ಪುತ್ತೂರು

ಪಿಎಂಶ್ರೀ ವೀರಮಂಗಲ ಶಾಲಾ ವಿದ್ಯಾರ್ಥಿಗಳು ನಿತ್ಯ ಚಪಾತಿ ಆಹಾರ ಸಂಸ್ಕರಣಾ ಕೇಂದ್ರ ಮುಕ್ವೆ ಗೆ ಅನುಭವಾತ್ಮಕ ಭೇಟಿ

ವೀರಮಂಗಲ : ಪುತ್ತೂರು ತಾಲೂಕಿನ ನರಿಮೊಗರು,ಮುಕ್ವೆ ಪರಿಸರದಲ್ಲಿರುವ ನಿತ್ಯ ಚಪಾತಿ ಆಹಾರ ಸಂಸ್ಕರಣಾ ಕೇಂದ್ರಕ್ಕೆ ಪಿಎಂಶ್ರೀ ಶಾಲೆ ವೀರಮಂಗಲ ಇಲ್ಲಿನ ಮಕ್ಕಳು ಅನುಭವಾತ್ಮಕ ಭೇಟಿ ನೀಡಿ ಆಹಾರ ಸಿರಿದಾನ್ಯಗಳಾದ ಶಾಮೆ, ಸಜ್ಜೆ ,ಬರಗು, ರಾಗಿ, ಕೊರಳೆ, ಜೋಳ, ಊದಲು, ನವನೆ, ಹಾರಕ, ಇತ್ಯಾದಿ ಆಹಾರ ವಸ್ತುಗಳಿಂದ ಸಿದ್ಧವಾಗುವ ಚಪಾತಿ, ಪೂರಿ, ಪಾನೀಯ , ಕುಕ್ಕೀಸ್, ಮಾಡುವುದನ್ನು ನೋಡಿ ತಿಳಿದರು. ಸಂಸ್ಥೆಯ ಮುಖ್ಯಸ್ಥರಾದ ರಾಧಾಕೃಷ್ಣ ಹಾಗೂ ಉಮಾವತಿ ಸಮಗ್ರ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ 40 ವಿದ್ಯಾರ್ಥಿಗಳು ಭಾಗವಹಿಸದರು. […]

ಪಿಎಂಶ್ರೀ ವೀರಮಂಗಲ ಶಾಲಾ ವಿದ್ಯಾರ್ಥಿಗಳು ನಿತ್ಯ ಚಪಾತಿ ಆಹಾರ ಸಂಸ್ಕರಣಾ ಕೇಂದ್ರ ಮುಕ್ವೆ ಗೆ ಅನುಭವಾತ್ಮಕ ಭೇಟಿ Read More »

ಏ.10-20 : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ | ಜಾತ್ರೋತ್ಸವಕ್ಕೆ ನಡೆಯಿತು ಗೊನೆ ಮುಹೂರ್ತ

ಪುತ್ತೂರು : ಏ.10 ರಿಂದ 20 ರ ತನಕ ವೈಭವದಿಂದ ನಡೆಯಲಿರುವ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ ಮಂಗಳವಾರ ಬೆಳಿಗ್ಗೆ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾಯರು ಗರ್ಭಗುಡಿಯಲ್ಲಿ ಪ್ರಾರ್ಥನೆ ನಡೆಸಿದ ಬಳಿಕ ವಾದ್ಯದೊಂದಿಗೆ ಸ್ಥಳೀಯ ತೋಟವೊಂದರಲ್ಲಿ ವೆ.ಮೂರ್ತಿ ವಿ.ಎಸ್.ಭಟ್ ಗೊನೆ ಕಡಿಯುವ ಮೂಲಕ ಗೊನೆಮುಹೂರ್ತಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಶಾಸಕ ಅಶೋಕ್ ಕುಮಾರ್ ರೈ,

ಏ.10-20 : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ | ಜಾತ್ರೋತ್ಸವಕ್ಕೆ ನಡೆಯಿತು ಗೊನೆ ಮುಹೂರ್ತ Read More »

