ಪುತ್ತೂರು

ಕಟ್ ಕನ್ವರ್ಶನ್ ಮತ್ತು ಅನಧಿಕೃತ ಕಟ್ಟಡಗಳಿಗೆ ಬಿ ಖಾತಾ ನೀಡಲು ಸರಕಾರದ ಆದೇಶ | ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸರಕಾರ

ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕಟ್‌ಕನ್ವರ್ಶನ್ ಮತ್ತು ಅನಧಿಕೃತವಾಗಿ ನಿರ್ಮಾಣ ಮಾಡಿರುವ ಮನೆ ಮತ್ತು ಕಟ್ಟಡಗಳಿಗೆ ಬಿ ಖಾತಾ ನೀಡಲು ರಾಜ್ಯ ಸರಕಾರ ಆದೇಶ ನೀಡಿದ್ದು ,ಪುತ್ತೂರು ಶಾಸಕರು ಈ ಹಿಂದೆ ನೀಡಿದ್ದ ಮನವಿಗೆ ಸರಕಾರ ಸ್ಪಂದನೆ ನೀಡಿದೆ. 2024 ಸೆಪ್ಟಂಬರ್ ತಿಂಗಳ ಮೊದಲು ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಟ್ಟಡ, ಮನೆ ಮತ್ತು ಕಟ್ ಕನ್ವರ್ಶನ್ ಆಗಿರುವ ಅರ್ಜಿದಾರರಿಗೆ ಬಿ ಖಾತೆ ನೀಡಲು ನಿರ್ಧರಿಸಿದೆ. ಈಗಾಗಲೇ ಈ ಅನಧಿಕೃತ ಮನೆಗಳ‌ ಪೈಕಿ ಕೆಲವೊಂದನ್ನು ಕೆಡವಲು ನಗರಸಭೆ […]

ಕಟ್ ಕನ್ವರ್ಶನ್ ಮತ್ತು ಅನಧಿಕೃತ ಕಟ್ಟಡಗಳಿಗೆ ಬಿ ಖಾತಾ ನೀಡಲು ಸರಕಾರದ ಆದೇಶ | ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸರಕಾರ Read More »

ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ಜಾತ್ರೋತ್ಸವ

ಕಾಣಿಯೂರು: ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವರ ವರ್ಷಾವಧಿ ಜಾತ್ರೋತ್ಸವವು ಫೆ24, 25ರಂದು ನಡೆಯಿತು. ಫೆ 25ರಂದು ಬೆಳಿಗ್ಗೆ ಬ್ರಹ್ಮಶ್ರೀ ನಿಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈಧಿಕ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಗಣಪತಿ ಹವನ, ಜಂಬಶುದ್ದಿ, ಕಲಶ ಪೂಜೆ, ಕಲಶಾಭಿಷೇಕ, ನಾಗತಂಬಿಲ, ಕಲ್ಲುರ್ಟಿ ತಂಬಿಲ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ದೀಪರಾಧನೆ, ಮಹಾಪೂಜೆ, ರಾತ್ರಿ ಶ್ರೀ ದೇವರ ಬಲಿ ಉತ್ಸವ, ಕಟ್ಟೆ ಪೂಜೆ, ಬಟ್ಟಲು ಕಾಣಿಕೆ. ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಿತು. ಬಳಿಕ ಮಂಗಳೂರು

ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ಜಾತ್ರೋತ್ಸವ Read More »

ಬನ್ನೂರು ಚೆಲುವಮ್ಮನಕಟ್ಟೆ ನಿವಾಸಿ ನಾಪತ್ತೆ

ಪುತ್ತೂರು: ಪುತ್ತೂರು ಸಂತೆಯಲ್ಲಿ ತಂದೆಯ ಜೊತೆ ತರಕಾರಿ ವ್ಯಾಪಾರ ನಡೆಸುತ್ತಿದ್ದ ಬನ್ನೂರು ಚೆಲುವಮ್ಮನಕಟ್ಟೆ ನಿವಾಸಿ ಯುವಕನೋರ್ವ ನಾಪತ್ತೆಯಾದ ಬಗ್ಗೆ ಆತನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಬನ್ನೂರು ಚೆಲುವಮ್ಮನಕಟ್ಟೆ ನಿವಾಸಿ ಮೊಹಮ್ಮದ್ ಎಂಬವರ ಪುತ್ರ ಅಬೂಬಕ್ಕರ್ ಸಿದ್ದೀಕ್ (21 ನಾಪತ್ತೆಯಾದವರು. ನನ್ನ ಮಗ ಅಬೂಬಕ್ಕರ್ ಸಿದ್ಧಿಕ್ ನನ್ನೊಂದಿಗೆ ಸಂತೆಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದು, ಫೆ. 24 ಸೋವಾರದ ಸಂತೆಯಲ್ಲಿ ತರಕಾರಿ ವ್ಯಾಪಾರ ಮಾಡಿ ಮಧ್ಯಾಹ್ನ  12 ಗಂಟೆಗೆ ತಲೆನೋವೆಂದು ಮನೆಗೆ ಹೋದವನು ಅಲ್ಲಿ ತನ್ನ ಮೊಬೈಲ್ ಇಟ್ಟು

