕರ್ಮಿಗಳಿಗೆ ಸಲಕರಣೆ ವಿತರಿಸಿ ಮಾತನಾಡಿದರು. ಯಾವ ಇಲಾಖೆಯಲ್ಲಿ ಯಾವ ಸೌಲಭ್ಯಗಳು ದೊರೆಯುತ್ತದೆ ಎಂದು ಸಾರ್ವಜನಿಕರಿಗೆ ಮಾಹಿತಿ ಕೊರತೆಯಿದೆ. ಕೆಲವರಿಗೆ ಆನ್ ಲೈನ್

ಗ್ರಾಮೀಣ ಕೈಗಾರಿಕಾ ಇಲಾಖೆಯಿಂದ ಫಲಾನುಭವಿಗಳಿಗೆ ವಿವಿಧ ಸಲಕರಣೆಗಳ ವಿತರಣೆ Read More »

ತ್ರೋಬಾಲ್ ಪಂದ್ಯಾಟ : ನರಿಮೊಗರು ಸರಸ್ವತಿ ಶಾಲಾ ಬಾಲಕರ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

ಪುತ್ತೂರು : ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಬೆಳಂದೂರು ಈಡನ್ ಗ್ಲೋಬಲ್ ಶಾಲೆಯಲ್ಲಿ ನಡೆದ ಸವಣೂರು ವಲಯ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳ ತ್ರೋಬಾಲ್ ಪಂದ್ಯಾಟದಲ್ಲಿ ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದೆ. 10ನೇ ತರಗತಿಯ ವಿಹಾನ್ ಉತ್ತಮ ಆಟಗಾರ ಪ್ರಶಸ್ತಿ ಪಡೆದುಕೊಂಡರು. ತಂಡವನ್ನು 10ನೇ ತರಗತಿಯ ವಿಹಾನ್, ಶ್ರೇಯಸ್, ಯಶ್ವಿನ್, ವಿವೇಕ್, 9ನೇ ತರಗತಿಯ ಮೋಕ್ಷಿತ್, ಧನ್ವಿತ್, ಭನ್ನಿತ್, ಜೀವಿತ್, ಸುದೃಶ್, ಜೋಹನ್ ಮತ್ತು

ತ್ರೋಬಾಲ್ ಪಂದ್ಯಾಟ : ನರಿಮೊಗರು ಸರಸ್ವತಿ ಶಾಲಾ ಬಾಲಕರ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ Read More »

ನೆಲ್ಲಿಕಟ್ಟೆ ನಿವಾಸಿ ಮೆಲ್ವಿನ್ ಮಸ್ಕರೇನಸ್ ನಿಧನ

ಪುತ್ತೂರು: ನೆಲ್ಲಿಕಟ್ಟೆ ನಿವಾಸಿ  ವಿದೇಶದಲ್ಲಿ ಉದ್ಯೋಗದಲ್ಲಿದ್ದ ಮೆಲ್ವಿನ್ ಮಸ್ಕರೇನಸ್ (57)  ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಕಿನ್ನಿಗೋಳಿಯ ಸಹೋದರಿಯ ಮನೆಯಲ್ಲಿ ಮಂಗಳವಾರ ರಾತ್ರಿ ನಿಧನ ಹೊಂದಿದರು. ಹಲವು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಅವರು ಅನಾರೋಗ್ಯ ನಿಮಿತ್ತ ಊರಿಗೆ ವಾಪಾಸಾಗಿದ್ದರು. ನೆಲ್ಲಿಕಟ್ಟೆ ಮಿತ್ರವೃಂದದ ಸಕ್ರೀಯ ಸದಸ್ಯರಾಗಿದ್ದ ಇವರು, ಸಾಮಾಜಿಕವಾಗಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿಹಾಗೂ ಮಕ್ಕಳನ್ನು ಅಗಲಿದ್ದಾರೆ.

