ರಾಜಕೀಯ

ಬ್ಯಾನರಿಗೆ ಚಪ್ಪಲಿ ಹಾರ ಹಾಕಿದವರನ್ನು ರೌಡಿ ಅಂದ್ರು: ಮಾಜಿ ಶಾಸಕಿ ಹೇಳಿಕೆ | ಶಾಸಕರು ನೀಡಿರುವ ಸೂಚನೆಯಂತೆ ಸಮಾಜದ ಶಾಂತಿಯೇ ನಮ್ಮ ಉದ್ದೇಶ: ಶಕುಂತಳಾ ಶೆಟ್ಟಿ

ಪುತ್ತೂರು: ಹಲ್ಲೆ ನಡೆಸಲು ಕಾಂಗ್ರೆಸ್ ಒತ್ತಡ ಹಾಕಿಯೇ ಇಲ್ಲ. ಆ ಸಂದರ್ಭ ಶಾಸಕ ಅಶೋಕ್ ಕುಮಾರ್ ರೈ ಅವರು ಬೆಂಗಳೂರಿಗೆ ತೆರಳಿದ್ದರು. ನಾನಾಗಿ ಆ ವಿಷಯಕ್ಕೆ ಹೋಗಿಲ್ಲ. ಹೀಗಿರುವಾಗ ಒತ್ತಡ ಹಾಕುವುದಾದರೂ ಯಾರು? ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಯುವಕರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಬಳಿಕ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿದರು. (ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿರುವ ವೀಡಿಯೋ ಇಲ್ಲಿ ನೋಡಿ.) ಪೊಲೀಸ್ ದೌರ್ಜನ್ಯ ನಡೆದ ಬಳಿಕ ಪೊಲೀಸರ ಜೊತೆ ಮಾತನಾಡಿದ್ದೆ. ಆ ಸಂದರ್ಭ ಬ್ಯಾನರ್ ಹಾಕಿ […]

ಬ್ಯಾನರಿಗೆ ಚಪ್ಪಲಿ ಹಾರ ಹಾಕಿದವರನ್ನು ರೌಡಿ ಅಂದ್ರು: ಮಾಜಿ ಶಾಸಕಿ ಹೇಳಿಕೆ | ಶಾಸಕರು ನೀಡಿರುವ ಸೂಚನೆಯಂತೆ ಸಮಾಜದ ಶಾಂತಿಯೇ ನಮ್ಮ ಉದ್ದೇಶ: ಶಕುಂತಳಾ ಶೆಟ್ಟಿ Read More »

ಮೇ 22 -24 : ವಿಧಾನಸಭೆ ವಿಶೇಷ ಅಧಿವೇಶನ | ಆರ್.ವಿ. ದೇಶಪಾಂಡೆ ಹಂಗಾಮಿ ಸ್ಪೀಕರ್

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಮೇ 22 ರಿಂದ 24 ರವರೆಗೆ ಮೊದಲ ವಿಧಾನಸಭೆ ಅಧಿವೇಶನ ನಡೆಯಲಿದೆ. ಮೊದಲ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸೋಮವಾರದಿಂದ ಒಟ್ಟು ಮೂರು ದಿನಗಳ ಕಾಲ ಹಂಗಾಮಿ ಸ್ಪೀಕರ್ ನೇತೃತ್ವದಲ್ಲಿ ಅಧಿವೇಶನ ನಡೆಯಲಿದೆ ಎಂದರು. ಆರ್.ವಿ. ದೇಶಪಾಂಡೆ ಹಂಗಾಮಿ ಸ್ಪೀಕರ್ಮೇ 22ರಂದು ನಡೆಯುವ ಅಧಿವೇಶನದ ಹಂಗಾಮಿ ಸಭಾಪತಿಯಾಗಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ

ಮೇ 22 -24 : ವಿಧಾನಸಭೆ ವಿಶೇಷ ಅಧಿವೇಶನ | ಆರ್.ವಿ. ದೇಶಪಾಂಡೆ ಹಂಗಾಮಿ ಸ್ಪೀಕರ್ Read More »

