ಪುತ್ತೂರು

ಯಕ್ಷಗಾನ ನೃತ್ಯ ಕಲಾ ರತ್ನ ಪ್ರಶಸ್ತಿಯನ್ನು ಪಡೆದ ಶ್ರುತಿ ವಿಸ್ಮಿತ್

ಪುತ್ತೂರು : ಸಮಾಜ ಕಲ್ಯಾಣ ಸಂಸ್ಥೆ ಬೆಂಗಳೂರು, ವಿಶ್ವ ಕನ್ನಡ ಜಾನಪದ ಪರಿಷತ್ ಬೆಂಗಳೂರು  ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಏ.6 ರಂದು ಬೆಂಗಳೂರಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ  ಪುತ್ತೂರು ಬಲ್ನಾಡು ನಿವಾಸಿ ಶ್ರುತಿ ವಿಸ್ಮಿತ್ ರವರಿಗೆ ರಾಷ್ಟ್ರೀಯ ವೀರ ವನಿತೆ ಯಕ್ಷಗಾನ ಕಲಾ ರತ್ನ ರಾಷ್ಟ್ರ ಪ್ರಶಸ್ತಿ  ನೀಡಿ ಗೌರವಿಸಲಾಯಿತು. ಉಪ್ಪಿನಂಗಡಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿರುವಾಗ ಕಲಾವಿದ ಪಾತಾಳ ಅಂಬಾ ಪ್ರಸಾದ್ ಅವರಿಂದ […]

ಯಕ್ಷಗಾನ ನೃತ್ಯ ಕಲಾ ರತ್ನ ಪ್ರಶಸ್ತಿಯನ್ನು ಪಡೆದ ಶ್ರುತಿ ವಿಸ್ಮಿತ್ Read More »

ಜಾತ್ರೆಯೊಳಗೊಂದು ಜಾತ್ರೆ ಯೋಜನೆಯಡಿ ಮಹಾಲಿಂಗೇಶ್ವರ ಸಭಾಭವನದಲ್ಲಿ ಅಂಗಡಿ ಮಳಿಗೆಗಳಿಗೆ ಅವಕಾಶ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ಪ್ರಪ್ರಥಮ ಬಾರಿಗೆ ಪುತ್ತೂರು ಜಾತ್ರೋತ್ಸವದ ಅಂಗವಾಗಿ ಜಾತ್ರೆಯೊಳಗೊಂದು ಜಾತ್ರೆ ಯೋಜನೆಯಡಿ ಅಂಗಡಿ ಮಳಿಗೆಗಳಿಗೆ ಅವಕಾಶವನ್ನು ನೀಡಿದೆ. ಪುತ್ತೂರು ಮಹಾಲಿಂಗೇಶ್ವರ ದೇವಳದ ಸಭಾಭವನದ ಮೊದಲ ಮಹಡಿಯಲ್ಲಿ ಎಪ್ರಿಲ್ 10 ರಿಂದ 20ರವರೆಗೆ ಸ್ಪಾಲ್ ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಒಟ್ಟು 25 ಮಳಿಗೆಗಳಿಗೆ ಅವಕಾಶವಿದ್ದು, ಸದ್ಯ ಕೆಲವೇ ಕೆಲವು ಸ್ಪಾಲ್ಗಳು ಲಭ್ಯವಿದೆ. ಅಸಕ್ತರು ಈ ಕೆಳಗಿನ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ರೋ. ಕುಸುಮ್ ರಾಜ್ 9945170216 ರೋ. ಸುಹಾಸ್‍ 9480535708, ರೋ. ಸಾಯಿರಾಂ

ಜಾತ್ರೆಯೊಳಗೊಂದು ಜಾತ್ರೆ ಯೋಜನೆಯಡಿ ಮಹಾಲಿಂಗೇಶ್ವರ ಸಭಾಭವನದಲ್ಲಿ ಅಂಗಡಿ ಮಳಿಗೆಗಳಿಗೆ ಅವಕಾಶ Read More »

