ಪುತ್ತೂರು

ಡಾ.ಬಿ.ಆರ್.ಅಂಬೇಡ್ಕರ್ ಪುಣ್ಯತಿಥಿ : ಮಹಾಪರಿನಿರ್ವಾಣ ದಿನ ಆಚರಣೆ

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಡಾ.ಬಿ. ಆರ್ ಅಂಬೇಡ್ಕರ್ ರವರ ಪುಣ್ಯತಿಥಿಯ ಪ್ರಯುಕ್ತ ಮಹಾಪರಿನಿರ್ವಾಣ ದಿನವನ್ನು ಬುಧವಾರ ಆಚರಿಸಲಾಯಿತು. ಸಂಸ್ಥೆಯ ಹಳೆಯ ವಿದ್ಯಾರ್ಥಿ, ವಕೀಲ ತೇಜಸ್ ಕೊಂಬೆಟ್ಟು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು, ಡಾ.ಬಿ. ಆರ್ ಅಂಬೇಡ್ಕರ್ ರವರ ಜೀವನ ಶೈಲಿ, ಅವರ ರಾಷ್ಟ್ರೀಯ ಚಿಂತನೆಗಳು ಎಲ್ಲರಿಗೂ ಸ್ಪೂರ್ತಿ. ಅವರು ಉತ್ತಮ ನ್ಯಾಯವಾದಿಯೂ ಆಗಿದ್ದು ಸಮಾಜದಲ್ಲಿದ್ದ ಲಿಂಗ ತಾರತಮ್ಯದ ಕುರಿತಾಗಿ ಧ್ವನಿ ಎತ್ತಿದವರಲ್ಲಿ ಒಬ್ಬರು. ಜೊತೆಗೆ ರಾಷ್ಟ್ರ ವಿಭಜನೆಯ ಸಂದರ್ಭದಲ್ಲಿ ತಮ್ಮ ನಿಲುವನ್ನು ಪ್ರತಿಪಾದಿಸುತ್ತಾ ಹೋರಾಟ ನಡೆಸಿದವರು ಎಂದು […]

ಡಾ.ಬಿ.ಆರ್.ಅಂಬೇಡ್ಕರ್ ಪುಣ್ಯತಿಥಿ : ಮಹಾಪರಿನಿರ್ವಾಣ ದಿನ ಆಚರಣೆ Read More »

ರಾಮಕುಂಜ ನಿವಾಸಿ ನೇಣು ಬಿಗಿದು ಆತ್ಮಹತ್ಯೆ

ಕಡಬ: ತಾಲೂಕಿನ ರಾಮಕುಂಜ ಗ್ರಾಮದ ಕಲ್ಲೇರಿ ನಿವಾಸಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ. ಚಂದಪ್ಪ ಕುಲಾಲ್‍ (52) ಆತ್ಮಹತ್ಯೆ ಮಾಡಿಕೊಂಡವರು. ಕೂಲಿ ಕಾರ್ಮಿಕರಾಗಿದ್ದ ಚಂದಪ್ಪ ಕುಲಾಲ್, ಬೆಳಿಗ್ಗೆ ತೋಟಕ್ಕೆ ಹೋದವರು ಅಡಿಕೆ ಮರಗಳ ಮಧ್ಯೆ ಕಬ್ಬಿಣದ ಸಲಾಕೆ ಕಟ್ಟಿ ಕುತ್ತಿಗೆಗೆ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ರಾಮಕುಂಜ ನಿವಾಸಿ ನೇಣು ಬಿಗಿದು ಆತ್ಮಹತ್ಯೆ Read More »

ಮಹಾಲಿಂಗೇಶ್ವರ ದೇವಸ್ಥಾನದ ದಂಡ್ ಶಿಲಾಲ್ ಪರಿಚಾರಕ ನಿಧನ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಸಂದರ್ಭ ದಂಡ್ ಶಿಲಾಲ್ ಪರಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆರೆಮೂಲೆ ನಿವಾಸಿ ಸಂಪತ್ ಪೂಜಾರಿ (31) ಬುಧವಾರ ಮುಂಜಾನೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪುತ್ತೂರು ಆಸ್ಪತ್ರೆಗೆ ದಾಖಲಾಗಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು. ಮೃತರು ತಂದೆ, ತಾಯಿ, ಸಹೋದರನ್ನು ಅಗಲಿದ್ದಾರೆ.

