ಪುತ್ತೂರು

ದಿ. ಜಯಂತಿ ಸ್ಮರಣಾರ್ಥ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಹಯೋಗದಲ್ಲಿ ಅಪಘಾತದಲ್ಲಿ ಗಾಯಗೊಂಡ ಚೇತಕ್ ಅವರಿಗೆ ಬೆಡ್ ಹಸ್ತಾಂತರ

ಪುತ್ತೂರು: ಇತ್ತೀಚೆಗೆ ನಿಧನರಾದ ಸ್ವರ್ಗಸ್ಥರಾದ ನೆಹರೂನಗರದ ಗಣೇಶ್ ಭಾಗ್ ನಿವಾಸಿ ಜಯಂತಿ ಅವರ ಸ್ಮರಣಾರ್ಥ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಹಯೋಗದಿಂದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಕುಂಜೂರು ಪಂಜ ನಿವಾಸಿ ತಿಮ್ಮಪ್ಪ ನಾಯ್ಕ ಅವರ  ಪುತ್ರ ಚೇತಕ್ ಅವರಿಗೆ 20 ಸಾವಿರ ಮೌಲ್ಯದ ವೈದ್ಯಕೀಯ ವಿನ್ಯಾಸದ ಆಸ್ಪತ್ರೆ ಬೆಡ್ ಹಸ್ತಾಂತರಿಸಲಾಯಿತು. ಚೇತಕ್ ಅವರು ಪ್ರಸ್ತುತ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಈ ಸಂಧರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ […]

ದಿ. ಜಯಂತಿ ಸ್ಮರಣಾರ್ಥ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಹಯೋಗದಲ್ಲಿ ಅಪಘಾತದಲ್ಲಿ ಗಾಯಗೊಂಡ ಚೇತಕ್ ಅವರಿಗೆ ಬೆಡ್ ಹಸ್ತಾಂತರ Read More »

ನ.13 : ರಾಜ್ಯದ 3 ಕ್ಷೇತ್ರಗಳ ಉಪಚುನಾವಣೆ | ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಹಿಂದುಳಿದ ವರ್ಗಗಳ ಮೋರ್ಚಾದಿಂದ ಚುನಾವಣಾ ಪ್ರಭಾರಿಯಾಗಿ ಆರ್.ಸಿ.ನಾರಾಯಣ ಆಯ್ಕೆ

ಪುತ್ತೂರು: ರಾಜ್ಯದ 3 ಕ್ಷೇತ್ರಗಳ ಉಪಚುನಾವಣೆ ನ.13 ರಂದು ನಡೆಯಲಿದ್ದು ಈ ಸಂದರ್ಭದಲ್ಲಿ ಶಿಗ್ಗಾoವಿ ವಿಧಾನಸಭಾ ಕ್ಷೇತ್ರಕ್ಕೆ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಚುನಾವಣಾ ಪ್ರಭಾರಿಯಾಗಿ ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಆರ್ ಸಿ ನಾರಾಯಣ ರೆಂಜ ಅವರನ್ನು ನಿಯೋಜನೆ ಮಾಡಲಾಗಿದೆ. ರಾಜ್ಯಾಧ್ಯಕ್ಷರಾದ ಬಿ ವೈ ವಿಜೇಯೇಂದ್ರರವರ ಸೂಚನೆಯಂತೆ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ರಘು ಕೌಟಿಲ್ಯರವರು ಈ ಜವಾಬ್ದಾರಿಯನ್ನು ನಿರ್ವಹಿಸಲು ಸೂಚಿಸಿದ್ದಾರೆ. ಶಿಗ್ಗಾoವಿಯಲ್ಲಿ ಎನ್ ಡಿ ಎ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ

ನ.13 : ರಾಜ್ಯದ 3 ಕ್ಷೇತ್ರಗಳ ಉಪಚುನಾವಣೆ | ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಹಿಂದುಳಿದ ವರ್ಗಗಳ ಮೋರ್ಚಾದಿಂದ ಚುನಾವಣಾ ಪ್ರಭಾರಿಯಾಗಿ ಆರ್.ಸಿ.ನಾರಾಯಣ ಆಯ್ಕೆ Read More »

