ಪುತ್ತೂರು

ವಿದ್ಯಾರಶ್ಮಿಯಲ್ಲಿ 69ನೇ ಕನ್ನಡ ರಾಜ್ಯೋತ್ಸವ ಆಚರಣೆ

ಸವಣೂರು: ವಿದ್ಯಾರಶ್ಮಿ ವಿದ್ಯಾಲಯದಲ್ಲಿ 69ನೇ ಕನ್ನಡ ರಾಜ್ಯೋತ್ಸವವು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕರಾದ, ಸಹಕಾರ ರತ್ನ ಸವಣೂರು ಸೀತಾರಾಮ ರೈ ಅವರು ಕನ್ನಡ ಧ್ವಜಾರೋಹಣ ಮಾಡುವುದರೊಂದಿಗೆ ಅರ್ಥಪೂರ್ಣವಾಗಿ ನಡೆಯಿತು. ಬಳಿಕ ಮಾತನಾಡಿದ ಅವರು, ಕನ್ನಡ ಭಾಷೆಯ ಮಹತ್ತ್ವವನ್ನು ತಿಳಿಸಿ ಹೇಳಿ ಭಾಷಾಭಿಮಾನ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು. ವಿದ್ಯಾರ್ಥಿನಿಯರಾದ 10ನೇ ತರಗತಿಯ ಎಂ. ವೈಷ್ಣವಿ ಮತ್ತು ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಅವನಿ ಆರ್. ರೈ ಅವರು ಕನ್ನಡದ ಕುರಿತು ಮಾತನಾಡಿದರು. ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ […]

ವಿದ್ಯಾರಶ್ಮಿಯಲ್ಲಿ 69ನೇ ಕನ್ನಡ ರಾಜ್ಯೋತ್ಸವ ಆಚರಣೆ Read More »

ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಉಪ್ಪಿನಂಗಡಿ: ಮಹಿಳೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಣಾಲು ಗ್ರಾಮದ ಚಾಮೇತಮೂಲೆ ಎಂಬಲ್ಲಿ ನಡೆದಿದೆ. ಅಂಬೇಡ್ಕರ್ ಎಂಬವರ ಪತ್ನಿ ಸೀತಾ (47) ಎಂಬವರು  ಆತ್ಮಹತ್ಯೆ ಮಾಡಿಕೊಂಡವರು. ಕ್ಯಾನ್ಸರ್ ಪೀಡಿತರಾಗಿದ್ದ ಸೀತಾ ಅವರು ನಿರಂತರ ಚಿಕಿತ್ಸೆ ಪಡೆದರೂ ಗುಣಮುಖರಾಗದೆ ಇದ್ದ ಬಗ್ಗೆ ಮನನೊಂದು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ Read More »

ಜ.1 : ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ | ದಶಮಾನೋತ್ಸವ ಸಮಿತಿ ವತಿಯಿಂದ ಪೂರ್ವಸಿದ್ಧತಾ ಸಭೆ

ಪುತ್ತೂರು: ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಜ.1 ರಂದು ನಡೆಯಲಿರುವ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ದಶಮಾನೋತ್ಸವ ಸಂಭ್ರಮದ ಸಮಾರೋಪ ಸಮಾರಂಭದ ಪೂರ್ವ ಸಿದ್ಧತೆಯಾಗಿ ಟ್ರಸ್ಟ್ ಮತ್ತು ದಶಮಾನೋತ್ಸವ ಸಮಿತಿ ವತಿಯಿಂದ ಸಭೆ ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ನಡೆಯಿತು. ದಶಮಾನೋತ್ಸವ ಸಮಿತಿ ಅಧ್ಯಕ್ಷ ಪಟೇಲ್ ಗೋಪಾಲಕೃಷ್ಣ ಗೌಡ ಚಾರ್ವಾಕ ಮಾತನಾಡಿ, ಒಕ್ಕಲಿಗ ಸ್ವಸಹಾಯ ಸಂಘ ಕೇವಲ ಒಂದು ತಾಲೂಕು, ಜಿಲ್ಲೆ, ರಾಜ್ಯಕ್ಕೆ ಸೀಮಿತವಾಗಿಲ್ಲ. ಇಂದೊಂದು ರಾಷ್ಟ್ರ ಮಟ್ಟದ ಒಕ್ಕೂಟವಾಗಿದೆ.