ಮಹಾಲಿಂಗೇಶ್ವರ ದೇವಸ್ಥಾನದ ದಂಡ್ ಶಿಲಾಲ್ ಪರಿಚಾರಕ ನಿಧನ Read More »

ಚಿಣ್ಣರ ಕ್ರೀಡೋತ್ಸವ-2023-24

ಪುತ್ತೂರು: ಬಾಲ್ಯದಿಂದಲೇ ಕ್ರೀಡಾ ಮನೋಭಾವ ಮೂಡಿಸಿಕೊಂಡು ಸದೃಢ ಶರೀರ ಬೆಳೆಸಿಕೊಳ್ಳುವುದು ಮಗುವಿನ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಹರಿಣಾಕ್ಷಿ. ಜೆ. ಶೆಟ್ಟಿ ಹೇಳಿದರು. ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಣ್ಣರ ಕ್ರೀಡೋತ್ಸವ-2023-24 ಉದ್ಘಾಟಿಸಿ ಮಾತನಾಡಿ, ಇಂತಹ ಚಟುವಟಿಕೆಗಳಿಂದ ಮಗುವಿನ ನೈಜ ಪ್ರತಿಭೆ ಬೆಳಕಿಗೆ ಬರುತ್ತದೆ ಎಂದು ಹೇಳಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಪ್ರಕಾಶ್ ಎಂ. ಅಧ್ಯಕ್ಷತೆ ವಹಿಸಿದ್ದರು. ಸದಸ್ಯೆ ಮಾಲಾ

ಚಿಣ್ಣರ ಕ್ರೀಡೋತ್ಸವ-2023-24 Read More »

ಕಾರು-ಲಾರಿ ಡಿಕ್ಕಿಯಾಗಿ ಇಬ್ಬರು ಗಂಭೀರ

ಪುತ್ತೂರು: ಕಾರು ಮತ್ತು ಈಚರ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಕಬಕ ಅಡ್ಯಲಾಯ ದೈವಸ್ಥಾನದ ಎದುರಿನಲ್ಲಿ ನಡೆದಿದೆ. ಕಾರಿನಲ್ಲಿದ್ದವರು ಮಣಿಪಾಲ ಮೂಲದವರು ಎನ್ನಲಾಗಿದೆ. ಈಚರ್ ಲಾರಿ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಾರು-ಲಾರಿ ಡಿಕ್ಕಿಯಾಗಿ ಇಬ್ಬರು ಗಂಭೀರ Read More »

ಬೆಳಗಾವಿ ಅಧಿವೇಶನದಲ್ಲಿ ಬೃಹತ್ ಪ್ರತಿಭಟನೆ, ಹಕ್ಕೊತ್ತಾಯ ಮಂಡನೆ

ಪುತ್ತೂರು: ವಿಕಲಚೇತನರಿಗೆ ಸರಕಾರದ ಹಲವು ಯೋಜನೆಗಳು ಸಹಿತ ವೇತನ, ಪ್ರಯಾಣ ಭತ್ಯೆ ಮುಂತಾದ ಸವಲತ್ತುಗಳು ನಮಗೆ ಸಿಗಬೇಕು ಎಂದು ಒತ್ತಾಯಿಸಿ ಡಿ. 7ರಂದು ನಡೆಯುವ ಬೆಳಗಾವಿ ಅಧಿವೇಶನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿದ್ದು, ಹಕ್ಕೊತ್ತಾಯ ಮಂಡಿಸಲಿದ್ದೇವೆ ಎಂದು ಪುನರ್ ವಸತಿ ಕಾರ್ಯಕರ್ತರ ಜಿಲ್ಲಾ ಅಧ್ಯಕ್ಷ ಜೋನ್ ಬ್ಯಾಪ್ಟಿಸ್ಟ್ ಡಿ’ಸೋಜಾ ತಿಳಿಸಿದ್ದಾರೆ. ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ವಿಕಲಚೇತನ ವಿವಿಧೋದ್ದೇಶ ಸಂಘ, ನಗರ ಹಾಗೂ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರ ಜಿಲ್ಲಾ ಒಕ್ಕೂಟ ರಾಜ್ಯ ಕಮಿಟಿಯ ನಿರ್ದೇಶನದಂತೆ ಪ್ರತಿಭಟನೆ

ಬೆಳಗಾವಿ ಅಧಿವೇಶನದಲ್ಲಿ ಬೃಹತ್ ಪ್ರತಿಭಟನೆ, ಹಕ್ಕೊತ್ತಾಯ ಮಂಡನೆ Read More »

ಸೌತಡ್ಕ: ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಮೆಲ್ಕಾರು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಎರಡನೇ ವಾರ್ಷಿಕೋತ್ಸವ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಶ್ರೀ ಗಣೇಶ ಸಭಾ ಭವನದಲ್ಲಿ ಡಿ. 17ರಂದು ನಡೆಯಲಿದ್ದು, ಆಮಂತ್ರಣ ಪತ್ರವನ್ನು ಬಿಡುಗಡೆ ಮಾಡಲಾಯಿತು. ಆಮಂತ್ರಣ ಪತ್ರಿಕೆಯನ್ನು ಸೌತಡ್ಕ ಶ್ರೀ ಗಣಪತಿ ಸನ್ನಿಧಿಯಲ್ಲಿ ಅರ್ಚಕ ಸತ್ಯಪ್ರಿಯ ಕಲ್ಲೂರಾಯ, ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ರಾವ್ ಎಂ. ಬಿಡುಗಡೆಗೊಳಿಸಿದರು. ವ್ಯವಸ್ಥಾಪನ ಸಮಿತಿ ಸದಸ್ಯರಾದ ಪುರಂದರ ಕಡೀರ, ಪ್ರಶಾಂತ ಪೂವಾಜೆ, ವಿಠಲ ಕುರ್ತಿ, ಅರ್ಚಕರಾದ ಸುಬ್ರಹ್ಮಣ್ಯ ತೊಡ್ತಿಲ್ಲಾಯ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.