ನಾಳೆ (ಅ.31) : ಪುಣ್ಚತ್ತಾರು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‍ ನಿಂದ ದೀಪಾವಳಿ ಹಬ್ಬದ ಪ್ರಯುಕ್ತ 12ನೇ ವರ್ಷದ 12 ತಂಡಗಳ ‘ಪ್ರೊ ವಾಲಿಬಾಲ್ ಪಂದ್ಯಾಟ’ | ಸನ್ಮಾನ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ

ಕಡಬ: ತಾಲೂಕಿನ ಕಾಣಿಯೂರು ಪುಣ್ಚತ್ತಾರು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‍ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ 12ನೇ ವರ್ಷದ ಆಯ್ದ ಸ್ಥಳೀಯ ಆಟಗಾರರ ನಿಗದಿತ 12 ತಂಡಗಳ ‘ಪ್ರೊ ವಾಲಿಬಾಲ್ ಪಂದ್ಯಾಟ’, ಸ್ಥಳೀಯರಿಗೆ ಆಟೋಟ ಸ್ಪರ್ಧೆ, ಸನ್ಮಾನ, ಪ್ರತಿಭಾ ಪುರಸ್ಕಾರ, ಆಶಕ್ತ ಬಡ ಕುಟುಂಬಗಳಿಗೆ ಸಹಾಯಧನ ವಿತರಣೆ  ಅ.31 ಗುರುವಾರ ಪುಣ್ಚತ್ತಾರಿನಲ್ಲಿ ನಡೆಯಲಿದೆ ಎಂದು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‍ ಸದಸ್ಯ ದಿನೇಶ್‍ ಮಾಳ ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕ್ಲಬ್‍ ಕಳೆದ 11 ವರ್ಷಗಳಿಂದ

ನಾಳೆ (ಅ.31) : ಪುಣ್ಚತ್ತಾರು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‍ ನಿಂದ ದೀಪಾವಳಿ ಹಬ್ಬದ ಪ್ರಯುಕ್ತ 12ನೇ ವರ್ಷದ 12 ತಂಡಗಳ ‘ಪ್ರೊ ವಾಲಿಬಾಲ್ ಪಂದ್ಯಾಟ’ | ಸನ್ಮಾನ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ Read More »

ಕೊಂಬೆಟ್ಟು ನಿವಾಸಿ ಜ್ಞಾನಾನಂದ ಹೆಗ್ಡೆ ನಿಧನ

ಪುತ್ತೂರು: ಕೊಂಬೆಟ್ಟು ಮಮ್ಮಿ ಜ್ಯೂಸ್‌ನ ಮಾಲಕ ಜ್ಞಾನಾನಂದ ಹೆಗ್ಡೆ (58) ಮಂಗಳವಾರ ಸಂಜೆ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ಜ್ಞಾನಾನಂದ ಹೆಗ್ಡೆಯವರು ಕೊಂಬೆಟ್ಟಿನಲ್ಲಿ ಕಬ್ಬಿನ ಹಾಲಿನ ‘ಮಮ್ಮಿ ಜ್ಯೂಸ್’ ಶಾಪ್ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಬಳಿಕ ಅನಾರೋಗ್ಯದಿಂದಾಗಿ ವ್ಯವಹಾರದಿಂದ ನಿವೃತ್ತಿ ಪಡೆದಿದ್ದ ಅವರು ಕಾರ್ಯಕ್ರಮಕ್ಕೆ ಸಂಬಂಧಿಸಿ ಬೆಂಗಳೂರಿಗೆ ಹೋಗಿದ್ದ ಸಂದರ್ಭ ಅಲ್ಲಿ ಹೃದಯಾಘಾತಕ್ಕೀಡಾಗಿ ನಿಧನರಾದರು. ಮೃತರು ತಾಯಿ, ಪತ್ನಿ, ಪುತ್ರಿಯರು ಹಾಗೂ ಸಹೋದರರನ್ನು ಅಗಲಿದ್ದಾರೆ.

