ದೇಶ

ಮೊಘಲರಂತೆಯೇ ಇರುವ ಕಾಂಗ್ರೆಸ್ಸಿಗರು: ಹಿಮಂತ್‌ ಬಿಸ್ವಾ ಶರ್ಮ ಟೀಕೆ

ನವ ಭಾರತಕ್ಕೆ ಮದರಸ ಶಿಕ್ಷಣದ ಅಗತ್ಯವಿಲ್ಲ ಬೆಳಗಾವಿ : ಕಾಂಗ್ರೆಸಿಗರು ಬಾಬರಿ ಮಸೀದಿಯ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ, ರಾಮಮಂದಿರದ ಬಗ್ಗೆ ಮಾತನಾಡುವುದಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮ ಟೀಕಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು ಮೊಘಲರಂತೆಯೇ ಇರುವ ಕಾಂಗ್ರೆಸ್ಸಿಗರಿಗೆ ಜನರು ತಕ್ಕ ಪಾಠ ಕಲಿಸಬೇಕು, ಅವರನ್ನು ದೇಶದಿಂದ ಕಿತ್ತೊಗೆಯುವ ಅಗತ್ಯವಿದೆ.ಅಸ್ಸಾಂ ಸೇರಿದಂತೆ ಇಡೀ ಉತ್ತರ ಭಾರತ ಎಂದೂ ಔರಂಗಜೇಬನ ಆಡಳಿತದ ಹಿಡಿತಕ್ಕೆ ಸಿಕ್ಕಿರಲಿಲ್ಲ. ಆದರೂ, ಕಮ್ಯುನಿಸ್ಟ್‌ ಸಾಹಿತಿಗಳು ಇಡೀ ಭಾರತ ಔರಂಗಜೇಬನ ಅಧೀನದಲ್ಲಿತ್ತು ಎಂದು ತಿರುಚಿದ […]

ಮೊಘಲರಂತೆಯೇ ಇರುವ ಕಾಂಗ್ರೆಸ್ಸಿಗರು: ಹಿಮಂತ್‌ ಬಿಸ್ವಾ ಶರ್ಮ ಟೀಕೆ Read More »

ತಡರಾತ್ರಿ ಹೋಟೆಲ್‌ನಲ್ಲಿ ಲೇಡಿಸ್ ಪಾರ್ಟಿ: ಬಜರಂಗದಳ ಕಾರ್ಯಕರ್ತರಿಂದ ತೀವ್ರ ವಿರೋಧ

ಶಿವಮೊಗ್ಗ : ನಗರದಲ್ಲಿ ಶುಕ್ರವಾರ ರಾತ್ರಿ ಹೋಟೆಲೊಂದರಲ್ಲಿ ನಡೆಯುತ್ತಿದ್ದ ‘ಲೇಟ್‌ನೈಟ್ ಲೇಡಿಸ್ ಪಾರ್ಟಿ’ಯನ್ನು ಬಜರಂಗದಳದ ಕಾರ್ಯಕರ್ತರು ತಡೆದಿದ್ದಾರೆ.ಕುವೆಂಪು ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ಈ ಪಾರ್ಟಿ ಆಯೋಜಿಸಲಾಗಿತ್ತು. ಬಜರಂಗದಳ ಕಾರ್ಯಕರ್ತರು ಲೇಟ್ ನೈಟ್ ಪಾರ್ಟಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ಕೂಡ ಸ್ಥಳಕ್ಕೆ ಬಂದಿದ್ದರು. ನಂತರ ಮಹಿಳೆಯರು, ಪುರುಷರು ಮತ್ತು ಕೆಲವು ಮಕ್ಕಳು ಸೇರಿದಂತೆ ಹಲವರು ಹೋಟೆಲ್‌ನಿಂದ ಹೊರಗೆ ಬರುತ್ತಿರುವುದು ಕಂಡುಬಂತು. ತಡರಾತ್ರಿ ಪಾರ್ಟಿ ಆಯೋಜಿಸಲಾಗಿದೆ ಎಂದು ಬಜರಂಗದಳದ ಮುಖಂಡ ರಾಜೇಶ್ ಗೌಡ

ತಡರಾತ್ರಿ ಹೋಟೆಲ್‌ನಲ್ಲಿ ಲೇಡಿಸ್ ಪಾರ್ಟಿ: ಬಜರಂಗದಳ ಕಾರ್ಯಕರ್ತರಿಂದ ತೀವ್ರ ವಿರೋಧ Read More »

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಭೆಯಲ್ಲಿ ಕೇವಲ 12 ಸೆಕೆಂಡ್ ಗೆ ರಿಷಬ್ ಶೆಟ್ಟಿ ಭಾಷಣ ಮೊಟಕು

