ಪುತ್ತೂರು

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮರಥೋತ್ಸವ | ಪುನೀತರಾದ ಲಕ್ಷಾಂತರ ಭಕ್ತರು

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮರಥೋತ್ಸವ ಲಕ್ಷಾಂತರ ಭಕ್ತ ಜಯಘೋಷಗಳೊಂದಿಗೆ ಗುರುವಾರ ರಾತ್ರಿ ನಡೆಯಿತು. ಸಂಜೆ ಶ್ರಿ ದೇವಸ್ಥಾನದ ಒಳ ಹಾಗೂ ಹೊರಾಂಗಣದಲ್ಲಿ ಶ್ರೀ ದೇವರ ಬಲಿ ಉತ್ಸವ ನಡೆದು ಬಳಿಕ ಶ್ರೀ ದೇವರು ರಥಬೀದಿಗೆ ಬಂದು, ಬಳಿಕ ಶ್ರೀ ಮಹಾಲಿಂಗೇಶ್ವರ ದೇವರು ರಥಾರೋಢರಾದರು. ಬಳಿಕ ಸಿಡಿಮದ್ದು ಪ್ರದರ್ಶನ ಪ್ರಾರಂಭಗೊಂಡು ಸುಮಾರು ಒಂದು ಗಂಟೆಗಳ ಕಾಲ ಸಿಡಿಮದ್ದು ಪ್ರದರ್ಶನ ಬಾನೆತ್ತರದಲ್ಲಿ ಬೆಳಕಿನ ಚಿತ್ತಾರವನ್ನೇ ಮೂಡಿಸಿತು. ಇದನ್ನು ವೀಕ್ಷಿಸಿದ ಲಕ್ಷಾಂತರ ಭಕ್ತರು ಹರ್ಷೋದ್ದಾರವಾದರು. […]

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮರಥೋತ್ಸವ | ಪುನೀತರಾದ ಲಕ್ಷಾಂತರ ಭಕ್ತರು Read More »

ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಸರ್ಕಾರವೇ ಪ್ರತಿಭಟನೆಗೆ ಬೆಂಬಲಿಸ್ತಿದೆ | ಪುತ್ತೂರು ಶಾಸಕರ ವಕ್ಫ್ ಪರ ಹೇಳಿಕೆ ಖಂಡನೀಯ : ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ವಕ್ಫ್  ಕಾಯ್ದೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಯುವ ಅಡ್ಯಾರು ಪ್ರದೇಶದಲ್ಲಿ ಹಿಂದೂ ಧಾರ್ಮಿಕ ನೇಮೋತ್ಸವಕ್ಕೆ ಹಾಕಲಾದ ಪತಾಕೆ ಬಂಟಿಂಗ್ ಗಳನ್ನು ತೆಗೆಯುವ ಪೊಲೀಸರ ಆದೇಶಕ್ಕೆ ಮತ್ತು ಪುತ್ತೂರು ಶಾಸಕರಿಂದ ವಕ್ಫ್ ಪರ ಹೇಳಿಕೆಗೆ ಅರುಣ್ ಕುಮಾರ್ ಪುತ್ತಿಲ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎ.18ರಂದು ಮಂಗಳೂರಿನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದಂತಾಗಿದೆ. ವಕ್ಫ್ ಪ್ರತಿಭಟನೆ ನೆಪದಲ್ಲಿ ನೇಮೋತ್ಸವಕ್ಕೆ ಹಾಕಿದ ಕೇಸರಿ ಧ್ವಜ, ಬಂಟಿಂಗ್ ಯಾಕೆ ತೆಗೆಯಲಾಗುತ್ತಿದೆ. ಇಂತಹ ನೀಚ ಕ್ರಮವನ್ನು ತಕ್ಷಣ ನಿಲ್ಲಿಸಬೇಕು. ಸರ್ಕಾರಿ ಪ್ರಾಯೋಜಿತ ವಕ್ಫ್

ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಸರ್ಕಾರವೇ ಪ್ರತಿಭಟನೆಗೆ ಬೆಂಬಲಿಸ್ತಿದೆ | ಪುತ್ತೂರು ಶಾಸಕರ ವಕ್ಫ್ ಪರ ಹೇಳಿಕೆ ಖಂಡನೀಯ : ಅರುಣ್ ಕುಮಾರ್ ಪುತ್ತಿಲ Read More »

