ಪುತ್ತೂರು

ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ

ಪುತ್ತೂರು: ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಶನಿವಾರ ಹಾಗೂ ಭಾನುವಾರ ನಡೆಯಿತು. ಶನಿವಾರ ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ಶ್ರೀ ಮಹಾಮೃತ್ಯುಂಜಯ ಹೋಮ, ಮಧ್ಯಾಹ್ನ ರಕ್ತಶ್ವರಿ, ಗುಳಿಗ ದೈವಗಳಿಗೆ ತಂಬಿಲ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ಅನ್ನಸಂತರ್ಪಣೆ, ಸುಡುಮದ್ದು ಪ್ರದರ್ಶನ, ವಸಂತ ಕಟ್ಟೆ ಪೂಜೆ ನಡೆಯಿತು. ಜಾತ್ರೋತ್ಸವ ಸಮಿತಿಯ ಪದಾಧಿಕಾರಿಗಳು, ಅರ್ಚಕರು, ನೌಕರರು, ಭಕ್ತಾದಿಗಳು ಉಪಸ್ಥಿತರಿದ್ದರು. ಇಂದು […]

ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ Read More »

ನಗರ ಯೋಜನಾ ಪ್ರಾಧೀಕಾರದ ಅಧ್ಯಕ್ಷರಾಗಿ ಅಮಳ ರಾಮಚಂದ್ರ ಅಧಿಕಾರ ಸ್ವೀಕಾರ

ಪುತ್ತೂರು: ಪುತ್ತೂರು ನಗರ ಯೋಜನಾ ಪ್ರಾಧೀಕಾರ(ಪೂಡಾ)ದ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರರವರ ಶನಿವಾರ ಅಧಿಕಾರ ಸ್ವೀಕರಿಸಿದರು. ನೂತನ ಅಧ್ಯಕ್ಷರನ್ನು ಸನ್ಮಾನಿಸಿ, ಗೌರವಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಗ್ರಾಮಾಂತರ ಪ್ರದೇಶಗಳ 9/11 ನೀಡುವ ಕೆಲಸ ಮುಖಾಂತರ ನಡೆಯಬೇಕಿದ್ದು ಯಾವುದೇ ಅರ್ಜಿಗಳು ಒಂದು ವಾರಕ್ಕಿಂತ ಹೆಚ್ಚು ಕಾಲ ಪೂಡಾ ಕಚೇರಿಯಲ್ಲಿ ಉಳಿಯಬಾರದು. ಬಡವರ ಬಗ್ಗೆ ಕಾಳಜಿ ಇರಲಿ. ಅವರ ಸಮಸ್ಯೆಗಳಿಗೆ ಸ್ಪಂದನೆ ನೀಡಬೇಕು. ಅದಿಕಾರಿಗಳು ವಾರದಲ್ಲಿ ಎರಡು ದಿನ ಮಾತ್ರ ಬರುತಿದ್ದು ಉಳಿದ ದಿನಗಳಲ್ಲಿ

ನಗರ ಯೋಜನಾ ಪ್ರಾಧೀಕಾರದ ಅಧ್ಯಕ್ಷರಾಗಿ ಅಮಳ ರಾಮಚಂದ್ರ ಅಧಿಕಾರ ಸ್ವೀಕಾರ Read More »

ಪುತ್ತೂರು ತಾಲೂಕು ಕಚೇರಿಗೆ ರೈಡ್ | ಪ್ರತೀ ಕಚೇರಿಗೆ ತೆರಳಿ ಹಾಜರಾತಿ ಪರಿಶೀಲಿಸಿದ ಶಾಸಕ ಅಶೋಕ್ ರೈ