ಹೃದಯಾಘಾತದಿಂದ ಡೆಲಿವರಿ ಸಿಬ್ಬಂದಿ ಮೃತ್ಯು

ಪುತ್ತೂರು:  ಫ್ಲಿಪ್‍ ಕಾರ್ಟ್‍ ಡೆಲಿವರಿ ಸಿಬ್ಬಂದಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಪುತ್ತೂರು ಸೇಡಿಯಾಪು ಕಜೆ ನಿವಾಸಿ ದುರ್ಗಾ ಪ್ರಸಾದ್ (30) ಮೃತಪಟ್ಟವರು. ಮೃತರು ತಂದೆ ತಾಯಿ ಮತ್ತು ಸಹೋದರಿಯರನ್ನು ಅಗಲಿದ್ದಾರೆ.

ಹೃದಯಾಘಾತದಿಂದ ಡೆಲಿವರಿ ಸಿಬ್ಬಂದಿ ಮೃತ್ಯು Read More »

ರಾಜ್ಯ ಸರಕಾರದ ತುಘಲಕ್ ಆಡಳಿತ, ಜನವಿರೋಧಿ ನೀತಿ ಖಂಡಿಸಿ ಏ.9 ರಂದು ಮಂಗಳೂರಿನಲ್ಲಿ ಜನಾಕ್ರೋಶ ಪಾದಯಾತ್ರೆ : ಸಂಜೀವ ಮಠಂದೂರು

ಪುತ್ತೂರು: ರಾಜ್ಯ ಸರಕಾರ ಒಂದೆಡೆ ಗ್ಯಾರಂಟಿ ನೆಪದಲ್ಲಿ ಅಭಿವೃದ್ಧಿ ಮರೆತು, ಇನ್ನೊಂದೆಡೆ ನೆಲ-ಜಲ ಎಲ್ಲವನ್ನೂ ಬಿಡದೆ ದರ ಏರಿಕೆ ಮೂಲಕ ಜನಸಾಮಾನ್ಯರನ್ನು ಲೂಟುತ್ತಿದ್ದು, ರಾಜ್ಯ ಸರಕಾರದ ತುಘಲಕ್ ಆಡಳಿತ, ಜನವಿರೋಧಿ ನೀತಿಯನ್ನು ಖಂಡಿಸಿ ಏ.9 ರಂದು ಮಧ್ಯಾಹ್ನ 1 ಗಂಟೆಗೆ ಮಂಗಳೂರಿನಲ್ಲಿ ಜನಾಕ್ರೋಶ ಪಾದಯಾತ್ರೆ ನಡೆಯಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸುಮಾರು ಮೂರು ಸಾವಿರ ಮಂದಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಬಜೆಟ್

ರಾಜ್ಯ ಸರಕಾರದ ತುಘಲಕ್ ಆಡಳಿತ, ಜನವಿರೋಧಿ ನೀತಿ ಖಂಡಿಸಿ ಏ.9 ರಂದು ಮಂಗಳೂರಿನಲ್ಲಿ ಜನಾಕ್ರೋಶ ಪಾದಯಾತ್ರೆ : ಸಂಜೀವ ಮಠಂದೂರು Read More »

7ನೇ ವಾರಕ್ಕೆ ಕಾಲಿರಿಸಿದ “ಭಾವ ತೀರ ಯಾನ’ ಸಿನಿಮಾ | ನಾಳೆ ಸಂಜೆ 4:30 ಕ್ಕೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 7ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನಾಳೆ ಏ.8 ಮಂಗಳವಾರದಂದು ಸಂಜೆ 4:30ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.

7ನೇ ವಾರಕ್ಕೆ ಕಾಲಿರಿಸಿದ “ಭಾವ ತೀರ ಯಾನ’ ಸಿನಿಮಾ | ನಾಳೆ ಸಂಜೆ 4:30 ಕ್ಕೆ ಚಿತ್ರ ಪ್ರದರ್ಶನ Read More »

