ಸರಕಾರದಿಂದಲೇ ನಮಗೆ ನೇರವಾಗಿ ಸಂಬಳ ಸಿಗುವಂತಾಗಲಿ | ಘನತ್ಯಾಜ್ಯ ಘಟಕ ಸಿಬ್ಬಂದಿಗಳಿಂದ ಶಾಸಕ ಅಶೋಕ್ ರೈ ಗೆ ಮನವಿ
ಪುತ್ತೂರು: ಗ್ರಾಮ ಪಂಚಾಯತ್‌ನ ಘನತ್ಯಾಜ್ಯ ಘಟಕದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಸರಕಾರದಿಂದಲೇ ನೇರವಾಗಿ ಸಂಬಳ ಸಿಗುವಂತೆ ಮಾಡಬೇಕು, ಈ ಬಗ್ಗೆ ಸಚಿವರು, ಸರಕಾರದ ಜೊತೆ ಮಾತುಕತೆ ನಡೆಸಬೇಕು ಎಂದು ಘನತ್ಯಾಜ್ಯ ಘಟಕದ ಸಿಬ್ಬಂದಿಗಳು ಪುತ್ತೂರು ಶಾಸಕ ಅಶೋಕ್ ರೈಗಳಿಗೆ ಮನವಿ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಯೋಜನೆ ಸಂಜೀವಿನಿಯಡಿಯಲ್ಲಿ ಮಹಿಳೆಯರ ಜೀವನ ಮಟ್ಟ ಸುಧಾರಿಸುವ ದಿಶೆಯಲ್ಲಿ ಆರಂಭಗೊಂಡ ಘನತ್ಯಾಜ್ಯ ಘಟಕದ ಮಹಿಳಾ ಸಿಬ್ಬಂದಿ ಮಹಿಳಾ ಚಾಲಕರು ಹಾಗೂ ನಿರ್ವಾಹಕರಾಗಿ ಆಯ್ಕೆಗೊಂಡು ಸುಮಾರು ವರ್ಷಗಳಿಂದ ಗ್ರಾಮ […]