9 ನೇ ವಾರಕ್ಕೆ ಕಾಲಿರಿಸಿದ ಭಾವ ತೀರ ಯಾನ | ನಾಳೆ ಬೆಳಗ್ಗೆ 11-00 ಗಂಟೆಗೆ ಶೋ

ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು  9ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನಾಳೆ ಏ.18 ಶುಕ್ರವಾರದಂದು ಬೆಳಗ್ಗೆ 11:00 ಗಂಟೆಗೆ ಚಿತ್ರ ಪ್ರದರ್ಶನಗೊಳ್ಳಲಿದೆ

9 ನೇ ವಾರಕ್ಕೆ ಕಾಲಿರಿಸಿದ ಭಾವ ತೀರ ಯಾನ | ನಾಳೆ ಬೆಳಗ್ಗೆ 11-00 ಗಂಟೆಗೆ ಶೋ Read More »

ಏ.24 : ಪುತ್ತೂರು ತಾಲೂಕು ಕಛೇರಿಯಲ್ಲಿ ಲೋಕಾಯುಕ್ತ ಜನ ಸಂಪರ್ಕ ಸಭೆ

ಪುತ್ತೂರು: ಲೋಕಾಯುಕ್ತ ಜನಸಂಪರ್ಕ ಸಭೆಯನ್ನು ಏ.24 ರಂದು ಪುತ್ತೂರು ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದೆ. ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ಏ.24 ರಂದು ಭೇಟಿ ನೀಡಿ, ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿಯ ನಮೂನೆಗಳನ್ನು ವಿತರಿಸಿ. ಭರ್ತಿ ಮಾಡಿ, ಅಫಿದಾವಿತ್ ಮಾಡಿಸಿದ ದೂರು ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ. ಸರ್ಕಾರಿ ಕಛೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೇ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನೀಡಬಹುದಾಗಿದೆ. ಅಲ್ಲದೆ

ಏ.24 : ಪುತ್ತೂರು ತಾಲೂಕು ಕಛೇರಿಯಲ್ಲಿ ಲೋಕಾಯುಕ್ತ ಜನ ಸಂಪರ್ಕ ಸಭೆ Read More »

ಮರದ ಗೆಲ್ಲು ಬಿದ್ದು ಗಾಯ

ಪುತ್ತೂರು: ಚಲಿಸುತ್ತಿರುವಾಗ ಬೈಕ್ ಮೇಲೆ ಮರದ ಗೆಲ್ಲು ಬಿದ್ದು ಸವಾರನಿಗೆ ಗಾಯಗಳಾಗಿರುವ ಘಟನೆ ಸಾಲ್ಮರ ಜಂಕ್ಷನ್ ಬಳಿ ನಡೆದಿದೆ. ಮಾವಿನ ಮರದ ಗೆಲ್ಲು ಬೈಕ್ ಸವಾರನ ಮೇಲೆ ಬಿದ್ದ ಪರಿಣಾಮ ತನ್ನೀರ್ ತಾರಿಗುಡ್ಡೆ ಎಂಬವರು ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಮರದ ಗೆಲ್ಲು ಬಿದ್ದು ಗಾಯ Read More »