ನಾಪತ್ತೆಯಾಗಿದ್ದ ವಿದ್ಯಾರ್ಥಿ ಮೊಹಮ್ಮದ್ ಹಸೈನಾರ್ ಪತ್ತೆ

ಪುತ್ತೂರು :ಮನೆಯಿಂದ ಹೊರಹೋಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯೋರ್ವ ಭಾನುವಾರ ಅರಸಿಕೆರೆಯಲ್ಲಿ ಪತ್ತೆಯಾಗಿದ್ದಾನೆ. ಶನಿವಾರ ಸಂಜೆ ಕೊಡಿಪ್ಪಾಡಿ ಮನೆಯಿಂದ ಇನ್ನು ಹುಡುಕಬೇಡಿ ಎಂದು ಹೇಳಿ ನಾಪತ್ತೆಯಾಗಿದ್ದ ಕೊಡಿಪ್ಪಾಡಿ ನಿವಾಸಿ ರಝಕ್ ಮತ್ತು ಸಕೀನ ದಂಪತಿ ಪುತ್ರ ಪುತ್ತೂರು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಹಸೈನಾರ್ (15)  ಪತ್ತೆಯಾದಾತ. ಈ ಕುರಿತು ಪೋಷಕರು ಪುತ್ತೂರು ಠಾಣೆಯಲ್ಲಿ ದೂರು ನೀಡಿದ್ದು ಪೋಷಕರಿಂದ ಮಾಹಿತಿ ಪಡೆದು ಹುಡುಕಾಡುತ್ತಿದ್ದಂತೆ ಸಂಜೆ ಅರಸಿಕೆರೆ ಸಮೀಪ ಈತ ಪತ್ತೆಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.

ನಾಪತ್ತೆಯಾಗಿದ್ದ ವಿದ್ಯಾರ್ಥಿ ಮೊಹಮ್ಮದ್ ಹಸೈನಾರ್ ಪತ್ತೆ Read More »

ಪುತ್ತೂರು ತಾಲೂಕು ವ್ಯಾಪ್ತಿಯ ಸರಕಾರಿ ನೌಕರರಿಗೆ ಆಟೋಟ, ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಮಾಹಿತಿ ಕಾರ್ಯಾಗಾರ | ಸರಕಾರಿ ನೌಕರರ ದಿನಾಚರಣೆ

ಪುತ್ತೂರು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ತಾಲೂಕು ಶಾಖೆ ವತಿಯಿಂದ ಸರಕಾರಿ ನೌಕರರ ದಿನಾಚರಣೆ ಅಂಗವಾಗಿ ಪುತ್ತೂರು ತಾಲೂಕು ವ್ಯಾಪ್ತಿಯ ಸರಕಾರಿ ನೌಕರರಿಗೆ ಆಟೋಟ, ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಮಾಹಿತಿ ಕಾರ್ಯಾಗಾರ ಭಾನುವಾರ ದರ್ಬೆ ಆಫೀಸರ್ಸ್‍ ಕ್ಲಬ್‍ನಲ್ಲಿ ನಡೆಯಿತು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನವೀನ್‍ ಕುಮಾರ್ ಎಂ.ಎಸ್‍. ಸಮಾರಂಭ ಉದ್ಘಾಟಿಸಿ ಮಾತನಾಡಿ, ಸರಕಾರಿ ನೌಕರರಿಗೆ ಮುಖ್ಯ ಸಮಸ್ಯೆಯಾಗಿರುವ ಎನ್‍ಪಿಎಸ್‍ಜ್ಯಾರಿಯನ್ನು ನ್ನು ರದ್ದುಪಡಿಸಿ ಒಪಿಎಸ್‍ಜ್ಯಾರಿಗೊಳಿಸುವಂತೆ ನಮ್ಮ ಮುಂದಿನ ಬಹುಮುಖ್ಯ ಹೋರಾಟವಾಗಿದ್ದು, ಎಲ್ಲಾ

ಪುತ್ತೂರು ತಾಲೂಕು ವ್ಯಾಪ್ತಿಯ ಸರಕಾರಿ ನೌಕರರಿಗೆ ಆಟೋಟ, ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಮಾಹಿತಿ ಕಾರ್ಯಾಗಾರ | ಸರಕಾರಿ ನೌಕರರ ದಿನಾಚರಣೆ Read More »