ನಿಷೇಧಿತ ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ

ಪುತ್ತೂರು: ಕಾರಿನಲ್ಲಿ ನಿಷೇಧಿತ ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪುತ್ತೂರು ನಗರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರ ಪೊಲೀಸ್ ಠಾಣೆ ನಿರೀಕ್ಷಕರು ಸೋಮವಾರ ಬೆಳಿಗ್ಗೆ ನರಿಮೊಗರು ಗ್ರಾಮದ ಮುಕ್ವೆ ಎಂಬಲ್ಲಿ ತಾತ್ಕಾಲಿಕ ಚೆಕ್‌ ಪಾಯಿಂಟ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಮಯ, ಸುಬ್ರಹಮಣ್ಯ ಕಡೆಯಿಂದ ಬಂದ ಮಾರುತಿ ಸುಝುಕಿ ಆಲ್ಟೋ 800 ಕಾರನ್ನು  ಪರಿಶೀಲಿಸಿದಾಗ ಕಾರಿನ ಡ್ಯಾಶ್ ಬೋರ್ಡ್‌ಲ್ಲಿ ಮಾದಕ ವಸ್ತುಗಳನ್ನು ಸೇದುವ ಸಾಧನಗಳು, ತೂಕ ಮಾಪಕ ಕಂಡುಬಂದಿತ್ತು. ಕಾರಿನ ಚಾಲಕ ಹಾಗೂ ಮತ್ತೊಬ್ಬನಲ್ಲಿ ಈ ಬಗ್ಗೆ

ನಿಷೇಧಿತ ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ Read More »

ಕುರಿಯ ಮಲಾರ್ ನಿವಾಸಿ ಮೋಹನ್‍ ಆತ್ಮಹತ್ಯೆ

ಪುತ್ತೂರು: ಕುರಿಯ ಗ್ರಾಮದ ಮಲಾರ್ ನಿವಾಸಿ, ಕಲ್ಲರ್ಪೆ ಚಿನ್ನು‌ ಹೋಟೆಲ್ ಮಾಲಕ ಮೋಹನ್ (38 ವ.) ಅವರು ಸೋಮವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ತಿಳಿದು ಬಂದಿದೆ. ಮಲಾರಿನ ತನ್ನ ಮನೆಯ ಒಳಗಡೆಯೇ ನೇಣು‌ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂದರ್ಭ ಡೆತ್ ನೋಟ್‍ ಲಭಿಸಿದ್ದು, ಡೆತ್ ನೋಟ್’ನಲ್ಲಿ, ಸಾಲಬಾಧೆಯೇ ತನ್ನ ಸಾವಿಗೆ ಕಾರಣ ಎಂದು ಬರೆದಿಟ್ಟಿದ್ದಾರೆ. ನೆರೆಯ ಮನೆಯಲ್ಲಿ ಕಾರ್ಯಕ್ರಮಕ್ಕೆಂದು ಮನೆಯವರು ಹೋಗಿದ್ದ ಸಂದರ್ಭ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನ;ಲಾಗಿದೆ. ಮೃತರು ತಾಯಿ, ಪತ್ನಿ ಹಾಗೂ 4

ಕುರಿಯ ಮಲಾರ್ ನಿವಾಸಿ ಮೋಹನ್‍ ಆತ್ಮಹತ್ಯೆ Read More »

ಆರನೇ ವಾರಕ್ಕೆ ಕಾಲಿಟ್ಟ “ಭಾವ ತೀರ ಯಾನ’ ಸಿನಿಮಾ | ನಾಳೆ ಸಂಜೆ 4:30 ಕ್ಕೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 6ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನಾಳೆ ಏ.1 ಮಂಗಳವಾರದಂದು ಸಂಜೆ 4:30ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.

ಆರನೇ ವಾರಕ್ಕೆ ಕಾಲಿಟ್ಟ “ಭಾವ ತೀರ ಯಾನ’ ಸಿನಿಮಾ | ನಾಳೆ ಸಂಜೆ 4:30 ಕ್ಕೆ ಚಿತ್ರ ಪ್ರದರ್ಶನ Read More »

41 ನೇ ದಿನಕ್ಕೆ ಕಾಲಿರಿಸಿದ ಭಾವ ತೀರ ಯಾನ | ನಾಳೆ (ಮಾ.31) ರಂದು ಸಂಜೆ 4-30 ಕ್ಕೆ

ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಸಿನೆಮಾ41ನೇ ದಿನಕ್ಕೆ ಕಾಲಿರಿಸಿದ್ದು, ಯಶಸ್ವಿಯಾಗಿ ಮುನ್ನಡೆಯುವ ಮೂಲಕ ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನಾಳೆ ಮಾ.31 ಸೋಮವಾರ ಸಂಜೆ 4.30ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.