ನೆಲ್ಲಿಕಟ್ಟೆ ನಿವಾಸಿ ಮೆಲ್ವಿನ್ ಮಸ್ಕರೇನಸ್ ನಿಧನ Read More »

ಉಪ್ಪಿನಂಗಡಿಯಲ್ಲಿ ಭಾರೀ ಗಾತ್ರ ಮೊಸಳೆ ಪತ್ತೆ | ಜನತೆ ಆತಂಕದಲ್ಲಿ

ಉಪ್ಪಿನಂಗಡಿ: ಭಾರೀ ಗಾತ್ರದ ಮೊಸಳೆಯೊಂದು ಉಪ್ಪಿನಂಗಡಿ ಹೊಸ ಬಸ್ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಸ್ಥಳೀಯ ಜನರ ಆತಂಕಕ್ಕೆ ಕಾರಣವಾಗಿದೆ. ಮಂಗಳವಾರ ಸಂಜೆ ಇಳಂತಿಲ ಗ್ರಾ. ಪಂ. ಎಪ್ತಿಯ ನದಿಯ ಮತ್ತೊಂದು ಬದಿಯಲ್ಲಿ ಮೊಸಳೆಯೊಂದು ಮರಳ ದಿಬ್ಬದಲ್ಲಿ ವಿರಮಿಸುತ್ತಿರುವುದನ್ನು ಇಳಂತಿಲ ಗ್ರಾ.ಪಂ. ಮಾಜಿ ಸದಸ್ಯ, ಸಾಮಾಜಿಕ ಕಾರ್ಯಕರ್ತರೊಬ್ಬರು ಗಮನಿಸಿದ್ದು, ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ದೊಡ್ಡ ಗಾತ್ರದ ಮೊಸಳೆ ಇದಾಗಿದೆ. ಕಳೆದ 2022ರ ಸೆಪ್ಟೆಂಬರ್ ತಿಂಗಳಲ್ಲಿ ಪಂಜಳದ ಪೆಟ್ರೋಲ್ ಪಂಪ್ ಸಮೀಪ ನೇತ್ರಾವತಿ ನದಿಯಲ್ಲಿ ಮೂರು ಮೊಸಳೆಗಳು ಕಂಡು ಬಂದಿದ್ದವು. ಮಧ್ಯಾಹ್ನ

ಉಪ್ಪಿನಂಗಡಿಯಲ್ಲಿ ಭಾರೀ ಗಾತ್ರ ಮೊಸಳೆ ಪತ್ತೆ | ಜನತೆ ಆತಂಕದಲ್ಲಿ Read More »

ಮಾಡೆಲಿಂಗ್ ಜಗತ್ತಿಗೆ ಪ್ರಪ್ರಥಮ ಬಾರಿಗೆ ಸ್ಥಳೀಯ ಸುಂದರಿಯರನ್ನ ನೂತನ ರೂಪದರ್ಶಿಗಳಾಗಿ ಪರಿಚಯಿಸುವ ‘ಫೇಸಸ್ ಆಫ್ ಮುಳಿಯ’ | ಹೊಸತನಕ್ಕೆ ಇನ್ನೊಂದು ಆಯಾಮ

ಪುತ್ತೂರು: ಮುಳಿಯ ಚಿನ್ನಾಭರಣ ಮಳಿಗೆ ಕಳೆದ 80 ವರ್ಷಗಳಿಂದ ನಂಬಿಕೆಯ ಆಭರಣ  ಮಳಿಗೆಯಾಗಿರುತ್ತದೆ. ಹಾಗೆಯೇ  ಸ್ಥಳೀಯರಿಗೆ ಅವಕಾಶಕ್ಕಾಗಿ ಗಾನರಥ ಗಾಯನ ಸ್ಪರ್ಧೆ, ಕೃಷಿಯನ್ನುಉದ್ಯಮವಾಗಿ ನೋಡಬೇಕು ಅನ್ನುವ ಕೃಷಿಕೋದ್ಯಮ ಸೆಮಿನಾರ್, ಕಾಡು ಬೆಳೆಸಲು ಲಕ್ಷಕ್ಕೂ ಮಿಕ್ಕಿ ಸೀಡ್ ಬಾಲ್ ಎಸೆತ, ದೇಶದಲ್ಲೇ ಮೊದಲ ಬಾರಿ ಸ್ವಚ್ಛ ಪುತ್ತೂರು ಕಾರ್ಯಕ್ರಮ ಹೀಗೆ ಸದಾ ಹಲವು ಹೊಸತನವನ್ನು ಪರಿಚಯಿಸುವ ಕೆಲಸ ಮಾಡಿಕೊಂಡು ಬಂದಿದೆ. ಈ ಹೊಸತನಕ್ಕೆ ಈಗ ಇನ್ನೊಂದು ಆಯಾಮವೇ ಫೇಸಸ್ ಆಫ್ ಮುಳಿಯ ನಮ್ಮ ಶಾಖೆಗಗಳಿರುವ ಕೊಡಗು ಪುತ್ತೂರು ಬೆಳ್ತಂಗಡಿ