ತುಳು ರಂಗಭೂಮಿ ಕಲಾವಿದ ಸುರೇಶ್‍ ವಿಟ್ಲ ನಿಧನ

ವಿಟ್ಲ: ತುಳು ರಂಗ ಭೂಮಿ ಕಲಾವಿದ, ಮಂಜೇಶ್ವರ ಶಾರದಾ ಆರ್ಟ್ಸ್ನ ಕಲಾವಿದ ಸುರೇಶ್ ವಿಟ್ಲ ಇಂದು ನಿಧನ ಹೊಂದಿದರು. ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರು ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ತುಳು ರಂಗಭೂಮಿ ಕಲಾವಿದ ಸುರೇಶ್‍ ವಿಟ್ಲ ನಿಧನ Read More »

ಭಾವ ತೀರ ಯಾನ ಸಿನೆಮಾಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ಮೆಚ್ಚುಗೆ | ನಾಳೆ (ಏ.7) ರಂದು ಸಂಜೆ 4-30 ಕ್ಕೆ ಶೋ

ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಸಿನೆಮಾಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ಮೆಚ್ಚುಗೆ ಬರುತ್ತಿದ್ದು, ಯಶಸ್ವಿಯಾಗಿ ಪ್ರದರ್ಶನಗೊಳ್ಳುವ ಮೂಲಕ ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನಾಳೆ ಏ.7 ಸೋಮವಾರ ಸಂಜೆ 4.30ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.

ಭಾವ ತೀರ ಯಾನ ಸಿನೆಮಾಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ಮೆಚ್ಚುಗೆ | ನಾಳೆ (ಏ.7) ರಂದು ಸಂಜೆ 4-30 ಕ್ಕೆ ಶೋ Read More »

ಸಮರ್ಪಣ್‍ ವಿಟ್ಲ ಸಂಘಟನೆಯ ಸೇವಾ ಕಲ್ಪದಲ್ಲಿ ನಿರ್ಮಿಸಿದ ಮನೆ ಗೃಹಪ್ರವೇಶ

ವಿಟ್ಲ: ಸಮರ್ಪಣ್ ವಿಟ್ಲ ಸಂಘಟನೆಯ ಸೇವಾ ಪ್ರಕಲ್ಪದಲ್ಲಿ ವಿಟ್ಲ ಕಸಬಾ ಗ್ರಾಮದ ಇರಂದೂರು ಎಂಬಲ್ಲಿ ಅರ್ಹ ಫಲಾನುಭವಿ ಕುಟುಂಬಕ್ಕೆ ನಿರ್ಮಿಸಿದ  ಮನೆಯ ಗೃಹಪ್ರವೇಶ ಇಂದು  (ಭಾನುವಾರ) ಬೆಳಿಗ್ಗೆ 7.30 ಕ್ಕೆ  ರಾಜೇಶ್ ಭಟ್ ಅವರ ಪೌರೋಹಿತ್ಯ ದೊಂದಿಗೆ ಗಣಪತಿ ಹವನ ಹಾಗೂ ಹಾಲುಕ್ಕಿಸುವುದರೊಂದಿಗೆ  ನಡೆಯಿತು. ಈ ಸಂದರ್ಭ ಮನೆ ನಿರ್ಮಾಣದಲ್ಲಿ ಸಹಕರಿಸಿದ ಮಹನೀಯರಾದ ಧನಂಜಯ ನೆಕ್ಕರೆ ಕಾಡು,  ರವಿ ಅಂಚನ್ , ಕೀರ್ತನ್ ಸಣ್ಣಗುತ್ತು,  ತೀರ್ಥೆಶ್, ಮಹೇಶ್ , ಮೊದಲಾದವರನ್ನು ಸಮರ್ಪಣ್ ವಿಟ್ಲ ಇದರ ಅಧ್ಯಕ್ಷ ಯಶವಂತ್

ಸಮರ್ಪಣ್‍ ವಿಟ್ಲ ಸಂಘಟನೆಯ ಸೇವಾ ಕಲ್ಪದಲ್ಲಿ ನಿರ್ಮಿಸಿದ ಮನೆ ಗೃಹಪ್ರವೇಶ Read More »

error: Content is protected !!
Scroll to Top