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ವಾರ್ಷಿಕ ಸಭೆಯಲ್ಲಿ ಇತ್ತೀಚೆಗೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮಾತನಾಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ವಿಶ್ವಸಂಸ್ಥೆಯಲ್ಲಿ ಯಾವುದೇ ಭಾಷೆಯಲ್ಲಿ ಭಾಷಣ ಮಾಡುವ ಅವಕಾಶವಿದೆ. ವಿಶ್ವಸಂಸ್ಥೆಯ ಮಾನವ ಹಕ್ಕು ಸಂರಕ್ಷಣೆ ಪರಿಷತ್ತಿನ 28ನೇ ಸಭೆಯಲ್ಲಿ ರಿಷಬ್ ಪರಿಸರ ಸಂರಕ್ಷಣೆ ವಿಷಯದಲ್ಲಿ ಭಾಷಣ ಮಾಡಲು ತಯಾರಿ ನಡೆಸಿಕೊಂಡು ಹೋಗಿದ್ದರು. ಅಲ್ಲಿ ಕನ್ನಡದಲ್ಲಿ ರಿಷಬ್ ಶೆಟ್ಟಿ ಭಾಷಣ ಆರಂಭಿಸಿದ್ದರು. ತಾಂತ್ರಿಕ ಸಮಸ್ಯೆಯಿಂದಾಗಿ ಇಂಗ್ಲಿಷ್ ಅಥವಾ ಬೇರೆ ಭಾಷೆಗಳಿಗೆ ಅನುವಾದ ಪ್ರಸಾರ ಆಗದ

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಭೆಯಲ್ಲಿ ಕೇವಲ 12 ಸೆಕೆಂಡ್ ಗೆ ರಿಷಬ್ ಶೆಟ್ಟಿ ಭಾಷಣ ಮೊಟಕು Read More »

ನವ ಭಾರತಕ್ಕೆ ಮದರಸಾಗಳ ಅವಶ್ಯಕತೆ ಇಲ್ಲ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಬೆಳಗಾವಿ: ನವ ಭಾರತಕ್ಕೆ ಮದರಸಾಗಳ ಅವಶ್ಯಕತೆ ಇಲ್ಲ, ಶೀಘ್ರದಲ್ಲೇ ರಾಜ್ಯದ ಎಲ್ಲಾ ಮದರಸಾಗಳನ್ನು ಮುಚ್ಚುವ ಕುರಿತು ಚಿಂತನೆ ಮಾಡಲಾಗುತ್ತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಬೆಳಗಾವಿ ಶಾಸಕ ಅಭಯ ಪಾಟೀಲ ಅವರು ಇಲ್ಲಿನ ಶಿವಾಜಿ ಗಾರ್ಡನ್‌ನಲ್ಲಿ ‘ಶಿವಚರಿತ್ರೆ’ ಶೀರ್ಷಿಕೆಯ ವಸ್ತುಪ್ರದರ್ಶನವನ್ನು ಉದ್ಘಾಟಿಸಿ, ಮಾತನಾಡಿದ ಅವರು, ಮದರಸಾ ಶಿಕ್ಷಣಕ್ಕೆ ಬ್ರೇಕ್‌ ಹಾಕಲು ಅಸ್ಸಾಂ ಸರ್ಕಾರ ಮುಂದಾಗಿದೆ ಎಂದು ಹೇಳಿದರು. ನಮ್ಮ ಸರ್ಕಾರವು ಈಗಾಗಲೇ ಅಸ್ಸಾಂನಲ್ಲಿ 600 ಮದರಸಾಗಳನ್ನು ಮುಚ್ಚಿದೆ. ಶೀಘ್ರದಲ್ಲೇ ಉಳಿದ ಮದರಸಾಗಳನ್ನೂ ಮುಚ್ಚುವ

ನವ ಭಾರತಕ್ಕೆ ಮದರಸಾಗಳ ಅವಶ್ಯಕತೆ ಇಲ್ಲ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ Read More »

ಕರ್ನಾಟಕದಲ್ಲಿ ಪಿಎಂ ಮಿತ್ರ ಜವಳಿ ಪಾರ್ಕ್ ಸ್ಥಾಪನೆ

ದೆಹಲಿ: ದೇಶದಲ್ಲಿ ಜವಳಿ ಉದ್ಯಮಕ್ಕೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿವಿಧೆಡೆ 7 ಪಿಎಂ ಮಿತ್ರ ಮೆಗಾ ಜವಳಿ ಪಾರ್ಕ್​ಗಳನ್ನು ಸ್ಥಾಪಿಸುತ್ತಿದೆ. ಇದರ ಒಂದು ಪಾರ್ಕ್ ಕರ್ನಾಟಕಕ್ಕೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 17ರಂದು ಜವಳಿ ಪಾರ್ಕ್ ಸ್ಥಾಪನೆಯಾಗುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಕರ್ನಾಟಕ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಈ 7 ಮಹಾ ಜವಳಿ ಕೇಂದ್ರಗಳು ತಲೆ ಎತ್ತಲಿವೆ. ಪಿಎಂ ಮಿತ್ರಾ ಮೆಗಾ ಟೆಕ್ಸ್​ಟೈಲ್ ಪಾರ್ಕ್​ಗಳು ಜವಳಿ ವಲಯಕ್ಕೆ