ಲಕ್ಷಾಂತರ ಹಿಂದೂಗಳ ಶಾಪ ತಟ್ಟೀತು: ಮುತಾಲಿಕ್ ಆಕ್ರೋಶ

ಪುತ್ತೂರು: ಬ್ಯಾನರಿಗೆ ಚಪ್ಪಲಿ ಹಾರ ಹಾಕಿದ್ದಾರೆ ಎಂಬ ಒಂದೇ ಕಾರಣಕ್ಕೆ ಬ್ರಿಟಿಷ್ ಮಾದರಿಯ ಕ್ರೌರ್ಯ ನಡೆಸಿರುವುದು ಖಂಡನೀಯ ಎಂದು ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಯುವಕರನ್ನು ಭೇಟಿಯಾಗಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಮುತಾಲಿಕ್ ಮಾತಿನ ಪೂರ್ಣ ವಿವರ ಈ ವೀಡಿಯೋದಲ್ಲಿದೆ. ಹರೀಶ್ ಅಧಿಕಾರಿ, ಚಿತ್ತರಂಜನ್ ಶೆಟ್ಟಿ, ರೂಪಾ ಶೆಟ್ಟಿ, ಸಂತೋಷ್ ಪುರೋಹಿತ್, ಸುಬ್ರಹ್ಮಣ್ಯ ಎಸ್. ನಟ್ಟೋಜ ಉಪಸ್ಥಿತರಿದ್ದರು.

ಲಕ್ಷಾಂತರ ಹಿಂದೂಗಳ ಶಾಪ ತಟ್ಟೀತು: ಮುತಾಲಿಕ್ ಆಕ್ರೋಶ Read More »

“ಸಿದ್ಧರಾಮಯ್ಯ ಎಂಬ ಹೆಸರಿನ ನಾನು…” | ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಿದ್ದರಾಮಯ್ಯ

ಬೆಂಗಳೂರು: ಸಿದ್ದರಾಮಯ್ಯ ಎಂಬ ಹೆಸರಿನ ನಾನು… ಎಂದು ಮುಖ್ಯಮಂತ್ರಿ ಹುದ್ದೆಯ ಪ್ರಮಾಣವಚನವನ್ನು ಸಿದ್ದರಾಮಯ್ಯ ಅವರು ದೇವರ ಹೆಸರಿನಲ್ಲಿ ಕೈಗೊಂಡರು. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣ ಬೋಧಿಸಿದರು. ಇತ್ತ ಕಡೆ ಪ್ರಮಾಣವಚನ ಬೋಧಿಸುತ್ತಿದ್ದಂತೆ, ಇನ್ನೊಂದೆಡೆ ಮುಖ್ಯಮಂತ್ರಿ ಕಚೇರಿಯಲ್ಲಿ ಸಿದ್ದರಾಮಯ್ಯ ಅವರ ಹೆಸರಇನ ನಾಮಫಲಕವನ್ನು ಅಳವಡಿಸಲಾಯಿತು. ಬಳಿಕ ಡಿಕೆ ಶಿವಕುಮಾರ್ ಅವರು ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಸಮಾರಂಭದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಎನ್.ಸಿ.ಪಿ. ಮುಖ್ಯಸ್ಥ ಶರದ್ ಪವಾರ್,

“ಸಿದ್ಧರಾಮಯ್ಯ ಎಂಬ ಹೆಸರಿನ ನಾನು…” | ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಿದ್ದರಾಮಯ್ಯ Read More »

ಪುತ್ತಿಲ ಅಭಿಮಾನಿಗಳಿಂದ ನಿಡ್ಪಳ್ಳಿ ದೇವಳಕ್ಕೆ ಕೊಡುಗೆ

ಪುತ್ತೂರು: ಚುನಾವಣೆ ಸಂದರ್ಭ ಸಂಗ್ರಹವಾದ ಮೊತ್ತದಲ್ಲಿ ಉಳಿದ ಹಣದಿಂದ ನಿಡ್ಪಳ್ಳಿ ಶ್ರೀ ಶಾಂತಾದುರ್ಗಾ ದೇವಸ್ಥಾನಕ್ಕೆ ಫ್ಯಾನ್ ಗಳನ್ನು ಕೊಡುಗೆಯಾಗಿ ನೀಡಲಾಯಿತು. ನಿಡ್ಪಳ್ಳಿ ಪುತ್ತಿಲ ಅಭಿಮಾನಿಗಳು ಈ ಕೊಡುಗೆಯನ್ನು ದೇವಸ್ಥಾನಕ್ಕೆ ಸಮರ್ಪಿಸಿದ್ದಾರೆ. ಚುನಾವಣೆಯಲ್ಲಿ ಹಣ ಸಂಗ್ರಹ, ಖರ್ಚು – ವೆಚ್ಚಗಳನ್ನು ಕಾರ್ಯಕರ್ತರೇ ನೋಡಿಕೊಂಡಿದ್ದು, ತಾನು ಆ ವಿಷಯದಲ್ಲಿ ತಲೆ ಕೆಡಿಸಿಕೊಂಡಿಲ್ಲ ಎಂದು ಅರುನ್ ಕುಮಾರ್ ಪುತ್ತಿಲ ಅವರು ಹೇಳಿಕೆ ನೀಡಿರುವುದನ್ನು ಸ್ಮರಿಸಿಕೊಳ್ಳಬಹುದು.