ಕೊಂಬೆಟ್ಟು ನಿವಾಸಿ ಜ್ಞಾನಾನಂದ ಹೆಗ್ಡೆ ನಿಧನ Read More »

ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ವಾರ್ಷಿಕೋತ್ಸವ – ಮಾನಸೋಲ್ಲಾಸ-2024 | ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯ ಕುಂಠಿತವಾಗುತ್ತಿದೆ : ಜಯಸೂರ್ಯ ರೈ

ಪುತ್ತೂರು: ಈಚೆಗಿನ ವರ್ಷಗಳಲ್ಲಿ ವಿದ್ಯಾರ್ಥಿಗಳಲ್ಲಿನ ದೈಹಿಕ ಸಾಮರ್ಥ್ಯ ಕುಂಠಿತವಾಗುತ್ತಿದೆ. ಕೆಲಹೊತ್ತು ಬಯಲಿನಲ್ಲಿ ನಿಂತರೆ ತಲೆತಿರುಗಿ ಕುಸಿಯುವ ವಿದ್ಯಾರ್ಥಿಗಳನ್ನು ಕಾಣುತ್ತಿದ್ದೇವೆ. ಮನೆಗಳಲ್ಲಿ ಮಕ್ಕಳಿಂದ ದೈಹಿಕ ಕೆಲಸ ಮಾಡಿಸದಿರುವುದು, ನಡೆದುಹೋಗಬಹುದಾದ ಜಾಗದಲ್ಲೂ ವಾಹನಗಳಲ್ಲೇ ಸಂಚರಿಸುವುದು ದೇಹಶಕ್ತಿಯ ಕ್ಷೀಣತೆಗೆ ಕಾರಣವಾಗುತ್ತಿದೆ. ಆದ್ದರಿಂದ ನಮ್ಮ ದೇಹಕ್ಕೆ ಶ್ರಮದಾಯಕ ಕಾರ್ಯಗಳಿಗೆ ಒಗ್ಗಿಕೊಳ್ಳುವ ಕಲೆಯನ್ನು ಕಲಿಸಿಕೊಡಬೇಕಿದೆ ಎಂದು ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಹೇಳಿದರು. ಅವರು ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ವಾರ್ಷಿಕೋತ್ಸವ – ‘ಮಾನಸೋಲ್ಲಾಸ-2024’ ವನ್ನು ಬಪ್ಪಳಿಗೆಯ

ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ವಾರ್ಷಿಕೋತ್ಸವ – ಮಾನಸೋಲ್ಲಾಸ-2024 | ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯ ಕುಂಠಿತವಾಗುತ್ತಿದೆ : ಜಯಸೂರ್ಯ ರೈ Read More »

ಕೊಳ್ತಿಗೆ ರಬ್ಬರ್ ಬೆಳೆಗಾರರ ಸಂಘದ ಆಡಳಿತ ಮಂಡಳಿಗೆ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಸತೀಶ್‍ ಪಾಂಬಾರು, ಉಪಾಧ್ಯಕ್ಷರಾಗಿ ಸತ್ಯಾನಂದ ಭರಣಿಮಜಲು

ಪುತ್ತೂರು: ಕೊಳ್ತಿಗೆ ರಬ್ಬರ್ ಬೆಳೆಗಾರರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಸತೀಶ್‍ ಪಾಂಬಾರು, ಉಪಾಧ್ಯಕ್ಷರಾಗಿ ಸತ್ಯಾನಂದ ಭರಣಿಮಜಲು, ಖಜಾಂಜಿಯಾಗಿ ಮುರಳೀಕೃಷ್ಣ ಸಿದ್ದಮೂಲೆ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಬೆಳಿಯಪ್ಪ ಗೌಡ ಪಾದೆಕಲ್ಲು, ಶ್ರೀರಾಮ ಸಿದ್ಧಮೂಲೆ, ಜಯಪ್ರವೀಣ ಪಾಂಬಾರು, ಕೆ.ವಿ.ಅಶೋಕ್‍ ಆಯ್ಕೆಯಾಗಿದ್ದಾರೆ. ಧಜಂಜಯ ಪೂಜಾರಿ ಅವರ ಅವರ ಅಧ್ಯಕ್ಷತೆಯಲ್ಲಿ ನಡೆದ ಬೋರ್ಡ್ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಮಾಜಿ ಖಜಾಂಜಿ ಸೀತಾರಾಮ ಅಮಲ ಉಪಸ್ಥಿತರಿದ್ದರು.