ಪುತ್ತೂರು: ತಾಲೂಕು ಕಚೇರಿಯ ಸಿಬಂದಿಗಳು ಸರಿಯಾದ ಸಮಯಕ್ಕೆ ಕಚೇರಿಗೆ ಬರುತ್ತಿಲ್ಲ, ಕೆಲವೊಂದು ಕಚೇರಿಗೆ ಹಗಲು ವೇಳೆ  ಬಾಗಿಲು ಹಾಕಿರುತ್ತಾರೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಶನಿವಾರ ಶಾಸಕ ಅಶೋಕ್ ರೈ ಅವರು ತಾಲೂಕು ಕಚೇರಿಗೆ ದಾಳಿ ನಡೆಸಿ ಹಾಜರಾತಿ ಪರಿಶೀಲನೆ ನಡೆಸಿದ್ದಾರೆ. ಮಿನಿ ವಿಧಾನ ಸೌಧದಲ್ಲಿರುವ ಪ್ರತೀ ಕಚೇರಿಗೂ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.‌ಈ ವೇಳೆ ಎಡಿಎಲ್  ಆರ್ ಕಚೇರಿಯಲ್ಲಿ ಯಾರೂ ಇರಲಿಲ್ಲ. ಅಧಿಕಾರಿಯ ಬಗ್ಗೆ ಪರಿಶೀಲನೆ ನಡೆಸಿದ ಶಾಸಕರು ಅಧಿಕಾರಿ ಇಲ್ಲದಿದ್ದರೆ ಕಚೇರಿಯನ್ನು ಯಾಕೆ

ಪುತ್ತೂರು ತಾಲೂಕು ಕಚೇರಿಗೆ ರೈಡ್ | ಪ್ರತೀ ಕಚೇರಿಗೆ ತೆರಳಿ ಹಾಜರಾತಿ ಪರಿಶೀಲಿಸಿದ ಶಾಸಕ ಅಶೋಕ್ ರೈ Read More »

ಪುತ್ತೂರಿನಲ್ಲಿ ಭಾವ ತೀರ ಯಾನ ಮಾ. 15 ರಂದು 1:45 ಮತ್ತು ಮಾ. 16 ರಂದು 2:30ಕ್ಕೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ನಿರ್ದೇಶಕ ಮಯೂರ ಅಂಬೆಕಲ್ಲು ಹಾಗು ತೇಜಸ್‍ ಕಿರಣ್‍ ರವರ ನಿರ್ದೇಶನದಿಂದ ಮೂಡಿಬಂದ “ಭಾವ ತೀರ ಯಾನ” ಸಿನಿಮಾ ರಾಜ್ಯಾದ್ಯಂತ ಪ್ರೇಕ್ಷಕರ  ಮೆಚ್ಚುಗೆಗೆ ಪಾತ್ರವಾಗಿದೆ. ಪುತ್ತೂರಿನ ಭಾರತ್ ಸಿನಿಮಾಸ್‍ನಲ್ಲಿ ಭಾವ ತೀರ ಯಾನ ಮಾ. 15 (ನಾಳೆ) ರಂದು ಮಧ್ಯಾಹ್ನ 1:45 ಕ್ಕೆ ಮತ್ತು ಮಾ. 16 ಭಾನುವಾರ 2:30 ರ ಸಮಯಕ್ಕೆ  ಶೋ ನೀಡಲು ನಿರ್ಧರಿಸಲಾಗಿದೆ.  ಕೌಂಟ‌ರ್’ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show Appನಲ್ಲಿ  ticketಗಳನ್ನು

