ಪುತ್ತೂರು

ಶ್ರೀ ಮಹಾಭಾರತ ಸರಣಿಯ 103 ನೇ ತಾಳಮದ್ದಳೆ

ಉಪ್ಪಿನಂಗಡಿ: ಶ್ರೀ ಕಾಳಿಕಾಂಬಾ ಯಕ್ಷ ಸೇವಾ ಟ್ರಸ್ಟ್ ಸ್ವರ್ಣ ಮಹೋತ್ಸವದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯ 103ನೇ ತಾಳಮದ್ದಳೆ ಕಲಿಕೀಚಕ ಎಂಬ ಪ್ರಸಂಗ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಭಾಗವತರಾಗಿ ಪದ್ಮನಾಭ ಕುಲಾಲ್, ಬಿ. ಸುರೇಶ ರಾವ್ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಚಂದ್ರಶೇಖರ ಆಚಾರ್ಯ ಪರಪ್ಪು ಭಾಗವಹಿಸಿದ್ದರು. ವಿರಾಟನಾಗಿ ದಿವಾಕರ ಆಚಾರ್ಯ ಗೇರುಕಟ್ಟೆ, ಮಂತ್ರಿ ಮಾತಂಗ ಮತ್ತು ಭೀಮಸೇನನಾಗಿ ಶ್ರೀಧರ ಎಸ್ ಪಿ ಕೃಷ್ಣಾಪುರ, ರಥಕಾರನಾಗಿ ಸತೀಶ ಶಿರ್ಲಾಲು, ಕೀಚಕನಾಗಿ ಜಯರಾಮ ಗೌಡ […]

ಶ್ರೀ ಮಹಾಭಾರತ ಸರಣಿಯ 103 ನೇ ತಾಳಮದ್ದಳೆ Read More »

ಕೇಪು ಕೋಳಿ ಅಂಕ ವಿವಾದ : ಶಾಸಕ ಅಶೋಕ್‌ ರೈ ಸಹಿತ 17 ಮಂದಿ ವಿರುದ್ಧ ಎಫ್‌ಐಆರ್‌

ಧಾರ್ಮಿಕ ಮಹತ್ವದ ಕಜಂಬು ಜಾತ್ರೋತ್ಸವದ ಕೋಳಿ ಅಂಕಕ್ಕೆ ಪೊಲೀಸರ ತಡೆ ತಾನೇ ಮುಂದೆ ನಿಂತು ಕೋಳಿ ಅಂಕ ಮಾಡಿಸಿದ್ದ ಅಶೋಕ್‌ ರೈ ಮಂಗಳೂರು: ಪೊಲೀಸರ ನಿರ್ಬಂಧದ ನಡುವೆಯೂ ಕೋಳಿ ಅಂಕ ಮಾಡಿಸಿದ ಪುತ್ತೂರು ಶಾಸಕ ಅಶೋಕ್‌ ರೈ ಸೇರಿದಂತೆ 17 ಮಂದಿ ವಿರುದ್ಧ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿಟ್ಲದ ಕೇಪುವಿನ ಧಾರ್ಮಿಕ ಮಹತ್ವವುಳ್ಳ ಐತಿಹಾಸಿಕ ಉಳ್ಳಾಲ್ತಿ ಜಾತ್ರೆಯ ಪ್ರಯುಕ್ತ ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಕೋಳಿ ಅಂಕ ಶನಿವಾರ ಹಲವು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗಿದೆ. ಪೊಲೀಸರು ಕೋಳಿ

ಕೇಪು ಕೋಳಿ ಅಂಕ ವಿವಾದ : ಶಾಸಕ ಅಶೋಕ್‌ ರೈ ಸಹಿತ 17 ಮಂದಿ ವಿರುದ್ಧ ಎಫ್‌ಐಆರ್‌ Read More »