ಬನ್ನೂರು ಚೆಲುವಮ್ಮನಕಟ್ಟೆ ನಿವಾಸಿ ನಾಪತ್ತೆ Read More »

ವಿದ್ಯಾರ್ಥಿ ದಿಗಂತ್‍ ನಾಪತ್ತೆ | ಚಪ್ಪಲಿ, ಮೊಬೈಲ್‍ ರೈಲ್ವೇ ಹಳಿಯಲ್ಲಿ ಪತ್ತೆ

ಬಂಟ್ವಾಳ: ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವ ನಾಪತ್ತೆಯಾದ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫರಂಗಿಪೇಟೆ ಸಮೀಪದ ಕಿದೆಬೆಟ್ಟು ನಿವಾಸಿ ಪದ್ಮನಾಭ ಅವರ ಪುತ್ರ ದಿಗಂತ್(17) ನಾಪತ್ತೆಯಾದ ವಿದ್ಯಾರ್ಥಿ. ಮಂಗಳೂರಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ದಿಗಂತ್‍ ನಾಪತ್ತೆಯಾಗಿದ್ದು, ಆತನ ಚಪ್ಪಲಿ ಹಾಗೂ ಮೊಬೈಲ್ ಫೋನ್ ಮನೆಯ ಸಮೀಪದ ರೈಲ್ವೇ ಹಳಿಯಲ್ಲಿ ಪತ್ತೆಯಾಗಿದೆ. ಆತ ಫೆ. 25ರ ಮಂಗಳವಾರ ಸಂಜೆ ದೇವಸ್ಥಾನಕ್ಕೆ ಹೋಗುವುದಾಗಿ ಮನೆಯಲ್ಲಿ ತಿಳಿಸಿದ್ದು, ಆದರೆ ದೇವಸ್ಥಾನಕ್ಕೆ ಹೋಗದೆ, ಮನೆಗೂ ಮರಳದೆ ನಾಪತ್ತೆಯಾಗಿದ್ದಾನೆ. ಬಳಿಕ ಹುಡುಕಾಡಿದಾಗ

ವಿದ್ಯಾರ್ಥಿ ದಿಗಂತ್‍ ನಾಪತ್ತೆ | ಚಪ್ಪಲಿ, ಮೊಬೈಲ್‍ ರೈಲ್ವೇ ಹಳಿಯಲ್ಲಿ ಪತ್ತೆ Read More »

ಡಾ. ಸುರೇಶ್‍ ಪುತ್ತೂರಾಯರಿಗೆ ಮಾತೃವಿಯೋಗ

ಪುತ್ತೂರು: ಮಹಾವೀರ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ.ಸುರೇಶ್ ಪುತ್ತೂರಾಯರವರ ತಾಯಿ ಸುನಂದಾ ಪುತ್ತೂರಾಯ (82 ವ.) ಅವರು ಮುಂಬಯಿಯಲ್ಲಿರುವ ಹಿರಿಯ ಪುತ್ರನ ಮನೆಯಲ್ಲಿ ಫೆ.25ರಂದು ಸಂಜೆ ನಿಧನರಾದರು. ಸುನಂದಾರವರು ಕಿರಿಯ ಪುತ್ರ ಡಾ.ಸುರೇಶ್ ಪುತ್ತೂರಾಯ ರವರ ಮನೆಯಲ್ಲಿ ವಾಸವಿದ್ದು, ಕೆಲ ತಿಂಗಳ ಹಿಂದೆ ಮುಂಬಯಿಯಲ್ಲಿ ಇಂಜಿನಿಯರ್ ಆಗಿರುವ ಹಿರಿಯ ಪುತ್ರ ಗೋಪಾಲಕೃಷ್ಣರವರ ಮನೆಗೆ ತೆರಳಿದ್ದರು. ಮೃತರು ಪುತ್ರರಾದ ಗೋಪಾಲಕೃಷ್ಣಪುತ್ತೂರಾಯ. ಡಾ.ಸುರೇಶ್ ಪುತ್ತೂರಾಯ, ಪುತ್ರಿಯರಾದ ಶಶಿಕಲಾ ಸಾಮಗ ಉಡುಪಿ, ಧರ್ಮಸ್ಥಳ ಎಸ್‌.ಡಿ.ಎಂ ಕಾಲೇಜಿನ ಸಹ ಪ್ರಾಧ್ಯಾಪಕಿ ಹರಿಣಿ ಪುತ್ತೂರಾಯ,