ಪುತ್ತೂರಿನಲ್ಲಿ ಭಾವ ತೀರ ಯಾನ ಮಾ. 15 ರಂದು 1:45 ಮತ್ತು ಮಾ. 16 ರಂದು 2:30ಕ್ಕೆ ಚಿತ್ರ ಪ್ರದರ್ಶನ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಚಾಕ್ರಿ ಸೇವಾಧಾರಿ ಉಮೇಶ್ ಗೌಡ ಹೃದಯಾಘಾತದಿಂದ ನಿಧನ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವಕ್ಕೆ ಮುಂಡ್ಯ ಹಾಕುವ ಸಂದರ್ಭ ಗದ್ದೆಯಲ್ಲಿ ಚೆಂಡು ಉರುಳಿಸುವ ಮತ್ತು ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಕಟ್ಟೆಯಿಂದ ಕಟ್ಟೆಗೆ ಶ್ರೀದೇವರ ವಸ್ತ್ರ ಕೊಂಡೊಯ್ಯುವ ಚಾಕ್ರಿ ಸೇವೆ ಮಾಡುತ್ತಿದ್ದ ಬಲ್ನಾಡು ನಿವಾಸಿ ಉಮೇಶ್ ಗೌಡ(47ವ) ರವರು ಮಾ. 14 ರಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು. ಬಲ್ನಾಡು ಕುಕ್ಕಪ್ಪ ಗೌಡರ ಪುತ್ರರಾಗಿರುವ ಉಮೇಶ್‌ ಗೌಡ ಅವರು ದೇವಸ್ಥಾನದ ಗದ್ದೆಯ ಬಳಿ ಬಾಡಿಗೆ ಮನೆಯಲ್ಲಿ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಚಾಕ್ರಿ ಸೇವಾಧಾರಿ ಉಮೇಶ್ ಗೌಡ ಹೃದಯಾಘಾತದಿಂದ ನಿಧನ Read More »

ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಪುತ್ತೂರು: ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಸತ್ಯನಾರಾಯಣ ದೇವರ ಪ್ರತಿಷ್ಠಾಪನೆಯ 24ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಶುಕ್ರವಾರ ನಡೆಯಿತು. ಪೂಜೆ ಅಂಗವಾಗಿ ಬೆಳಗ್ಗೆ 6 ರಿಂದ ಪಂಚಗವ್ಯ ಪುಣ್ಯಾಹ ಪುರಸ್ಸರ ಕಲಶ ಪ್ರತಿಷ್ಠೆ, ಪಂಚಾಮೃತಾಭಿಷೇಕ, ಕಲಶಾಭಿಷೇಕ, 10 ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಮಧ್ಯಾಹ್ನ 1 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆಯಾಗಿ, ಬಳಿಕ ಅನ್ನಸಂತರ್ಪಣೆ ಜರಗಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ Read More »

ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮೀ ದೇವಿಗೆ ಸೂರ್ಯರಶ್ಮಿಯ ಸ್ಪರ್ಶ, ದೇವಿಗೆ ವಿಶೇಷ ಪೂಜೆ

ಪುತ್ತೂರು: ಪುತ್ತೂರು ರೈಲು ನಿಲ್ದಾಣದ ಬಳಿಯ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶುಕ್ರವಾರ ಮೀನ ಸಂಕ್ರಮಣದಂದು ಮುಂಜಾನೆ ಸೂರ್ಯನ ಕಿರಣಗಳು ಕ್ಷೇತ್ರದ ಮೂರು ಬಾಗಿಲುಗಳನ್ನು ದಾಟಿ ಗರ್ಭಗುಡಿಯಲ್ಲಿ ನೆಲೆಯಾಗಿರುವ ದೇವಿಯ ಬಿಂಬಕ್ಕೆ ಸ್ಪರ್ಶವಾಯಿತು. ಕ್ಷೇತ್ರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮೀನ ಸಂಕ್ರಮಣದ ದಿನ ಗರ್ಭಗುಡಿಯಲ್ಲಿರುವ ಮಹಾಲಕ್ಷ್ಮೀ ದೇವಿಯ ಬಿಂಬಕ್ಕೆ ಮುಂಜಾನೆ ಸೂರ್ಯ ರಶ್ಮಿಯ ಸ್ಪರ್ಶವಾಯಿತು.. ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿ ಎನ್.ಐತ್ತಪ್ಪ ಸಪಲ್ಯರ ನೇತೃತ್ವದಲ್ಲಿ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ ನೆರವೇರಿತು. ವೈದಿಕರಿಂದ ವೇದ, ಘೋಷ

ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮೀ ದೇವಿಗೆ ಸೂರ್ಯರಶ್ಮಿಯ ಸ್ಪರ್ಶ, ದೇವಿಗೆ ವಿಶೇಷ ಪೂಜೆ Read More »

