ಪುತ್ತೂರು

ಅಳಕೆಮಜಲು ಶಾಲೆಗೆ ಡೆಸ್ಕ್, ಬೆಂಚು ಹಸ್ತಾಂತರ

ಮಾಣಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ವಿಟ್ಲ, ಮಾಣಿ ವಲಯದ ಅಳಕೆ ಮಜಲು ಕಿರಿಯ ಪ್ರಾಥಮಿಕ ಶಾಲೆಗೆ  ಸಮುದಾಯ ಅಭಿವೃದ್ಧಿ ಜ್ಞಾನದೀಪ  ಕಾರ್ಯಕ್ರಮದಿಂದ ಡೆಸ್ಕ್, ಬೆಂಚು ವಿತರಣೆ ಮಾಡಲಾಯಿತು. ಮಾಣಿ ವಲಯ ಅಳಕೆ ಮಜಲು ಸೇವಾ ಪ್ರತಿನಿಧಿ ಸುಗಂಧಿನಿ, ಒಕ್ಕೂಟ ಅದ್ಯಕ್ಷರಾದ ಚಂದ್ರಹಾಸ, ಮತ್ತು ಶೌರ್ಯ ಸದಸ್ಯರು ಮುಖ್ಯ ಶಿಕ್ಷಕ ಇಸ್ಮಾಯಿಲ್‍ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಹ ಶಿಕ್ಷಕರು, ಎಸ್‍ಡಿಎಂಸಿ ಅದ್ಯಕ್ಷ ತಿರುಮಲೇಶ್ವರ, ಉಪಾಧ್ಯಕ್ಷೆ ರೂಪ ಕಿಶೋರ್, ಎಸ್‍ ಡಿಎಂಸಿ ಸದಸ್ಯರು, ಪಂಚಾಯತ್ ಉಪದ್ಯಕ್ಷ […]

ಅಳಕೆಮಜಲು ಶಾಲೆಗೆ ಡೆಸ್ಕ್, ಬೆಂಚು ಹಸ್ತಾಂತರ Read More »

ಪುತ್ತೂರು ತಾಲೂಕು ಸರಕಾರಿ ನೌಕರರ ಸಹಕಾರಿ ಸಂಘ ಉದ್ಘಾಟನೆ | ಸರಕಾರಿ ನೌಕರರ ಸಂಘದ ನೂತನ ಪದಾಧಿಕಾರಿ, ನಿರ್ದೇಶಕರ ಪದಗ್ರಹಣ

ಪುತ್ತೂರು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಇದರ ಪುತ್ತೂರು ತಾಲೂಕ ಶಾಖೆಯ ನೇತೃತ್ವದಲ್ಲಿ ನೂತನವಾಗಿ ಪ್ರಾರಂಭಿಸಲಾದ ಪುತ್ತೂರು ತಾಲೂಕು ಸರಕಾರಿ ನೌಕರರ ಸಹಕಾರಿ ಸಂಘದ ಉದ್ಘಾಟನೆ ಹಾಗೂ ಸರಕಾರಿ ನೌಕರರ ಸಂಘದ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಿನಿ ವಿಧಾನ ಸೌಧದ ಬಳಿಯ ಸರಕಾರಿ ನೌಕರರ ಕಟ್ಟಡದಲ್ಲಿ ನಡೆಯಿತು. ಸಹಕಾರಿ ಸಂಘದ ಕಛೇರಿಯನ್ನು ಉದ್ಘಾಟಿಸಿದ ಸವಣೂರು ವಿದ್ಯಾರಶ್ಮೀ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ, ಸಹಕಾರಿ ರತ್ನ ಸವಣೂರು ಸೀತಾರಾಮ ರೈ

ಪುತ್ತೂರು ತಾಲೂಕು ಸರಕಾರಿ ನೌಕರರ ಸಹಕಾರಿ ಸಂಘ ಉದ್ಘಾಟನೆ | ಸರಕಾರಿ ನೌಕರರ ಸಂಘದ ನೂತನ ಪದಾಧಿಕಾರಿ, ನಿರ್ದೇಶಕರ ಪದಗ್ರಹಣ Read More »

ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವದ ಸವಿನೆನಪಿಗಾಗಿ “ದಶಸ್ಮೃತಿ’ ಸ್ಮರಣ ಸಂಚಿಕೆ ಲೋಕಾರ್ಪಣೆ | ಸಂಚಿಕೆ ಲೋಕಾರ್ಪಣೆಗೊಳಿಸಿದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ | ಚಲನಚಿತ್ರ ನಟ-ನಟಿಯರ ತಾರಾ ಮೆರುಗು

ಪುತ್ತೂರು: ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವದ ಸವಿನೆನಪಿಗಾಗಿ ‘ದಶಸ್ಮೃತಿ’ ಸ್ಮರಣ ಸಂಚಿಕೆ ಬಿಡುಗಡೆ ಶನಿವಾರ ತೆಂಕಿಲ ಒಕ್ಕಲಿಗ ಸಮುದಾಯ ಭವನದಲ್ಲಿ ನಡೆದ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಂಭ್ರಮದಲ್ಲಿ ನಡೆಯಿತು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ರಿಮೋಟ್ ಒತ್ತುವ ಮೂಲಕ ‘ದಶಸ್ಮೃತಿ’ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಮಾಜಿ ಶಾಸಕ ಸಂಜೀವ ಮಠಂದೂರು, ರಾಜ್ಯ ಒಕ್ಕಲಿಗ ಮಹಿಳಾ

ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವದ ಸವಿನೆನಪಿಗಾಗಿ “ದಶಸ್ಮೃತಿ’ ಸ್ಮರಣ ಸಂಚಿಕೆ ಲೋಕಾರ್ಪಣೆ | ಸಂಚಿಕೆ ಲೋಕಾರ್ಪಣೆಗೊಳಿಸಿದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ | ಚಲನಚಿತ್ರ ನಟ-ನಟಿಯರ ತಾರಾ ಮೆರುಗು Read More »

ಮಹಿಳೆಗೆ ಮಾನಸಿಕ, ದೈಹಿಕ ಹಿಂಸೆ | ಪತಿ, ಅತ್ತೆ ಮಾವ ಸಹಿತ ಐವರ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

ವಿಟ್ಲ: ಪತಿಯ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ ವಿಚಾರದಲ್ಲಿ ಪತಿ, ಮಾವ, ಅತ್ತೆ ಸಹಿತ ಐದು ಮಂದಿಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾಗಿದೆ. ದೈಹಿಕ ಹಲ್ಲೆಯಿಂದ ಗಾಯಗೊಂಡ ಮಹಿಳೆ ಮಂಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನೀರ್ಕಜೆ ನಿವಾಸಿಗಳಾದ ಪತಿ ದಿನೇಶ್ ಕುಮಾರ್, ಅತ್ತೆ ಸುಂದರಿ, ಮಾವ ಬಾಬು ಮೂಲ್ಯ, ಜಯಪ್ರಕಾಶ್, ಮಂಜುಳಾ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. 2023ರಲ್ಲಿ ವಿವಾಹ ನಡೆದಿದ್ದು, ತಿಂಗಳ ಕಾಲ

ಮಹಿಳೆಗೆ ಮಾನಸಿಕ, ದೈಹಿಕ ಹಿಂಸೆ | ಪತಿ, ಅತ್ತೆ ಮಾವ ಸಹಿತ ಐವರ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು Read More »

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ಕೇಪುಳೇಶ್ವರ ದೇವಸ್ಥಾನದಲ್ಲಿ ನೂತನ ಗರ್ಭಗುಡಿಯ ಇಷ್ಟಕಾನ್ಯಾಸ, ಗರ್ಭನ್ಯಾಸ, ನಿಧಿ ಸಮರ್ಪಣೆ | ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರಿಂದ ಆಶೀರ್ವಚನ