ಡಾ. ಕೆ. ಚಿನ್ನಪ್ಪ ಗೌಡರ ಕೃತಿ ‘ಭೂತಾರಾಧನೆ- ಮಾಯದ ‌ನಡೆ ಜೋಗದ ನುಡಿ’ ಬಿಡುಗಡೆ

ಮಂಗಳೂರು: ಕ್ರಿಯೇಟಿವ್ ಪುಸ್ತಕ ಮನೆ ಕಾರ್ಕಳ ಮತ್ತು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದಲ್ಲಿ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ ವಿಶೇಷ ಪ್ರಕಟಣೆಯಾದ ಡಾ. ಕೆ. ಚಿನ್ನಪ್ಪ ಗೌಡ ಅವರ ಸಂಶೋಧನಾ ಕೃತಿ ‘ಭೂತಾರಾಧನೆ – ಮಾಯದ ನಡೆ ಜೋಗದ ನುಡಿ’ ಕೃತಿ ಬಿಡುಗಡೆ ಸಮಾರಂಭ ನಡೆಯಿತು. ಸಂತ ಅಲೋಶಿಯಸ್ ಪರಿಗಣಿತ ವಿವಿಯ ಎಲ್. ಎಫ್. ರಸ್ಕಿನ್ಹ ಸಭಾಂಗಣ, ಎಲ್.ಸಿ.ಆರ್.ಐ. ಬ್ಲಾಕ್‌ನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ

ಡಾ. ಕೆ. ಚಿನ್ನಪ್ಪ ಗೌಡರ ಕೃತಿ ‘ಭೂತಾರಾಧನೆ- ಮಾಯದ ‌ನಡೆ ಜೋಗದ ನುಡಿ’ ಬಿಡುಗಡೆ Read More »

ಹೃದಯಾಘಾತದಿಂದ ಅರುಣ್ ಆಚಾರ್ಯ ನಿಧನ

ಪುತ್ತೂರು: ಬನ್ನೂರಿನ ಮೇಲ್ಮಜಲು ನಿವಾಸಿ, ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಅರುಣ್ ಆಚಾರ್ಯ ಅವರು ಹೃದಯಾಘಾತದಿಂದ ಡಿ. 19 ರಂದು ನಿಧನರಾಗಿದ್ದಾರೆ. ಅರುಣ್ ಅವರಿಗೆ 51 ವರ್ಷವಾಗಿತ್ತು. ಪುತ್ತೂರಿನ ಬೈಪಾಸ್ ರಸ್ತೆಯಲ್ಲಿನ ಹೊಟೇಲೊಂದರಲ್ಲಿ ಉಪಹಾರ ಮುಗಿಸಿ ಹೊರಬರುತ್ತಿದ್ದಾಗ ಕುಸಿದು ಬಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಮೃತರಾಗಿದ್ದರು ಎಂದು ತಿಳಿದು ಬಂದಿದೆ. ಮೃತರು ತಂದೆ, ಪತ್ನಿ, ಪುತ್ರ, ಸಹೋದರರನ್ನು ಅಗಲಿದ್ದಾರೆ.

ಹೃದಯಾಘಾತದಿಂದ ಅರುಣ್ ಆಚಾರ್ಯ ನಿಧನ Read More »

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರಾ ಸಭೆ

ಉಪ್ಪಿನಂಗಡಿ: ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರೆ ಮತ್ತು ಜ. 31 ರಂದು ನಡೆಯುವ ದೊಂಪದ ಬಲಿ ನೇಮ ಬಗ್ಗೆ ಆಡಳಿತ ಸೇವಾ ಟ್ರಸ್ಟ್‌ನ ಸಭೆಯು ಟ್ರಸ್ಟ್ ಅಧ್ಯಕ್ಷ ಭಾಸ್ಕರ ಬಾರ್ಯ, ಪುತ್ತೂರು ಅಧ್ಯಕ್ಷತೆಯಲ್ಲಿ ಜರಗಿತು. ಲೆಕ್ಕ ಪತ್ರ ಮಂಡನೆ, ಗತಸಭೆಯ ನಿರ್ಣಯಗಳ ಅನುಷ್ಠಾನ, ಫೆ. 6 ಮತ್ತು 7 ರಂದು ನಡೆಯಲಿರುವ ವಾರ್ಷಿಕ ಜಾತ್ರಾ ಉತ್ಸವ ಸಮಿತಿ ರಚನೆ ಬಗ್ಗೆ ಚರ್ಚೆ ನಡೆಸಲಾಯಿತು. ಪವಿತ್ರಪಾಣಿ ಸೂರ್ಯನಾರಾಯಣ ಕುದ್ದಣ್ಣಾಯ, ಉಪಾಧ್ಯಕ್ಷ ನಾರಾಯಣಗೌಡ, ಪ್ರಧಾನ ಕಾರ್ಯದರ್ಶಿ ಪ್ರಶಾಂತ