ಜ.1 : ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ | ದಶಮಾನೋತ್ಸವ ಸಮಿತಿ ವತಿಯಿಂದ ಪೂರ್ವಸಿದ್ಧತಾ ಸಭೆ Read More »

ಅಳಕೆಮಜಲು ಶ್ರೀ ಶಾರದಾಂಭ ಭಜನಾ ಮಂಡಳಿ ನೂತನ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ಅಳಕೆಮಜಲು ಅಶೋಕ ನಗರ ಶ್ರೀ ಶಾರದಾಂಭ ಭಜನಾ ಮಂಡಳಿ ವಾರ್ಷಿಕ ಲೆಕ್ಕ ಪತ್ರ ಮಂಡನೆ ಹಾಗೂ ನೂತನ ಸಮಿತಿಯನ್ನು ಭಜನಾ ಮಂಡಳಿಯ ಅಧ್ಯಕ್ಷ ಜಗದೀಶ್ ಪೂಜಾರಿ, ಗೌರವ ಸಲಹೆಗಾರ ರಾಜಾರಾಮ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ನೇಮಿಸಲಾಯಿತು. ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ ಕೃಷ್ಣಕಿಶೋರ್ ಭಟ್ ಪೆಲತ್ತಿಂಜ, ಉಪಾಧ್ಯಕ್ಷರಾಗಿ ಉದಯ್ ಕುಲಾಲ್ ಪುಂಡಿಕಾಯಿ, ಪ್ರಧಾನ ಕಾರ್ಯದರ್ಶಿಯಾಗಿ ಸಂಜೀವ ಗೌಡ ಪೆಲತ್ತಿಂಜ ಜೊತೆ ಕಾರ್ಯದರ್ಶಿಯಾಗಿ ಪ್ರದೀಪ್ ಉರಿಮಜಲು, ಕೋಶಾಧಿಕಾರಿಯಾಗಿ ಸತೀಶ್ ನಾಯ್ಕ್ ಪುಂಡಿಕಾಯಿ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ

ಅಳಕೆಮಜಲು ಶ್ರೀ ಶಾರದಾಂಭ ಭಜನಾ ಮಂಡಳಿ ನೂತನ ಸಮಿತಿಗೆ ಪದಾಧಿಕಾರಿಗಳ ಆಯ್ಕೆ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ಐಒಟಿ ಮಾದರಿಗಳ ಪ್ರದರ್ಶನ ಕಾರ್ಯಕ್ರಮ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಗಣಕ ವಿಜ್ಞಾನ ವಿಭಾಗ, ಪಿನ್ಯಾಕಲ್‌ಐಟಿ ಕ್ಲಬ್‌ಹಾಗೂ ಐಐಸಿಗಳ ಸಂಯುಕ್ತ ಆಶ್ರಯದಲ್ಲಿ ಐಒಟಿ ಮಾದರಿಗಳ ಪ್ರದರ್ಶನವನ್ನು ಬುಧವಾರ ಆಯೋಜಿಸಲಾಯಿತು. ಕಾಲೇಜಿನ ಪ್ರಿನ್ಸಿಪಾಲ್ ವಂ.ಡಾ. ಆ್ಯಂಟನಿ ಪ್ರಕಾಶ್‌ಮೊಂತೇರೊ ಅಧ್ಯಕ್ಷತೆ ವಹಿಸಿ, ಸಾಧಿಸುವ ಛಲ ಹಾಗೂ ಒಳ್ಳೆಯ ಮನಸ್ಸಿದ್ದಲ್ಲಿ ಯಾವುದೇ ಕಾರ್ಯವೂ ಕಷ್ಟವೆಂದೆನಿಸುವುದಿಲ್ಲ. ಯಾವುದೇ ಪರಿಸ್ಥಿತಿಯ ಬಗ್ಗೆ ದೂರು ನೀಡಬೇಡಿ ಬದಲಿಗೆ ಪೂರಕವಾಗಿ ಯೋಚನೆ ಮಾಡಲು ಪ್ರಾರಂಭಿಸಿ. ಐಒಟಿ ಮಾದರಿಗಳ ಪ್ರದರ್ಶನವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದಕ್ಕಾಗಿ ಸಂಘಟಕರನ್ನು ಪ್ರಶಂಶಿಸಿದರು. ಕಾಲೇಜಿನ ಬಿಸಿಎ ವಿಭಾಗದ ವಿದ್ಯಾರ್ಥಿಗಳು ಹದಿನೈದಕ್ಕೂ ಹೆಚ್ಚಿನ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಐಒಟಿ ಮಾದರಿಗಳ ಪ್ರದರ್ಶನ ಕಾರ್ಯಕ್ರಮ Read More »