ಮಾಡೆಲಿಂಗ್ ಜಗತ್ತಿಗೆ ಪ್ರಪ್ರಥಮ ಬಾರಿಗೆ ಸ್ಥಳೀಯ ಸುಂದರಿಯರನ್ನ ನೂತನ ರೂಪದರ್ಶಿಗಳಾಗಿ ಪರಿಚಯಿಸುವ ‘ಫೇಸಸ್ ಆಫ್ ಮುಳಿಯ’ | ಹೊಸತನಕ್ಕೆ ಇನ್ನೊಂದು ಆಯಾಮ Read More »

ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

ಪುತ್ತೂರು: ದ.ಕ. ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ಸಹಯೋಗದಲ್ಲಿ 2024-25ನೇ ಸಾಲಿನ ಪುತ್ತೂರು ತಾಲೂಕು ಮಟ್ಟದ ಶಟಲ್ ಬ್ಯಾಡ್‌ಮಿಂಟನ್ ಪಂದ್ಯಾಟ ಸಾಮೆತ್ತಡ್ಕ ಸುದಾನ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಿತು. ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3181  ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಆಸ್ಕರ್ ಆನಂದ್ ಪಂದ್ಯಾಕೂಟಕ್ಕೆ ಚಾಲನೆಯನ್ನು ನೀಡಿ, ಕ್ರೀಡೆಯಿಂದ ಮನೋರಂಜನೆ, ದೈಹಿಕ ವ್ಯಾಯಾಮ ಸಿಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ,

ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ Read More »

ಪ್ರತಿಷ್ಠಿತ ಮುಳಿಯ ಜ್ಯುವೆಲ್ಸ್ ನಲ್ಲಿ ‘ಡೈಮಂಡ್ ಫೆಸ್ಟ್’ ನ ಎರಡನೇ ಆವೃತ್ತಿಗೆ ಚಾಲನೆ

ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ಆ.30 ರಿಂದ ಸೆ.26ರ ತನಕ ನಡೆಯಲಿರುವ `ಡೈಮಂಡ್ ಫೆಸ್ಟ್’ನ ಎರಡನೇ ಆವೃತ್ತಿಗೆ ಸೋಮವಾರ ಅಧಿಕೃತವಾಗಿ ಚಾಲನೆ ನೀಡಲಾಯಿತು. ಶಾಸಕ ಅಶೋಕ್ ಕುಮಾರ್ ರೈಯವರ ಪತ್ನಿ ಸುಮಾ ಅಶೋಕ್ ಡೈಮಂಡ್ ಫೆಸ್ಟ್‌ನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಮುಳಿಯದ ಡೈಮಂಡ್ ಫೆಸ್ಟ್‌ನಲ್ಲಿ ಕನಿಷ್ಠ ಬೆಲೆಯಲ್ಲಿ ಖರೀದಿಸಬಹುದಾದ ಆಭರಣಗಳಿದ್ದು ಜನ ಸಾಮಾನ್ಯರಿಗೂ ಖರಿದಿಸಬಹುದು. ಉತ್ತಮ ವೆರಾಟಿ, ಆಕರ್ಷಕ ವಿನ್ಯಾಸಗಳ ಆಭರಣಗಳು ಉತ್ತಮ ಬೆಲೆಯಲ್ಲಿ ಆಕರ್ಷಕ ಕೊಡುಗೆಗಳೊಂದಿಗೆ ಗ್ರಾಹಕರು ಖರೀದಿಸಬಹುದು. ಮುಳಿಯ ಜ್ಯುವೆಲ್ಸ್

ಪ್ರತಿಷ್ಠಿತ ಮುಳಿಯ ಜ್ಯುವೆಲ್ಸ್ ನಲ್ಲಿ ‘ಡೈಮಂಡ್ ಫೆಸ್ಟ್’ ನ ಎರಡನೇ ಆವೃತ್ತಿಗೆ ಚಾಲನೆ Read More »