ಕೊಳ್ತಿಗೆ ರಬ್ಬರ್ ಬೆಳೆಗಾರರ ಸಂಘದ ಆಡಳಿತ ಮಂಡಳಿಗೆ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಸತೀಶ್‍ ಪಾಂಬಾರು, ಉಪಾಧ್ಯಕ್ಷರಾಗಿ ಸತ್ಯಾನಂದ ಭರಣಿಮಜಲು Read More »

ತಮಗಾದ ಅನ್ಯಾಯದ ಕುರಿತು ಚೀಟಿಯಲ್ಲಿ ಬರೆದು ದೇವಸ್ಥಾನ ಹುಂಡಿಗೆ ಹಾಕಿದ ಮಹಿಳೆ | ದೇವಸ್ಥಾನದ ಹುಂಡಿಯಲ್ಲಿ ಚೀಟಿ ಪತ್ತೆ

ಪುತ್ತೂರು : ದೇವಸ್ಥಾನಕ್ಕೆ ತೆರಳಿ ದೇವರ ಎದುರು ಕೈ ಮುಗಿದು ನಿಂತು ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳುವುದು ಸರ್ವೇ ಸಾಮಾನ್ಯ. ಇಂತಹಾ ಕಷ್ಟಗಳನ್ನು  ಚೀಟಿ ಮೂಲಕ ಬರೆದು ದೇವರ ಹುಂಡಿಯಲ್ಲಿ ಹಾಕಿರುವುದು ಬೆಳಕಿಗೆ ಬಂದಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಕಾಣಿಕೆ ಹುಂಡಿಯಲ್ಲಿ ಮಹಿಳೆಯೊಬ್ಬರು ಬರೆದಿದ್ದಾರೆನ್ನಲಾದ ಚೀಟಿವೊಂದು ದೊರಕಿದ್ದು, ಚೀಟಿಯಲ್ಲಿ ತಮಗಾದ ಅನ್ಯಾಯದ ಕುರಿತು ಬರೆದಿರುವುದು ತಿಳಿದು ಬಂದಿದೆ. “ಸಮೀರ್ ಎಂಬಾತ ನನ್ನ ಜೀವನ ಹಾಳು ಮಾಡಿದ್ದಾನೆ. ಇಂದು ನಾನು ಮತ್ತು ನನ್ನ ಮಗಳು ಬೀದಿಯಲ್ಲಿ ಇದ್ದೇವೆ.

ತಮಗಾದ ಅನ್ಯಾಯದ ಕುರಿತು ಚೀಟಿಯಲ್ಲಿ ಬರೆದು ದೇವಸ್ಥಾನ ಹುಂಡಿಗೆ ಹಾಕಿದ ಮಹಿಳೆ | ದೇವಸ್ಥಾನದ ಹುಂಡಿಯಲ್ಲಿ ಚೀಟಿ ಪತ್ತೆ Read More »

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಿಂದ ಕುಳ ಗ್ರಾಮದ ಗ್ರಾಮಸ್ಥರಿಗೆ ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ, ಕರಪತ್ರ ಹಂಚಿಕೆ | ಗ್ರಾಮ ವಿಕಾಸ ಯೋಜನೆಯ ಮತ್ತೊಂದು ಮೈಲಿಗಲ್ಲು

