ಪುತ್ತೂರು

ಪುತ್ತೂರು : ಮಾದಕವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿ ಸೆರೆ

ಪುತ್ತೂರು : ಕಬಕ ಗ್ರಾಮದ ಮುರದಲ್ಲಿರುವ ರೈಲ್ವೆ ಸೇತುವೆ ಬಳಿ ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಆತನಿಂದ 10 ಗ್ರಾಂ ಎಂಡಿಎಂಎ ನಿಷೇಧಿತ ಮಾದಕವಸ್ತು ವಶಕ್ಕೆ ಪಡೆದಿದ್ದಾರೆ. ಶಂಕಿತನನ್ನು ಪುತ್ತೂರು ಕಬಕ ನಿವಾಸಿ ಉಮ್ಮರ್ ಫಾರೂಕ್ (41) ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರೈಲ್ವೆ ಸೇತುವೆ ಬಳಿ ವ್ಯಕ್ತಿಯೋರ್ವ ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಎಂಬ ನಿಖರ ಮಾಹಿತಿಯ ಮೇರೆಗೆ ಪುತ್ತೂರು ನಗರ ಪೊಲೀಸ್ […]

ಪುತ್ತೂರು : ಮಾದಕವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿ ಸೆರೆ Read More »

ಉದ್ಯೋಗ ವಾರ್ತೆ: ಆಫೀಸ್ ಅಡ್ಮಿನ್ ಹುದ್ದೆಗೆ ಅರ್ಜಿ ಆಹ್ವಾನ

ಸಂಪ್ಯ: ಪುತ್ತೂರಿನ ಆರಕ್ಷಕ ಠಾಣೆಯ ಬಳಿ ಕಾರ್ಯಾಚರಿಸುತ್ತಿರುವ ತರಬೇತಿ ಸಂಸ್ಥೆ ವಿದತ್ (VIDATH) ಇದರ ಆಡಳಿತ ಮಂಡಳಿಯವರು ಕಚೇರಿ ನಿರ್ವಾಹಕ (Office Admin) ಹುದ್ದೆಗೆ ನೇಮಕಾತಿ ಮಾಡಲಿದ್ದು ಆಸಕ್ತರನ್ನು ಆಹ್ವಾನಿಸಿದ್ದಾರೆ. ಕಚೇರಿ ವೇಳೆಯಲ್ಲಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಂಸ್ಥೆಯ ಆಡಳಿತ ಪಾಲುದಾರರಾಗಿರುವ ಶುಭಾ ಅವರು ತಿಳಿಸಿದ್ದಾರೆ.

ಉದ್ಯೋಗ ವಾರ್ತೆ: ಆಫೀಸ್ ಅಡ್ಮಿನ್ ಹುದ್ದೆಗೆ ಅರ್ಜಿ ಆಹ್ವಾನ Read More »

ಗೇರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ

ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ಅವಕಾಶವಿರುವ ಸರ್ಕಾರಿ ಅಧಿಕಾರಿ ಹುದ್ದೆಗಳನ್ನು ಪಡೆಯಲು ಕೆಎಎಸ್,ಐಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿ ಯಶಸ್ಸನ್ನು ಪಡೆಯಲು ಪಿಯುಸಿಯ ವಿದ್ಯಾರ್ಥಿಗಳು ಈ ಹಂತದಲ್ಲಿಯೇ ಸಿದ್ಧತೆ ಮಾಡಿಕೊಳ್ಳಬೇಕೆಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ದಿವಾಕರ ಆಚಾರ್ಯ ಗೇರುಕಟ್ಟೆ ತಿಳಿಸಿದರು. ಗೇರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಜ್ಞಾನಾರ್ಜನೆಗಾಗಿ ಶಿಕ್ಷಣದ ಜೊತೆಗೆ ಸಾಮಾಜಿಕ ಋಣವನ್ನು ತೀರಿಸುವುದು ಪ್ರತಿಯೊಬ್ಬರ ಕರ್ತವ್ಯವೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಹಿರಿಯ ಉಪನ್ಯಾಸಕಿಯಾದ ಭಾಗ್ಯಲಕ್ಷ್ಮಿ

ಗೇರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ Read More »