ನ.2 : ವಿಟ್ಲದ ಶಾಂತಿನಗರದಲ್ಲಿ ‘ಬ್ರಹ್ಮಶ್ರೀ ಶಾಮಿಯಾನ & ಸರ್ವಿಸಸ್‍’ ಶುಭಾರಂಭ

ವಿಟ್ಲ: ಬ್ರಹ್ಮಶ್ರೀ ಶಾಮಿಯಾನ & ಸರ್ವಿಸಸ್‍ ಸಂಸ್ಥೆ ನ.2 ಶನಿವಾರ ಬಂಟ್ವಾಳ ತಾಲೂಕಿನ ವಿಟ್ಲದ ಶಾಂತಿನಗರದಲ್ಲಿರುವ ನೂತನ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ. ಬೆಳಿಗ್ಗೆ 10.30 ಕ್ಕೆ ಗಣಪತಿ ಹವನ ಮತ್ತು ಲಕ್ಷ್ಮೀ ಪೂಜೆ. ಬಳಿಕ 11 ಗಂಟೆಗೆ ಸಂಸ್ಥೆ ಉದ್ಘಾಟನೆಗೊಳ್ಳಲಿದೆ. ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶಂಕರನಾರಾಯಣ ಭಟ್‍ ಪುಂಡಿಕಾಯಿ ಸಂಸ್ಥೆಯನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ವಿಟ್ಲ, ವಿಟ್ಲ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ,

ನ.2 : ವಿಟ್ಲದ ಶಾಂತಿನಗರದಲ್ಲಿ ‘ಬ್ರಹ್ಮಶ್ರೀ ಶಾಮಿಯಾನ & ಸರ್ವಿಸಸ್‍’ ಶುಭಾರಂಭ Read More »

ಕ್ರೀಡಾಕೂಟದಲ್ಲಿ ಮಣಿಕ್ಕರ ಸರಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ 

ಪುತ್ತೂರು: ನರಿಮೊಗರು ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ನಡೆದ ಪುತ್ತೂರು ಶೈಕ್ಷಣಿಕ ವಲಯದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ- ಬಾಲಕಿಯರ ತಾಲೂಕು ಮಟ್ಟದಲ್ಲಿ ಕ್ರೀಡಾಕೂಟದಲ್ಲಿ ಮಣಿಕ್ಕರ ಸರಕಾರಿ ಪ್ರೌಢಶಾಲೆಯ ಮೂರು ವಿದ್ಯಾರ್ಥಿಗಳು ಪ್ರಶಸ್ತಿ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಾದ  ನಿತಿನ್ ಪಿ 3000ಮೀ ಓಟದಲ್ಲಿ  ದ್ವಿತೀಯ ಹಾಗೂ 1500ಮೀ ಓಟದಲ್ಲಿ ತೃತಿಯ, ಮಹಮ್ಮದ್ ಐರಾಜ್ ಜಾವೇಲಿನ್ ತ್ರೋ ನಲ್ಲಿ ದ್ವಿತೀಯ, ಅನುಷ್ ಬಿ. ಸಿ. 400 ಮೀ ಓಟದಲ್ಲಿ ತೃತಿಯ ಸ್ಥಾನ ಪಡೆದುಕೊಂಡಿದ್ದಾರೆ. ನಿತಿನ್ ಮತ್ತು ಮಹಮ್ಮದ್ ಐರಾಜ್