ಕರ್ನಾಟಕದಲ್ಲಿ ಪಿಎಂ ಮಿತ್ರ ಜವಳಿ ಪಾರ್ಕ್ ಸ್ಥಾಪನೆ Read More »

ಶೇ.15 ವೇತನ ಹೆಚ್ಚಳವನ್ನು ತಿರಸ್ಕರಿಸಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಬೆಂಗಳೂರು : ವೇತನವನ್ನು ಶೇ.15ರಷ್ಟು ಹೆಚ್ಚು ಮಾಡುವ ಮುಖ್ಯಮಂತ್ರಿಗಳ ಕೊಡುಗೆಯನ್ನು ತಿರಸ್ಕರಿಸಿರುವ ಸಾರಿಗೆ ನೌಕರರ ಸಂಘ ಮಾ.21ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ತೀರ್ಮಾನಿಸಿದೆ. ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾಲ್ಕು ಸಾರಿಗೆ ನಿಗಮಗಳ ನೌಕರರು ಮಾ.21ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡಲಿದ್ದಾರೆ. ನಮ್ಮ ಬೇಡಿಕೆಗಳನ್ನು ಈಡೇರಿಸದ ಹೊರತು ಅನಿರ್ದಿಷ್ಟಾವಧಿ ಮುಷ್ಕರ ಹಿಂಪಡೆಯುವ ಮಾತೇ ಇಲ್ಲ. ನಿಗದಿಯಂತೆ ಮಾ.21ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ ಎಂದು ಕೆಎಸ್‌ಆರ್‌ಟಿಸಿ ನೌಕರರ ಸಂಘದ ಅಧ್ಯಕ್ಷ ಎಚ್‌.ವಿ.ಅನಂತ ಸುಬ್ಬರಾವ್‌ ಸ್ಪಷ್ಟಪಡಿಸಿದ್ದಾರೆ.ಸಾರಿಗೆ ಸಂಘಟನೆಗಳ ಮುಖಂಡರೊಂದಿಗೆ ನಾಲ್ಕೂ ನಿಗಮಗಳ

ಶೇ.15 ವೇತನ ಹೆಚ್ಚಳವನ್ನು ತಿರಸ್ಕರಿಸಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ Read More »

ಬೆಂಗಳೂರಿನಲ್ಲಿ ಮೊದಲ ಮುಂಗಾರು ಪೂರ್ವ ಮಳೆ

ಬೆಂಗಳೂರು: ಬೆಂಗಳೂರಿಗೆ ಬೇಸಿಗೆಯ ಮೊದಲ ಮಳೆಯ ಸ್ಪರ್ಶವಾಗಿದೆ. ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಅಲ್ಲಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಸಂಜೆಯಿಂದಲೇ ತುಂತುರು ಹನಿಯ ಸಿಂಚನವಾಗಿ ಮಧ್ಯರಾತ್ರಿ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣವು ಮಳೆಯ ಮುನ್ಸೂಚನೆ ನೀಡಿತ್ತು. ಬೇಸಿಗೆ ಬಿಸಿಲಿನ ಝಳದ ನಡುವೆ ಮಳೆಯ ವಾತಾವರಣವು ಮುದ ನೀಡಿದೆ. ಇದು ಬೇಸಿಗೆಯ ಮೊದಲ ಅಕಾಲಿಕ ಮಳೆಯಾಗಿದೆ.ಸಂಜೆಯ ವೇಳೆಗೆ ಗಾಳಿಯಿಂದಾಗಿ ಮೋಡಗಳು ನಗರ ಪ್ರದೇಶದಿಂದ ಸ್ವಲ್ಪ ದೂರಕ್ಕೆ

ಬೆಂಗಳೂರಿನಲ್ಲಿ ಮೊದಲ ಮುಂಗಾರು ಪೂರ್ವ ಮಳೆ Read More »

ಭಾರತ್‌ ಜೋಡೊ ಯಾತ್ರೆ ವೇಳೆ ಲೈಂಗಿಕ ದೌರ್ಜನ್ಯ ಕುರಿತು ವಿವಾದಾತ್ಮಕ ಹೇಳಿಕೆ : ರಾಹುಲ್‌ ಗಾಂಧಿಗೆ ನೋಟಿಸ್‌