ಕಾಣಿಯೂರು:  ಧಾರ್ಮಿಕ ಕಾರ್ಯಕ್ರಮಗಳಲ್ಲಿ ಊರಿನ ಜನತೆ ಸಮರ್ಪಣ ಭಾವದಿಂದ ಹೆಚ್ಚು ಭಾಗವಹಿಸುವುದರಿಂದ ಆ ಊರಿನಲ್ಲಿ ನಮ್ಮ ಸಂಸ್ಕೃತಿ ಉಳಿಯುವುದರ ಜೊತೆಗೆ ಸಾಮರಸ್ಯದಿಂದ ಜೀವನ ಮಾಡಲು ಸಾಧ್ಯವಿದೆ ಎಂದು ಶ್ರೀ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನಂ ಶ್ರೀ ಕಾಣಿಯೂರು ರಾಮ ತೀರ್ಥ ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ನುಡಿದರು. ಅವರು ಕಡಬ ತಾಲೂಕಿನ ಕುದ್ಮಾರು ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ಕೇಪುಳೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ದಾರದ ಪ್ರಯುಕ್ತ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ಕೇಪುಳೇಶ್ವರ ದೇವಸ್ಥಾನದಲ್ಲಿ ನೂತನ ಗರ್ಭಗುಡಿಯ ಇಷ್ಟಕಾನ್ಯಾಸ, ಗರ್ಭನ್ಯಾಸ, ನಿಧಿ ಸಮರ್ಪಣೆ | ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರಿಂದ ಆಶೀರ್ವಚನ Read More »

ಡಾ.  ಅನುರಾಧಾ ಕುರುಂಜಿಯವರಿಗೆ “ಚೈತನ್ಯ ಶ್ರೀ- 2024” ಪ್ರಶಸ್ತಿ ಪ್ರದಾನ | ನಟಿ ಉಮಾಶ್ರೀಯವರಿಂದ ಪ್ರಶಸ್ತಿ ಪ್ರದಾನ | ಪ್ರಥಮ ಬಾರಿಗೆ ಕೊಡ ಮಾಡಿದ  ಪ್ರಶಸ್ತಿಯನ್ನು ಸ್ವೀಕರಿಸಿದ ದ.ಕ ಜಿಲ್ಲೆಯ ಪ್ರಥಮ ಮಹಿಳಾ ಸಾಧಕಿ

ಸುಳ್ಯ: ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತ್ ನವರು ಪ್ರಥಮ ಬಾರಿಗೆ  ಕೊಡಮಾಡಿದ ಪ್ರತಿಷ್ಠಿತ  “ಚೈತನ್ಯ ಶ್ರೀ- 2024” ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಯಲಹಂಕದ ವಿ ಜೆ ಇಂಟರ್ ನ್ಯಾಷನಲ್ ಶಾಲಾ ಮೈದಾನದಲ್ಲಿ ಜ. 3 ಮತ್ತು 4 ರಂದು ನಡೆದ ರಾಜ್ಯ ಮಟ್ಟದ ನಾಲ್ಕನೇ ಬೃಹತ್ ವೈಜ್ಞಾನಿಕ ಸಮ್ಮೇಳನದಲ್ಲಿ ನಡೆಯಿತು. ಈ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ  ಪ್ರಥಮ ಬಾರಿಗೆ ಭಾಜನರಾದ ಸುಳ್ಯದ ಬಹುಮುಖ ಸಾಧಕಿ ಡಾ. ಅನುರಾಧಾ ಕುರುಂಜಿಯವರಿಗೆ ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ನಟಿ

ಡಾ.  ಅನುರಾಧಾ ಕುರುಂಜಿಯವರಿಗೆ “ಚೈತನ್ಯ ಶ್ರೀ- 2024” ಪ್ರಶಸ್ತಿ ಪ್ರದಾನ | ನಟಿ ಉಮಾಶ್ರೀಯವರಿಂದ ಪ್ರಶಸ್ತಿ ಪ್ರದಾನ | ಪ್ರಥಮ ಬಾರಿಗೆ ಕೊಡ ಮಾಡಿದ  ಪ್ರಶಸ್ತಿಯನ್ನು ಸ್ವೀಕರಿಸಿದ ದ.ಕ ಜಿಲ್ಲೆಯ ಪ್ರಥಮ ಮಹಿಳಾ ಸಾಧಕಿ Read More »