ಕ್ರೀಡಾಕೂಟದಲ್ಲಿ ಮಣಿಕ್ಕರ ಸರಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ  Read More »

ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ

ಪುತ್ತೂರು: 2024-25 ಸಾಲಿನ ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರ ಪಟ್ಟಿ ಬಿಡುಗಡೆಗೊಂಡಿದೆ. ವಿವರ ಈ ಕೆಳಗಿನಂತಿದೆ ಡಾ. ತಾಳ್ತಾಜೆ ವಸಂತ ಕುಮಾರ  (ಸಾಹಿತ್ಯ ಕ್ಷೇತ್ರ ), ರಾಧಾಕೃಷ್ಣ ಶೆಟ್ಟಿ (ಪಿಲಿ ರಾಧಾ ) .( ಜಾನಪದ/ ಕಲಾ ಕ್ಷೇತ್ರ ), ವೇದಾವತಿ. ಎ ( ಕ್ರೀಡಾಕ್ಷೇತ್ರ ), ಅಬ್ದುಲ್ ರಜಾಕ್ ಬಪ್ಪಳಿಗೆ ( ಸಮಾಜ ಸೇವೆ ), ತಿಮ್ಮಪ್ಪ ಪೂಜಾರಿ( ರಂಗಭೂಮಿ/ ಸಾಹಿತ್ಯ ), ಕೇಶವ ಮಚ್ಚಿ ಮಲೆ (ರಂಗಭೂಮಿ / ನಾಟಕ), ಡಾ.

ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ Read More »

ಯೂನಿಯನ್ ಬ್ಯಾಂಕ್‍ ಪೆರ್ಲಂಪಾಡಿಶಾಖಾ ಮುಖ್ಯ ಕ್ಯಾಶಿಯರ್ ಸುಬ್ಬಪ್ಪ ಪಾಟಾಳಿ ವಯೋನಿವೃತ್ತಿ | ಪೆರ್ಲಂಪಾಡಿ ಹಿರಿಯ ನಾಗರಿಕರಿಂದ ಬೀಳ್ಕೊಡುಗೆ