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕಡಬ ಶಾಖೆ ಯಶಸ್ವಿ 16ನೇ ವರ್ಷಕ್ಕೆ ಪಾದಾರ್ಪಣೆ | ಗಣಹೋಮ, ಲಕ್ಷ್ಮೀ ಪೂಜೆ

ಕಡಬ: ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕಡಬ ಶಾಖೆ ಯಶಸ್ವಿ 16ನೇ ವರ್ಷಕ್ಕೆ ಇಂದು ಪಾದಾರ್ಪಣೆ ಮಾಡಿತು. ಪಾದಾರ್ಪಣೆ ಅಂಗವಾಗಿ ಇಂದು ಕಡಬ ಶಾಖೆಯಲ್ಲಿ ಗಣಹೋಮ, ಲಕ್ಷ್ಮೀ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಕಡಬ ಶಾಖಾ ಸಲಹಾ ಸಮಿತಿ ಅಧ್ಯಕ್ಷ, ನಿರ್ದೇಶಕ ಸುದರ್ಶನ ಗೌಡ ಕೆ., ನಿರ್ದೇಶಕ ಪ್ರವೀಣ್‍ ಕುಂಟ್ಯಾನ, ಕಡಬ ಸಲಹಾ ಸಮಿತಿ ಸದಸ್ಯರಾದ ನೀಲಾವತಿ ಶಿವರಾಮ್, ಕೃಷ್ಣಪ್ಪ ಗೌಡ ಕೊಂಬಾರು, ಚಂದ್ರಶೇಖರ ಕೋಡಿಬೈಲು, ಭಾಸ್ಕರ ಗೌಡ

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕಡಬ ಶಾಖೆ ಯಶಸ್ವಿ 16ನೇ ವರ್ಷಕ್ಕೆ ಪಾದಾರ್ಪಣೆ | ಗಣಹೋಮ, ಲಕ್ಷ್ಮೀ ಪೂಜೆ Read More »

ಪುತ್ತೂರು ನಗರಸಭೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಲೀಲಾವತಿ, ಉಪಾಧ್ಯಕ್ಷರಾಗಿ ಬಾಲಚಂದ್ರ ಆಯ್ಕೆ | ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸುಂದರ ಪೂಜಾರಿ ಬಡಾವು ಆಯ್ಕೆ

ಪುತ್ತೂರು: ನಗರಸಭೆಯ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಬಿಜೆಪಿಗೇ ಒಲಿದಿದ್ದು, ಅಧ್ಯಕ್ಷರಾಗಿ ಲೀಲಾವತಿ ಹಾಗೂ ಉಪಾಧ್ಯಕ್ಷರಾಗಿ ಬಾಲಚಂದ್ರ ಸೊರಕೆ ಅವಿರೋಧವಾಗಿ ಆಯ್ಕೆಯಾದರು. ಮಂಗಳವಾರ ಚುನಾವಣೆ ನಡೆದಿದ್ದು, ಚುನಾವಣಾಧಿಕಾರಿ, ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಘೋಷಣೆ ಮಾಡಿದರು. ಅಧ್ಯಕ್ಷ ಸ್ಥಾನ ಮಹಿಳೆ ಎಸ್.ಸಿ ಗೆ ಮೀಸಲಾಗಿದ್ದು, ಈ ಸ್ಥಾನಕ್ಕೆ ಲೀಲಾವತಿ, ಉಪಾಧ್ಯಕ್ಷತೆಗೆ ಬಾಲಚಂದ್ರ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಹುದ್ದೆಗೆ ಸುಂದರ ಪೂಜಾರಿ ಬಡಾವು ಅವರನ್ನು ಬಿಜೆಪಿ ಆಯ್ಕೆ ಮಾಡಿತ್ತು. 31 ಸದಸ್ಯರಿರುವ ನಗರಸಭೆಯಲ್ಲಿ ಬಿಜೆಪಿಯ 25 ಸದಸ್ಯರಿದ್ದಾರೆ.

ಪುತ್ತೂರು ನಗರಸಭೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಲೀಲಾವತಿ, ಉಪಾಧ್ಯಕ್ಷರಾಗಿ ಬಾಲಚಂದ್ರ ಆಯ್ಕೆ | ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸುಂದರ ಪೂಜಾರಿ ಬಡಾವು ಆಯ್ಕೆ Read More »

error: Content is protected !!
Scroll to Top