ಬೈಕ್ ಮತ್ತು ಆಕ್ಟಿವಾ ನಡುವೆ ಅಪಘಾತ

ಪುತ್ತೂರು: ಬೈಕ್ ಮತ್ತು ಆಕ್ಟಿವಾ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಸಂಟ್ಯಾರ್ ನಲ್ಲಿ ನಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನಗಳು ನುಜ್ಜು ಗುಜ್ಜಾಗಿದೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಬೈಕ್ ಮತ್ತು ಆಕ್ಟಿವಾ ನಡುವೆ ಅಪಘಾತ Read More »

ನಾಲ್ಕನೇ ವಾರಕ್ಕೆ ದಾಪುಗಾಲಿಟ್ಟ ಭಾವ ತೀರ ಯಾನ | ಇಂದು ಸಂಜೆ 7:15ಕ್ಕೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ನಿರ್ದೇಶಕ ಮಯೂರ ಅಂಬೆಕಲ್ಲು ಹಾಗೂ ಕಿರಣ್‍ ತೇಜಸ್‍ ನಿರ್ದೇಶನದಲ್ಲಿ ಮೂಡಿಬಂದ “ಭಾವ ತೀರ ಯಾನ” ಚಲನಚಿತ್ರ ಇಂದಿಗೆ ನಾಲ್ಕನೇ ವಾರಕ್ಕೆ ಕಾಲಿರಿಸಿದೆ. ಪುತ್ತೂರಿನ ಭಾರತ್ ಸಿನಿಮಾನ್ ನಲ್ಲಿ ನಿರಂತರ ಪ್ರದರ್ಶನ ಕಾಣುತ್ತಿದ್ದು ಮಾ.14 (ಇಂದು) ರಂದು ಸಂಜೆ 7.15 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ. ಕೌಂಟರ್‌ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show Appನಲ್ಲಿ ticketಗಳನ್ನು ಕಾಯ್ದಿರಿಸಿಕೊಳ್ಳಬಹುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.

ನಾಲ್ಕನೇ ವಾರಕ್ಕೆ ದಾಪುಗಾಲಿಟ್ಟ ಭಾವ ತೀರ ಯಾನ | ಇಂದು ಸಂಜೆ 7:15ಕ್ಕೆ ಚಿತ್ರ ಪ್ರದರ್ಶನ Read More »

ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಅಮಳ ರಾಮಚಂದ್ರ ನೇಮಕ

ಪುತ್ತೂರು: ಪುತ್ತೂರು ನಗರ ಯೋಜನಾ ಪ್ರಾಧಿಕಾರ (ಪೊಡಾ) ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕ, ಕೆಪಿಸಿಸಿ ವಕ್ತಾರ, ಮಾನವ ಬಂಧುತ್ವ ವೇದಿಕೆ ಪುತ್ತೂರು ಘಟಕದ ಪ್ರಧಾನ ಸಂಚಾಲಕ ಕೊಳ್ತಿಗೆ ಗ್ರಾಮದ ಅಮಳ ನಿವಾಸಿ ಅಮಳ ರಾಮಚಂದ್ರ ನೇಮಕಗೊಂಡಿದ್ದಾರೆ. ಕಾಂಗ್ರೆಸ್ ಮುಖಂಡ ಹಾಗೂ ನ್ಯಾಯಾವಾದಿ ಭಾಸ್ಕರ, ಕೋಡಿಂಬಾಳ ಅವರ ತೆರವಾದ ಸ್ಥಾನಕ್ಕೆ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಲತಾ ಕೆ. ಅವರು ರಾಜ್ಯಪಾಲರ ಆಜ್ಞಾನುಸಾರ ಮಾ 13ರಂದು ಆದೇಶ ಹೊರಡಿಸಿದ್ದಾರೆ. ಶಾಸಕ ಅಶೋಕ್ ರೈಯವರು ಅಮಳ ರಾಮಚಂದ್ರರವರ ಹೆಸರನ್ನು ಶಿಫಾರಸ್ಸು ಮಾಡಿದ್ದರು.

ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಅಮಳ ರಾಮಚಂದ್ರ ನೇಮಕ Read More »

error: Content is protected !!
Scroll to Top