ಪುತ್ತೂರು : ನಾಪತ್ತೆಯಾಗಿದ್ದ ಯುವಕ ಮೃತದೇಹ ಪತ್ತೆ

ಪುತ್ತೂರು: ಭಾನುವಾರ ನಾಪತ್ತೆಯಾಗಿದ್ದ ನಗರದ ಪಡೀಲ್‌ನ ಚಿಕನ್ ಅಂಗದಿಯ ನೌಕರ ಬದ್ರುದ್ದೀನ್ ಡಿ.ಕೆ (29) ಎಂಬವರ ಮೃತದೇಹ ಸೇಡಿಯಾಪು ಬಳಿಯ ಕಾಡಿನಲ್ಲಿ ಸೋಮವಾರ ಪತ್ತೆಯಾಗಿದೆ. ಆರ್ಥಿಕ ಸಮಸ್ಯೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ. ಕಾಣೆಯಾದ ಒಂದು ದಿನದ ನಂತರ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬದ್ರುದ್ದೀನ್ ಅವಿವಾಹಿತರಾಗಿದ್ದು, ತಾಯಿ, ಅಣ್ಣ, ಅಕ್ಕ, ತಮ್ಮ ಹಾಗೂ ತಂಗಿಯನ್ನು ಅಗಲಿದ್ದಾರೆ. ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

ಪುತ್ತೂರು : ನಾಪತ್ತೆಯಾಗಿದ್ದ ಯುವಕ ಮೃತದೇಹ ಪತ್ತೆ Read More »

ಪುತ್ತೂರು : ಚಿಕನ್‌ ಅಂಗಡಿಯ ನೌಕರ ನಾಪತ್ತೆ

ಪುತ್ತೂರು: ನಗರದ ಪಡೀಲ್‌ನ ಚಿಕನ್ ಸೆಂಟರೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ನಾಪತ್ತೆಯಾಗಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬದ್ರುದ್ದೀನ್ ಡಿ.ಕೆ (27) ಕಾಣೆಯಾದ ಯುವಕ. ಈತ ಸುಮಾರು 8 ವರ್ಷಗಳಿಂದ ಅಬ್ದುಲ್ ರಹಿಮಾನ್ ಮಾಲಕತ್ವದ ಜಿಂದಗಿ ಚಿಕನ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ನ.29ರಂದು ಎಂದಿನಂತೆ ಬೆಳಗ್ಗೆ 8.45ಕ್ಕೆ ಕೆಲಸಕ್ಕೆ ಹಾಜರಾಗಿದ್ದು, ಬಳಿಕ ಮಾಲಕರಿಗೆ ತಿಳಿಸಿ ಅಂಗಡಿಯಿಂದ ಹೋಗಿದ್ದ ಎನ್ನಲಾಗಿದೆ. ಆ ಬಳಿಕ ಬದ್ರುದ್ದೀನ್ ಕೆಲಸದ ಸ್ಥಳಕ್ಕೂ ಹೋಗದೆ, ಮನೆಗೂ

ಪುತ್ತೂರು : ಚಿಕನ್‌ ಅಂಗಡಿಯ ನೌಕರ ನಾಪತ್ತೆ Read More »

ಪುತ್ತೂರು : ಕ್ಲಿನಿಕ್‌ನಲ್ಲಿ ದಾಂಧಲೆ ಎಸಗಿದ ಆರೋಪಿ ಬಂಧನ

ಟೋಕನ್‌ ವಿಚಾರದಲ್ಲಿ ಜಗಳವಾಡಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಪುತ್ತೂರು : ನಗರದ ದರ್ಬೆಯ ಇಎನ್‌ಟಿ ಕ್ಲಿನಿಕ್‌ನಲ್ಲಿ ಶನಿವಾರ ದಾಂಧಲೆ ಎಸಗಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಅಋೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಬೆಳ್ಳಂಬೆಳಗ್ಗೆ ದರ್ಬೆಯಲ್ಲಿರುವ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿತ್ತು. ಘಟನೆಗೆ ಸಂಬಂಧಿಸಿ ಪುತ್ತೂರು ತಾಲೂಕಿನ ಬಪ್ಪಳಿಗೆ ನಿವಾಸಿ ಇಬ್ರಾಹಿಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕ್ಲಿನಿಕ್ ಸಿಬ್ಬಂದಿ ಶ್ರೀಕಾಂತ್ ಹಲ್ಲೆಗೊಳಗಾದವರು ಶನಿವಾರ ಬೆಳಗ್ಗೆ 6.30ರ ವೇಳೆ ಬಂದ ಇಬ್ರಾಹೀಂ ತಮ್ಮ ಪರಿಚಯಸ್ಥರಿಗೆ ಆದ್ಯತೆ ನೀಡುವಂತೆ