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರಾ ಸಭೆ Read More »

ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್: ಗ್ಲೋ ಫೆಸ್ಟ್‌ಗೆ ಚಾಲನೆ

ಪುತ್ತೂರು: ಪ್ರತಿಷ್ಟಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ವಾರ್ಷಿಕ ವಜ್ರಾಭರಣಗಳ ಮಹೋತ್ಸವ ಗ್ಲೋಬಲ್ ಫೆಸ್ಟ್ ಇಂದಿನಿಂದ ಮುಂದಿನ ಒಂದು ತಿಂಗಳ ಕಾಲ ನಡೆಯಲಿದ್ದು, ಇಂದು ಚಾಲನೆ ದೊರೆತಿದೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ನಳಿನಿ ಪಿ. ಶೆಟ್ಟಿ ಅವರು ದೀಪ ಬೆಳಗಿಸಿ, ಮಹೋತ್ಸವಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಆಡಳಿತ ನಿರ್ದೇಶಕ ಸುಧನ್ವ ಬಿ. ಆಚಾರ್ಯ ಮಾತನಾಡಿ, ಪ್ರಸ್ತುತ ಮಾರುಕಟ್ಟೆಯಲ್ಲಿ ನೈಜ ವಜ್ರಗಳು ಮತ್ತು ಲ್ಯಾಬ್ ತಯಾರಿತ ವಜ್ರಗಳು ಎಂಬ ಎರಡು ವಿಧಗಳಿವೆ.

ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್: ಗ್ಲೋ ಫೆಸ್ಟ್‌ಗೆ ಚಾಲನೆ Read More »

ಡಿ. 13: ದ.ಕ.ಜಿ.ಪಂ.ಉನ್ನತೀಕರಿಸಿದ ಹಿ.ಪ್ರಾ. ಶಾಲೆ ಕುದ್ಮಾರು ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘದ ಜಂಟಿ ವಾರ್ಷಿಕೋತ್ಸವ

ಕಡಬ: ದ.ಕ.ಜಿ.ಪಂ.ಉ.ಹಿ.ಪ್ರಾ. ಶಾಲೆ ಕುದ್ಮಾರು ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘದ ಜಂಟಿ ವಾರ್ಷಿಕೋತ್ಸವ ಸಮಾರಂಭವು ಡಿ. 13 ರಂದು ನಡೆಯಲಿದೆ. ಬೆಳಗ್ಗೆ 10 ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಂತ ಅಬೀರ ‌ವಹಿಸಲಿದ್ದಾರೆ. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ದೇವರಾಜ್ ನೂಜಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ತೇಜಾಕ್ಷಿ ಕೊಡಂಗೆ ‌ಅವರು ಶೌಚಾಲಯ ಮತ್ತು ಕೈ ತೊಳೆಯುವ ಘಟಕಗಳ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳಂದೂರು ಗ್ರಾ.ಪಂ. ಸದಸ್ಯರುಗಳಾದ

ಡಿ. 13: ದ.ಕ.ಜಿ.ಪಂ.ಉನ್ನತೀಕರಿಸಿದ ಹಿ.ಪ್ರಾ. ಶಾಲೆ ಕುದ್ಮಾರು ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘದ ಜಂಟಿ ವಾರ್ಷಿಕೋತ್ಸವ Read More »