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸ್ಕಿಲ್ ಫೊರ್ಜ್ ವಿದ್ಯಾರ್ಥಿ ಬಳಗ, ಐಇಇಇ ವಿದ್ಯಾರ್ಥಿ ವಿಭಾಗ ಮತ್ತು ಗ್ರಾಮ ವಿಕಾಸ ಯೋಜನೆ ವಿಸಿಇಟಿ ಸಂಯುಕ್ತ ಆಶ್ರಯದಲ್ಲಿ ಕುಳ ಗ್ರಾಮದ ಗ್ರಾಮಸ್ಥರಿಗೆ ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ ಹಂಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ತಜ್ಞ ವೈದ್ಯರಿಂದ ಮಾಹಿತಿಯನ್ನು ಪಡೆದ ಸುಮಾರು 35 ವಿದ್ಯಾರ್ಥಿಗಳ ತಂಡ ಉಪನ್ಯಾಸಕರು ಹಾಗೂ ಊರವರ ಸಹಕಾರದೊಂದಿಗೆ 170 ಕ್ಕೂ ಹೆಚ್ಚಿನ ಮನೆಗಳಿಗೆ ಭೇಟಿ ನೀಡಿ ಕರಪತ್ರ ಹಂಚಿ, ಸ್ತನ ಕ್ಯಾನ್ಸರ್ ಬಗ್ಗೆ

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಿಂದ ಕುಳ ಗ್ರಾಮದ ಗ್ರಾಮಸ್ಥರಿಗೆ ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ, ಕರಪತ್ರ ಹಂಚಿಕೆ | ಗ್ರಾಮ ವಿಕಾಸ ಯೋಜನೆಯ ಮತ್ತೊಂದು ಮೈಲಿಗಲ್ಲು Read More »

ಅಕ್ರಮ ಕೋಳಿ ಅಂಕಕ್ಕೆ ದಾಳಿ | ಐವರ ಬಂಧನ, ಕೋಳಿ, ನಗದು ವಶಕ್ಕೆ

ಪುತ್ತೂರು : ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಒಳಮೊಗ್ರು ಗ್ರಾಮದ ಕುಟೀನೋಪಿನಡ್ಕ ಎಂಬಲ್ಲಿನ ಗೇರುಬೀಜ ನೆಡುತೋಪು ಗುಡ್ಡದಲ್ಲಿ ಈ ಕೋಳಿ ಅಂಕ ನಡೆಯುತ್ತಿತ್ತು. ಖಚಿತ ಮಾಹಿತಿ ಹಿನ್ನಲೆಯಲ್ಲಿ  ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ, ಸಿಬ್ಬಂದಿಗಳು ದಾಳಿ ನಡೆಸಿ ಸ್ಥಳದಿಂದ ಕೋಳಿ ಅಂಕಕ್ಕೆ ಬಳಸಿದ 5 ಕೋಳಿ ಮತ್ತು 7710 ರೂ. ನಗದು ವಶಕ್ಕೆ ಪಡೆದು, ಐವರನ್ನು ಬಂಧಿಸಿದ್ದಾರೆ. ಠಾಣೆಯ ಪಿ.ಎಸ್.ಐ ಜಂಬೂರಾಜ್ ಮಹಾಜನ್, ಸಿಬ್ಬಂದಿಗಳಾದ

ಅಕ್ರಮ ಕೋಳಿ ಅಂಕಕ್ಕೆ ದಾಳಿ | ಐವರ ಬಂಧನ, ಕೋಳಿ, ನಗದು ವಶಕ್ಕೆ Read More »

ಶಾಂತಿಗೋಡು ನಿವಾಸಿ ವಿಜಯ ಗೌಡ ಪಾದೆ ನಿಧನ

ಪುತ್ತೂರು: ಶಾಂತಿಗೋಡು ಗ್ರಾಮದ ಪಾದೆ ನಿವಾಸಿ ವಿಜಯ ಗೌಡ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅನಾರೋಗ್ಯದಿಂದಿದ್ದ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನರಾದರು. ಮೃತರು ತಂದೆ ತಂದೆ ನಿವೃತ ಶಿಕ್ಷಕ ಮಾಧವ ಗೌಡ, ತಾಯಿ ಶೋಭಾ, ಪತ್ನಿ, ಸಹೋದರರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

ಶಾಂತಿಗೋಡು ನಿವಾಸಿ ವಿಜಯ ಗೌಡ ಪಾದೆ ನಿಧನ Read More »

error: Content is protected !!
Scroll to Top