ಪುತ್ತೂರು : ಕ್ಲಿನಿಕ್‌ನಲ್ಲಿ ದಾಂಧಲೆ ಎಸಗಿದ ಆರೋಪಿ ಬಂಧನ Read More »

KSRTC ಯಲ್ಲಿನ ವೃತ್ತಿಯಿಂದ ನಿವೃತ್ತರಾಗಲಿರುವ ಸುರೇಶ್ ATI

ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಸುರೇಶ್ ATI ಅವರು ನವೆಂಬರ್ 30 ರಂದು ಸೇವಾ ನಿವೃತ್ತಿಯನ್ನು ಹೊಂದುತ್ತಿದ್ದಾರೆ. 1989 ರಲ್ಲಿ ಮಂಗಳೂರು ವಿಭಾಗದಲ್ಲಿ ನಿರ್ವಾಹಕರಾಗಿ ಕಾರ್ಯ ಆರಂಭಿಸಿದ ಅವರು ಆ ಬಳಿಕ ತಮ್ಮ ಉತ್ತಮ ಸೇವೆಯ ಫಲವಾಗಿ ಸಹಾಯಕ ಸಂಚಾರ ನಿಯಂತ್ರಕರಾಗಿ ಮುಂಭಡ್ತಿ ಹೊಂದಿದ್ದರು. ಅವರ ಸೇವಾ ನಿವೃತ್ತಿಗೆ ‌ಶುಭ ಕೋರಿ ಪುತ್ತೂರು ಘಟಕದ ಎಲ್ಲಾ ಚಾಲಕರ ಪರವಾಗಿ ಪುತ್ತೂರು ಘಟಕದ ಚಾಲಕ ಬೋಧಕ ಪಿ. ವಿ.

KSRTC ಯಲ್ಲಿನ ವೃತ್ತಿಯಿಂದ ನಿವೃತ್ತರಾಗಲಿರುವ ಸುರೇಶ್ ATI Read More »

ಪುತ್ತೂರು : ಕ್ಲಿನಿಕ್‌ನಲ್ಲಿ ದಾಂಧಲೆ ಎಸಗಿ ಸಿಬ್ಬಂದಿ ಮೇಲೆ ಹಲ್ಲೆ

ಪುತ್ತೂರು : ಕ್ಲಿನಿಕ್‌ನ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕ್ಲಿನಿಕ್‌ ಒಳಗೆ ದಾಂಧಲೆ ಎಸಗಿದ ಘಟನೆ ಶನಿವಾರ ಬೆಳಗ್ಗೆ ಪುತ್ತೂರಿನಲ್ಲಿ ಸಂಭವಿಸಿದೆ. ನಗರದ ದರ್ಬೆಯ ಗಣೇಶ್‌ ಕಾಂಪ್ಲೆಕ್ಸ್‌ನಲ್ಲಿರುವ ಡಾ.ರಾಮ್‌ಮೋಹನ್‌ ಎಂಬವರ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿದೆ. ದಿನವಡೀ ರೋಗಿಗಳಿಂದ ತುಂಬಿರುವ ಈ ಕ್ಲಿನಿಕ್‌ನಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಟೋಕನ್‌ ನೀಡುವ ವ್ಯವಸ್ಥೆಯಿದೆ. ಇಂದು ಬೆಳಗ್ಗೆ 6.30ರ ವೇಳೆಗೆ ಕ್ಲಿನಿಕ್‌ ಮುಂಭಾಗದ ರಸ್ತೆಯ ಪಾರ್ಕಿಂಗ್‌ ಶುಲ್ಕ ಸಂಗ್ರಹಿಸುವ ವ್ಯಕ್ತಿ ಬಂದು ತನ್ನ ಪರಿಚಯದವರಿಗೆ ಬೇಗ ಹೋಗುವ ಟೋಕನ್‌ ನೀಡದಿರುವ

ಪುತ್ತೂರು : ಕ್ಲಿನಿಕ್‌ನಲ್ಲಿ ದಾಂಧಲೆ ಎಸಗಿ ಸಿಬ್ಬಂದಿ ಮೇಲೆ ಹಲ್ಲೆ Read More »