41 ನೇ ದಿನಕ್ಕೆ ಕಾಲಿರಿಸಿದ ಭಾವ ತೀರ ಯಾನ | ನಾಳೆ (ಮಾ.31) ರಂದು ಸಂಜೆ 4-30 ಕ್ಕೆ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ಎಂಸಿಎ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪರೀಕ್ಷೆಗೆ ಚಾಲನೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜು ಸ್ವಾಯತ್ತತೆಯನ್ನು ಪಡೆದ ಬಳಿಕ ಪ್ರಥಮ ವರ್ಷದ ಎಂಸಿಎ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ದ್ವಿತೀಯ ಆಂತರಿಕ ಪರೀಕ್ಷೆಗಳನ್ನು ಆನ್‌ಲೈನ್‌ ಮೂಲಕ ನಡೆಸಲಾಯಿತು. ಪರೀಕ್ಷಾ ಪ್ರಕ್ರಿಯೆಯ ಗೌಪ್ಯತೆ ಹಾಗೂ ಸಮಗ್ರತೆಗಳನ್ನು ಕಾಪಾಡಿಕೊಳ್ಳಲು ಆನ್‌ಲೈನ್‌ ಪರೀಕ್ಷೆಗಳಿಗೆ ಕಾಲೇಜು ಬಳಸುವ ಸಾಫ್ಟ್‌ವೇರ್ ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಯಾವುದೇ ಇತರ ವೆಬ್‌ಸೈಟ್‌ಗಳನ್ನು ಪ್ರವೇಶಿಸುವುದನ್ನು ಅಥವಾ ಯಾವುದೇ ರೀತಿಯ ಅವ್ಯವಹಾರಗಳಲ್ಲಿ   ತೊಡಗಿಸಿಕೊಳ್ಳುವುದನ್ನು ನಿರ್ಬಂಧಿಸುವ ಮೂಲಕ ಸುರಕ್ಷಿತ ಪರೀಕ್ಷಾ ವಾತಾವರಣವನ್ನು ಖಾತ್ರಿಗೊಳಿಸುತ್ತದೆ. ವಿದ್ಯಾರ್ಥಿಳು ಪರೀಕ್ಷೆಯ ಸಂದರ್ಭದಲ್ಲಿ ತಮ್ಮ ಕಂಪ್ಯೂಟರ್‌ನ ವೆಬ್‌ ಕ್ಯಾಮರಾವನ್ನು ಚಾಲ್ತಿಯಲ್ಲಿರಿಬೇಕಾಗಿದ್ದು 

ಸಂತ ಫಿಲೋಮಿನಾ ಕಾಲೇಜಿನಲ್ಲಿ ಎಂಸಿಎ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪರೀಕ್ಷೆಗೆ ಚಾಲನೆ Read More »

ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ನೂತನ ಜಾಲತಾಣ ಅನಾವರಣ, ಜೇನುಪೆಟ್ಟಿಗೆ ನಿರ್ವಹಣಾ ಸೇವೆ ಲೋಕಾರ್ಪಣೆ, ಜೇನು ಕೃಷಿಕರ ಸಮ್ಮಿಲನ

ಪುತ್ತೂರು: ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ನೂತನ ಜಾಲತಾಣದ ಅನಾವರಣ, ಕೃಷಿಕಾರಿಗಾಗಿ ಜೇನು ಪೆಟ್ಟಿಗೆ ನಿರ್ವಹಣಾ ಸೇವೆಯ ಲೋಕಾರ್ಪಣೆ ಮತ್ತು ಜೇನು ಕೃಷಿಕರ ಸಮ್ಮಿಲನ ಕಾರ್ಯಕ್ರಮ ಪುತ್ತೂರಿನ ಜಿ. ಎಲ್. ರೋಟರಿ ಸಭಾಭವನದಲ್ಲಿ ನಡೆಯಿತು. ಪುತ್ತೂರು ಶಾಸಕ ಅಶೋಕ ಕುಮಾರ ರೈ ಜೇನು ಕೃಷಿಯ ಸಾಧಕರನ್ನು ಸನ್ಮಾನಿಸಿ ಮಾತನಾಡಿ, ಜೇನಿನ ಬಳಕೆ ವ್ಯಾಪಕವಾಗಿ ಹೆಚ್ಚಾಗುವಂತೆ ಸರಕಾರದ ಮಟ್ಟದಲ್ಲಿ ಹೆಚ್ಚಿನ ವ್ಯವಸ್ಥೆಯನ್ನು ಜಾರಿಗೊಳಿಸಿ, ಜೇನು ಕೃಷಿಕರಿಗೆ ಉತ್ತಮ ಮಾರುಕಟ್ಟೆ ಲಭಿಸುವಂತೆ ರೈತ ಉತ್ಪಾದಕ ಸಂಸ್ಥೆಯ ಮೂಲಕ ಆಗಲಿ ಎಂದು

ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ನೂತನ ಜಾಲತಾಣ ಅನಾವರಣ, ಜೇನುಪೆಟ್ಟಿಗೆ ನಿರ್ವಹಣಾ ಸೇವೆ ಲೋಕಾರ್ಪಣೆ, ಜೇನು ಕೃಷಿಕರ ಸಮ್ಮಿಲನ Read More »

ನಮ್ಮ ಯುಗಾದಿ ಹಬ್ಬ

ಹಬ್ಬಗಳಲ್ಲಿ ಮೊದಲ ಹಬ್ಬ ಯುಗಾದಿ. ನಮ್ಮ ಹಿಂದೂ ಧರ್ಮದ ಪ್ರಕಾರ ವರುಷದ ಪ್ರಥಮ ದಿನವನ್ನು “ಯುಗಾದಿ” ಎಂದು ಕರೆಯಲಾಗುತ್ತದೆ. ಸೂರ್ಯನ ಸುಡು ಬಿಸಿಲಿಗೆ ಬೆಂದು ಒಣಗಿ ತನ್ನೆಲ್ಲಾ ಪತ್ರೆಗಳನ್ನು ಕಳಕೊಂಡ ವೃಕ್ಷ ಮತ್ತೆ  ಚಿಗುರೆಲೆಯ ಸೃಷ್ಟಿಸಿ ಮೃಗ-ಖಗಗಳಿಗೆ ಅಸನ-ವಸನ, ಹಸಿರು ಋಣ ನೀಡಿ ಸುಂದರ, ಸಂಭ್ರಮದ ಬದುಕಿಗೆ ಮುನ್ನುಡಿ ಬರೆಯಲು ಸ್ವಾಗತಿಸುವ ಸುಮುಹೂರ್ತವೇ  “ಯುಗಾದಿ”. ವರುಷಕ್ಕೊಮ್ಮೆ ವಸಂತ ಋತುವಿನ ಆಗಮನ ಚರಾಚರಗಳಲ್ಲಿನ ಎಳೆತನವನ್ನು ದಾಟಿಸಿ  ಯವ್ವನಕ್ಕೆ ಪಲ್ಲವಿ ಬರೆದು ಶೃಂಗಾರದ ಚಿತ್ತಾರ ಬಿಡಿಸುವ ರಮಣೀಯ ಸಮಯವೇ “ಯುಗಾದಿ”.

ನಮ್ಮ ಯುಗಾದಿ ಹಬ್ಬ Read More »

ಉಪಖಜಾನೆಯ ಸಹಾಯಕ ನಿರ್ದೇಶಕಿ ಕಲ್ಪನಾರಿಗೆ ಪುತ್ತೂರು ಸರ್ಕಾರಿ ನೌಕರರ ಸಂಘದಿಂದ ಸನ್ಮಾನ

ಪುತ್ತೂರು: ಉಪಖಜಾನೆಯ ಸಹಾಯಕ ನಿರ್ದೇಶಕಿ ಕಲ್ಪನಾ ಅವರಿಗೆ ಪುತ್ತೂರು ಸರ್ಕಾರಿ ನೌಕರರ ಸಂಘದ ವತಿಯಿಂದ ಸನ್ಮಾನ ನಡೆಯಿತು. ಪುತ್ತೂರು ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ಕಲ್ಪನಾ ಅವರನ್ನು ಶಾಲು ಹೊದಿಸಿ, ಹಾರ ಹಾಕಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ, ಕಾರ್ಯದರ್ಶಿ ಅಬ್ರಹಾಂ ಎಸ್.ಎ., ಕಾರ್ಯಾಧ್ಯಕ್ಷ ಹರಿ ಪ್ರಕಾಶ್ ಬೈಲಾಡಿ, ಉಪಾಧ್ಯಕ್ಷ ರವಿಚಂದ್ರ, ನಾಗೇಶ್, ಚಂದ್ರಶೇಖರ ನಾಯ್ಕ, ಪ್ರಮೋದ್ ಕುಮಾರ್, ಕವಿತಾ, ಸುಲೋಚನಾ, ಆಶಾ ಹಾಗೂ ನೌಕರರ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ

ಉಪಖಜಾನೆಯ ಸಹಾಯಕ ನಿರ್ದೇಶಕಿ ಕಲ್ಪನಾರಿಗೆ ಪುತ್ತೂರು ಸರ್ಕಾರಿ ನೌಕರರ ಸಂಘದಿಂದ ಸನ್ಮಾನ Read More »

error: Content is protected !!
Scroll to Top