ಕಿರುತೆರೆ ನಟಿ ಹಂಸ ಗೌಡ ಕುತ್ತಾರು ಶ್ರೀ ಕೊರಗಜ್ಜ ದೈವಸ್ಥಾನಕ್ಕೆ ಭೇಟಿ

ಪುತ್ತೂರು: ಚಲನಚಿತ್ರ  ಹಾಗು ಕಿರುತೆರೆಯ ನಟಿ, ಬಿಗ್ ಬಾಸ್ ಖ್ಯಾತಿಯ ಹಂಸ ಗೌಡ ಕಾರಣಿಕ ಕ್ಷೇತ್ರವಾದ ಕುತ್ತಾರು ಶ್ರೀ ಆದಿಸ್ಥಳ ಕೊರಗಜ್ಜ ದೈವಸ್ಥಾನಕ್ಕೆ ಇಂದು ಬೆಳಿಗ್ಗೆ ಭೇಟಿ ನೀಡಿರು. ಈ ಸಂದರ್ಭದಲ್ಲಿ ಶ್ರೀ ದೈವದ ದರ್ಶನ ಪಡೆದರು ಅವರೊಂದಿಗೆ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಎ.ವಿ ನಾರಾಯಣ್, ನಟಿಯ ತಂದೆ ನಾರಾಯಣಸ್ವಾಮಿ, ನಿರೂಪಕ ಉಜಿತ್ ಶ್ಯಾಮ್ ಚಿಕ್ಮುಳಿ, ಜನನಿ ಗೌಡ, ದಯಾನಂದ ಗೌಡ ದೇವಶ್ಯ ಉಪಸ್ಥಿತರಿದ್ದರು

ಕಿರುತೆರೆ ನಟಿ ಹಂಸ ಗೌಡ ಕುತ್ತಾರು ಶ್ರೀ ಕೊರಗಜ್ಜ ದೈವಸ್ಥಾನಕ್ಕೆ ಭೇಟಿ Read More »

ಉಡುಪಿ : ನೇಣಿಗೆ ಶರಣಾಗಿ ವ್ಯಕ್ತಿ ಆತ್ಮಹತ್ಯೆ

ಉಡುಪಿ : ವ್ಯಕ್ತಿಯೋರ್ವರು ತಮ್ಮ ನಿವಾಸದ ಹೊರಗೆ ನೇಣಿಗೆ ಶರಣಾಗಿ ಆತ್ಮ ಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಕೊರಂಗ್ರಪಾಡಿಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ವಸಂತ ಕೋಟ್ಯಾನ್ (59) ಎಂದು ಗುರುತಿಸಲಾಗಿದೆ. ಒಂಟಿ ಜೀವನ ಜೀವನ ಸಾಗಿಸುತ್ತಿದ್ದ ಇವರು ಅಡುಗೆ ವ್ಯಾಪಾರ ನಡೆಸುತ್ತಿದ್ದರು. ಮಾನಸಿಕ ಚಿಂತನೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ  ಶಂಕೆ ವ್ಯಕ್ತವಾಗಿದೆ. ಮೃತರು ಬಿಟ್ಟು ಹೋಗಿದ್ದರು ಎನ್ನಲಾದ ನೋಟನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಪಿಎಸ್‌ಐ ಪುನೀತ್‌ಕುಮಾ‌ರ್, ತನಿಖಾ ಸಹಾಯಕಿ ನೇತ್ರಾವತಿ ಕಾನೂನು ಕ್ರಮಕೈಗೊಂಡಿದ್ದಾರೆ. ಸಾಮಾಜಿಕ

ಉಡುಪಿ : ನೇಣಿಗೆ ಶರಣಾಗಿ ವ್ಯಕ್ತಿ ಆತ್ಮಹತ್ಯೆ Read More »

ಸಂಘಟನೆಗಳು ಬೆಳೆಯಲು ಆರ್ಥಿಕದ ಜೊತೆಗೆ ಭೌತಿಕವಾಗಿ ತನ್ನನ್ನು ತೊಡಗಿಸಿಕೊಳ್ಳಬೇಕು : ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ | ಸಮಾಜಮುಖಿ ಚಿಂತನೆ ಇದ್ದಾಗ ಸಮಾಜ ಬೆಳೆಯಲು ಸಾಧ್ಯ : ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ | ಪ್ರತಿಯೊಂದು ಮನೆಯಲ್ಲೂ ಕೆಂಪೇಗೌಡರು ಹುಟ್ಟಬೇಕು : ಡಾ.ಶಾಂತಾ ಸುರೇಂದ್ರ | ಗುರು, ಗುರಿಯಲ್ಲಿ ಸ್ಪಷ್ಟತೆಯಿದ್ದಾಗ ಸಮಾಜಕ್ಕೆ ಸಂದೇಶ ನೀಡಬಲ್ಲದು : ಸಂಜೀವ ಮಠಂದೂರು | ಸಂಭ್ರಮದಿಂದ ನಡೆದ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವ ಸಂಭ್ರಮ | ಒಕ್ಕಲಿಗ ಸ್ವಸಹಾಯ ಟ್ರಸ್ಟ್‍ ನ ನೂತನ ಸಭಾಭವನ ಉದ್ಘಾಟನೆ