ಕೆ ಎಸ್ ಎಸ್ ಕಾಲೇಜಿನ  ರೋವರ್ಸ್ ಮತ್ತು ರೇಂಜರ್ಸ್ ಘಟಕದಿಂದ ಕೈಗಾರಿಕಾ  ಭೇಟಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ  ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ನಿಪುನ್ ಪರೀಕ್ಷೆಗೆ ಅಗತ್ಯವಾಗಿ ಏಪ್ರಿಲ್ 8 ರಂದು ಪಂಜದಲ್ಲಿರುವ ತೊಂಡಚ್ಚನ್ ಇಂಡಸ್ಟ್ರೀಸ್ ಫ್ಯಾಕ್ಟರಿಗೆ ಭೇಟಿ ಮಾಡಲಾಯಿತು.  ತೊಂಡಚ್ಚನ್ ಇಂಡಸ್ಟ್ರೀಸ್ ಫ್ಯಾಕ್ಟರಿ  ಮಾಲೀಕರಾದ ಮಧು ಎಂಬವರು ಫ್ಯಾಕ್ಟರಿಯಲ್ಲಿ ತಯಾರಾಗುವ ಸಿಮೆಂಟ್ ಹಂಚುಗಳು, ಕಬ್ಬಿಣದ ವಿವಿಧ ಬಗೆಯ ಉಪಕರಣಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಒಟ್ಟು 11 ವಿದ್ಯಾರ್ಥಿಗಳು ಕೈಗಾರಿಕಾ ಭೇಟಿಯಲ್ಲಿ ಭಾಗಿಯಾಗಿದ್ದು ರೇಂಜರ್ ಲೀಡರ್ ಅಶ್ವಿನಿ ಎಸ್ ಎನ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಕೆ ಎಸ್ ಎಸ್ ಕಾಲೇಜಿನ  ರೋವರ್ಸ್ ಮತ್ತು ರೇಂಜರ್ಸ್ ಘಟಕದಿಂದ ಕೈಗಾರಿಕಾ  ಭೇಟಿ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ | ಇಂದು ರಾತ್ರಿ ವಿಜ್ರಂಭಣೆಯಿಂದ ನೆರವೇರಲಿದೆ ಬ್ರಹ್ಮರಥೋತ್ಸವ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಕಳೆದ ಎಂಟು ದಿನಗಳಿಂದ ವೈಭವದಿಂದ ನಡೆಯುತ್ತಿದ್ದು, ಇಂದು ರಾತ್ರಿ ವೈಭವದ ಬ್ರಹ್ಮರಥೋತ್ಸವ ನಡೆಯಲಿದೆ. ಸಂಜೆ ಶ್ರಿ ದೇವಸ್ಥಾನದ ಒಳ ಹಾಗೂ ಹೊರಾಂಗಣದಲ್ಲಿ ಶ್ರೀ ದೇವರ ಬಲಿ ಉತ್ಸವ ನಡೆದು, ಬಳಿಕ ಶ್ರೀ ದೇವರು ರಥಬೀದಿಗೆ ಬರುವರು. ಆನಂತರ ಶ್ರೀ ಮಹಾಲಿಂಗೇಶ್ವರ ದೇವರು ರಥಾರೋಢರಾಗುವರು. ಈ ಹೊತ್ತಿನಲ್ಲಿ ಸಿಡಿಮದ್ದು ಪ್ರದರ್ಶನ ಪ್ರಾರಂಭಗೊಂಡು ಸುಮಾರು ಒಂದೂವರೆ ಗಂಟೆಗಳ ಕಾಲ ಸಿಡಿಮದ್ದು ಪ್ರದರ್ಶನ ನಡೆದ ಬಳಿಕ ಸಾವಿರಾರು ಭಕ್ತಾದಿಗಳ ಕೈಗಳ ಜಯಘೋಷಗಳೊಂದಿಗೆ ಬ್ರಹ್ಮರಥವನ್ನು ಎಳೆಯುತ್ತಾರೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ | ಇಂದು ರಾತ್ರಿ ವಿಜ್ರಂಭಣೆಯಿಂದ ನೆರವೇರಲಿದೆ ಬ್ರಹ್ಮರಥೋತ್ಸವ Read More »

”ಥಿನ್ ಫಿಲ್ಮ್ಸ್: ಇಂದಿನ ತಂತ್ರಜ್ಞಾನದ ಚಲನೆ” ಕುರಿತು ಉಪನ್ಯಾಸ

ಪುತ್ತೂರು: ಸಂತ ಫಿಲೋಮಿನಾ ಕಾಲೇಜ್ ( ಸ್ವಾಯತ್ತ) ವತಿಯಿಂದ “ಥಿನ್ ಫಿಲ್ಮ್ಸ್: ಇಂದಿನ ತಂತ್ರಜ್ಞಾನದ ಚಲನೆ” ಎಂಬ ವಿಷಯದ ಮೇಲೆ ಮಾಹಿತಿ ಕಾರ್ಯಾಗಾರ ಬುಧವಾರ ಏರ್ಪಡಿಸಲಾಗಿತ್ತು. ಮಂಗಳೂರು ವಿಶ್ವವಿದ್ಯಾಲಯದ ವಸ್ತು ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಮಂಜುನಾಥ ಪಟ್ಟಾಭಿ ಮುಖ್ಯ ಉಪನ್ಯಾಸ ನೀಡಿ, ಥಿನ್ ಫಿಲ್ಮ್ ತಂತ್ರಜ್ಞಾನಗಳ ಮಹತ್ವ, ಅಭಿವೃದ್ಧಿಗಳು ಹಾಗೂ ಇಂದಿನ ವಿಜ್ಞಾನ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಇದರ ಅನ್ವಯಿತೆಯ ಬಗ್ಗೆ ಬೆಳಕು ಚೆಲ್ಲಿದರು. ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯರ್ ಸಮಾರಂಭದ ಅಧ್ಯಕ್ಷತೆ

