ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ “ಅಮೇರಿಕಾ ಚುನಾವಣಾ ಫಲಿತಾಂಶದ ವಿಶ್ಲೇಷಣಾ ಕಾರ್ಯಕ್ರಮ” | ಅಮೇರಿಕಾ ವಿಭಿನ್ನ ಮನಸ್ಥಿತಿಯ ದೇಶವಾಗಿದೆ: ವಿಶ್ವೇಶ್ವರ ಭಟ್ ಬಂಗಾರಡ್ಕ
ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಚರ್ಚಾ ಕೂಟದ ಆಶ್ರಯದಲ್ಲಿ ‘ಅಮೇರಿಕಾ ಚುನಾವಣಾ ಫಲಿತಾಂಶದ ವಿಶ್ಲೇಷಣಾ’ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ರಾಜಕೀಯ ವಿಶ್ಲೇಷಕ, ವಿವೇಕಾನಂದ ಪಾಲಿಟೆಕ್ಣಿಕ್ ನ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕ ಅವರು, ಅಮೇರಿಕಾವು ವಿಭಿನ್ನ ಮನಸ್ಥಿತಿಯ ದೇಶವಾಗಿದೆ. ಅಲ್ಲಿಯೂ ಭಾರತದಲ್ಲಿ ಇರುವಂತಹ ಹಲವಾರು ಸಾಮಾಜಿಕ ಸಮಸ್ಯೆಗಳಿವೆ. ಅಮೇರಿಕಾದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಿತಿಗತಿಗಳನ್ನು ವಿವರಿಸಿ, ಅಲ್ಲಿನ ಸಮಸ್ಯೆಗಳನ್ನು ಭಾರತಿಯ ಸಮಾಜದ ಜೊತೆಗೆ ಹೋಲಿಕೆ […]