ಪುತ್ತೂರು : ಯಾವುದೇ ಸಮುದಾಯದಲ್ಲೂ ಕೇವಲ ಸಂಘ ಸಂಸ್ಥೆಗಳಿದ್ದರೆ ಸಾಲದು. ಬದಲಾಗಿ ಸಂಘ ಸಂಸ್ಥೆಗಳಲ್ಲಿರುವವರು ಭೌತಿಕ ಹಾಗೂ ಆರ್ಥಿಕವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ಈ ಮೂಲಕ ದೇಶವನ್ನು ಕಟ್ಟಿ ತಾನೂ ಬೆಳೆಯಬೇಕು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ನುಡಿದರು. ಒಕ್ಕಲಿಗ ಗೌಡ ಸೇವಾ ಸಂಘ, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಆಶ್ರಯದಲ್ಲಿ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಶನಿವಾರ ನಡೆದ ಒಕ್ಕಲಿಗ ಸ್ವಸಹಾಯ ಸಂಘದ ದಶಮಾನೋತ್ಸವ ಸಂಭ್ರಮ ಹಾಗೂ ಒಕ್ಕಲಿಗ

ಸಂಘಟನೆಗಳು ಬೆಳೆಯಲು ಆರ್ಥಿಕದ ಜೊತೆಗೆ ಭೌತಿಕವಾಗಿ ತನ್ನನ್ನು ತೊಡಗಿಸಿಕೊಳ್ಳಬೇಕು : ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ | ಸಮಾಜಮುಖಿ ಚಿಂತನೆ ಇದ್ದಾಗ ಸಮಾಜ ಬೆಳೆಯಲು ಸಾಧ್ಯ : ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ | ಪ್ರತಿಯೊಂದು ಮನೆಯಲ್ಲೂ ಕೆಂಪೇಗೌಡರು ಹುಟ್ಟಬೇಕು : ಡಾ.ಶಾಂತಾ ಸುರೇಂದ್ರ | ಗುರು, ಗುರಿಯಲ್ಲಿ ಸ್ಪಷ್ಟತೆಯಿದ್ದಾಗ ಸಮಾಜಕ್ಕೆ ಸಂದೇಶ ನೀಡಬಲ್ಲದು : ಸಂಜೀವ ಮಠಂದೂರು | ಸಂಭ್ರಮದಿಂದ ನಡೆದ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವ ಸಂಭ್ರಮ | ಒಕ್ಕಲಿಗ ಸ್ವಸಹಾಯ ಟ್ರಸ್ಟ್‍ ನ ನೂತನ ಸಭಾಭವನ ಉದ್ಘಾಟನೆ Read More »

ಮುಂಡೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ನಿಧನ

ಮುಂಡೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಕುರೆಮಜಲು (55) ನಿಧನ ಹೊಂದಿದರು. ಸಂಜೀವ ಪೂಜಾರಿ ಅವರು ಮುಂಡೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿ, ಕುಕ್ಕಿನಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾಗಿ, ಮೃತ್ಯುಂಜೇಶ್ವರ ದೇವಸ್ಥಾನದ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ಕಾಂಗ್ರೆಸ್ ನ ಸಕ್ರಿಯ ಕಾರ್ಯಕರ್ತರಾಗಿದ್ದರು. ಮೃತರು ಪತ್ನಿ ಮತ್ತು ಮೂರು ಮಕ್ಕಳನ್ನು ಅಗಲಿದ್ದಾರೆ.

ಮುಂಡೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ನಿಧನ Read More »

error: Content is protected !!
Scroll to Top