ವ್ಯಕ್ತಿ ನಾಪತ್ತೆ: ದೂರು ದಾಖಲು

ಪುತ್ತೂರು: ವ್ಯಕ್ತಿಯೊಬ್ಬರು ನಾಪತ್ತೆಯಾದ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ‌ವ್ಯಕ್ತಿಯನ್ನು ಕೈಯ್ಯೂರಿನ ಮಾಡಾವು ಉದ್ದೋಲೆ ನಿವಾಸಿ ದೀಕ್ಷಿತ್ ಕೆ. ಜೆ. (36) ಎಂದು ಗುರುತಿಸಲಾಗಿದೆ. ನ. 30 ರಿಂದ ಅವರು ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ನೀಡಿರುವ ದೂರಿನಲ್ಲಿ ‌ತಿಳಿಸಿದ್ದಾರೆ. ದೀಕ್ಷಿತ್ ಗ್ರಾಫಿಕ್ ಡಿಸೈನರ್ ಆಗಿದ್ದು, ಕಳೆದೊಂದು ತಿಂಗಳಿನಿಂದ ತಮ್ಮ ಪತ್ನಿಯ ಮನೆಯಲ್ಲಿ ವಾಸವಿದ್ದರು. ನ. 30 ರಂದು ಮೈಸೂರಿನ ಮೂಲಕ ಬೆಂಗಳೂರಿಗೆ ಬೈಕ್‌ನಲ್ಲಿ ಪ್ರಯಾಣ ಆರಂಭಿಸಿದ್ದರು. ಡಿ. 2 ರಂದು ರಾಮನಗರಕ್ಕೆ

ವ್ಯಕ್ತಿ ನಾಪತ್ತೆ: ದೂರು ದಾಖಲು Read More »

ಪುತ್ತೂರು : ಮಾದಕವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿ ಸೆರೆ

ಪುತ್ತೂರು : ಕಬಕ ಗ್ರಾಮದ ಮುರದಲ್ಲಿರುವ ರೈಲ್ವೆ ಸೇತುವೆ ಬಳಿ ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಆತನಿಂದ 10 ಗ್ರಾಂ ಎಂಡಿಎಂಎ ನಿಷೇಧಿತ ಮಾದಕವಸ್ತು ವಶಕ್ಕೆ ಪಡೆದಿದ್ದಾರೆ. ಶಂಕಿತನನ್ನು ಪುತ್ತೂರು ಕಬಕ ನಿವಾಸಿ ಉಮ್ಮರ್ ಫಾರೂಕ್ (41) ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರೈಲ್ವೆ ಸೇತುವೆ ಬಳಿ ವ್ಯಕ್ತಿಯೋರ್ವ ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಎಂಬ ನಿಖರ ಮಾಹಿತಿಯ ಮೇರೆಗೆ ಪುತ್ತೂರು ನಗರ ಪೊಲೀಸ್

ಪುತ್ತೂರು : ಮಾದಕವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿ ಸೆರೆ Read More »

ಉದ್ಯೋಗ ವಾರ್ತೆ: ಆಫೀಸ್ ಅಡ್ಮಿನ್ ಹುದ್ದೆಗೆ ಅರ್ಜಿ ಆಹ್ವಾನ

ಸಂಪ್ಯ: ಪುತ್ತೂರಿನ ಆರಕ್ಷಕ ಠಾಣೆಯ ಬಳಿ ಕಾರ್ಯಾಚರಿಸುತ್ತಿರುವ ತರಬೇತಿ ಸಂಸ್ಥೆ ವಿದತ್ (VIDATH) ಇದರ ಆಡಳಿತ ಮಂಡಳಿಯವರು ಕಚೇರಿ ನಿರ್ವಾಹಕ (Office Admin) ಹುದ್ದೆಗೆ ನೇಮಕಾತಿ ಮಾಡಲಿದ್ದು ಆಸಕ್ತರನ್ನು ಆಹ್ವಾನಿಸಿದ್ದಾರೆ. ಕಚೇರಿ ವೇಳೆಯಲ್ಲಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಂಸ್ಥೆಯ ಆಡಳಿತ ಪಾಲುದಾರರಾಗಿರುವ ಶುಭಾ ಅವರು ತಿಳಿಸಿದ್ದಾರೆ.

ಉದ್ಯೋಗ ವಾರ್ತೆ: ಆಫೀಸ್ ಅಡ್ಮಿನ್ ಹುದ್ದೆಗೆ ಅರ್ಜಿ ಆಹ್ವಾನ Read More »

error: Content is protected !!
Scroll to Top