ವಿಟ್ಲ : ಎಟಿಎಂ ಕಾರ್ಡ್‌ ಪಡೆದು ಮಹಿಳೆಗೆ ಲಕ್ಷಕ್ಕೂ ಅಧಿಕ ವಂಚನೆ

ವಿಟ್ಲ : ಅಪರಿಚಿತ ವ್ಯಕ್ತಿಗಳಿಬ್ಬರು ಮಹಿಳೆಯೊಬ್ಬರಿಂದ ಎಟಿಎಂ ಕಾರ್ಡ್‌ ಪಡೆದು ಲಕ್ಷಾಂತರ ರೂ. ವಂಚಿಸಿದ ಘಟನೆ ವಿಟ್ಲದಲ್ಲಿ ಶುಕ್ರವಾರ ನಡೆದಿದೆ. ಇಡ್ಕಿದು ಗ್ರಾಮದ ಉರಿಮಜಲು ನಿವಾಸಿ ಮಹಿಳೆ ವಿಟ್ಲಕಸಬಾ ಗ್ರಾಮದ ಫಾತಿಮ ಬಿಲ್ಡಿಂಗ್‌ನಲ್ಲಿರುವ ಎಸ್‌ಬಿಐ ಎಟಿಎಂ ಕೇಂದ್ರಕ್ಕೆ ತೆರಳಿ 6,000 ರೂ. ಡ್ರಾ ಮಾಡಿ ಹೊರಗಡೆ ಬರುತ್ತಿದ್ದ ಸಂದರ್ಭ ಎಟಿಎಂ ಕೇಂದ್ರದ ಒಳಗಡೆಯಿದ್ದ ಅಪರಿಚಿತ ವ್ಯಕ್ತಿಗಳು ಮಹಿಳೆಯನ್ನು ಕರೆದು ಎಟಿಎಂ ಅನ್ನು ಸರಿಯಾಗಿ ಮುಚ್ಚಬೇಕೆಂದು ಹೇಳಿದ್ದಾರೆ. ಅದರಂತೆ ಮಹಿಳೆ ಕೇಂದ್ರದ ಒಳಗೆ ಹೋಗಿ ನೋಡಿ ಹೊರಗಡೆ ಬರುವಾಗ

ವಿಟ್ಲ : ಎಟಿಎಂ ಕಾರ್ಡ್‌ ಪಡೆದು ಮಹಿಳೆಗೆ ಲಕ್ಷಕ್ಕೂ ಅಧಿಕ ವಂಚನೆ Read More »

ಬಿಜೆಪಿ ಹುದ್ದೆಯಿಂದ ಪುತ್ತಿಲ ಪರಿವಾರದವರಿಗೆ ಕೊಕ್‌

ಪುತ್ತೂರು ರಾಜಕೀಯದಲ್ಲಿ ಕುತೂಹಲ ಕೆರಳಿಸಿದ ದಿಢೀರ್‌ ಬೆಳವಣಿಗೆ ಪುತ್ತೂರು: ಪುತ್ತೂರಿನ ಗ್ರಾಮಾಂತರ ಮತ್ತು ನಗರ ಮಂಡಲಗಳನ್ನು ಐಕ್ಯಗೊಳಿಸಿ ಅಖಂಡ ಪುತ್ತೂರು ಮಂಡಲ ರಚಿಸಿ ನನನ್ನು ಅಧ್ಯಕ್ಷನನ್ನಾಗಿ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಪುತ್ತೂರಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ತೋರಿಸುತ್ತೇನೆ ಎಂದು ಪುತ್ತಿಲ ಪರಿವಾರದ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಮುಂದಿಟ್ಟಿದ್ದ ಬೇಡಿಕೆಯನ್ನು ಜಿಲ್ಲಾ ಬಿಜೆಪಿ ನಿರಾಕರಿಸಿದ ಬೆನ್ನಲ್ಲೇ, ಇದೀಗ ಪುತ್ತಿಲ ಪರಿವಾರಕ್ಕೆ ಮತ್ತೊಂದು ಶಾಕ್‌ ನೀಡಿದೆ. ಪುತ್ತಿಲ ಪರಿವಾರದಿಂದ ಬಿಜೆಪಿ ಪದಾಧಿಕಾರಿ ಹುದ್ದೆಗೆ ಸ್ಥಳಾಂತರಗೊಂಡಿದ್ದ ಮೂವರನ್ನು ಆ ಹುದ್ದೆಗಳಿಂದ

ಬಿಜೆಪಿ ಹುದ್ದೆಯಿಂದ ಪುತ್ತಿಲ ಪರಿವಾರದವರಿಗೆ ಕೊಕ್‌ Read More »

error: Content is protected !!
Scroll to Top