ದೆಹಲಿ : ಕಾಶ್ಮೀರದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ನಿಮ್ಮನ್ನು ಸಂಪರ್ಕಿಸಿದ ಮಹಿಳೆಯರ ವಿವರಗಳನ್ನು ನೀಡಿ, ನಾವು ಅವರಿಗೆ ಭದ್ರತೆ ನೀಡುತ್ತೇವೆ ಎಂದು ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ದಿಲ್ಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಶ್ರೀನಗರದಲ್ಲಿ ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ, ಒಂದು ನಿರ್ದಿಷ್ಟ ಪ್ರಕರಣದಲ್ಲಿ ಒಬ್ಬ ಹುಡುಗಿ ತಮ್ಮ ಮೇಲೆ ಅತ್ಯಾಚಾರ ನಡೆದಿದೆ ಎಂದು ಅಳಲು ತೋಡಿಕೊಂಡಳು. ಆ ಸಂದರ್ಭದಲ್ಲಿ

ಭಾರತ್‌ ಜೋಡೊ ಯಾತ್ರೆ ವೇಳೆ ಲೈಂಗಿಕ ದೌರ್ಜನ್ಯ ಕುರಿತು ವಿವಾದಾತ್ಮಕ ಹೇಳಿಕೆ : ರಾಹುಲ್‌ ಗಾಂಧಿಗೆ ನೋಟಿಸ್‌ Read More »

ವಾಣಿಜ್ಯ ಸಂಕೀರ್ಣದಲ್ಲಿ ಬೆಂಕಿ ಅವಘಡ

ಮಡಿದವರಲ್ಲಿ ಐವರು ಮಹಿಳೆಯರು ಹೈದರಾಬಾದ್‌ : ಹೈದರಾಬಾದ್‌ನ ಬಹುಮಹಡಿ ವಾಣಿಜ್ಯ ಸಂಕೀರ್ಣವೊಂದರಲ್ಲಿ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ ಐವರು ಮಹಿಳೆಯರ ಸಹಿತ ಆರು ಮಂದಿ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ. ಬೆಳಗ್ಗೆ 7.30ರ ವೇಳೆಗೆ ಸ್ವಪ್ನಲೋಕ್‌ ಕಾಂಪ್ಲೆಕ್ಸ್‌ ಎಂಬ ವಾಣಿಜ್ಯ ಸಂಕೀರ್ಣದ 5ನೆ ಮಹಡಿಯಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ. ಕಟ್ಟಡದ ಒಳಗೆ 13 ಮಂದಿ ಸಿಕ್ಕಿಬಿದ್ದಿದ್ದರು. ಏಳು ಮಂದಿಯನ್ನು ರಕ್ಷಿಸಲಾಗಿದೆ. ಆರು ಮಂದಿ ದಟ್ಟ ಹೊಗೆಯಿಂದ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ.

ವಾಣಿಜ್ಯ ಸಂಕೀರ್ಣದಲ್ಲಿ ಬೆಂಕಿ ಅವಘಡ Read More »

ನಿಯಮಿತ ನಾಯಕರಿಲ್ಲದೆ ಇಂದು ಕಣಕ್ಕಿಳಿಯುತ್ತಿದೆ ಭಾರತ -ಆಸ್ಟ್ರೇಲಿಯಾ ಏಕದಿನ ಸರಣಿ

ಮುಂಬಯಿ : ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಎರಡೂ ತಂಡಗಳು ತಮ್ಮ ನಿಯಮಿತ ನಾಯಕರಿಲ್ಲದೆ ಕಣಕ್ಕಿಳಿಯುತ್ತಿವೆ. ಆಸ್ಟ್ರೇಲಿಯ ನಾಯಕ ಪ್ಯಾಟ್ ಕಮಿನ್ಸ್ ತಾಯಿಯ ಸಾವಿನ ಕಾರಣ ಏಕದಿನ ಸರಣಿಯಲ್ಲಿ ಆಡುತ್ತಿಲ್ಲ. ಇತ್ತ ವಿಶ್ವಕಪ್ ವಿಜೇತ ಸ್ಟೇಡಿಯಂ ವಾಂಖೇಡೆಯಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಆಡುವುದಿಲ್ಲ. ವೈಯಕ್ತಿಕ ಕಾರಣಗಳಿಂದ ರೋಹಿತ್ ಮೊದಲ ಪಂದ್ಯದಿಂದ ದೂರ ಉಳಿದಿದ್ದು, ಎರಡನೇ ಪಂದ್ಯದಿಂದ ತಂಡವನ್ನು

ನಿಯಮಿತ ನಾಯಕರಿಲ್ಲದೆ ಇಂದು ಕಣಕ್ಕಿಳಿಯುತ್ತಿದೆ ಭಾರತ -ಆಸ್ಟ್ರೇಲಿಯಾ ಏಕದಿನ ಸರಣಿ Read More »

error: Content is protected !!
Scroll to Top