ಪುತ್ತಿಲ ಅಭಿಮಾನಿಗಳಿಂದ ನಿಡ್ಪಳ್ಳಿ ದೇವಳಕ್ಕೆ ಕೊಡುಗೆ Read More »

ಯುವಕರ ಮೇಲಿನ ದೌರ್ಜನ್ಯಕ್ಕೆ ಬಿಜೆಪಿ ಹಂಗಾಮಿ ಸರಕಾರ ಕಾರಣ | ಪತ್ರಿಕಾಗೋಷ್ಠಿಯಲ್ಲಿ ಮಹಮ್ಮದಾಲಿ ಆರೋಪ

ಪುತ್ತೂರು: ಯುವಕರ ಮೇಲೆ ಪೊಲೀಸರಿಂದ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿ ಬಿಜೆಪಿ ಹಂಗಾಮಿ ಸರಕಾರ ತಾವೇ ಒತ್ತಡ ತಂದು ಕಾಂಗ್ರೆಸ್ ಮೇಲೆ ಆರೋಪ ಹೊರಿಸಿರುವುದು ಬಿಜೆಪಿಗೆ ಕನಿಷ್ಠ ಜ್ಞಾನ ಇರಬೇಕಿತ್ತಲ್ಲವೇ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ ತಿಳಿಸಿದ್ದಾರೆ. ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ನಾಯಕರ ಬ್ಯಾನರ್ ಅಳವಡಿಸಿ, ಚಪ್ಪಲಿ ಹಾರ ಹಾಕಿರುವುದುದರಿಂದ ಕಾಂಗ್ರೆಸ್ ನಷ್ಟವಾದರೂ ಏನು, ಲಾಭವಾದರು ಏನು ಎಂದು ಪ್ರಶ್ನಿಸಿದ ಅವರು, ಘಟನೆಗೆ ಡಿ.ವಿ.ಸದಾನಂದ ಗೌಡ ಹಾಗೂ ನಳಿನ್ ಕುಮಾರ್ ಕಟೀಲ್ ನೇರ ಕಾರಣ

ಯುವಕರ ಮೇಲಿನ ದೌರ್ಜನ್ಯಕ್ಕೆ ಬಿಜೆಪಿ ಹಂಗಾಮಿ ಸರಕಾರ ಕಾರಣ | ಪತ್ರಿಕಾಗೋಷ್ಠಿಯಲ್ಲಿ ಮಹಮ್ಮದಾಲಿ ಆರೋಪ Read More »

ಅಧಿಕಾರ ಬೇಡ: ಕಾರ್ಯಕರ್ತರ ಭಾವನೆ ತಿಳಿದುಕೊಂಡರೆ ಸಾಕು | ಯತ್ನಾಳ್ ಬಳಿ ಕಾರ್ಯಕರ್ತರ ಅಳಲು ತೋಡಿಕೊಂಡ ಪುತ್ತಿಲ

ಪುತ್ತೂರು: ರಕ್ತವನ್ನು ಬೆವರು ಮಾಡಿ, ಭಗವಧ್ವಜದ ಅಡಿಯಲ್ಲಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಇಂತಹ ಕಾರ್ಯಕರ್ತರಿಗೆ ದೌರ್ಜನ್ಯ ಎಸಗುವುದು ನೋವು ತರಿಸುವ ಘಟನೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು. ಪುತ್ತೂರು ಮಹಾವೀರ ಆಸ್ಪತ್ರೆಗೆ ಭೇಟಿ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮುಂದೆ ಕಾರ್ಯಕರ್ತರ ಅಳಲನ್ನು ಬಿಚ್ಚಿಟ್ಟರು. ನಮಗೆ ಅಧಿಕಾರ ಬೇಡ, ಯಾವುದೂ ಬೇಡ. ನಮ್ಮ ಕಾರ್ಯಕರ್ತರಿಗೆ ಇಂತಹ ಪರಿಸ್ಥಿತಿ ಬರುವುದ ಬೇಡ. ಎದುರಿನಿಂದ ಬೆನ್ನು ತಟ್ಟಿ ಮಾತನಾಡಿಸುವುದು, ಹಿಂದಿನಿಂದ ಇಂತಹ ಕೆಲಸ ಮಾಡಿಸುವುದು. ಕಾರ್ಯಕರ್ತರಿಗೆ ಇದಕ್ಕಿಂತ