ಪುತ್ತೂರು: ಯೂನಿಯನ್ ಬ್ಯಾಂಕ್‍ ಪೆರ್ಲಂಪಾಡಿ ಶಾಖೆಯಲ್ಲಿ ಮುಖ್ಯ ಕ್ಯಾಶಿಯರ್ ಆಗಿದ್ದ ಸುಬ್ಬಪ್ಪ ಪಾಟಾಳಿ ವಯೋ ನಿವೃತ್ತಿ ಹೊಂದಿದ್ದು, ಅವರಿಗೆ ಪೆರ್ಲಂಪಾಡಿ ಹಿರಿಯ ನಾಗರಿಕರಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಪೆರ್ಲಂಪಾಡಿ ನಾಗರಿಕರು ಸುಬ್ಬಪ್ಪ ಪಾಟಾಳಿಯವರಿಗೆ ಹಾರ ಹಾಕಿ, ಸ್ಮರಣಿಕೆ, ಫಲಪುಷ್ಪ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಕಟ್ಟಡ ಮಾಲಕರಾದ ಶಿವರಾಮ ಭಟ್ಟ ಬಿರ್ಣಕಜೆ, ಬ್ಯಾಂಕ್‍ ಪ್ರಬಂಧಕ ಅಪ್ಪಯ್ಯ ಕೆ.ಸಿ., ಸುಬ್ಬಪ್ಪ ಪಾಟಾಳಿಯವರ ತಾಯಿ ಗಿರಿಜ, ಸಿ.ಎ. ಬ್ಯಾಂಕ್‍ ಕಾರ್ಯನಿರ್ವಹಣಾಧಿಕಾರಿ ಗಿರಿಜ ಕೆ. ಉಪಸ್ಥಿತರಿದ್ದರು. ಸತೀಶ್‍ ಪಾಂಬಾರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಯೂನಿಯನ್ ಬ್ಯಾಂಕ್‍ ಪೆರ್ಲಂಪಾಡಿಶಾಖಾ ಮುಖ್ಯ ಕ್ಯಾಶಿಯರ್ ಸುಬ್ಬಪ್ಪ ಪಾಟಾಳಿ ವಯೋನಿವೃತ್ತಿ | ಪೆರ್ಲಂಪಾಡಿ ಹಿರಿಯ ನಾಗರಿಕರಿಂದ ಬೀಳ್ಕೊಡುಗೆ Read More »

ಅಮ್ಚಿನಡ್ಕ ಮುಖಾರಿಮೂಲೆಗೆ ಬಂದ ಆನೆಗಳಿಂದ ಕೃಷಿ ನಾಶ | ಅರಣ್ಯ ಇಲಾಖೆ ತಕ್ಷಣ ಸ್ಪಂದಿಸುವಂತೆ ಆಗ್ರಹ

ಪುತ್ತೂರು: ಆಣಿಗುಂಡಿ ರಕ್ಷಿತಾರಣ್ಯ ಕಾಡಿನಿಂದ ಪೆರ್ನಾಜೆ ಮುಖಾಂತರವಾಗಿ ಅಮ್ಚಿನಡ್ಕ ಮುಖಾರಿಮೂಲೆಗೆ ಬಂದ ಆನೆಗಳು ಕೃಷಿ ತೋಟಕ್ಕೆ ನುಗ್ಗಿ ಹಾನಿ ಮಾಡಿದ ಘಟನೆ ನಡೆದಿದೆ. ಮುಖಾರಿಮೂಲೆಯ ಅಬ್ದುಲ್ಲಾ ರಝಾಕ್‌ ಮತ್ತು ಶರತ್‌ ಕುಮಾರ್‌ ರೈ ಯವರ ತೋಟಕ್ಕೆ ನುಗ್ಗಿ ಕೃಷಿಗೆ ಹಾನಿಗೀಡು ಮಾಡಿದೆ. ಪರಿಣಾಮ ಸ್ಥಳೀಯರು ಆತಂಕಗೊಂಡಿದ್ದು, ಅರಣ್ಯ ಇಲಾಖೆ ಇನ್ನೂ ಸ್ಪಂದಿಸುತ್ತಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ. ವಾರದ ಹಿಂದೆ ಅಮ್ಚಿನಡ್ಕ ಮಳಿ ಪೆರ್ನಾಜೆ ಸಮೀಪ ನೂಜಿ ಬೈಲು ಮುಖಾರಿ ಮೂಲೆ ಬಾಲಕೃಷ್ಣ ಆಚಾರ್ಯ, ನಾರಾಯಣ ಆಚಾರ್ಯ, ಚಂದ್ರಯ್ಯ

ಅಮ್ಚಿನಡ್ಕ ಮುಖಾರಿಮೂಲೆಗೆ ಬಂದ ಆನೆಗಳಿಂದ ಕೃಷಿ ನಾಶ | ಅರಣ್ಯ ಇಲಾಖೆ ತಕ್ಷಣ ಸ್ಪಂದಿಸುವಂತೆ ಆಗ್ರಹ Read More »

error: Content is protected !!
Scroll to Top