”ಥಿನ್ ಫಿಲ್ಮ್ಸ್: ಇಂದಿನ ತಂತ್ರಜ್ಞಾನದ ಚಲನೆ” ಕುರಿತು ಉಪನ್ಯಾಸ Read More »

ಅಕ್ಷಯ  ಕಾಲೇಜಿನಲ್ಲಿ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ “ಕೃತ್ವ 2025” ಸಮಾರೋಪ

ಪುತ್ತೂರು: ಅಕ್ಷಯ    ಕಾಲೇಜಿನಲ್ಲಿ   ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳನ್ನು  ಒಳಗೊಂಡ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ “ಕೃತ್ವ 2025” ರ ಸಮಾರೋಪ ಸಮಾರಂಭದ  ಉದ್ಘಾಟನೆ ಯನ್ನು  ಶ್ರೀ  ಅರುಣ್ ನಾಗೇ ಗೌಡ  ಡಿ.ವೈ.ಎಸ್. ಪಿ  ಪುತ್ತೂರು  ವಿಭಾಗ  ಇವರು  ನಿರ್ವಹಿಸಿ  ವಿದ್ಯಾರ್ಥಿ ಜೀವನದ ಕರ್ತವ್ಯ ವನ್ನು ಸಮರ್ಪಕವಾಗಿ  ನಿಭಾಯಿಸಿ ತಮ್ಮ  ಪೋಷಕರಿಗೆ, ತಮಗೆ  ಶಿಕ್ಷಣ ನೀಡಿದ ಸಂಸ್ಥೆಗೆ ಕೀರ್ತಿಯನ್ನು ತರಬೇಕು. ಕಲಿಕೆ ಮತ್ತು ಕ್ರಮ ಬದ್ಧವಾದ  ಜೀವನ ಉತ್ತಮ ಸಂಸ್ಕಾರವನ್ನು ಕಲಿಸುತ್ತದೆ  ಮಾತ್ರವಲ್ಲ  ಸಮಾಜದಲ್ಲಿ

ಅಕ್ಷಯ  ಕಾಲೇಜಿನಲ್ಲಿ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ “ಕೃತ್ವ 2025” ಸಮಾರೋಪ Read More »

ಕುಕ್ಕೆ ಕ್ಷೇತ್ರದ ವಾರ್ಷಿಕ ಆದಾಯ 155.95 ಕೋ.ರೂ. ಏರಿಕೆ

ಹಿಂದಿನ ವರ್ಷಕ್ಕಿಂತ 9.94 ಕೋ.ರೂ. ಹೆಚ್ಚಳ ಸುಬ್ರಹ್ಮಣ್ಯ: ರಾಜ್ಯದಲ್ಲೇ ಅತಿಹೆಚ್ಚು ಆದಾಯವಿರುವ ಪುಣ್ಯಕ್ಷೇತ್ರವಾಗಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆದಾಯದಲ್ಲಿ ಕಳೆದ ಹಣಕಾಸು ಸಾಲಿನಲ್ಲೂ ಭಾರಿ ಹೆಚ್ಚಳವಾಗಿದೆ. 2024-25ನೇ ಸಾಲಿನ ವಾರ್ಷಿಕ ಆದಾಯ 155.95 ಕೋಟಿ ರೂ.ಗೆ ಏರಿಕೆ ಆಗಿದೆ. ಹಿಂದಿನ ವರ್ಷದ ಆದಾಯ 146.01 ಕೋಟಿ ರೂ. ಆಗಿತ್ತು. ಹಿಂದಿನ ವರ್ಷಕ್ಕಿಂತ ಈ ಬಾರಿ 9.94 ಕೋಟಿ ರೂ. ಆದಾಯ ಏರಿಕೆ ಆಗಿದೆ. ಆ ಮೂಲಕ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತೆ ರಾಜ್ಯದ ಶ್ರೀಮಂತ

ಕುಕ್ಕೆ ಕ್ಷೇತ್ರದ ವಾರ್ಷಿಕ ಆದಾಯ 155.95 ಕೋ.ರೂ. ಏರಿಕೆ Read More »

error: Content is protected !!
Scroll to Top