ಸೌತಡ್ಕ: ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಶಾಂತಿವನ ಟ್ರಸ್ಟ್ ಪುಸ್ತಕಾಧಾರಿತ ಸ್ಪರ್ಧೆಯಲ್ಲಿ ಪ್ರಶಸ್ತಿ

ಪುತ್ತೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ  ಯೋಜನೆ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಪುಸ್ತಕಾಧಾರಿತ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಮಂಗಳದುರ್ಗಾ ಟಿ.ಆರ್ ಶ್ಲೋಕ ಕಂಠಪಾಠ (ಜ್ಞಾನವಾರಿಧಿ)ದಲ್ಲಿ ದ್ವಿತೀಯ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜ್ಞಾನ ಶರಧಿ ಪುಸ್ತಕಾಧಾರಿತ ಭಾಷಣ ಸ್ಪರ್ಧೆಯಲ್ಲಿ 5ನೇ ತರಗತಿಯ ಶ್ರೀಕೃಷ್ಣ.ಬಿ ತೃತೀಯ ಸ್ಥಾನ ಗಳಿಸಿದ್ದಾನೆ. ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕೇತರ

ಶಾಂತಿವನ ಟ್ರಸ್ಟ್ ಪುಸ್ತಕಾಧಾರಿತ ಸ್ಪರ್ಧೆಯಲ್ಲಿ ಪ್ರಶಸ್ತಿ Read More »

ರಿಕ್ಷಾ ಚಾಲಕ ವಿನೋದ್ ನಿಧನ

ಪುತ್ತೂರು: ಭಕ್ತಕೋಡಿ ಪಾಲೆತ್ತಗುರಿ ನಿವಾಸಿ ಆಟೋ ರಿಕ್ಷಾ ಚಾಲಕ ವಿನೋದ್ (23) ಸೋಮವಾರ ನಿಧನರಾದರು. ಭಕ್ತಕೋಡಿಯಲ್ಲಿ ರಿಕ್ಷಾ ಚಾಲನೆ ಮಾಡುತ್ತಿದ್ದ ವಿನೋದ್ ಅವರಿಗೆ ಎರಡು ತಿಂಗಳ ಜ್ವರ ಕಾಣಿಸಿದ್ದು, ಔಷಧಿ ತೆಗೆದುಕೊಳ್ಳುತ್ತಿದ್ದರು.  ಭಾನುವಾರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನಲೆಯಲ್ಲಿ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರೂ ಆದಾಗಲೇ ಅವರು ಕೊನೆಯುಸಿರೆಳೆದಿದ್ದರು. ಮೃತರು ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

ರಿಕ್ಷಾ ಚಾಲಕ ವಿನೋದ್ ನಿಧನ Read More »

ಬೆಂಗಡ್ಕ ನಿವಾಸಿ ಅಭಿಷೇಕ್ ನಾಪತ್ತೆ | ಹುಡುಕಿಕೊಡುವಂತೆ ಹೆತ್ತವರಿಂದ ಮನವಿ

ಕಾಣಿಯೂರು: ಬೆಂಗಡ್ಕ ನಿವಾಸಿ ಅಭಿಷೇಕ್ ಕಾಣೆಯಾಗಿದ್ದು, ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ತಾಲೂಕು ಕಾಣಿಯೂರು ಗ್ರಾಮದ ಬೆಂಗಡ್ಕ ಎಂಬಲ್ಲಿನ ನಿವಾಸಿ ಜತ್ತಪ್ಪ ಗೌಡ ಎಂಬವರ ಮಗ ಅಭಿಷೇಕ್ ಎಂಬವರು ನಿಂತಿಕಲ್ಲು ಪರಿವಾರ ಪಂಚಲಿಂಗೇಶ್ವರ ಐಟಿಐ ಕಾಲೇಜಿನಲ್ಲಿ ಐಟಿಐ ವಿದ್ಯಾಭ್ಯಾಸ ಮುಗಿಸಿ ಕಳೆದ ಒಂದು ವರ್ಷದಿಂದ ಬೆಂಗಳೂರಿನ Altgreen ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಸ್ನೇಹಿತರೊಂದಿಗೆ ಬೆಂಗಳೂರಿನಲ್ಲಿಯೇ ವಾಸವಿದ್ದರು. ಎರಡು ತಿಂಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿದ್ದ ಅಭಿಷೇಕ್‍ ಇತ್ತೀಚಿಗೆ  ಬೆಂಗಳೂರಿಂದ ಮನೆಗೆ ಬಂದು ನ.20ರಂದು

ಬೆಂಗಡ್ಕ ನಿವಾಸಿ ಅಭಿಷೇಕ್ ನಾಪತ್ತೆ | ಹುಡುಕಿಕೊಡುವಂತೆ ಹೆತ್ತವರಿಂದ ಮನವಿ Read More »

error: Content is protected !!
Scroll to Top