ಡಾ. ಸುರೇಶ್‍ ಪುತ್ತೂರಾಯರಿಗೆ ಮಾತೃವಿಯೋಗ Read More »

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ | ನೆರವೇರಿದ ಮಹಾರುದ್ರಯಾಗ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು | ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ಪಾಲ್ಗೊಳ್ಳುವಿಕೆ

ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಇಂದು ಬೆಳಿಗ್ಗೆ ಮಹಾರುದ್ರಯಾಗ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು ಜರಗಿತು. ಮಹಾಶಿವರಾತ್ರಿ ಉತ್ಸವದ ವಿಶೇಷವಾಗಿ ಬೆಳಗ್ಗೆ 7:30ರಿಂದ ಶ್ರೀ ದೇವರಿಗೆ ಮಹಾರುದ್ರಯಾಗ, 9 ಗಂಟೆಗೆ ಶತರುದ್ರಾಭಿಷೇಕ ನಡೆಯಿತು. ವಿಶೇಷವಾಗಿ ದೇವಸ್ಥಾನದ ಒಳಾಂಗಣದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಮೂರ್ತಿಗೆ ಭಕ್ತಾದಿಗಳಿಂದ ಬಿಲ್ವಾರ್ಚನೆ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬೆಳಿಗ್ಗೆಯಿಂದಲೇ ಮಹಾಶಿವರಾತ್ರಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ | ನೆರವೇರಿದ ಮಹಾರುದ್ರಯಾಗ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು | ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ಪಾಲ್ಗೊಳ್ಳುವಿಕೆ Read More »

ಅಕ್ಷಯ ಕಾಲೇಜು ಎನ್‌ಎಸ್‌ಎಸ್ ಶಿಬಿರ ಸಂಪನ್ನ

ಪುತ್ತೂರು : ಅಕ್ಷಯ ಕಾಲೇಜಿನ ರಾ.ಸೇ.ಯೋ.ಘಟಕಗಳ ವಾರ್ಷಿಕ ವಿಷೇಶ ಶಿಬಿರವು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಮೇಗಿನಪೇಟೆಯಲ್ಲಿ ಯಶಸ್ವಿಯಾಗಿ ನಡೆಯಿತು. ಶಿಬಿರದಲ್ಲಿ ಸ್ವಚ್ಛತಾ ಅಭಿಯಾನ, ಗಿಡ ನೆಡುವ ಕಾರ್ಯಕ್ರಮ ಮತ್ತು ಆರೋಗ್ಯ ಜಾಗೃತಿ ಸೇರಿದಂತೆ ಹಲವು ಸಮಾಜಮುಖಿ ಚಟುವಟಿಕೆಗಳು ನಡೆದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಅಧ್ಯಕ್ಷರು ಜಯಂತ ನಡುಬೈಲು ಮಾತನಾಡಿ ನಮ್ಮ ವಿದ್ಯಾರ್ಥಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಅವರು ಜವಾಬ್ದಾರಿಯುತ ನಾಗರಿಕರಾಗಲು ಸಿದ್ಧಗೊಳ್ಳುತ್ತಾರೆ. ಶಿಬಿರದಲ್ಲಿ ಕಲಿತ ಪಾಠಗಳು ಮುಂದಿನ ಜೀವನದಲ್ಲಿಯೂ ಪ್ರೇರಣೆಯಾಗಿ ಉಳಿಯಬೇಕು, ಎಲ್ಲಾ

ಅಕ್ಷಯ ಕಾಲೇಜು ಎನ್‌ಎಸ್‌ಎಸ್ ಶಿಬಿರ ಸಂಪನ್ನ Read More »

ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ್ ಶಾಂತಿವನ ನಿಧನ

ಪುತ್ತೂರು: ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ್ ಶಾಂತಿವನ (53) ಅಲ್ಪಕಾಲದ ಅಸೌಖ್ಯದಿಂದಾಗಿ ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಒಳಮೊಗ್ರು ಗ್ರಾಮದ ಶಾಂತಿವನ ನಾರಾಯಣ ಎಂ.ಎಸ್ ಮತ್ತು ಪ್ರೇಮ ಅವರ ಪುತ್ರರಾಗಿರುವ ಚಂದ್ರಕಾಂತ್ ಶಾಂತಿವನರವರು ಧಾರ್ಮಿಕ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ಮೃತರು ತಂದೆ, ತಾಯಿ, ಪತ್ನಿ, ಪುತ್ರರನ್ನು ಅಗಲಿದ್ದಾರೆ.

ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ್ ಶಾಂತಿವನ ನಿಧನ Read More »

ರಸ್ತೆ ದಾಟುತ್ತಿದ್ದ ವೇಳೆ ಮಹಿಳೆಗೆ ಸ್ಕೂಟರ್ ಡಿಕ್ಕಿ : ಮೃತ್ಯು

ಉಪ್ಪಿನಂಗಡಿ: ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದ ವೇಳೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿದೆ. ಉಪ್ಪಿನಂಗಡಿ ನಟ್ಟಿಬೈಲು ನಿವಾಸಿ ಕೆ.ಸದಾರಾಮ ಎಂಬವರ ಪತ್ನಿ ಸರಸ್ವತಿ (50) ಮೃತಪಟ್ಟವರು. ಸೋಮವಾರ ಬೆಳಗ್ಗೆ ಎಲೈಸಿ ಕಚೇರಿಯಲ್ಲಿ ಕೆಲಸ ಮುಗಿಸಿ, ಉಪ್ಪಿನಂಗಡಿಗೆ ತೆರಳಲು ರಸ್ತೆ ದಾಟುತ್ತಿದ್ದ ವೇಳೆ ಸ್ಕೂಟರ್ ಡಿಕ್ಕಿ ಹೊಡೆದಿದೆ. ಈ ವೇಳೆ ತಲೆಯ ಭಾಗಕ್ಕೆ ಗಾಯಗಳಾಗಿದ್ದು, ಕೂಡಲೇ ಅವರನ್ನು ಸಮೀಪದ ತುಂಬೆಯಲ್ಲಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ರಾತ್ರಿ ವೇಳೆ ಚಿಕಿತ್ಸೆಗೆ

ರಸ್ತೆ ದಾಟುತ್ತಿದ್ದ ವೇಳೆ ಮಹಿಳೆಗೆ ಸ್ಕೂಟರ್ ಡಿಕ್ಕಿ : ಮೃತ್ಯು Read More »

ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ ಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ | ಅಧ್ಯಕ್ಷರಾಗಿ ಭಾಸ್ಕರ ಗೌಡ ಇಚಿಲಂಪಾಡಿ, ಉಪಾಧ್ಯಕ್ಷರಾಗಿ ಪ್ರವೀಣ್‍ ರೈ ಪಂಜೊಟ್ಟು ಅವಿರೋಧವಾಗಿ ಆಯ್ಕೆ

ಪುತ್ತೂರು: ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಭಾಸ್ಕರ ಗೌಡ ಇಚಿಲಂಪಾಡಿ ಹಾಗೂ ಉಪಾಧ್ಯಕ್ಷರಾಗಿ ಪ್ರವೀಣ್ ರೈ ಪಂಜೊಟ್ಟು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಭಾಸ್ಕರ ಗೌಡ ಅವರು ಈ ಬಾರಿ ಮೊದಲ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು, ಉಪಾಧ್ಯಕ್ಷರಾಗಿ ಕಳೆದ ಬಾರಿ ನಿರ್ದೇಶಕರಾಗಿದ್ದ ಪ್ರವೀಣ್ ರೈ ಪಂಜೊಟ್ಟು ಅವರನ್ನು ಆಯ್ಕೆ ಮಾಡಲಾಯಿತು. ಮಂಗಳವಾರ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ

ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ ಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ | ಅಧ್ಯಕ್ಷರಾಗಿ ಭಾಸ್ಕರ ಗೌಡ ಇಚಿಲಂಪಾಡಿ, ಉಪಾಧ್ಯಕ್ಷರಾಗಿ ಪ್ರವೀಣ್‍ ರೈ ಪಂಜೊಟ್ಟು ಅವಿರೋಧವಾಗಿ ಆಯ್ಕೆ Read More »

error: Content is protected !!
Scroll to Top