ಅಧಿಕಾರ ಬೇಡ: ಕಾರ್ಯಕರ್ತರ ಭಾವನೆ ತಿಳಿದುಕೊಂಡರೆ ಸಾಕು | ಯತ್ನಾಳ್ ಬಳಿ ಕಾರ್ಯಕರ್ತರ ಅಳಲು ತೋಡಿಕೊಂಡ ಪುತ್ತಿಲ Read More »

ಕಾರ್ಯಕರ್ತರ ಭಾವನೆಯನ್ನು ಕೇಂದ್ರಕ್ಕೆ ತಲುಪಿಸ್ತೇನೆ : ಬಸನಗೌಡ ಪಾಟೀಲ್ ಯತ್ನಾಳ್

ಪುತ್ತೂರು: ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು ಬೇರೆಯಲ್ಲ. ಆದ್ದರಿಂದ ಕಾರ್ಯಕರ್ತರ ಭಾವನೆಯನ್ನು ಕೇಂದ್ರಕ್ಕೆ ತಲುಪಿಸುವ ಕೆಲಸ ಮಾಡುತ್ತೇನೆ. ನೊಂದ ಎಲ್ಲರಿಗೂ ಪಕ್ಷದಿಂದಲೇ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರನ್ನು ಭೇಟಿಯಾಗಿ ಧೈರ್ಯ ತುಂಬಿ, ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು. ಹೊರಗೊಂದು ಒಳಗೊಂದು ಮಾತನಾಡುವ ಸ್ವಭಾವ ನನ್ನದಲ್ಲ. ಯಾವತ್ತೂ ನೇರವಾಗಿಯೇ ಮಾತನಾಡುವವ. ಪ್ರಜಾಪ್ರಭುತ್ವದಲ್ಲಿ ಟೀಕೆ – ಟಿಪ್ಪಣಿಗೆ ಅವಕಾಶವಿದೆ. ಬ್ಯಾನರ್ ಹಾಕಿದ್ದಾರೆ ಎಂದಾಕ್ಷಣ ಅವರು ತಾಲಿಬಾನಿಗಳಲ್ಲ, ದೇಶದ್ರೋಹಿಗಳಲ್ಲ. ಬ್ಯಾನರ್

ಕಾರ್ಯಕರ್ತರ ಭಾವನೆಯನ್ನು ಕೇಂದ್ರಕ್ಕೆ ತಲುಪಿಸ್ತೇನೆ : ಬಸನಗೌಡ ಪಾಟೀಲ್ ಯತ್ನಾಳ್ Read More »

ಯತ್ನಾಳ್ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ

ಪುತ್ತೂರು: ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶುಕ್ರವಾರ ಪುತ್ತೂರಿಗಾಗಮಿಸಿದ್ದು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರನ್ನು ಭೇಟಿಯಾಗಿ ಧೈರ್ಯ ತುಂಬಿದರು.

ಯತ್ನಾಳ್ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ Read More »

ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರ ಆರೋಗ್ಯ ವಿಚಾರಿಸಿದ ಯತ್ನಾಳ್

ಪುತ್ತೂರು: ಇಲ್ಲಿನ ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರ ಆರೋಗ್ಯ ವಿಚಾರಿಸಿದ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಯುವಕರಿಗೆ ಧೈರ್ಯ ತುಂಬಿದರು. ಪಂಚವಟಿ, ಬಿಜೆಪಿ ಕಚೇರಿಗೆ ತೆರಳಿ ಬಳಿಕ ಮಹಾವೀರ ಆಸ್ಪತ್ರೆಗೆ ಭೇಟಿ ನೀಡಿದರು. ಆಸ್ಪತ್ರೆ ಆವರಣದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಯತ್ನಾಳ್ ಅವರನ್ನು ಸ್ವಾಗತಿಸಿದರು.

ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರ ಆರೋಗ್ಯ ವಿಚಾರಿಸಿದ ಯತ್ನಾಳ್ Read More »

error: Content is protected !!
Scroll to Top